ನಟಿ ರೂಪಾಲಿ ಗಂಗೂಲಿಗೆ ರಿಲೀಫ್‌: ಅವಹೇಳನಕಾರಿ ಪೋಸ್ಟ್ ಮಾಡದಂತೆ ಮಲಮಗಳಿಗೆ ಹೈಕೋರ್ಟ್ ಸೂಚನೆ

Published : Jan 17, 2025, 12:44 PM IST
ನಟಿ ರೂಪಾಲಿ ಗಂಗೂಲಿಗೆ ರಿಲೀಫ್‌: ಅವಹೇಳನಕಾರಿ ಪೋಸ್ಟ್ ಮಾಡದಂತೆ ಮಲಮಗಳಿಗೆ ಹೈಕೋರ್ಟ್ ಸೂಚನೆ

ಸಾರಾಂಶ

ಅನುಪಮಾ ಖ್ಯಾತಿಯ ಸೀರಿಯಲ್ ನಟಿ ರೂಪಾ ಗಂಗೂಲಿಗೆ ಬಾಂಬೆ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದ್ದು, ನಟಿಯ ಮಲ ಮಗಳಾದ ಇಶಾ ವರ್ಮಾಗೆ ತನ್ನ ಮಲತಾಯಿ ರೂಪಾ ಗಂಗೂಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡದಂತೆ ಸೂಚನೆ ನೀಡಿದೆ.

ಅನುಪಮಾ ಖ್ಯಾತಿಯ ಸೀರಿಯಲ್ ನಟಿ ರೂಪಾ ಗಂಗೂಲಿಗೆ ಬಾಂಬೆ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದ್ದು, ನಟಿಯ ಮಲ ಮಗಳಾದ ಇಶಾ ವರ್ಮಾಗೆ ತನ್ನ ಮಲತಾಯಿ ರೂಪಾ ಗಂಗೂಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡದಂತೆ ಸೂಚನೆ ನೀಡಿದೆ. ತನ್ನ ಮುಂದಿನ ಆದೇಶದವರೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳು ಸೇರಿದಂತೆ ಎಲ್ಲೂ ರೂಪಾ ಗಂಗೂಲಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಬಾಂಬೆ ಹೈಕೋರ್ಟ್ ಇಶಾ ವರ್ಮಾಗೆ ಆದೇಶಿಸಿದೆ. ತನ್ನ ಮಲತಾಯಿಯ ವಿರುದ್ಧ ಯಾವುದೇ ದುರುದ್ದೇಶಪೂರಿತ ಅಪಪ್ರಚಾರವನ್ನು ಮುಂದುವರಿಸಲು ಮೂರನೇ ವ್ಯಕ್ತಿಗಳು ಅಥವಾ ಮಧ್ಯವರ್ತಿಗಳನ್ನು ಬಳಸುವುದಕ್ಕೂ ನ್ಯಾಯಲಯ ತಡೆ ಹೇರಿದೆ. 

ಸುಳ್ಳು ಮತ್ತು ಹಾನಿಕಾರಕ ಹೇಳಿಕೆಗಳ ಮೂಲಕ ಇಶಾ ವರ್ಮಾ ಅವರು ತಮ್ಮ ವ್ಯಕ್ತಿತ್ವ ಮತ್ತು ವೈಯಕ್ತಿಕ ಜೀವನಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ನಟಿ ರೂಪಾ ಗಂಗೂಲಿ ತನ್ನ ಮಲಮಗಳಾದ ಇಶಾ ವಿರುದ್ಧ  50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಆರಿಫ್ ಎಸ್ ಡಾಕ್ಟರ್ ಅವರ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. 2020 ರಲ್ಲಿ, ರೂಪಾ ಗಂಗೂಲಿ ಅಭಿನಯಿಸುತ್ತಿರುವ  ಧಾರಾವಾಹಿ ಅನುಪಮಾದ ಪ್ರಥಮ ಪ್ರದರ್ಶನಕ್ಕೂ ಮುನ್ನ, ಇಶಾ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಅವರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ರೂಪಾ ಗಂಗೂಲಿಯನ್ನು ಪ್ರತಿನಿಧಿಸಿದ ವಕೀಲರಾದ ಸನಾ ರಯೀಸ್ ಖಾನ್ ಮತ್ತು ನೇಹಾ ಬಲಾನಿ ಹೇಳಿದರು. ಆ ಹೇಳಿಕೆಗಳು ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ತೆಗೆದು ಹಾಕುವಂತೆ ರೂಪಾ 
ಗಂಗೂಲಿಯವರ ಮನವಿಯನ್ನು ಇಶಾ ವರ್ಮಾ ಸ್ವೀಕರಿಸಿ ಸಾಕಷ್ಟು ಅವಕಾಶ ನೀಡಿದ್ದರೂ ಇಶಾ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದಾರೆ ಎಂದು ವಾದಿಸಿದ ಸನಾ  ರಯೀಸ್ ಖಾನ್ ಈ ಪ್ರಕರಣಕ್ಕೆ ಮಧ್ಯಂತರ ಪರಿಹಾರ ನೀಡುವಂತೆ ಕೋರಿದ್ದಾರೆ.  ದಿನಕಳೆದಂತೆ ತಮ್ಮ ಕಕ್ಷಿದಾರರ ಮಾನಹಾನಿ ಹೆಚ್ಚಾಗುತ್ತಿದೆ. ಇಶಾ ವರ್ಮಾ ಅವರ ಕ್ರಮಗಳು ರೂಪಾ ಗಂಗೂಲಿ ಅವರ ವೃತ್ತಿ ಜೀವನವನ್ನು ಗಂಭೀರವಾಗಿ ಪೂರ್ವಾಗ್ರಹ ಪೀಡಿತ ಮತ್ತು ಅಪಾಯಕ್ಕೆ ಸಿಲುಕಿಸುತ್ತಿವೆ ಎಂದು ಖಾನ್ ವಾದಿಸಿದರು.

ಈ ವಾದವನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ನೀಡಿದೆ. ರೂಪಾಲಿ ಗಂಗೂಲಿ ಅಶ್ವಿನ್ ಕೆ ವರ್ಮಾ ಅವರನ್ನು ಮದುವೆಯಾಗಿದ್ದು ಇವರಿಬ್ಬಗೆ ಓರ್ವ ಪುತ್ರನಿದ್ದಾನೆ. ಆದರೆ ರೂಪಾಲಿ ಮದುವೆಯಾದ ಅಶ್ವಿನ್ ಕೆ ವರ್ಮಾಗೆ ಅದಾಗಲೇ ಎರಡು ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿತ್ತು. ಆಕೆಯೇ ಈ ಇಶಾ ವರ್ಮಾ,  ಅವರ ಮೊದಲ ಮದುವೆ ಪ್ರಿಯಾಂಕಾ ಮೆಹ್ರಾ ಅವರೊಂದಿಗೆ ನಡೆದಿತ್ತು ನಂತರ ಅವರು ಸಪ್ನಾ ವರ್ಮಾ ಅವರನ್ನು ಎರಡನೇ ಮದುವೆಯಾದರು. ಈ ಮದುವೆಗಳಿಂದ ಅವರಿಗೆ ತಲಾ ಒಬ್ಬೊಬ್ಬ ಹೆಣ್ಣು ಮಕ್ಕಳಿದ್ದಾರೆ. ನಂತರ ಅಶ್ವಿನ್ ಕೆ ವರ್ಮಾ ಅವರು ರೂಪಾಲಿ ಅವರನ್ನು ಮೂರನೇ ಮದುವೆಯಾದರು. ಈ ಮದುವೆಯಿಂದ ಇಬ್ಬರಿಗೆ ಒಬ್ಬ ಮಗನಿದ್ದಾನೆ.

ಈ ಇಶಾ ವರ್ಮಾ ಕೆಲ ಸಮಯಗಳ ಹಿಂದೆ ತಮ್ಮ ಇನ್ಸ್ಟಾ ಪೋಸ್ಟ್‌ನಲ್ಲಿ ಮಲತಾಯಿ ರೂಪಾಲಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇಶಾ ತಮ್ಮ ಇನ್ಸ್ಟಾ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದರು, 'ಇದು ಸರಿಯಲ್ಲ. ರೂಪಾಲಿ ಗಂಗೂಲಿಯವರ ನಿಜವಾದ ಕಥೆ ಯಾರಿಗಾದರೂ ತಿಳಿದಿದೆಯೇ? ಅವರು 12 ವರ್ಷಗಳ ಕಾಲ ಅಶ್ವಿನ್ ಕೆ ವರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದರು, ಆದರೆ ಅಶ್ವಿನ್ ಅವರಿಗೆ ಆಗಲೇ ಮದುವೆಯಾಗಿತ್ತು ಮೊದಲ ಮದುವೆಯಿಂದ ಅಶ್ವಿನ್‌ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು (ರೂಪಾ ಗಂಗೂಲಿ) ಕಠಿಣ ಹೃದಯದ ಮಹಿಳೆ, ಅವರು ನನ್ನನ್ನೂ ಮತ್ತು ನನ್ನ ತಂಗಿಯನ್ನೂ ನಮ್ಮ ತಂದೆಯಿಂದ ದೂರವಿಟ್ಟಿದ್ದಾರೆ. ಅವರು ಮುಂಬೈಗೆ ಬರುವ ಮೊದಲು ಸುಮಾರು 13-14 ವರ್ಷಗಳ ಕಾಲ ಕ್ಯಾಲಿಫೋರ್ನಿಯಾದಲ್ಲಿ ಮತ್ತು ನಂತರ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿದ್ದರು. ನಾನು ಇದೆಲ್ಲವನ್ನೂ ಹೇಳುತ್ತಿದ್ದೇನೆ ಏಕೆಂದರೆ ಅವರು ಯಾವಾಗಲೂ ಮಾಧ್ಯಮಗಳಲ್ಲಿ ತಮ್ಮ ದಾಂಪತ್ಯ ಜೀವನ ಎಷ್ಟು ಚೆನ್ನಾಗಿದೆ ಎಂದು ಹೇಳುತ್ತಾರೆ, ಆದರೆ ವಾಸ್ತವದಲ್ಲಿ ಅವರು ತುಂಬಾ ನಿಯಂತ್ರಿಸುವವರು. ನಾನು ನನ್ನ ತಂದೆಗೆ ಕರೆ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಅವರು ಕಿರುಚುತ್ತಾರೆ, ಅವರು ನನ್ನನ್ನೂ ಮತ್ತು ನನ್ನ ತಾಯಿಯನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಎಂದು ಆರೋಪಿಸಿದ್ದರು. 


ನಟಿ ರೂಪಾಲಿ ಗಂಗೂಲಿ ವಿರುದ್ಧ ಮಲ ಮಗಳು ಇಶಾ ವರ್ಮಾ ಗಂಭೀರ ಆರೋಪ

ಸಹನಟರ ಶೋದಿಂದಲೇ ಹೊರ ಹಾಕಿದ್ದ ಆರೋಪ ಹೊತ್ತ ಕಿರುತೆರೆ ನಟಿಯರಿವರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?