ಅಮೃತಧಾರೆ ಗೌತಮ್‌ ರಿಯಲ್‌ ಅತ್ತೆ ಭಾವಿ ಅಳಿಯನ ಬಗ್ಗೆ ಕಂಡಿದ್ದ ಕನಸೇನು? ಆಗಿದ್ದೇನು?

By Suvarna News  |  First Published Dec 2, 2023, 8:51 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕಿಚನ್‌ ಕಾರ್ಯಕ್ರಮದಲ್ಲಿ ಅಮೃತಧಾರೆ ಸೀರಿಯರ್‌ ಗೌತಮ್‌ ಅರ್ಥಾತ್‌ ರಾಜೇಶ್‌ ನಟರಂಗ ಅವರ ಅತ್ತೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್‌ನಲ್ಲಿ ಜನರ ಮೆಚ್ಚುಗೆ ಗಳಿಸಿದ ಪಾತ್ರವೆಂದರೆ ಅದು ಗೌತಮ್‌. ಈ ಸೀರಿಯಲ್‌ನಲ್ಲಿ ಕೋಟ್ಯಧೀಶ್ವರ ಬಿಜಿನೆಸ್​ಮೆನ್​ ಆಗಿ ನಟಿಸುತ್ತಿರುವವರು ಗೌತಮ್​.  ಅಮೃತಧಾರೆ ಸೀರಿಯಲ್​ ಬಗ್ಗೆ ಹೇಳುವುದಾದರೆ, ಭೂಮಿಕಾ (Bhoomika)  ಅಮೃತಧಾರೆ ಸೀರಿಯಲ್​ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್​ಮೆನ್​ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್​.  ಟಿಆರ್​ಪಿಯಲ್ಲಿಯೂ ಮುಂದಿರೋ ಈ ಸೀರಿಯಲ್​ನಲ್ಲಿ ಈ ಜೋಡಿಯನ್ನು ಪ್ರೇಕ್ಷಕರು ಸಕತ್​ ಇಷ್ಟಪಡುತ್ತಿದ್ದಾರೆ. 

ಗೌತಮ್‌ ಅವರ  ರಿಯಲ್‌ ಹೆಸರು ರಾಜೇಶ್‌ ನಟರಂಗ.  ಅವರ ನಿಜ ಜೀವನದ ಪತ್ನಿಯ ಹೆಸರು ಚೈತ್ರಾ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕಿಚನ್​ ಕಾರ್ಯಕ್ರಮದಲ್ಲಿ ರಾಜೇಶ್​ ಮತ್ತು ಚೈತ್ರಾ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚೈತ್ರಾ ಅವರ ಅಮ್ಮ ಹಾಗೂ ರಾಜೇಶ್‌ ಅವರ ತಂದೆ ಮಾತನಾಡಿದ್ದಾರೆ. ರಾಜೇಶ್‌ ಅವರ ಅಪ್ಪ ಇಬ್ಬರೂ ಚೆನ್ನಾಗಿದ್ದೀರಾ ಎಂದು ಕೇಳಿದರೆ, ಚೈತ್ರಾ ಅವರ ಅಮ್ಮ, ತಮ್ಮ ಮಗಳಿಗೆ ಎಂಥ ಗಂಡ ಬೇಕಿತ್ತು ಎಂಬ ಬಗ್ಗೆ ಕನಸು ಕಂಡಿರುವುದಾಗಿ ಹೇಳಿದ್ದಾರೆ. ಪ್ರತಿಯೊಬ್ಬ ತಾಯಿಯೂ ತಮ್ಮ ಮಗಳಿಗೆ ಇದೇ ರೀತಿ ಗಂಡ ಸಿಗಬೇಕು ಎಂದು ಕನಸು  ಕಂಡಿರುತ್ತಾಳೆ. ಆದರೆ ಕೆಲವರಿಗೆ ಮಾತ್ರ ಆ ಅದೃಷ್ಟ ಸಿಕ್ಕಿರುತ್ತದೆ. ರಾಜೇಶ್‌ ನಟರಂಗ ಅವರ ಅತ್ತೆ ಅಂದ್ರೆ ಚೈತ್ರಾ ಅವರ ತಾಯಿಯ ಕನಸು ನನಸಾದಂತಿದೆ. ಇದೇ ಕಾರಣಕ್ಕೆ ಅವರು, ನನ್ನ ಮಗಳಿಗೆ  ಯಾವ ರೀತಿಯ ಗಂಡ ಸಿಗಬೇಕು ಎಂದು ಕನಸು ಕಂಡಿದ್ದೆನೋ ನಿಜಕ್ಕೂ ಅಂಥದ್ದೇ ಗಂಡ ಸಿಕ್ಕಿದ್ದಾನೆ. ಇದು ತುಂಬಾ ಸಂತೋಷ ಎಂದು ಮನತುಂಬಿ ಮಾತನಾಡಿದ್ದಾರೆ.  

Tap to resize

Latest Videos

ಶಾಸ್ತ್ರಕ್ಕೆ ಇಟ್ಟಿದ್ದ ಊಟವನ್ನೂ ಗುಳುಂ ಮಾಡಿದ್ರಂತೆ ಅಮೃತಧಾರೆ ಗೌತಮ್​! ಆ ಘಟನೆ ತಿಳಿಸಿದ ಪತ್ನಿ ಚೈತ್ರಾ

ಇದೇ ವೇಳೆ ತಮ್ಮ ತಾಯಿಯನ್ನು ನೆನೆದು ರಾಜೇಶ್‌ ಭಾವುಕರಾಗಿದ್ದರೆ, ತಂದೆಯನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಚೈತ್ರಾ ಅವರು ತುಪ್ಪದ ಅನ್ನವನ್ನು ಮಾಡಿ ಅದನ್ನು ಪತಿ ರಾಜೇಶ್‌ ಅವರಿಗೆ ಬಡಿಸಿದ್ದಾರೆ. ಈ ಮೊದಲು ಇದೇ ಕಾರ್ಯಕ್ರಮದಲ್ಲಿ  ಚೈತ್ರಾ ಅವರು, ರಾಜೇಶ್​ ಅವರ ಗುಟ್ಟೊಂದನ್ನು ರಟ್ಟು ಮಾಡಿದ್ದರು. 

ಒಮ್ಮೆ ಹಬ್ಬದ ಸಂದರ್ಭದಲ್ಲಿ ಶಾಸ್ತ್ರಕ್ಕೆಂದು ಇಟ್ಟಿದ್ದ ಆಹಾರವನ್ನೂ ತಿಂದುಬಿಟ್ಟಿದ್ರಂತೆ ರಾಜೇಶ್​ ನಟರಂಗ! ಅದನ್ನು ಚೈತ್ರಾ ತಿಳಿಸಿದರು. ಬಾಳೆಯಲ್ಲಿ ಇಟ್ಟಿದ್ದ ಎಲ್ಲಾ ಆಹಾರ ಗುಳುಂ ಮಾಡಿಬಿಟ್ಟಿದ್ರು. ಆಗ ಅವರ ಚಿಕ್ಕಪ್ಪ, ಅಯ್ಯೋ ಇದೇನಿದು ಎಲ್ಲಾ  ತಿಂದುಬಿಟ್ಯಲ್ಲೋ, ಎಲೆಯಲ್ಲಿ ಚೂರಾದ್ರೂ ಉಳಿಸೋ, ಅನ್ನ ಕಾಣದೇ ಇರೋರ್​ ಥರ ತಿಂತಾ ಇದ್ಯಲ್ಲಾ ಎಂದು  ಹೇಳಿದ್ರು ಎಂಬುದನ್ನು ನೆನಪಿಸಿಕೊಂಡರು. ಇದೇ ಕಾರ್ಯಕ್ರಮದಲ್ಲಿ, ಭಾಗ್ಯಲಕ್ಷ್ಮಿ ಸೀರಿಯಲ್​ ತಾಂಡವ್​ ಅಂದರೆ ಸುದರ್ಶನ ರಂಗಪ್ರಸಾದ್​ ಮತ್ತು ಅವರ ಪತ್ನಿ ಸಂಗೀತಾ ಕೂಡ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಕಿಚನ್​ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತದೆ.    

ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಪೂರ್ಣಿ ದಂಪತಿ!

ಅಂದಹಾಗೆ, ರಾಜೇಶ್ ನಟರಂಗ ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್‌ ಪಾತ್ರಕ್ಕೆ ಜೀವ ತುಂಬಿರುವ  ರಾಜೇಶ್‌, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.  
 

click me!