ಚಿತ್ರರಂಗದಲ್ಲಿ ಅವಕಾಶವಿಲ್ಲ, Call centre ಕೆಲಸಕ್ಕೆ ಸೇರಿಕೊಂಡ ಖ್ಯಾತ ನಟಿ!

Published : Sep 21, 2022, 12:57 PM IST
ಚಿತ್ರರಂಗದಲ್ಲಿ ಅವಕಾಶವಿಲ್ಲ, Call centre ಕೆಲಸಕ್ಕೆ ಸೇರಿಕೊಂಡ ಖ್ಯಾತ ನಟಿ!

ಸಾರಾಂಶ

ಅವಕಾಶ ಇಲ್ಲದೇ ಕೂರುವ ಬದಲು ಏನಾದರೂ ಒಂದು ಕೆಲಸ ಮಾಡಬೇಕು ಎಂದು ಕಾಲ್‌ಸೆಂಟರ್‌ ಸೇರಿದ ಯುವ ನಟಿ...

ಚಿತ್ರರಂಗಕ್ಕೆ ನೂರಾರು ಮಂದಿ ಕಾಲಿಡುತ್ತಾರೆ, ಹತ್ತಾರು ಸಿನಿಮಾಗಳು ಮಾಡುತ್ತಾರೆ ಆದರೆ ಉಳಿದುಕೊಳ್ಳುವವರು ಬೆರಳೆಣಿಕೆಯಷ್ಟು. ಅದರಲ್ಲೂ ಬಾಲಿವುಡ್ ಚಿತ್ರರಂಗದಲ್ಲಿ ವಾರಕ್ಕೊಂದು ಸಿನಿಮಾ ರಿಲೀಸ್ ಆಗುತ್ತದೆ, ಎರಡು ತಿಂಗಳಿಗೊಮ್ಮೆ ಹೊಸ ಧಾರಾವಾಹಿ ಶುರುವಾಗುತ್ತದೆ ಟಿಆರ್‌ಪಿ ಗಳಿಕೆ ಇದ್ದರೆ ಮಾತ್ರ ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ಇಡೀ ತಂಡ ಉಳಿದುಕೊಳ್ಳುತ್ತದೆ ಇಲ್ಲವಾದರೆ ಎಲ್ಲರೂ ಮನೆ ಕಡೆ ಮುಖ ಮಾಡಿ ಮತ್ತೊಂದು ವೃತ್ತಿ ದಾರಿ ಹುಡುಕಬೇಕು. ಕಲಾವಿದರ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ಬಿದ್ದಿದ್ದು ಕೊರೋನಾ ವೈರಸ್ ಪ್ಯಾಂಡಮಿಕ್, ಈ ಸಮಯದಲ್ಲಿ ಬಣ್ಣದ ಜಗತ್ತು ಬಿಟ್ಟು ಬೇರೆ ಕೆಲಸ ಹುಡುಕಲು ಶುರು ಮಾಡಿದ್ದರು. ಈಗ ಎಲ್ಲರೂ ಭೇಷ್‌ ಎನ್ನುವಂತೆ ಜೀವನ ನಡೆಸುತ್ತಿರುವುದು ನಟಿ ಏಕ್ತಾ ಶರ್ಮಾ.

ಹೌದು! ಏಕ್ತಾ ಶರ್ಮಾ ಸಿನಿಮಾ ರಂಗದಲ್ಲಿ ಅವಕಾಶ ಇಲ್ಲದ ಕಾರಣ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 'ನಾನು ವಿದ್ಯಾವಂತ ಮಹಿಳೆ ಮನೆಯಲ್ಲಿ ಸುಮ್ಮನೆ ಕೂತು ಅಳುವುದಕ್ಕಿಂತ ಹೊರಗೆ ನಡೆದು ದುಡಿಯಬೇಕು ಅಂತ ನಿರ್ಧಾರ ಮಾಡಿರುವೆ. ಸಮಾಜದಲ್ಲಿ ಗೌರವ ಸಿಗುವಂತ ಕೆಲಸ ಮಾಡುತ್ತಿರುವೆ. ಇದರ ಬಗ್ಗೆ ನನಗೆ ಹೆಮ್ಮೆಯಿದೆ' ಎಂದು ಏಕ್ತಾ ಇಂಡಿಯನ್‌ ಎಕ್ಸಪ್ರೆಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಏಕ್ತಾ ಶರ್ಮಾ ಕೊನೆಯ ಶೋ Bepanah Pyarr ಮುಗಿದ ನಂತರ ಲಾಕ್‌ಡೌನ್‌ ಅನೌನ್ಸ್‌ ಆಯ್ತು. ಅಂದಿನಿಂದ ಯಾರಾದರೂ ನಿರ್ಮಾಪಕರು ಕರೆ ಮಾಡುತ್ತಾರೆ ನಿರ್ದೇಶಕರು ಕರೆ ಮಾಡುತ್ತಾರೆಂದು ಕಾದು ಕಾದು ಸುಮ್ಮನಾಗಿದ್ದಾರೆ. ಮನೆ ಬಾಡಿಗೆ, ಬಿಲ್ ಮತ್ತು ಜೀವನ ನಡೆಸಲು ಹಣ ಬೇಕು ಮಿರಾಕಲ್ ಅಗಲಿ ಎಂದು ಕಾಯುವುದಕ್ಕೆ ಆಗುವುದಿಲ್ಲ ಹೀಗಾಗಿ ಕೆಲಸ ಮಾಡಲು ಏಕ್ತಾ ನಿರ್ಧರಿಸಿದ್ದಾರೆ. ಅಲ್ಲದೆ ಮಗಳನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಕೋರ್ಟ್, ಲಾಯರ್‌ ಅಂತ ಹಣ ತುಂಬಾನೇ ಖರ್ಚು ಮಾಡುತ್ತಿದ್ದಾರಂತೆ. 'ಹಣ ಇಲ್ಲದಾಗ ಆರಂಭದಲ್ಲಿ ನನ್ನ ಬಳಿ ಇದ್ದ ಆಭರಣಗಳನ್ನು ಮಾರಿದೆ. ಇದರಿಂದ ಜೀವನ ಮತ್ತಷ್ಟು ಕಷ್ಟವಾಯ್ತು. ಒಂದು ವರ್ಷದ ನಂತರ ನಾನು ನಿರ್ಧಾರ ಮಾಡಿಕೊಂಡು ಕೆಲಸ ಹುಡುಕಲು ಶುರು ಮಾಡಿದೆ' ಎಂದು ಎಕ್ತಾ ಹೇಳಿದ್ದಾರೆ.

ಮಗನಿಗೆ VAYU ಎಂದು ಹೆಸರಿಟ್ಟ ಸೋನಂ ಕಪೂರ್; ಹಿಂದಿರುವ ಕಾರಣ ತಿಳಿಸಿದ ಕಪೂರ್ ಕುಟುಂಬ!

ಬಾಲ್ಯದಲ್ಲೇ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಏಕ್ತಾ ಶರ್ಮಾ ಬಣ್ಣದ ಜರ್ನಿ ಹೊರತು ಪಡಿಸಿ ಬೇರೆಲ್ಲೂ ಕೆಲಸ ಮಾಡಿಲ್ಲ. ' ತುಂಬಾ ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ ನಾನು ತೆಗೆದುಕೊಂಡಿರುವ ಕಷ್ಟದ ನಿರ್ಧಾರವಿದು. ಮಾನಸಿಕವಾಗಿ ನನ್ನನ್ನು ನಾನು ಮೊದಲು ತಯಾರಿ ಮಾಡಿಕೊಳ್ಳಬೇಕಿತ್ತು. ಹೊರಗಿನ ಪ್ರಪಂಚ ತುಂಬಾನೇ ವಿಭಿನ್ನವಾಗಿದೆ. ಐಷಾರಾಮಿ ಜೀವನ ಚಿತ್ರೀಕರಣಕ್ಕೆ ಹೋದರೆ ವ್ಯಾನಿಟಿ ಗಾಡಿ ಪಕ್ಕದಲ್ಲಿ ಒಬ್ಬ ಅಸಿಸ್ಟೆಂಟ್ ಕೈಯಲ್ಲಿ ಡಯಟ್‌ ಫುಡ್ ಹಿಡಿದು ನಿಂತಿರುತ್ತಿದ್ದ ಎಲ್ಲವೂ ಸೂಪರ್ ಕೂಲ್ ಅಗಿತ್ತು ಆದರೀಗ ಪದೇ ಪದೇ ಕೋಪ ಮಾಡಿಕೊಂಡು ಕರೆ ಮಾಡುವ ಕಸ್ಟಮರ್‌ಗಳ ಜೊತೆ ಮಾತನಾಬೇಕು. ನನ್ನ ಗುಣಕ್ಕಿದು ದೊಡ್ಡ ಬದಲಾವಣೆ. ಈ ಕ್ಷಣದಲ್ಲಿ ನನ್ನ ತಂದೆ-ತಾಯಿಗೆ ಧನ್ಯವಾದಗಳನ್ನು ತಿಳಿಸಬೇಕು ಅವರು ಮಾತು ಕೇಳಿ ನಾನು ಪದವಿ ಮುಗಿಸಿರುವೆ, ಈ ಕೆಲಸ ಸಿಗಲು ಇದೇ ಕಾರಣ. ಜೀವನದಲ್ಲಿ ನನಗಿರುವುದು ಒಂದೇ ಗುರಿ, Live a life of a warrior, not a victim' ಎಂದಿದ್ದಾರೆ.

ಕೆಲಸ ಆರಂಭಿಸಿದ ದಿನಗಳಲ್ಲಿ ನನ್ನ ಸಹೋದ್ಯೋಗಿಗಳು ನನ್ನನ್ನು ಗುರುತಿಸಿ ನೀವು ಸೀರಿಯಲ್‌ನಲ್ಲಿ ಅಭಿನಯಿಸಿದ್ದೀರಾ ನೀವು ಸೋಷಿಯಲ್ ಮೀಡಿಯಾ ಸ್ಟಾರ್ ಎಂದು ಹೇಳುತ್ತಿದ್ದರು ಆಗ ಖುಷಿಯಾಗುತ್ತಿತ್ತು ಅದೇ ಸಮಯಕ್ಕೆ ಜೀವನ ಎಲ್ಲಿಗೆ ಬಂದು ನಿಂತಿದೆ ಎಂದು ಬೇಸರವಾಗುತ್ತಿತ್ತು. 'ಜನರಿಗೆ ಅರ್ಥವಾಗುವುದಿಲ್ಲ ಇದು ನನ್ನ ಪ್ರಪಂಚವಲ್ಲ. ಅನಿವಾರ್ಯವಿದೆ ಆದರೆ ಇದಕ್ಕೆ ನಾನು ಹೊಂದಿಕೊಳ್ಳುತ್ತಿರುವೆ.' ಎಂದು ಏಕ್ತಾ ಹೇಳಿದ್ದಾರೆ. ಬಿಡುವಿನ ಸಮಯದಲ್ಲಿ ಏಕ್ತಾ ಶರ್ಮಾ ಆಡಿಷನ್‌ ಕೊಡುತ್ತಾರಂತೆ. 

ಬಾಲಿವುಡ್ ಸುಂದರಿ ಐಶ್ವರ್ಯಾಗೆ ಈ ದುರಭ್ಯಾಸವಿದೆಯಂತೆ!

ಮಗಳನ್ನು ಕಸ್ಟಡಿಗೆ ತೆಗೆದುಕೊಳ್ಳಬೇಕು ಎಂದು ಪದೇ ಪದೇ ಹೇಳಿರುವ ಏಕ್ತಾ ಶರ್ಮಾ  'ಸದ್ಯಕ್ಕೆ ಈ ವಿಚಾರದ ಬಗ್ಗೆ ಮಾತನಾಡಲು ಆಗುವುದಿಲ್ಲ ಏಕೆಂದರೆ ಕೇಸ್ ನಡೆಯುತ್ತಿದೆ. ವಕೀಲರು ಹೇಳಿದಂತೆ ನಡೆದುಕೊಳ್ಳಬೇಕು' ಎಂದಿದ್ದಾರೆ. '20 ವರ್ಷಗಳ ನನ್ನ ಬಣ್ಣದ ಜರ್ನಿಯಲ್ಲಿ ಈ ರೀತಿ ಸಮಯ ಎಂದೂ ಎದುರಾಗಿರಲಿಲ್ಲ ಏಕೆಂದರೆ ಕಾಲೇಜ್‌ ದಿನಗಳಿಂದ ನಾನು ಕೆಲಸ ಮಾಡುತ್ತಿರುವೆ. ನಾನು ಬೆಸ್ಟ್‌ ಆಕ್ಟರ್ ಆಗಿಲ್ಲದೆ ಇರಬಹುದು ಆದರೆ ನಾನು ನಟನೆಯನ್ನು ಕಲಿತಿರುವೆ ಕೆಲಸ ಕೊಟ್ಟರೆ ಸರಿಯಾಗಿ ಕೆಲಸ ಮಾಡುವೆ. ನಾವು ಬದುಕಿರುವಾಗ ಜನರು ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದು ಏಕ್ತಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್