ಇನ್ನೂ ಕೈ-ಕೈ ಟಚ್​ ಮಾಡೋದ್ರಲ್ಲೇ ಇದ್ದಾರೆ, ನೀವು ನೋಡಿದ್ರೆ... ಕಿಲಾಡಿ ಅಜ್ಜಿಗೆ ಗುಟ್ಟು ಹೇಳ್ತಿರೋ ಫ್ಯಾನ್ಸ್​!

Published : Jun 01, 2024, 12:14 PM IST
ಇನ್ನೂ ಕೈ-ಕೈ ಟಚ್​ ಮಾಡೋದ್ರಲ್ಲೇ ಇದ್ದಾರೆ, ನೀವು ನೋಡಿದ್ರೆ... ಕಿಲಾಡಿ ಅಜ್ಜಿಗೆ ಗುಟ್ಟು ಹೇಳ್ತಿರೋ ಫ್ಯಾನ್ಸ್​!

ಸಾರಾಂಶ

ಗೌತಮ್​ ಮತ್ತು ಭೂಮಿಕಾರಿಂದ ಉಡುಗೊರೆ ಕೇಳಿದ್ದಾಳೆ ಕಿಲಾಡಿ ಅಜ್ಜಿ. ಇದನ್ನು ಕೇಳಿದ ಅಮೃತಧಾರೆ ಸೀರಿಯಲ್​ ಪ್ರೇಮಿಗಳು ಹೇಳಿದ್ದೇನು ನೋಡಿ..  

ಭೂಮಿಕಾ ಮತ್ತು ಗೌತಮ್​ ಹನಿಮೂನ್​ ಏನೋ ಮುಗಿಸಿ ಬಂದಿದ್ದಾರೆ. ಆದರೆ ಹನಿಮೂನ್​ನಲ್ಲಿ ಏನು ಆಗಬೇಕೋ ಅವೆಲ್ಲಾ ಆಗಿಲ್ಲ ಎನ್ನುವುದು ಕಿಲಾಡಿ ಅಜ್ಜಿಗೆ ಚೆನ್ನಾಗಿ ಗೊತ್ತಿದೆ. ಅಜ್ಜಿ ಮತ್ತು ಆನಂದ್​ ದಂಪತಿ ಸೇರಿ ಹೇಗಾದರೂ ಮಾಡಿ ಇವರಿಬ್ಬರ ಮನಸ್ಸಷ್ಟೇ ಅಲ್ಲದೇ, ದೇಹವನ್ನೂ ಒಂದು ಮಾಡಬೇಕು ಎನ್ನುವ ಆಸೆ. ಅದಕ್ಕಾಗಿ ಇದಾಗಲೇ ಸಾಕಷ್ಟು ಬಾರಿ ಸರ್ಕಸ್​ ಮಾಡಿದರೂ ಈ ಜೋಡಿ ಹಾಗೆ ಮಾಡಲು ಹಿಂದೇಟು ಹಾಕುತ್ತಲೇ ಇದೆ. ಪ್ರೀತಿಯ ನಿವೇದನೆ ಮಾಡಿಕೊಳ್ಳಲಿಕ್ಕೇ ವರ್ಷವಾಗುತ್ತಾ ಬಂತು. ಇನ್ನು ಪತಿ-ಪತ್ನಿಯಂತೆ ಬಾಳಲು ಇನ್ನೆಷ್ಟು ಕಾಲ ಬೇಕೋ ಎನ್ನುವ ಬೇಸರದಲ್ಲಿ ಅಭಿಮಾನಿಗಳು ಇದ್ದಾರೆ. ಅಜ್ಜಿ, ಆನಂದ್​ರಂತೆ ಅಮೃತಧಾರೆ ಫ್ಯಾನ್ಸ್​ಗೂ ಇವರಿಬ್ಬರೂ ಒಟ್ಟಾಗಿ ಇರಬೇಕು ಎನ್ನುವ ಆಸೆ.

ಇದೀಗ ಅಜ್ಜಿಗೆ ಇವರಿಬ್ಬರ ಮಧ್ಯೆ ಫುಲ್​ ಡೌಟ್​ ಶುರುವಾಗಿದೆ. ಭೂಮಿಕಾ ಬಳಿ ಹನಿಮೂನ್​ನಲ್ಲಿ ಏನಾಯ್ತು ಕೇಳಿದ್ದಾಳೆ. ಅವಳು ಹೇಳಿ ಕೇಳಿ ಭೂಮಿಕಾ. ಅಜ್ಜಿಯ ಮಾತನ್ನು ಅರ್ಥ ಮಾಡಿಕೊಂಡು ಏನೂ ಹೇಳದೇ ನಾಚಿಕೊಂಡು ಹೋದಳು. ಈ ಕಿಲಾಡಿ ಅಜ್ಜಿಗೆ ಇವೆಲ್ಲಾ ಗೊತ್ತಾಗದೆಯೇ ಇರುತ್ತಾ? ಭೂಮಿಕಾ ನಾಟಕ ಮಾಡುತ್ತಿದ್ದಾಳೆ ಎನ್ನುವ ಡೌಟ್​ ಬಂದು ನೇರವಾಗಿ ಗೌತಮ್​ಗೇ ಕಾಲ್​  ಮಾಡಿದ್ದಾಳೆ. ಹನಿಮೂನ್​ನಲ್ಲಿ ಏನೂ ಆಗೇ ಇಲ್ವಂತೆ ಎಂದು ಡೈರೆಕ್ಟ್​ ಆಗಿಯೇ ಕೇಳಿದ ಅಜ್ಜಿ, ಉಡುಗೊರೆ ಯಾವಾಗ ಕೊಡ್ತಿಯಾ ಎಂದು ಪ್ರಶ್ನಿಸಿದ್ದಾಳೆ. ಗೌತಮ್​ಗೆ ತಲೆ ಬುಡ ಅರ್ಥವಾಗಲಿಲ್ಲ. ಏನು ಉಡುಗೊರೆ ಎಂದು ಪ್ರಶ್ನಿಸಿದಾಗ ಮೊಮ್ಮಗು ಎಂದಿದ್ದಾಳೆ ಅಜ್ಜಿ. ಇದನ್ನು ಕೇಳುತ್ತಿದ್ದಂತೆಯೇ ಗೌತಮ್​ಗೆ ತಲೆ ತಿರುಗಿದೆ.

ಇವ್ರೇನು ಮನುಷ್ಯರಾ ಅಂತೆಲ್ಲಾ ಅನ್ನಿಸ್ತಿತ್ತು, ಆದ್ರೆ ಈಗ... ಸಿಂಗಲ್​ ಪೇರೆಂಟ್​ ಆ್ಯಂಕರ್​ ಜಾಹ್ನವಿ ಓಪನ್ ಮಾತು..

ಅದೇ ಇನ್ನೊಂದೆಡೆ ಇವರಿಬ್ಬರೂ ಒಟ್ಟಾಗಿಯೇ ಮಲಗುತ್ತಾರೋ ಇಲ್ವೋ ಎಂದು ನೋಡಲು ಅಜ್ಜಿ ಪದೇ ಪದೇ ಇವರ ಕೋಣೆಗೆ ಹೋಗಿದ್ದಾಳೆ. ಬಾಗಿಲು ತಟ್ಟಿದ ಶಬ್ದ ಆಗುತ್ತಲೇ ಕೆಳಗೆ ಹಾಸಿದ್ದ ಹಾಸಿಗೆಯನ್ನು ಭೂಮಿಕಾ ಮಡಚಿ ಕಪಾಟಿನಲ್ಲಿ ಇಟ್ಟು ಬಾಗಿಲು ತೆರೆದಿದ್ದಾಳೆ. ಅಜ್ಜಿ  ಏನೇನೋ ನೆಪ ಹೇಳಿ ಹೋದವಳು ಮತ್ತು ವಾಪಸ್​ ಬಂದಾಗಲೂಹೀಗೆಯೇ ಆಗಿದೆ. ಅಜ್ಜಿ ಏಕೆ ಹೀಗೆ ಮಾಡುತ್ತಿದ್ದಾಳೆ ಎನ್ನುವುದು ಇವರಿಬ್ಬರಿಗೂ ಗೊತ್ತು. ಅದಕ್ಕಾಗಿಯೇ ಗೌತಮ್​, ಅಜ್ಜಿ ಯಾವಾಗಾದ್ರೂ ಬರಬಹುದು. ಅದಕ್ಕೇ ಮೇಲೆ ಮಲಗಿಕೊಳ್ಳಿ ಅಂದಿದ್ದಾನೆ. ನಾಚಿಕೆ ಹಾಗೂ ಅಚ್ಚರಿಯಿಂದ ಭೂಮಿಕಾ ಒಪ್ಪಿ ಮಲಗಿದ್ದಾಳೆ.

ಅಷ್ಟೊತ್ತಿಗೆ ಕತ್ತಲಾಗುತ್ತದೆ ಇವರಿಬ್ಬರ ಕೈ-ಕೈ ತಾಗಿದೆ. ಅಷ್ಟೇ... ಇಬ್ಬರೂ ಕರೆಂಟ್​ ಹೊಡೆದವರ ಹಾಗೆ ಶಾಕ್​ ಆಗಿದ್ದಾರೆ. ಇದನ್ನೇ ನೋಡಿದ ಸೀರಿಯಲ್​ ಪ್ರೇಮಿಗಳು ಅಜ್ಜಿಗೆ ಗುಟ್ಟು ಹೇಳಿದ್ದಾರೆ. ಅವರಿಬ್ಬರೂ ಇನ್ನೂ ಕೈಕೈ ಹಿಡಿದುಕೊಳ್ಳುವುದರಲ್ಲಿಯೇ ಇದ್ದಾರೆ. ನೀವು ನೋಡಿದ್ರೆ ಮೊಮ್ಮಗು ಬೇಕು ಅಂತೀರಲ್ಲಾ ಎಂದು ತಮಾಷೆಮಾಡುತ್ತಿದ್ದಾರೆ.  ಆದರೂ ಅಜ್ಜಿ ನೇರವಾಗಿ ಗೌತಮ್​ಗೆ ವಿಷಯ ಕೇಳಿದ್ದಕ್ಕೆ ಕಿಲಾಡಿ ಅಜ್ಜಿ ಎಂದೂ ಹೇಳುತ್ತಿದ್ದಾರೆ. ಆದಷ್ಟು ಬೇಗ ನಾವೂ ಮರಿ ಡುಮ್ಮನನ್ನು ನೋಡಬೇಕು ಡುಮ್ಮಾ ಸರ್​ ಎನ್ನುತ್ತಿದ್ದಾರೆ ಫ್ಯಾನ್ಸ್​. 

ಮುದ್ದು ಸಿಹಿಯ ಆ್ಯಕ್ಟಿಂಗ್​ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮೇಜಾನ್ ಪ್ರೈಮ್-ಎಂಎಕ್ಸ್ ಪ್ಲೇಯರ್ ವಿಲೀನ: ಭಾರತದ ಅತಿ ದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್ ಸೃಷ್ಟಿ!
ಕಷ್ಟಪಡೋರು ನೀವು, ನಾವು ಪೇಂಟಿಂಗ್​ನಲ್ಲಿ ಬಣ್ಣಗಳಷ್ಟೇ: Amruthadhaare ನಟಿ ಛಾಯಾ ಸಿಂಗ್​