ಇವ್ರೇನು ಮನುಷ್ಯರಾ ಅಂತೆಲ್ಲಾ ಅನ್ನಿಸ್ತಿತ್ತು, ಆದ್ರೆ ಈಗ... ಸಿಂಗಲ್​ ಪೇರೆಂಟ್​ ಆ್ಯಂಕರ್​ ಜಾಹ್ನವಿ ಓಪನ್ ಮಾತು..

By Suchethana D  |  First Published Jun 1, 2024, 11:51 AM IST

ಆ್ಯಂಕರ್​ ಜಾಹ್ನವಿ ಅವರು ಇದೀಗ ಅಧಿಪತ್ರ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ್ದೇನು?
 


ನನ್ನಮ್ಮ ಸೂಪರ್‌ ಸ್ಟಾರ್, ಗಿಚ್ಚಿ ಗಿಲಿಗಿಲಿ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಹೆಸರುವಾಸಿಯಾದ ಆ್ಯಂಕರ್-ನಟಿ ಜಾಹ್ನವಿ ಎಂದೇ ಫೇಮಸ್​ ಆಗಿರೋ ಜಾಹ್ನವಿ ಅವರು, ಇದೀಗ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಟಿವಿಯಲ್ಲಿ ನ್ಯೂಸ್ ಆ್ಯಂಕರ್ ಆಗಿ ಕಾಣಿಸಿಕೊಂಡಿದ್ದ ಇವರು,  ಕಿರುತೆರೆ ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿದ್ದರು. ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.  ನಟ ಮತ್ತು ಕನ್ನಡ ಬಿಗ್ ಬಾಸ್‌ನ ವಿಜೇತ ರೂಪೇಶ್ ಶೆಟ್ಟಿ ಅಭಿನಯದ 'ಅಧಿಪತ್ರ' ಸಿನಿಮಾದಲ್ಲಿ ಜಾಹ್ನವಿ ನಾಯಕಿಯಾಗಿ ನಟಿಸುತ್ತಿದ್ದಾರೆ.ಚಯನ್ ಶೆಟ್ಟಿ ನಿರ್ದೇಶನದ ಮತ್ತು KAAR ಸಿನಿಕಾಂಬೈ ಪ್ರೊಡಕ್ಷನ್ಸ್‌ನ ಬೆಂಬಲದೊಂದಿಗೆ, ಅಧಿಪತ್ರ ಸಿನಿಮಾವನ್ನು ಸಸ್ಪೆನ್ಸ್ ಥ್ರಿಲ್ಲರ್ ಎಂದು ಹೇಳಲಾಗಿದೆ. ಚಿತ್ರ ಇದೇ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಬರಲು ಸಜ್ಜಾಗಿದೆ. ಈ ಮೂಲಕ, ಸುದ್ದಿ ಮನೆಯಲ್ಲಿ ಸದ್ದು ಮಾಡಿದ್ದ ಜಾಹ್ನವಿ ಅವರು ಚಂದನದಲ್ಲಿ ಮಿಂಚಲು ಹೊರಟಿದ್ದಾರೆ.

ಈ ಸಂದರ್ಭದಲ್ಲಿ, ಅವರು ಕನ್ನಡ ಪಿಚ್ಚರ್​ ಯೂಟ್ಯೂಬ್​ ಚಾನೆಲ್​ಗೆ ಮಾತನಾಡಿದ್ದು ಹಲವಾರು ವಿಷಯಗಳನ್ನು ಶೇರ್​  ಮಾಡಿಕೊಂಡಿದ್ದಾರೆ. ನ್ಯೂಸ್ ರೂಮ್​ನಿಂದ ಹೊರಬಂದ ಮೇಲೆ ತಮಗೆ ಸಿಕ್ಕಿರುವ ಅವಕಾಶಗಳ ಕುರಿತು ಹೇಳಿಕೊಂಡಿದ್ದಾರೆ.  ಇದೇ ವೇಳೆ ಪಬ್ಲಿಕ್​ ಲೈಫ್​ನಲ್ಲಿ ಕಾಣಿಸಿಕೊಂಡ ಮೇಲೆ ಜನರು ಟ್ರೋಲ್​ ಮಾಡುವ ಬಗ್ಗೆ ಅಸಮಾಧಾನವನ್ನೂ ಹೊರ ಹಾಕಿದ್ದಾರೆ. ಮೊದ ಮೊದಲು ಈ ಟ್ರೋಲ್​ಗಳನ್ನು ನೋಡಿ ತುಂಬಾ ಬೇಸರ ಆಗುತ್ತಿತ್ತು. ಸೋಷಿಯಲ್​ ಮೀಡಿಯಾಗಳಲ್ಲಿ ಮನಸ್ಸಿಗೆ ಬಂದದ್ದನ್ನು ಬರೆಯುತ್ತಾರೆ. ಇವರಿಗೆ ಮನುಷ್ಯತ್ವವೇ ಇಲ್ವಾ, ಇವರೇನು ಮನುಷ್ಯರಾ? ಮನೆಯಲ್ಲಿ ಯಾರೂ ಹೆಣ್ಣು ಮಕ್ಳು ಇಲ್ವಾ ಎಂದೆಲ್ಲಾ  ಎನ್ನಿಸುತ್ತಿತ್ತು. ಹೆಣ್ಣು ಮಕ್ಕಳನ್ನುಇಷ್ಟು ಕೀಳಾಗಿ ಏಕೆ ನೋಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. 

Tap to resize

Latest Videos

ವೇಟ್​ ಮಾಡ್ತಾ ಇದ್ದೀನಿ ಎನ್ನುತ್ತಲೇ ಅಭಿಮಾನಿಗಳ​ ತಲೆಗೆ ಹುಳು ಬಿಟ್ಟ ಆ್ಯಂಕರ್​ ಅನುಶ್ರೀ...

ಅಂದಹಾಗೆ ಜಾಹ್ನವಿ ಅವರು ಸಿಂಗಲ್​ ಪೇರೆಂಟ್​. ಇವರಿಗೆ ಮಗ ಇದ್ದು, ತಮ್ಮಿಬ್ಬರ ಬಾಂಡಿಂಗ್​  ಕುರಿತು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವನು ಮಗನಿಗಿಂತಲೂ ಹೆಚ್ಚಾಗಿ ನನಗೆ ಫ್ರೆಂಡ್​ ಇದ್ದ ಹಾಗೆ. ನನಗೆ ಮಗ ಇದ್ದಾನೆ ಎಂದರೆ ಯಾರೂ ನಂಬುವುದಿಲ್ಲ. ಸಂತೂರ್​ ಮಮ್ಮಿ ಎನ್ನುತ್ತಾರೆ. ಆದರೂ ಮಗ ಇರುವುದಂತೂ ನಿಜ. ನನ್ನನ್ನು ತಿದ್ದಿ ತೀಡುವುದೂ ಅವನೇ. ಏನಾದರೂ ಚೆನ್ನಾಗಿಲ್ಲ ಎಂದರೆ ನೇರವಾಗಿಯೇ ಹೇಳಿಬಿಡುತ್ತಾನೆ. ನಾವಿಬ್ಬರೂ ಸ್ನೇಹಿತರಂತೆ ಇದ್ದೇವೆ ಎಂದಿದ್ದಾರೆ. ಸಿಂಗಲ್​ ಪೇರೆಂಟ್​ ಆಗಿರುವ ಕುರಿತಂತೆ ಮಾತನಾಡಿದ ಜಾಹ್ನವಿ ಅವರು,  ಒಂದು ಕಳೆದುಕೊಂಡರೆ ಮತ್ತೊಂದು ರೆಡಿಯಾಗಿರುತ್ತದೆ. ಆ ದೇವರು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಏನೋ ಒಂದು ಒಳ್ಳೆಯದ್ದು ಇದ್ದೇ ಇರುತ್ತದೆ. ಆ ಕ್ಷಣದಲ್ಲಿ ನಮಗೆ ಅದು ನೋವು ಅನ್ನಿಸಬಹುದು. ಆದರೆ ಎಷ್ಟೋ ವರ್ಷಗಳ ಹಿಂದೆ ಮಾಡಿದ ಕಾರ್ಯ ಒಳ್ಳೆಯದ್ದಕ್ಕೇ ಆಗಿರುತ್ತದೆ. ಆ ದೇವರೇ ಏನಾದರೂ ಪ್ಲ್ಯಾನ್ ಮಾಡಿರುತ್ತಾನೆ. ನನ್ನ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಮಗ ತುಂಬಾ ಬುದ್ಧಿವಂತ. ನನಗೆ ಆ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

'ದೈವ ಇಚ್ಛೆ ಏನಿದೆ ಅದೇ ಆಗುತ್ತದೆ. ನನಗಿಂತ ಕಷ್ಟ ಪಡುತ್ತಿರುವವರು ಇದ್ದಾರೆ ಅದನ್ನು ನೋಡಿದರೆ ದೇವರು ನಮ್ಮನ್ನು ಚೆನ್ನಾಗಿಟ್ಟಿದ್ದಾನೆ. ನನ್ನ ಫ್ಯಾಮಿಲಿನ ನೋಡಿಕೊಳ್ಳುವಷ್ಟು ವ್ಯವಸ್ಥೆ ಆದ್ಮೇಲೆ ನನ್ನ ಜೀವನದಲ್ಲಿ ಈ ರೀತಿ ಆಗಿರುವುದು..ನಮ್ಮಲ್ಲಿ ಸಹಿಸಿಕೊಳ್ಳುವ ಗುಣ ಹೆಚ್ಚಿರುತ್ತದೆ ಏಕೆಂದರೆ  ಹಣಕಾಸಿನ ವಿಚಾರದಲ್ಲಿ ನಾವು ಇಂಡಿಪೆಂಡೆಂಟ್ ಆಗುವವರೆಗೂ ಸಹಿಸಿಕೊಳ್ಳುತ್ತೀವಿ ತಂದೆ-ತಾಯಿಗೆ ಕಷ್ಟ ಆಗದಂತೆ ನೋಡಿಕೊಳ್ಳುತ್ತೀವಿ...ಸಾವಿನ ಮೂಲಕವೂ End ಆಗಬಹುದು. ಅವತ್ತಿನಿಂದ ಇವತ್ತಿನವರೆಗೂ ದೇವರ ನನ್ನ ಕೈ ಹಿಡಿದಿದ್ದಾನೆ ನನ್ನ ಸಿನಿಮಾ ಕೆಲಸಗಳು ಚೆನ್ನಾಗಿ ನಡೆಯುತ್ತಿದೆ. ಒಂದು ಕಷ್ಟದಿಂದ ಹೊರ ತಂದು ನೆಮ್ಮದಿಯಾಗಿರಲು ಬ್ಯುಸಿಯಾಗಿಟ್ಟಿದ್ದಾನೆ ಅಂದರೆ ಖಂಡಿತಾ ಇದು ದೇವರ ಕೆಲಸವೇ' ಎಂದು ಜಾಹ್ನವಿ ಈ ಹಿಂದಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. 

ಮುದ್ದು ಸಿಹಿಯ ಆ್ಯಕ್ಟಿಂಗ್​ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...

click me!