ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಶ್ರೀರಸ್ತು ಶುಭಮಸ್ತು ಪೂರ್ಣಿ ದಂಪತಿ!

By Suvarna News  |  First Published Dec 2, 2023, 5:37 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂ.1 ವೇದಿಕೆಯಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿ ಲಾವಣ್ಯ ಮತ್ತು ಶಶಿ ದಂಪತಿ ಹಾಟ್‌ ಡ್ಯಾನ್ಸ್‌ ಮಾಡಿದ್ದಾರೆ. 
 


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಹೊಸದಾಗಿ ಮದುವೆಯಾಗಿ ಬಂದ ಅತ್ತೆ ತುಳಸಿಗೆ ಪೂರ್ಣಿ ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಸದಾ ಗಂಭೀರವಾಗಿ, ಗಂಟು ಮುಖ ಮಾಡಿಕೊಂಡಿರುವ ಪತಿ ಅವಿಯನ್ನೂ ಬದಲಿಸಿ, ಆತನಲ್ಲಿ ಪ್ರೇಮದ ಧಾರೆಯನ್ನೇ ಸುರಿಸಿದ್ದಾಳೆ ಪೂರ್ಣಿ. ಅಂದಹಾಗೆ ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್‌ ಪತಿಯ ಹೆಸರು  ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇವರೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್‌ 1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಾಗಲೇ ಕೆಲವು ವಾರಗಳಿಂದ ವಿವಿಧ ರೀತಿಯಲ್ಲಿ ಜೋಡಿ ನಂಬರ್‌ 1 ವೇದಿಕೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದೆ ಈ ಜೋಡಿ. ಇದೀಗ ಶಶಿ ಮತ್ತು ಲಾವಣ್ಯ ಜೋಡಿ   ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ಇದರ ಪ್ರೊಮೋ ಅನ್ನು ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದೆ. ನೃತ್ಯದ ಮೂಲಕ ಶೃಂಗಾರದ ರಂಗೋಲಿ ಬಿಡಿಸಿದ ಶಶಿ-ಲಾವಣ್ಯ ಎಂಬ ಶೀರ್ಷಿಕೆ ಅಡಿಯಲ್ಲಿ ಈ ಪ್ರೊಮೋ ಬಿಡುಗಡೆಯಾಗಿದೆ.

Tap to resize

Latest Videos

ಇವಳು ಹೊಟ್ಟೆಯಲ್ಲಿದ್ದಾಗ ಸಾಯಿಸಲು ಹೊರಟಿದ್ವಿ: ಆ ದಿನಗಳ ನೆನೆದ ಶ್ರೀರಸ್ತು ಶುಭಮಸ್ತು ಪೂರ್ಣಿಯ ಅಪ್ಪ

ಇದರಲ್ಲಿ ಈ ಜೋಡಿ ಸಕತ್‌ ಹಾಗೂ ಹಾಟ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ಇಬ್ಬರೂ ಒಂದೇ ತೆರನಾದ ಡ್ರೆಸ್‌ ಧರಿಸುವ ಮೂಲಕ ಅತ್ಯದ್ಭುತವಾಗಿ ನರ್ತಿಸಿದ್ದಾರೆ. ಈ ಜೋಡಿ ಇಷ್ಟು ಚೆನ್ನಾಗಿ ನೃತ್ಯ ಮಾಡುವುದನ್ನು ನೋಡಿದ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇವರ ಫ್ಯಾನ್ಸ್‌ ಈ ಸಲದ ಜೋಡಿ ನಂಬರ್‌ 1 ಕಿರೀಟ ಪಕ್ಕಾ ನಿಮಗೇ ಬರುತ್ತದೆ ಎನ್ನುತ್ತಿದ್ದಾರೆ. ಹಾರ್ಟ್‌ ಎಮೋಜಿಗಳಿಂದ ಕಮೆಂಟ್‌ ಬಾಕ್ಸ್‌ ತುಂಬಿ ಹೋಗಿದೆ. 

ಹಿಂದಿನ ವಾರದ ಎಪಿಸೋಡ್‌ನಲ್ಲಿ ಲಾವಣ್ಯ ಅವರ ಅಪ್ಪ,  ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು.  ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು! ಅದಕ್ಕೂ ಮೊದಲ ಎಪಿಸೋಡ್‌ಗಳಲ್ಲಿ ಶಶಿ-ಲಾವಣ್ಯ ಜೋಡಿ ತಮ್ಮ ಹಲವು ಪರ್ಸನಲ್‌ ವಿಷಯಗಳನ್ನು ಶೇರ್‌ ಮಾಡಿಕೊಂಡಿತ್ತು. ಮದುವೆ ಮತ್ತು ಫಸ್ಟ್​ನೈಟ್​ ಬಗ್ಗೆ ಶಶಿ ಅವರು ಮಾತನಾಡಿದ್ದರು.  ಫಸ್ಟ್ ನೈಟ್‌ನಲ್ಲಿ ಈಕೆಯ  ಕಸಿನ್ಸ್  ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು,  ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್‌ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು.  ಅದೇ ರೀತಿ  ಹನಿಮೂನ್‌ಗೆ ಮಾಲ್ದೀವ್ಸ್‌ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ  ಬೇಸರ ವ್ಯಕ್ತಪಡಿಸಿದ್ದರು.  

ಜೋಡಿ ನಂ.1: ಫಸ್ಟ್ ನೈಟ್ ಅನುಭವ ಹಂಚಿಕೊಂಡ ನಟ ಶಶಿ, ಲಾವಣ್ಯ ಭಾವುಕ!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!