ಸುಖ ಸಂಸಾರಕ್ಕೆ ಇರುವ ಮೂರು ಸೂತ್ರಗಳ ಬಗ್ಗೆ ಅಮೃತಧಾರೆ ಗೌತಮ್ ರಾಜೇಶ್ ನಟರಂಗ ಅವರು ಟಿಪ್ಸ್ ಕೊಟ್ಟಿದ್ದೇನು?
ರಾಜೇಶ್ ನಟರಂಗ ಎಂದರೆ ಬಹುಶಃ ಹೆಚ್ಚಿನ ಸೀರಿಯಲ್ ಪ್ರಿಯರಿಗೆ ತಿಳಿಯಲಿಕ್ಕಿಲ್ಲ. ಆದರೆ ಗೌತಮ್ ಎಂದರೆ ಸಾಕು ಕಣ್ಣ ಮುಂದೆ ಬರುವುದು ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್ ಗೌತಮ್ ಮತ್ತು ಭೂಮಿಕಾ. ಹೌದು. ಗೌತಮ್ ಪಾತ್ರಕ್ಕೆ ಜೀವ ತುಂಬಿರುವ ನಟನೇ ರಾಜೇಶ್ ನಟರಂಗ. ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ ರಾಜೇಶ್. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ. ಈ ಬಗ್ಗೆ ಖುದ್ದು ಅಮೃತಧಾರೆ ಸೀರಿಯಲ್ ನಾಯಕಿ ಭೂಮಿಕಾ ಅರ್ಥಾತ್ ಛಾಯಾ ಸಿಂಗ್ ಕೂಡ ಈ ಹಿಂದೆ ಹೇಳಿದ್ದರು. ರಾಜೇಶ್ ಸರ್ ಅವರಿಗೆ ನಾಯಕಿಯಾಗಿ ನಟನೆ ಮಾಡುವುದು ಅಷ್ಟು ಈಜಿಯಲ್ಲ ಎಂದು. ಅಷ್ಟರ ಮಟ್ಟಿನ ಪರ್ಫೆಕ್ಟ್ ವ್ಯಕ್ತಿ ರಾಜೇಶ್ ನಟರಂಗ ಅವರು.
ಸದ್ಯ ಗೌತಮ್ ಎಂದಾಕ್ಷಣ ಅಮೃತಧಾರೆಯ ಅವರ ಪತ್ನಿ ಭೂಮಿಕಾ ಕೂಡ ನೆನಪಾಗುತ್ತಾರೆ. ಮಧ್ಯ ವಯಸ್ಸಿನಲ್ಲಿ ಮದುವೆಯಾದವರ ಕಥಾ ಹಂದರವನ್ನು ಈ ಸೀರಿಯಲ್ ಹೊಂದಿದೆ. ಆಗರ್ಭ ಶ್ರೀಮಂತ ಗೌತಮ್ ಮತ್ತು ಮಧ್ಯಮ ವರ್ಗದ ಹೆಣ್ಣು ಭೂಮಿಕಾ ನಡುವಿನ ಕಥೆಯಿದು. ಈ ಸೀರಿಯಲ್‌ನಲ್ಲಿ ಇಬ್ಬರ ನಡುವೆ ಹೊಂದಾಣಿಕೆ ಈಗಷ್ಟೇ ಆಗುತ್ತಿದ್ದರೆ, ಅಸಲಿ ಜೀವನದಲ್ಲಿ ರಾಜೇಶ್ ಅವರಿಗೆ ಮದುವೆಯಾಗಿ 15 ವರ್ಷಗಳಾಗಿವೆ. ಅವರಿಗೆ ಓರ್ವ ಪುತ್ರಿ ಕೂಡ ಇದ್ದಾರೆ. ಅಂದಹಾಗೆ ರಾಜೇಶ್ ಅವರ ನಿಜ ಜೀವನದ ಪತ್ನಿಯ ಹೆಸರು ಚೈತ್ರಾ.
ಚೀನಾದಲ್ಲಿ ರಸ್ತೆ ಮೇಲೆ ತಲೆಹರಟೆ ಮಾಡಿದ್ರೆ ಏನಾಗತ್ತೆ? ಡಾ.ಬ್ರೋ ವಿವರಿಸಿದ್ದಾರೆ ನೋಡಿ...
ಇದೀಗ ರಾಜೇಶ್ ಹಾಗೂ ಚೈತ್ರಾ ಅವರು ಚಿಕ್ಕದೊಂದು ರೀಲ್ಸ್ ಮಾಡಿದ್ದು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ರಾಜೇಶ್ ಅವರ ಪತ್ನಿ ಚೈತ್ರಾ, ನಮ್ಮ ಮದುವೆಯಾಗಿ 15 ವರ್ಷವಾಗಿದೆ. ಸುಖ ಸಂಸಾರಕ್ಕೆ 12 ಸೂತ್ರಗಳು ಎನ್ನುತ್ತಾರೆ. ನೀವು ಯಾವುದಾದ್ರೂ ಮೂರು ಸೂತ್ರಗಳನ್ನು ಹೇಳಿ ಎಂದಿದ್ದಾರೆ. ಇದಕ್ಕೆ ಬಹುತೇಕ ಪುರುಷರು ಹೇಳುವಂತೆ ರಾಜೇಶ್ ಅವರೂ ಜೋಕ್ ಮೂಲಕ ಉತ್ತರ ಕೊಟ್ಟಿದ್ದಾರೆ. ಮೊದಲ ಸೂತ್ರ ಎಂದರೆ ಹೆಂಡತಿ ಏನು ಹೇಳಿದರೂ ಹೌದು ಹೌದು ಎನ್ನಬೇಕು ಎನ್ನುವುದಾದರೆ ಎರಡನೆಯ ಸೂತ್ರ ಪತ್ನಿ ಏನೇ ಡ್ರೆಸ್ ಮಾಡಿದ್ರೂ ಸಕತ್ ಆಗಿ ಕಾಣಿಸುತ್ತೀ ಎನ್ನಬೇಕಂತೆ. ಆದರೆ ಮೂರನೆ ಸೂತ್ರ ಹೇಳಲು ತಲೆ ಕೆಡಿಸಿಕೊಂಡ ರಾಜೇಶ್ ಅವರು, ಏನೇ ಹೇಳಿ, ಪತ್ನಿ ಹೇಳಿದಾಗ ಮೂರು ಸಲ ಹೌದು ಹೌದು ಹೌದು ಎಂದುಬಿಡಿ. ಇದು ಮೂರನೆಯ ಸೂತ್ರ ಎಂದರು.
ಆಗ ಚೈತ್ರಾ ಅವರು, ನೀವು ಹೀಗೆಲ್ಲಾ ಹೇಳಬೇಡಿ. ಸುಮ್ಮನಿದ್ದು ಬಿಡಿ ಎಂದಾಗ ಅದಕ್ಕೂ ಹೌದು ಎನ್ನುವ ಮೂಲಕ ತಮಾಷೆಯ ಉತ್ತರ ಕೊಟ್ಟರು ರಾಜೇಶ್ ನಟರಂಗ. ಇನ್ನು ರಾಜೇಶ್ ಅವರ ಸೀರಿಯಲ್ ಮತ್ತು ಹಿರಿತೆರೆಯ ವಿಷಯಕ್ಕೆ ಬರುವುದಾದರೆ, ಇವರು, ಚದುರಂಗ, ಯದ್ವಾ ತದ್ವಾ, ಮುಕ್ತ, ಬದುಕು, ಶಕ್ತಿ ಹೀಗೆ ನಾನಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಾಜೇಶ್ ಅವರು ಕಿಲ್ಲಿಂಗ್ ವೀರಪ್ಪನ್, ಹ್ಯಾಪಿ ಬರ್ತಡೇ, ಕವಚ, ಟಪೋರಿ, ಆನಂದ ನಿಲಯ, ಮೊಗ್ಗಿನ ಮನಸು, ಜಸ್ಟ್ ಮಾತ್ ಮಾತಲ್ಲಿ, ಆಪ್ತರಕ್ಷಕ, ನಾನು ನನ್ನ ಕನಸು, ಆರಕ್ಷಕ, ಕಡ್ಡಿಪುಡಿ, ಗಜಕೇಸರಿ, ಫಾರ್ಚುನರ್, ಆಯುಷ್ಮಾನ್ ಭವ, ಕಟ್ಟು ಕಥೆ, ಆಪರೇಷನ್ ಅಲಮೇಲಮ್ಮ, ಕಾಫಿ ತೋಟ, ನೂರೊಂದು ನೆನಪು ಹೀಗೆ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಒಬ್ಬರಿಗಾದ್ರೂ ನಾನು ಹೇಳಿದ್ದೇನೆಂದು ಅರ್ಥವಾಯ್ತಲ್ಲ, ಅಷ್ಟೇ ಸಾಕು: ರಿಷಬ್ ಶೆಟ್ಟಿ ಹೀಗೆ ಅಂದಿದ್ದೇಕೆ?