ಮನೆಯ ಮೇನ್ ಗೇಟ್ ಓಪನ್ ಮಾಡಿಸ್ತೀನಿ, ಗೆಟ್ ಔಟ್; ಕಿಚ್ಚನ ಮಾತಿಗೆ ತಲೆ ಕೆಡಿಸಿಕೊಂಡ ನೆಟ್ಟಿಗರು!

Published : Dec 16, 2023, 05:52 PM ISTUpdated : Dec 16, 2023, 06:10 PM IST
ಮನೆಯ ಮೇನ್ ಗೇಟ್ ಓಪನ್ ಮಾಡಿಸ್ತೀನಿ, ಗೆಟ್ ಔಟ್; ಕಿಚ್ಚನ ಮಾತಿಗೆ ತಲೆ ಕೆಡಿಸಿಕೊಂಡ ನೆಟ್ಟಿಗರು!

ಸಾರಾಂಶ

ಡ್ರೋನ್ ಪ್ರತಾಪ್, ವಿನಯ್ ಹಾಗೂ ಮೈಕೇಲ್ ಅವರಿಂದ ಯಾವ ತಪ್ಪು ನಡೆದಿದೆ? ಯಾಕೆ ಸುದೀಪ್ ಅಷ್ಟೊಂದು ಸೀರಿಯಸ್‌ ಆಗಿ ಅವರಿಗೆ ವಾರ್ನಿಂಗ್ ಮಾಡಿದ್ದಾರೆ?

ಬಿಗ್ ಬಾಸ್ ಕನ್ನಡ ಸೀಸನ್ 10 ರ ಮನೆಯಲ್ಲಿ ಇಂದು 'ವಾರದ ಕತೆ ಕಿಚ್ಚನ ಜತೆ' ಸಂಚಿಕೆ ಪ್ರಸಾರವಾಗಲಿದೆ. ಸದ್ಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆಯಾಗಿ ಭಾರೀ ಕುತೂಹಲ ಕೆರಳಿಸುತ್ತಿದೆ. ಕಿಚ್ಚ ಸುದೀಪ್ ಮೂವರು ಸ್ಪರ್ಧಿಗಳಿಗೆ 'ಮನೆಯ ಮುಖ್ಯ ದ್ವಾರ ಓಪನ್ ಮಾಡಿಸುತ್ತಿದ್ದೇನೆ, ಗೆಟ್ ಔಟ್' ಎಂದಿದ್ದಾರೆ. ಹಾಗಿದ್ದರೆ ಕಿಚ್ಚನಿಂದ ವಾರ್ನಿಂಗ್ ಪಡೆದ ಆ ಮೂವರು ಸ್ಪರ್ಧಿಗಳು ಯಾರು? ವಿನಯ್ ಗೌಡ, ಡ್ರೋಣ್ ಪ್ರತಾಪ್ ಹಾಗೂ ಮೈಕೇಲ್ ಅಜಯ್. ಹೌದು, ಈ ಮೂವರು ಬಿಗ್‌ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದ್ದಾರಂತೆ, ಅದಕ್ಕಾಗಿ ಅವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಇಂದು 11 ವಾರದ ವೀಕೆಂಡ್ ಸಂಚಿಕೆ 'ವಾರದ ಕತೆ ಕಿಚ್ಚನ ಜೊತೆ' ಪ್ರಸಾರವಾಗಲಿದೆ. ಈ ಸಂಚಿಕೆ ಪ್ರೊಮೋದಲ್ಲಿ ಕಿಚ್ಚ ಸುದೀಪ್ 'ಫಸ್ಟ್ ಟೈಂ ಭಜರ್ ಹಾಕಿದಾಗ್ಲಿಂದ ನೋಡ್ತಾನೇ ಇದೀನಿ, ಕೆಲವೊಬ್ರು ಬರ್ತಾನೇ ಇಲ್ಲ. ಅಬ್ಬಾಬ್ಬಾ ಅಂದ್ರೆ ಏನಾಗುತ್ತೆ ಬರ್ಲಿಲ್ಲಾ ಅಂದ್ರೆ ಅಲ್ವಾ? ವೆರ್ ಈಸ್ ಯುಅರ್ ಬೈಕ್ ಪ್ರತಾಪ್? ಸೀರಿಯಸ್‌ನೆಸ್‌ ಇದೆ ಅಂತಾನೇ ಅನ್ನಿಸ್ತಿಲ್ವಲ್ಲಾ? ವಿನಯ್, ಮೈಕೇಲ್ ಅವ್ರೇ, ಒಂದ್ ವೇದಿಕೆ ಸಿಕ್ಕಿ ಎಲ್ಲರ ಮರ್ಯಾದೆ ಸಿಕ್ಕ ತಕ್ಷಣ ನೀವು ಮಾಡೋ ಮೊದಲ ಕೆಲಸ ಅಂದ್ರೆ ಆ ವೇದಿಕೆಗೆ, ರೂಲ್ಸ್ ಅಂಡ್ ರೆಗ್ಯುಲೇಶನ್ಸ್‌ಗೆ ಮರ್ಯಾದೆ ತೆಗ್ಯೋದು ಅಲ್ವಾ? ತೆಗೆಸ್ತೀನಿ ಈಗ್ಲೇ ಮುಖ್ಯ ದ್ವಾರ, ಗೆಟ್ ಔಟ್' ಎಂದಿದ್ದಾರೆ ಕಿಚ್ಚ ಸುದೀಪ್. 

ಹಾಗಿದ್ದರೆ ಡ್ರೋನ್ ಪ್ರತಾಪ್, ವಿನಯ್ ಹಾಗೂ ಮೈಕೇಲ್ ಅವರಿಂದ ಯಾವ ತಪ್ಪು ನಡೆದಿದೆ? ಯಾಕೆ ಸುದೀಪ್ ಅಷ್ಟೊಂದು ಸೀರಿಯಸ್‌ ಆಗಿ ಅವರಿಗೆ ವಾರ್ನಿಂಗ್ ಮಾಡಿದ್ದಾರೆ? ಮುಂದೇನು ನಡೆದಿದೆ ಬಿಗ್ ಬಾಸ್ ಮನೆಯಲ್ಲಿ? ಇಂದು ನಾಮಿನೇಶನ್ ಪ್ರಕ್ರಿಯೆ ಕೂಡ ಇದೆ. ಈಗಾಗಲೇ 6 ಜನರು ನಾಮಿನೇಟ್ ಆಗಿದ್ದಾರೆ. ಯಾರು ಸೇಫ್ ಆಗ್ತಾರೆ, ಯಾರುಯ ಮನೆಯಿಂದ ಹೊರ ಹೋಗ್ತಾರೆ? ಎಲ್ಲವೂ ಈಗ ತೀವ್ರ ಕುತೂಹಲ ಕೆರಳಿಸುತ್ತಿರುವ ಅಂಶ. ಸದ್ಯಕ್ಕೆ ಬಿಗ್ ಬಾಸ್ ಪ್ರಿಯರು ಇಂದು ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರಿರಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ. 

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

ಮನೆಯ ಮೇನ್ ಗೇಟ್ ಓಪನ್ ಮಾಡಿಸ್ತೀನಿ, ಗೆಟ್ ಔಟ್; ಕಿಚ್ಚನ ಮಾತಿಗೆ ತಲೆ ಕೆಡಿಸಿಕೊಂಡ ನೆಟ್ಟಿಗರು! #BBK10 #KichchaSudeep #VinayGowda #MichaelAjay #DronePrathap #BiggBossKannada https://kannada.asianetnews.com/tv-talk/kichcha-sudeep-warns-to-vinay-drone-prathap-and-michael-ajay-in-bigg-boss-kannada-season-10-srb-s5red1

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...