ಕೌನ್ ಬನೇಗಾ ಕರೋಡ್ ಪತಿ 14ನಲ್ಲಿ ಬಿಗ್ ಬಿ ಅಮಿತಾಭ್ ಮೊಮ್ಮಗಳು ಆರಾಧ್ಯಾ ಬಗ್ಗೆ ಮಾತನಾಡಿದ್ದಾರೆ. ಆಕೆಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲ್ಲ ಎಂದಿರುವ ಅಮಿತಾಭ್ ಕೋಪಗೊಂಡರೆ ಹೇಗೆ ಸಮಾಧಾನ ಮಾಡ್ತಾರೆ ಎಂದು ರಿವೀಲ್ ಮಾಡಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸದ್ಯ ಕೌನ್ ಬನೇಗಾ ಕರೋಡ್ ಪತಿ 14 ಶೋ ನಡೆಸಿಕೊಡುತ್ತಿದ್ದಾರೆ. ಈಗಾಗಲೇ ಶೋ ಪ್ರಾರಂಭವಾಗಿದ್ದು ಅಮಿತಾಭ್ ಹಾಟ್ ನಲ್ಲಿರುವ ಸ್ಪರ್ಧಿಗಳಿಗೆ ಪ್ರಶ್ನೆ ಕೇಳುತ್ತಿದ್ದಾರೆ. ಸದ್ಯ ಅಮಿತಾಭ್ ಮುಂದೆ ಹಾಟ್ ಸೀಟ್ ನಲ್ಲಿ ಡೆಹರಾಡೂನ್ ಮೂಲದ ವೈಷ್ಣವಿ ಕುಮಾರಿ ಕೂಳಿತಿದ್ದಾರೆ. ವೈಷ್ಣವಿ ಕಂಕೆಂಟ್ ರೈಟರ್ ಆಗಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಅಮಿತಾಭ್ ಬಚ್ಚನ್ ಮುಂದೆ ಹೇಳಿದ್ದಾರೆ. ಏನು ಕೆಲಸ ಮಾಡುತ್ತಿರುವುದೆಂದು ವೈಷ್ಣವಿ ಹೇಳಿದ ಮಾತು ಬಿಗ್ ಬಿಗೆ ಅರ್ಥವಾಗಿಲ್ಲ. ಅಮಿತಾಭ್ ಏನು ಎಂದು ಕೇಳಿದರು. ಇದಕ್ಕೆ ಬಿಗ್ ಬಿ ನಮ್ಮ ಸಿನಿಮಾಗಳನ್ನು ಪ್ರಮೋಷನ್ ಮಾಡುವಂತೆ ಕೇಳಿದರು. ಇದಕ್ಕೆ ಸ್ಪರ್ಧಿವೈಷ್ಣವಿ ನಿಮ್ಮ ಹೆಸರೇ ಸಾಕು ಪ್ರಮೋಷನ್‌ಗೆ ಎಂದು ಹೇಳಿದರು.
ಈ ಸಮಯದಲ್ಲಿ ಸ್ಪರ್ಧಿ ವೈಷ್ಣವಿ, ಮೊಮ್ಮಗಳು ಆರಾಧ್ಯಾ ಜೊತೆ ಹೇಗೆ ಸಮಯ ಕಳೆಯುತ್ತೀರಿ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಬಿಗ್ ಬಿ ಆರಾಧ್ಯಾ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲ್ಲ ಎಂದು ಹೇಳಿದರು. 'ಬೆಳಗ್ಗೆ ಅವಳು ಶಾಲೆಗೆ ಹೋಗುತ್ತಾಳೆ. ನಾನು ಶೂಟಿಂಗ್ ಹೊರಡುತ್ತೇನೆ. ಅವಳು ಮಧ್ಯಾಹ್ನ ಮನೆಗೆ ಮರಳುತ್ತಾರೆ. ಬಳಿಕ ಆಕೆಗೆ ಅವಳ ತಾಯಿ (ಐಶ್ವರ್ಯಾ ರೈ) ಟಾಸ್ಕ್‌ಗಳನ್ನು ನೀಡುತ್ತಾಳೆ. ನಾನು ತುಂಬಾ ತಡವಾಗಿ ಮನೆಗೆ ಹೋಗುತ್ತೇನೆ. ಆದರೆ ತಂತ್ರಜ್ಞಾನಕ್ಕೆ ಧನ್ಯವಾದ ಹೇಳುತ್ತೇನೆ. ಯಾಕೆಂದರೆ ನಾವು ಫೇಸ್‌ಟೈಂ ಮಾತನಾಡಬಹುದು. ಕೆಲವು ಸರಿ ಆಕೆ ನನ್ನ ಜೊತೆ ಕೋಪಮಾಡಿಕೊಳ್ಳುತ್ತಾಳೆ. ಆಕೆಯ ನೆಚ್ಚಿನ ಬಣ್ಣ ಪಿಂಕ್. ಪಿಂಕ್ ಹೇರ್ ಬ್ಯಾಂಡ್, ಕ್ಲಿಪ್ಸ್ ಎಲ್ಲಾ ತುಂಬಾ ಇಷ್ಟ. ಅವಳು ಕೋಪಮಾಡಿಕೊಂಡಾಗ ಪಿಂಕ್ ಬ್ಯಾಂಡ್, ಕ್ಲಿಪ್ಸ್ ಗಿಫ್ಟ್ ಕೊಡುತ್ತೇನೆ. ಆಗ ಅವಳು ತುಂಬಾ ಸಂತೋಷ ಪಡುತ್ತಾಳೆ' ಎಂದು ಹೇಳಿದರು.
Kaun Banega Crorepati 7.5 ಕೋಟಿ ರೂ. ಪ್ರಶ್ನೆ ಎದುರಿಸಿದ ಮೊದಲ ಮಹಿಳೆ ಈಕೆ!
ಇನ್ನು ಬಿಗ್ ಬಿ ಅನೇಕ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಸ್ಪರ್ಧಿ ವೈಷ್ಣವಿ ಮೊದಲ ಬಾರಿಗೆ ಸೆಲೆಬ್ರಿಟಿ ಜೊತೆ ಮಾತನಾಡುವುದು ಎಂದು ಅಮಿತಾಭ್‌ಗೆ ಅನೇಕ ಪ್ರಶ್ನೆ ಕೇಳಿದ್ದಾರೆ. ಯಾವ ವೇದಿಕೆಯಲ್ಲಿ ಸಿನಿಮಾ ನೋಡಲು ಇಷ್ಟಪಡುತ್ತೀರಿ ಎಂದು ಸ್ಪರ್ಧಿ ಕೇಳಿದ ಪ್ರಶ್ನೆಗೆ ಅಮಿತಾಭ್ ಚಿತ್ರಮಂದಿರ ಎಂದು ಹೇಳಿದರು. ಸಮಯ ಸಿಕ್ಕಾಗ ಎಂದು ಹೇಳಿದರು.
ನನಗೂ ಮಾತಾಡ್ಬೇಕು ಅನಿಸುತ್ತೆ; ಬಾಯ್ಕಟ್ ಬಗ್ಗೆ ಅಮಿತಾಭ್ ಪರೋಕ್ಷ ಟ್ವೀಟ್ ವೈರಲ್
ಕಿರುತೆರೆ ಜೊತೆಗೆ ಅಮಿತಾಭ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವಯಸ್ಸಿನಲ್ಲೂ ಬಿಗ್ ಬಿ ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇತ್ತೀಚಿಗಷ್ಟೆ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಬಿಗ್ ಬಿ ಬಳಿ ಗುಡ್ ಬೌ, ಊಂಚೈ, ಗಣಪತ್, ಬಟರ್ ಫ್ಲೈ ಸೇರಿದಂತೆ ಅನೇಕ ಸಿನಿಮಾಗಳಿವೆ. ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತಾ ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ.