ಮಾನಸಿಕ ಸ್ಥಿಮಿತ ಕಳಕೊಂಡಿರೋ ಅಮೃತಧಾರೆ ಭಾಗ್ಯಮ್ಮ, ಮಗಳೊಂದಿಗೆ ಡ್ರೈವಿಂಗ್​: ಬೇಡಮ್ಮಾ ಅಂತಿರೋ ಫ್ಯಾನ್ಸ್​!

Published : Jan 17, 2025, 12:57 PM ISTUpdated : Jan 17, 2025, 01:16 PM IST
ಮಾನಸಿಕ ಸ್ಥಿಮಿತ ಕಳಕೊಂಡಿರೋ ಅಮೃತಧಾರೆ ಭಾಗ್ಯಮ್ಮ, ಮಗಳೊಂದಿಗೆ ಡ್ರೈವಿಂಗ್​: ಬೇಡಮ್ಮಾ ಅಂತಿರೋ ಫ್ಯಾನ್ಸ್​!

ಸಾರಾಂಶ

ಗೌತಮ್‌ನ ಅಮ್ಮ ಭಾಗ್ಯಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಚಿಕ್ಕಮ್ಮ ಶಕುಂತಲಾ ದುರುಳಿ ಎಂದು ಭೂಮಿಕಾಗೆ ತಿಳಿದಿದೆ. ಶಕುಂತಲಾ ಮತ್ತು ಸಹೋದರ ಜೈದೇವ್ ಭಾಗ್ಯಮ್ಮಳನ್ನು ಮುಗಿಸಲು ಯತ್ನಿಸುತ್ತಿದ್ದಾರೆ. ಭಾಗ್ಯಮ್ಮ ಮತ್ತು ಮಗಳು ಸುಧಾ ಗಾಡಿಯಲ್ಲಿ ಹೋಗುತ್ತಿದ್ದು, ಭಾಗ್ಯಮ್ಮ ಡ್ರೈವ್​ ಮಾಡ್ತಿದ್ದಾಳ. ಚಿತ್ಕಲಾ ಮತ್ತು ಮೇಘಾ ಕ್ರಮವಾಗಿ ಭಾಗ್ಯಮ್ಮ ಮತ್ತು ಸುಧಾ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಮೃತಧಾರೆಯ ಡುಮ್ಮಾಸರ್​ ಗೌತಮ್​ಗೆ ಅಮ್ಮ ಭಾಗ್ಯಮ್ಮಾ ಮತ್ತು ತಂಗಿ ಸುಧಾ ಸಿಕ್ಕಿದ್ದಾರೆ. ಆದರೆ ಭಾಗ್ಯಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ವಿಲನ್​ ಶಕುಂತಲಾ ದೇವಿಯನ್ನು ಕಂಡರೆ ಭಯ ಪಡುವ ಭಾಗ್ಯನಿಗೆ ಬೇರೆ ಯಾರೂ ನೆನಪಿಲ್ಲ. ಆದರೆ ಶಕುಂತಲಾ ದೇವಿ ಮತ್ತು ಆಕೆಯ ಸಹೋದರ ಭಾಗ್ಯಮ್ಮಳನ್ನು ಮುಗಿಸುವ ಪ್ಲ್ಯಾನ್​ ಮಾಡುತ್ತಿದ್ದಾರೆ. ಚಿಕ್ಕಮ್ಮ ಶಕುಂತಲಾಳನ್ನು ಅಮ್ಮನ ಸಮಾನವಾಗಿ ನೋಡ್ತಿದ್ದಾನೆ ಗೌತಮ್​. ಆಕೆಯ ಕ್ಯಾರೆಕ್ಟರ್​ ಸರಿಯಿಲ್ಲ, ಆಕೆ ಮೋಸಗಾತಿ ಎನ್ನುವುದು ಭೂಮಿಕಾಗೆ ಗೊತ್ತಿದ್ದರೂ ಚಿಕ್ಕಮ್ಮನ ಮೇಲೆ ಪ್ರಾಣನೇ ಇಟ್ಟುಕೊಂಡಿರುವ ಗಂಡ ಗೌತಮ್​ಗೆ ಅದನ್ನು ಹೇಳುವುದು ಹೇಗೆ ಎಂದು ತಿಳಿಯುತ್ತಿಲ್ಲ. ಅತ್ತ ಜೈದೇವ ಕೂಡ ಅಮ್ಮನ ಜೊತೆಗೂಡಿ ಮುಗಿಸುವ ಪ್ಲ್ಯಾನ್​ ಮಾಡುತ್ತಿದ್ದಾನೆ.

ಇದರ ನಡುವೆಯೇ ಭಾಗ್ಯಮ್ಮ, ಮಗಳು ಸುಧಾ ಜೊತೆ ಗಾಡಿ ಏರಿ ಹೊರಟಿದ್ದಾಳೆ. ಇದರ ವಿಡಿಯೋ ಅನ್ನು ಭಾಗ್ಯಮ್ಮಾ ಉರ್ಫ್​ ನಟಿ ಚಿತ್ಕಲಾ ಬಿರಾದಾರ್​ ಶೇರ್​ ಮಾಡಿದ್ದಾರೆ. ನೀನು ಸರಿಯಿಲ್ಲಮ್ಮಾ, ಹುಷಾರು ಕಣಮ್ಮಾ, ಡುಮ್ಮಾ ಸರ್​ ಕಥೆ ಅಷ್ಟೇ ಎಂದು ನೆಟ್ಟಿಗರು ತಮಾಷೆ ಮಾಡ್ತಿದ್ದಾರೆ. ಅಂದಹಾಗೆ ಭಾಗ್ಯಮ್ಮಾ ಪಾತ್ರಧಾರಿಯ ಹೆಸರು ಚಿತ್ಕಲಾ ಬಿರಾದಾರ್​ ಹಾಗೂ ಸುಧಾ ಪಾತ್ರಧಾರಿಯ ಹೆಸರು ಮೇಘಾ ಶೆಣೈ (Meghaa Shenoy).ಚಿತ್ಕಲಾ ಕುರಿತು ಹೇಳುವುದಾದರೆ,  ಈ ಹಿಂದೆ ಕಲರ್ಸ್ ಕನ್ನಡದ 'ಕನ್ನಡತಿ' ಸೀರಿಯಲ್‌ನಲ್ಲಿ ಅಮ್ಮಮ್ಮ ಆಗಿ ಫೇಮಸ್ ಆಗಿದ್ದವರು. ಆಮೇಲೆ ಸಾಲು ಸಾಲು ಸಿನಿಮಾಗಳಲ್ಲೂ ಬ್ಯುಸಿ ಆದರು.  ಇಂಗ್ಲೀಷ್ ಪ್ರೊಫೆಸರ್ ಆಗಿದ್ದವರು ಇವರು. ಈ ಮೊದಲು ಒಂದಿಷ್ಟು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟದ್ದು ಕಿರುತೆರೆ. ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚಾಗಿ ಸೌಂಡ್​ ಮಾಡುತ್ತಿದ್ದ ಧಾರಾವಾಹಿ ಎಂದರೆ ಅದು ಕನ್ನಡತಿ. ಇದೇ ಕನ್ನಡತಿ ಸೀರಿಯಲ್​ ಮೂಲಕ ಅಮ್ಮಮ್ಮನಾಗಿ ವೀಕ್ಷಕರ ಮೇಲೆ ಪ್ರಭಾವ ಬೀರಿದ ನಟಿ ಚಿತ್ಕಲಾ ಬಿರಾದಾರ್. ಕನ್ನಡತಿ ಬಳಿಕ ಬೃಂದಾವನ ಧಾರಾವಾಹಿಯಲ್ಲಿ ವಿಭಿನ್ನ ಹೇರ್ ಸ್ಟೈಲ್​ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದರು. ಬೃಂದಾವನದ ನಂತರ ಸೀರಿಯಲ್​ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಚಿತ್ಕಳಾ ಅವರು ಅಮೆರಿಕ ಪ್ರವಾಸದಲ್ಲಿದ್ರು. ಮಗ ಸೊಸೆ ಜೊತೆ ಸಮಯ ಕಾಳಿತಿದ್ರು. ಅಲ್ಲಿಂದ ಬಂದ್ಮೇಲೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರು. ಸದ್ಯ ಮತ್ತೆ ಹೊಸ ಪಾತ್ರದಲ್ಲಿ ವೀಕ್ಷಕರ ಮುಂದೆ ಬಂದ ಕಮಾಲ್​ ಮಾಡುತ್ತಿದ್ದಾರೆ.

ಬದುಕೇ ಹೀಗಲ್ವಾ..? ಕುತೂಹಲದ ಪೋಸ್ಟ್​ ಶೇರ್​ ಮಾಡಿದ ಅಮೃತಧಾರೆ ಗೌತಮ್​ ಅಮ್ಮ, ನಟಿ ಚಿತ್ಕಲಾ

ಇನ್ನು ಸುಧಾ ಪಾತ್ರಧಾರಿಯ ಕುರಿತು ಹೇಳುವುದಾದರೆ,  ನಟಿ ಹೆಸರು ಮೇಘಾ ಶೆಣೈ (Meghaa Shenoy). ಮೇಘಾ ಕಿರುತೆರೆಗೆ ಹೊಸಬರಲ್ಲ, ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ, ವಿಲನ್ ಆಗಿ ಹೀಗೆ ಹಲವು ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ರಕ್ಷಾಬಂಧನ (Rakshabandhana), ಆರತಿಗೊಬ್ಬ ಕೀರ್ತಿಗೊಬ್ಬ, ಬ್ರಾಹ್ಮಿನ್ಸ್ ಕೆಫೆ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ಮೇಘಾ ಶೆಣೈ, ನಂತರ ಕಾವೇರಿ, ಜನುಮದ ಜೋಡಿ, ಮಹಾದೇವಿ ಸೀರಿಯಲ್ ಗಳಲ್ಲಿ ನಟಿಸಿದ್ದರು. 

ಇನ್ನು ರಕ್ಷಾಬಂಧನ ಮತ್ತು ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್ ಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಜೊತೆಗೆ ಸ್ಟಾರ್ ಸುವರ್ಣ (Star Suvarna) ವಾಹಿನಿಯ ಜೀವ ಹೂವಾಗಿದೆ ಧಾರಾವಾಹಿಗಳಲ್ಲೂ ನಟಿಸಿದ್ದರು. ಇದೀಗ ಇದೇ ಮೊದಲ ಬಾರಿಗೆ ಮೇಘಾ ಶೆಣೈ, ಇಲ್ಲಿವರೆಗೂ ನಟಿಸಿರೋದಕ್ಕಿಂತ ವಿಭಿನ್ನವಾದ ಪಾತ್ರದಲ್ಲಿ ನಟಿಸುತ್ತಿದ್ದು, ಬಡವರ ಮನೆಯ ಮುಗ್ಧ ಮಹಿಳೆಯಾಗಿ, ತನ್ನ ಕುಟುಂಬವನ್ನ ಸಲಹಲು ಕೆಲಸದವಳಾಗಿ ದುಡಿಯುವ ಮಹಿಳೆ ಸುಧಾ ಪಾತ್ರದಲ್ಲಿ ಮೇಘಾ ಕಾಣಿಸಿಕೊಂಡಿದ್ದಾರೆ.  

ಕ್ಯಾನ್ಸರ್​ ಚಿಕಿತ್ಸೆಗೆ ಹಣವಿಲ್ಲದೇ ಬಳಲ್ತಿರೋ 'ಗಟ್ಟಿಮೇಳ'ದ ನಟಿ: ನೋವಿನ ಕಥೆ ಬಿಚ್ಚಿಟ್ಟ ಕಮಲಶ್ರೀ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ