ಸಂಗೀತಾನ್ನ ಮೈನಸ್ ಮಾಡಿದೆ... ನಾನು ಜೀರೊ ಅನ್ನೋದು ಪ್ರೂವ್ ಮಾಡ್ಲಿ... ಎನ್ನುತ್ತಲೇ ತಲೆ ಒಡೆದ ಕಾರ್ತಿಕ್​!

By Suvarna News  |  First Published Dec 17, 2023, 11:55 AM IST

ಬಿಗ್​ಬಾಸ್​ ಮನೆಯಲ್ಲಿನ ಮಡಿಕೆ ಒಡೆಯುವ ಟಾಸ್ಕ್​ನಲ್ಲಿ ಸಂಗೀತಾ ಫೋಟೋ ಹಾಕಿ ಎಲ್ಲರನ್ನೂ ಅಚ್ಚರಿಗೊಳಿಸಿದ ಕಾರ್ತಿಕ್​! 
 


ಬಿಗ್​ ಬಾಸ್​ ಎಂದ ಮೇಲೆ ಭಾಷೆ ಯಾವುದೇ ಆಗಿರಲಿ, ಅಲ್ಲಿ ಪ್ರೀತಿ-ಪ್ರೇಮ ಒಂದಿಷ್ಟು ಅಶ್ಲೀಲ ಎಲ್ಲವೂ ಕಾಮನ್​ ಆಗಿವೆ. ಕೆಲವೊಮ್ಮೆ ಇದು ಸ್ಕ್ರಿಪ್ಟೆಡ್​ ಎಂದೂ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದವರು ಹೇಳುವುದು ಇದೆ. ಪ್ರೀತಿ ಪ್ರೇಮ ಎಲ್ಲಾ ಇಲ್ಲದೇ ಹೋದರೆ ಬಿಗ್​ಬಾಸ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ ಎನ್ನುವ ಕಾರಣಕ್ಕೆ ಲವ್​, ಜಗಳ, ಒಂದಿಷ್ಟು ವಿವಾದ, ಮನೆಯವರನ್ನು ನೆನೆದು ಕಣ್ಣೀರು ಹಾಕುವುದು... ಎಲ್ಲವನ್ನೂ ಮೊದಲೇ ಸ್ಕ್ರಿಪ್ಟ್​ ಮಾಡಿ ಕೊಡಲಾಗುತ್ತದೆ ಎಂದೂ ಹೇಳಲಾಗುತ್ತದೆ.  ಆರೋಪಗಳು ಏನೇ ಇರಲಿ, ಒಟ್ಟಿನಲ್ಲಿ ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ. ಇದೀಗ ಬಿಗ್​ಬಾಸ್​-10ರಲ್ಲಿಯೂ ಲವ್​ ಸ್ಟೋರಿ ಶುರುವಾಗಿದೆ.  Bigg Boss Session 10 ಶುರುವಾಗಿ ಎರಡನೆಯ ವಾರದಲ್ಲಿಯೇ ಸ್ಪರ್ಧಿಗಳಾದ ಸಂಗೀತಾ ಮತ್ತು ಕಾರ್ತಿಕ್​ ನಡುವೆ ಕುಚ್​ ಕುಚ್​ ಶುರುವಾಗಿತ್ತು. ಕಾರ್ತಿಕ್​ ಅವರಿಗೆ ಎಣ್ಣೆ ಮಸಾಜ್​ ಮಾಡುತ್ತಲೇ ಸಂಗೀತಾಗೆ ಲವ್​ ಆಗಿಬಿಟ್ಟಿತ್ತು. ಇವರ ಫ್ರೆಂಡ್​ಷಿಪ್​ ದಿನೇ ದಿನೇ ಬೆಳೆಯುತ್ತಿತ್ತು. 

ಹಿಂದೊಮ್ಮೆ ಸಂಗೀತಾರನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅವರ ಪರವಾಗಿ ಟಾಸ್ಕ್‌ಗೆ ಇಳಿದಿದ್ದರು ಕಾರ್ತಿಕ್‌. ಆದರೆ ಇದೀಗ ಅದೇ ಗೆಳೆತನದಲ್ಲಿ ಬಿರುಕು ಮೂಡಿದೆ. ಕೆಲ ಎಪಿಸೋಡ್​ ಹಿಂದೆ ಇನ್ನೊಮ್ಮೆ ನಾಮಿನೇಷನ್‌ ಮಾಡುವಾಗ ತಮಗೆ ಆಯ್ಕೆ ಇದ್ದರೂ ಅವರನ್ನು ಸೇಫ್ ಮಾಡಲಿಲ್ಲ ಎಂದು ಕಾರ್ತಿಕ್, ತನಿಷಾ ಮೇಲೆ ಸಂಗೀತಾ ಮುನಿಸಿಕೊಂಡಿದ್ದರು.  ಇದಾದ ಬಳಿಕ ಫ್ರೆಂಡ್ಸ್​ ಆಗಿದ್ದ  ಕಾರ್ತಿಕ್, ತನಿಷಾ, ಸಂಗೀತಾ ಮಧ್ಯೆ ಜಗಳ ಶುರುವಾಗಿತ್ತು.   ಹಾಗೆಯೇ ಈ ಇಬ್ಬರ ಜೊತೆ ಸಂಗೀತಾ ಮಾತನಾಡುತ್ತಿರಲಿಲ್ಲ. ನಂತರ ಫ್ಯಾಮಿಲಿ ಪತ್ರದ ವಿಚಾರವಾಗಿ ಕಾರ್ತಿಕ್‌ ಅವರನ್ನು ಸೇರಿದಂತೆ ಕೆಲವು ಮನೆಮಂದಿಯನ್ನು ತಬ್ಬಿಕೊಂಡು ಅತ್ತಿದ್ದರು ಸಂಗೀತಾ. ಆದರೆ ಇದೀಗ ಸಂಗೀತಾ ಮತ್ತು ಕಾರ್ತಿಕ್​ ಸ್ನೇಹ ಸಂಪೂರ್ಣ ಮುರಿದು ಬಿದ್ದಿದೆ ಎನ್ನುವುದಕ್ಕೆ ಬಿಗ್​ಬಾಸ್​ ಹೊಸ ಪ್ರೊಮೋ ಸಾಕ್ಷಿಯಾಗಿದೆ. 

Tap to resize

Latest Videos

ಅರೆಬರೆ ಬೆತ್ತಲಾದ ರಶ್ಮಿಕಾಗಿಂತ ಪೂರ್ತಿ ನಗ್ನಳಾದ ತೃಪ್ತಿಗೆ ಇಷ್ಟು ಕಮ್ಮಿ ದುಡ್ಡಾ? ಮೋಸ ಅಂತಿದ್ದಾರೆ ಫ್ಯಾನ್ಸ್​

ಈಗ ಸ್ಪರ್ಧಿಗಳಿಗೆ ಮಡಿಕೆ ಒಡೆಯುವ ಟಾಸ್ಕ್​ ನೀಡಲಾಗಿದೆ. ಮಡಿಕೆಯ ಮೇಲೆ ತಮಗೆ ಆಗದ ಸ್ಪರ್ಧಿಯ ಫೋಟೋ ಇಟ್ಟು ಅದನ್ನು ಒಡೆಯುವ ಟಾಸ್ಕ್​ ಇದು. ಈ ಮೂಲಕ ಕೋಪ ತೀರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.   ಬೆರ್ಚಪ್ಪನ ಮೇಲೆ ಒಂದು ಮಡಿಕೆ ಇದೆ. ಅದರ ಮೇಲೆ ತಮಗೆ ಸಿಟ್ಟು ಇರುವ ಸ್ಪರ್ಧಿಯ ಫೋಟೋ ಇಟ್ಟು ಒಡೆಯಬೇಕು. ಹೀಗೆ ಒಡೆಯುವ ಪೂರ್ವದಲ್ಲಿ  ಯಾವ ವಿಚಾರಕ್ಕೆ ಅವರ ಮೇಲೆ ಕೋಪ ಇದೆ ಎಂಬುದನ್ನು ಹೇಳುವುದು ಟಾಸ್ಕ್​. ಎಲ್ಲಾ ಸ್ಪರ್ಧಿಗಳು ತಮಗೆ ಆಗದವರ ಫೋಟೋ ಇಟ್ಟಿದ್ದಾರೆ.   ವಿನಯ್‌ ಅವರು ಸಂಗೀತಾ ಅವರಿಗೆ  ಮೊದಲಿನಿಂದಲೂ ಆಗಿ ಬರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದೇ ರೀತಿ ಪರಸ್ಪರ ಇಬ್ಬರೂ ಇನ್ನೊಬ್ಬರ ಫೋಟೋ ಇಟ್ಟು ಮಡಿಕೆ ಒಡೆದಿದ್ದಾರೆ. ವಿನಯ್​ ಸಂಗೀತಾರ ಫೋಟೊ ಇಟ್ಟು ಸಿಟ್ಟಿನಿಂದ ಮಡಿಕೆಯನ್ನು ಚೂರು ಚೂರು ಮಾಡಿದ್ದರೆ,  ಸಂಗೀತಾ ಕೂಡ ವಿನಯ್ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಆದರೆ ಕುತೂಹಲ ಘಟ್ಟದಲ್ಲಿ   ಕಾರ್ತಿಕ್ ಸಂಗೀತಾ ಫೋಟೋ ಇಟ್ಟು ಎಲ್ಲರಿಗೂ ಶಾಕ್​ ಕೊಟ್ಟಿದ್ದಾರೆ. 

ಇದಕ್ಕೆ ಕಾರಣವೂ ಇದೆ. ಕೆಲ ದಿನಗಳ ಹಿಂದೆ ಸಂಗೀತಾ, ಪ್ರತಾಪ್​ ಜೊತೆ ಮಾತನಾಡುವ ವೇಳೆ,  ‘ಕಾರ್ತಿಕ್ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ? ಎಂದಿದ್ದರು.  ‘ಕಾರ್ತಿಕ್ ಅವರಿಂದ ಸಂಗೀತಾರನ್ನು ಮೈನಸ್ ಮಾಡಿದ್ರೆ ಜೀರೊ ಬರುತ್ತದೆ’ ಎಂದಿದ್ದರು. ಇದನ್ನು ಕೇಳಿ ಕಾರ್ತಿಕ್​ ಕೋಪ ನೆತ್ತಿಗೇರಿದೆ. ಬಕೆಟ್​ ಹಿಡಿಯುವುದು ನನಗೆ ಆಗಿ ಬರಲ್ಲ. ಈ ರೀತಿಯ ಸ್ಟೇಟ್​ಮೆಂಟ್​ ಪಾಸ್​ ಮಾಡುವುದನ್ನು ನಾನು ಸಹಿಸಿಕೊಳ್ಳುವುದಿಲ್ಲ ಎನ್ನುತ್ತಲೇ, ಮಡಿಕೆ ಒಡೆದಿದ್ದಾರೆ. ‘ನನ್ನಿಂದ ಸಂಗೀತಾರನ್ನು ಮೈನಸ್ ಮಾಡಿದ್ದೇನೆ. ನಾನು ಜೀರೊ ಅನ್ನುವುದನ್ನು ಪ್ರೂವ್ ಮಾಡಲಿ’ ಎಂದು ಸವಾಲು ಬೇರೆ ಹಾಕಿದ್ದಾರೆ.  

ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್​ ಹಖ್ ರೊಮ್ಯಾಂಟಿಕ್​ ವ್ಯಕ್ತಿ ಎಂದ ಬಾಬಿ ಡಿಯೋಲ್​!
 

click me!