ಹೆಂಡ್ತೀನ ಮುಟ್ಟದೇ ಐದು ಸಲ ಕಿಸ್​ ಮಾಡುವಲ್ಲಿ ಸಕ್ಸಸ್​ ಆಗ್ತಾರಾ ಅಮೃತಧಾರೆ ಆನಂದ್​?

Published : Dec 17, 2023, 01:08 PM ISTUpdated : Dec 17, 2023, 01:09 PM IST
ಹೆಂಡ್ತೀನ ಮುಟ್ಟದೇ ಐದು ಸಲ ಕಿಸ್​ ಮಾಡುವಲ್ಲಿ ಸಕ್ಸಸ್​ ಆಗ್ತಾರಾ ಅಮೃತಧಾರೆ ಆನಂದ್​?

ಸಾರಾಂಶ

ಜೋಡಿ ನಂಬರ್​ 1 ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕಿರುತೆರೆ ನಟ ಆನಂದ್​ ದಂಪತಿ ಕಿಸ್​ ಟಾಸ್ಕ್​ನಲ್ಲಿ ಯಶಸ್ವಿಯಾಗ್ತಾರಾ? ಪ್ರೊಮೋ ಬಿಡುಗಡೆ  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್​-1 ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿದೆ. ಇದರಲ್ಲಿರುವ ಜೋಡಿಯ ಪೈಕಿ ಆನಂದ್​- ಚೈತ್ರಾ ಹಾಗೂ ಚಿದಾನಂದ​ ಮತ್ತು ಕವಿತಾ ಅವರೂ ಒಬ್ಬರು. ಅಮೃತಧಾರೆ ಸೀರಿಯಲ್​ನಲ್ಲಿ ನಾಯಕ ಗೌತಮ್ ಸ್ನೇಹಿತನಾಗಿ ನಟಿಸಿರುವ ಆನಂದ್ ಅವರ ರಿಯಲ್​ ಹೆಸರು ಕೂಡ ಆನಂದ್​. 'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ನಟ ಆನಂದ್ ಅವರು ತಮ್ಮ ಪತ್ನಿ ಚೈತ್ರಾ ಜೊತೆ ​ಜೀ ಟಿ.ವಿಯಲ್ಲಿ ಪ್ರಸಾರವಾಗ್ತಿರೋ ಜೋಡಿ ನಂಬರ್​ 1 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅದೇ ರೀತಿ, ಪಾಪ ಪಾಂಡು ಮೂಲಕ ಖ್ಯಾತಿ ಪಡೆದಿರುವ ಚಿದಾನಂದ ಅವರು ತಮ್ಮ ಪತ್ನಿ ಕವಿತಾ ಜೊತೆ ಈ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಷೋನಲ್ಲಿ ದಂಪತಿಗೆ ಒಂದು ಕುತೂಹಲದ ಟಾಸ್ಕ್​ ನೀಡಲಾಗಿದೆ. ಅದೇನೆಂದರೆ, ಆನಂದ್​ ಅವರು ಪತ್ನಿಯನ್ನು ಮುಟ್ಟದೇ ಐದು ಸಲ್​ ಕಿಸ್​ ಮಾಡಬೇಕು ಎನ್ನುವುದು. ಅದೇ ರೀತಿ ಅವರ ಪತ್ನಿ ಕವಿತಾ ಕೂಡ ಪತಿಗೆ ಇದೇ ರೀತಿ ಕಿಸ್​ ಮಾಡಬೇಕು. ಈ ಟಾಸ್ಕ್​ ಬಗ್ಗೆ ನಿರೂಪಕಿ ಶ್ವೇತಾ ಹೇಳುತ್ತಿದ್ದಂತೆಯೇ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಕೊನೆಗೆ ಟಾಸ್ಕ್​ನಂತೆ ಆನಂದ್​ ಅವರು ತಮ್ಮ ಪತ್ನಿಯನ್ನು ಮುಟ್ಟದೇ ಕಿಸ್​ ಮಾಡುವಲ್ಲಿ ಸಕ್ಸಸ್​ ಆಗಿದ್ದರೆ, ಅತ್ತ ಕವಿತಾ ಕೂಡ ಈ ಟಾಸ್ಕ್​ ಅನ್ನು ಪೂರೈಸಿದ್ದಾರೆ. ಇವರಿಬ್ಬರೂ ಹೀಗೆ ಪರಸ್ಪರ ಪ್ರೀತಿಯಿಂದ ಮುತ್ತಿಕ್ಕುತ್ತಿರುವುದನ್ನು ನೋಡಿ ಅವರ ಪ್ರೀತಿಗೆ ಜಡ್ಜ್​ಸ್​ ಕೂಡ ಭಾವುಕರಾಗುವುದನ್ನು ಪ್ರೊಮೋದಲ್ಲಿ ನೋಡಬಹುದು. 

ಸಂಗೀತಾನ್ನ ಮೈನಸ್ ಮಾಡಿದೆ... ನಾನು ಜೀರೊ ಅನ್ನೋದು ಪ್ರೂವ್ ಮಾಡ್ಲಿ... ಎನ್ನುತ್ತಲೇ ತಲೆ ಒಡೆದ ಕಾರ್ತಿಕ್​!

ಇದಕ್ಕೂ ಮುನ್ನ ಇವರಿಗೆ ಇನ್ನೊಂದು ಟಾಸ್ಕ್​ ನೀಡಲಾಗಿತ್ತು.  ಅದರಲ್ಲಿ ಆನಂದ್​- ಚೈತ್ರಾ ಕುಲುಮೆಯಲ್ಲಿ ಬೆವರು ಹರಿಸಿದ್ದರು.  ಕುಲುಮೆ ಕೆಲಸ ಎನ್ನುವುದು ಎಷ್ಟು ಕಷ್ಟ ಎನ್ನುವುದು ನೋಡಿದವರಿಗೆ ತಿಳಿಯುತ್ತದೆ. ದಿನಪೂರ್ತಿ ಬೆಂಕಿಯ ಬುಡದಲ್ಲಿ ಕುಳಿತು ಒಂದು ಪಾತ್ರೆಗೋ ಅಥವಾ ಇನ್ನಾವುದೋ ಸಾಮಗ್ರಿಗೆ ಕುಲುಮೆ ಹಾಕುವ ಕೆಲಸ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಅದರಲ್ಲಿಯೂ ಒಂದೆಡೆ ಬಿರು ಬಿಸಿಲು ಇದ್ದಾಗಲಂತೂ ಕೆಲಸಗಾರರ ಸ್ಥಿತಿ ಹೇಳತೀರದು. ಆದರೂ ಈ ಕೆಲಸ ಅವರಿಗೆ ಅನಿವಾರ್ಯ. ಅವರ ಕಷ್ಟ ಏನು ಎಂಬ ಬಗ್ಗೆ ಆನಂದ್​ ಅವರು ತಿಳಿಸಿದ್ದಾರೆ. ಕಬ್ಬಿಣದ ಜೊತೆ ಅವರೂ ಬೇಯುತ್ತಿರುತ್ತಾರೆ. ಅದೆಂಥ ಕಷ್ಟ ಎಂದು ಹೇಳಿದ್ದರು. 

ಅಂದಹಾಗೆ ನಿಜ ಜೀವನದಲ್ಲಿ  ಏಳುಬೀಳು ಕಂಡವರು ಆನಂದ್​-ಚೈತ್ರಾ.  ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್​ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ  ಕಣ್ಣೀರು ಹಾಕಿದ್ದರು. ಇದೀಗ ಈ ಜೋಡಿ ಆರು ವರ್ಷಗಳ ದಾಂಪತ್ಯ ಜೀವನವನ್ನು ಪುಟ್ಟ ಕಂದನ ಜೊತೆ ಆನಂದದಿಂದ ಕಳೆಯುತ್ತಿದೆ.  ಈ ಹಿಂದೆ ಚೈತ್ರಾ,  ಕೊರೋನಾ ಟೈಮ್‌ನಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ನಡೆಸಿದ್ದರು.  ಆನಂದ್​ ಅವರ ತಾಯಿ ಕೊರೋನಾದಿಂದ ಒಂದೆಡೆ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೊಂದೆಡೆ ಪತ್ನಿ ಚೈತ್ರಾ. ಇವರಿಬ್ಬರನ್ನೂ ಉಳಿಸಿಕೊಳ್ಳಲು ಆನಂದ್​ ಹೆಣಗಾಡಿದ್ದರು. ಕೊನೆಗೆ ಇಬ್ಬರೂ ಜೀವಾಪಾಯದಿಂದ ಪಾರಾದಾಗ ಖುದ್ದು ವೈದ್ಯರೂ ಚಕಿತಪಟ್ಟುಕೊಂಡಿದ್ದರಂತೆ. ಇದು ಕೂಡ ಪತ್ನಿಯ ಮರುಜನ್ಮ ಎಂದಿದ್ದರು ಆನಂದ್​.  

ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ: ಹೋರಾಟಕ್ಕೆ ಬೆಂಬಲ ಸೂಚಿಸಿ ಸುದೀಪ್​, ಧನಂಜಯ್​ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ