
ಬೆಂಗಳೂರು (ಆ.26): ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಇಂದು ಅದ್ದೂರಿಯಾಗಿ ವಿಶ್ವದಾದ್ಯಂತ ತೆರೆ ಕಂಡಿದೆ. ಸಾಮಾನ್ಯವಾಗಿ ಸಿನಿಮಾ ತೆರೆ ಕಂಡ ಬಳಿಕ ಅದರಲ್ಲೂ ಟಾಕ್ಸಿಕ್‌ನಂಥ ಪ್ಯಾನ್ ಇಂಡಿಯಾ ಸಿನಿಮಾ ತೆರೆಕಂಡ ಬಳಿಕ ಸಿನಿಮಾ ಹೇಗಿದೆ ಅನ್ನೋ ವಿಮರ್ಶೆಗೆ ಬೆಲೆ ಸಿಗುವುದು ಜಾಸ್ತಿ. ಅದರಂತೆ ಯಶ್ ಸಿನಿಮಾಗೂ ನೆಗೆಟಿವ್ ವಿಮರ್ಶೆಗಳು ಕಾಟ ಕೊಡಲಾರಂಭಿಸಿದೆ. ಸಿನಿಮಾ ನೋಡಿದ ಹೆಚ್ಚಿನ ಅಭಿಮಾನಿಗಳು ಇದರ ದೃಶ್ಯವೈಭವ ಕಣ್ತುಂಬಿಕೊಂಡರೆ, ಇನ್ನೂ ಕೆಲವರು ಟಾಕ್ಸಿಕ್ ಬಗ್ಗೆ ಬೇರೆಯದೇ ಆದ ವಿಮರ್ಶೆ ಕೊಡಲಾರಂಭಿಸಿದ್ದಾರೆ.
ಸಿನಿಮಾದ ಸೆಕೆಂಡ್ ಹಾಫ್ ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಎಡಿಟಿಂಗ್ ಇನ್ನಷ್ಟು ಸೂಕ್ಷ್ಮವಾಗಿರಬೇಕಿತ್ತು ಅನ್ನೋ ಮಾತುಗಳನ್ನು ಆಡಲು ಆರಂಭಿಸಿದ್ದಾರೆ. ಇನ್ನು ಬುಕ್ ಮೈ ಶೋದಲ್ಲಿ ಸಿನಿಮಾಗೆ 10ಕ್ಕೆ 5.6 ಅಂಕ ಕೊಡಲು ಆರಂಭಿಸಿದ್ದಾರೆ.
ಈ ಎಲ್ಲದರ ನಡುವೆ ರಾಪರ್ ಹಾಗೂ ಸಂಗೀತ ನಿರ್ದೇಶಕ ಆಲ್ ಓಕೆ ಟಾಕ್ಸಿಕ್ ಬಗ್ಗೆ ನೆಗೆಟಿವ್ ರಿವ್ಯೂ ಕೊಡುವವರ ಜನ್ಮ ಜಾಲಾಡಿದ್ದು, 'ಕಂಡೋರ ಮೆಚ್ಚಿಸೋಕೆ ಹೋಗಬೇಡಿ' ಎಂದು ಕಿವಿಮಾತು ಹೇಳಿದ್ದಾರೆ.
'Toxic ಅಂತ ಒಂದು Larger than Life cinema ಮಾಡಬೇಕು ಅನ್ನೋ ಆಲೋಚನೆ ಮಾಡಿದಾಗಲೇ Yash Bhai ಗೆದ್ದಾಯಿತು,ಇನ್ನೂ ಪುಕ್ಸಟ್ಟೆಗೆ ಅನ್ಸಿದ್ದು Review ಗಳು ಏನ್ ಮ್ಯಾಟರ್ ಆಗತ್ತೆ? You Go n conquer the world Yash bhai, You always make us proud. Rukmini Vasanth with every movie your proving the world that your a class apart more love n power to you. To all kannadigas : ಮನೆ ಊಟ ಕನ್ರಪ್ಪ, ಪ್ರೀತಿ ಇಂದ ತಿಂದು ಖುಷಿ ಪಡಿ, ಕಂಡೊರ್ ನಾ ಮೆಚ್ಚಿಸಕ್ಕೆ hotel ಥರ Reviews ಕೊಡ್ಬೇಡಿ' ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಟಾಕ್ಸಿಕ್ ಈಸ್ ಫೆಂಟಾಸ್ಟಿಕ್ ಎಂದು ಹ್ಯಾಶ್‌ಟ್ಯಾಗ್ ಕೂಡ ಹಾಕಿದ್ದಾರೆ. ಅದರೊಂದಿಗೆ ಯಶ್ ಜೊತೆ ಇರುವ ಎರಡು ಫೋಟೋ ಹಂಚಿಕೊಂಡಿದ್ದು, ಒಂದು ಚಿತ್ರ ಯಶ್ ಜೊತೆಗೆ ಗಜಕೇಸರಿಯಲ್ಲಿ ಆಲ್ ಓಕೆ ನಟಿಸಿದ್ದಾಗಿದೆ.
ಇನ್ನು ಆಲ್ ಓಕೆ ಪೋಸ್ಟ್‌ಗೆ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿರುವ ಹಲವರು, 'ಸತ್ಯ ಸ್ವಲ್ಪ ಕಹಿ, ಅರ್ಗಿಸಿಕೊಳ್ಳಕ್ಕೆ ಕಷ್ಟ ಆಗುತ್ತೆ. ಇದು ಸರ್ವ ಕಾಲಕ್ಕು ಅನ್ವಯ, ಸಿನಿಮಾದಲ್ಲಿ ಏನಿದೆ ಅಂತ ಹೇಳಿ ಹೋಗ್ಲಿ ?ತುಂಬಾ ಮನೆ ಊಟಕ್ಕೆ ಸಪೋರ್ಟ್ ಕೊಟ್ಟಿದ್ದಾರೆ, ಮನೆ ಊಟದಲ್ಲಿ ಉಪ್ಪು ಖಾರ ಸರಿ ಇಲ್ಲ ಅಂದ್ರು ಹೇಳ್ಬೇಕು ಇಲ್ಲ ಅಂದ್ರೆ ಅದೇ ರೂಢಿ ಆಗ್ಬಿಡುತ್ತೆ. ಊಟ ಪ್ರಿಪೇರ್ ಮಾಡೋರಿಗೆ' ಎಂದು ಬರೆದಿದ್ದಾರೆ.
'ನಿನಗೆ ಆತನಿಂದ ಉಪಯೋಗ ಇದ್ರೆ ನೀನು ಆತನ ಚಮಚಾಗಿರಿ ಮಾಡು ಯಾರಿಗೂ ಬೇಜಾರಿಲ್ಲ ಆದರೆ ರಿವ್ಯೂ ಹಾಕೊರೆಲ್ಲ ನಿನ್ನ ಹಾಗೆ ಪುಕ್ಸಟ್ಟೆ ಅನ್ಕೊಬೇಡ' ಎಂದು ಆಲ್‌ಓಕೆಗೂ ಎಚ್ಚರಿಸಿದ್ದಾರೆ.
'ಲೋ ಬ್ರದರ್ ಜನ ನೋಡಿದ್ರೇನೆ ಸಿನಿಮಾ ಗೆಲ್ಲೊದು. ಚೆನ್ನಾಗಿದ್ದಿಯ ಇಲ್ವ ಅಂತ Decide ಮಾಡಬೇಕದವರು ಜನ ಹೊರೆತು ನೀನು ಮತ್ತು ಯಶ್ ಅಲ್ಲ. ಈ ದುರಹಂಕಾರ ಬಿಡು ಮೊದಲು' ಎಂದು ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.