
ಬೆಂಗಳೂರು (ಆ.26): ಅಗ್ನಿಸಾಕ್ಷಿ ಸನ್ನಿಧಿ, ಸೀತಾ ರಾಮ ಸೀರಿಯಲ್‌ನ ಸೀತಾ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿರುವ ಕಿರುತೆರೆ ನಟಿ ವೈಷ್ಣವಿ ಗೌಡ ಈಗ ಉತ್ತರ ಭಾರತದ ಸೊಸೆ. ಇತ್ತೀಚೆಗೆಷಟೇ ಗೆಳತಿ ಗಾಯತ್ರಿ ಸೀರಿಯಲ್ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ವೈಷ್ಣವಿ ಗೌಡ ತಮ್ಮ ವೈವಾಹಿಕ ಜೀವನವನ್ನು ಸಂಭ್ರಮದಿಂದ ಕಳೆಯುತ್ತಿದ್ದಾರೆ. ವೈಷ್ಣವಿ ಗೌಡ ಪತಿ ಅನುಕೂಲ್ ಮಿಶ್ರಾ ಏರ್‌ಫೋರ್ಸ್ ಅಧಿಕಾರಿ. ಬುಧವಾರ ಜನ್ಮದಿನ ಆಚರಿಸಿಕೊಂಡ ಪತಿಗೆ ಸ್ಪೆಷಲ್ ರೀತಿಯಲ್ಲಿ ವೈಷ್ಣವಿ ಗೌಡ ಶುಭಕೋರಿದ್ದಾರೆ.
ಪತಿಯೊಂದಿಗೆ ಬೀಚ್‌ನಲ್ಲಿ ಕಳೆದ ಅಮೂಲ್ಯ ಕ್ಷಣದ ವಿಡಿಯೋ ಜೊತೆ ಪೂಕಿ ಹಸ್ಬೆಂಡ್ ಎಂದು ಕರೆದು ಪತಿಗೆ ಶುಭ ಕೋರಿದ್ದಾರೆ. ನನ್ನ Pookie ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು! ನನ್ನ ಜೊತೆ ನೀವಿರುವುದಕ್ಕೆ ನನಗೆ ಬಹಳ ಹೆಮ್ಮೆ ಮತ್ತು ಸಂತೋಷವಾಗುತ್ತದೆ. ನಿಮ್ಮೊಂದಿಗಿನ ಜೀವನ ಅತ್ಯಂತ ಸುಂದರವಾಗಿ ಎಂದೇ ಭಾಸವಾಗುತ್ತದೆ, ಮತ್ತು ನಾವು ಹಂಚಿಕೊಳ್ಳುವ ಪ್ರತಿಯೊಂದು ಸಣ್ಣ ಕ್ಷಣಕ್ಕೂ ನಾನು ಕೃತಜ್ಞಳಾಗಿದ್ದೇನೆ. ಪದಗಳಲ್ಲಿ ವ್ಯಕ್ತಪಡಿಸುವುದಕ್ಕಿಂತಲೂ ಹೆಚ್ಚಾಗಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಸದಾ ಮಿನುಗುತ್ತಿರಿ, ನಗುತ್ತಿರಿ ಮತ್ತು ಎಂದೆಂದಿಗೂ ನನ್ನ ನೆಚ್ಚಿನ ವ್ಯಕ್ತಿಯಾಗಿಯೇ ಇರಿ! ಪ್ರೀತಿ, ನಗು ಮತ್ತು ಅತ್ಯಂತ ಸುಂದರವಾದ ನೆನಪುಗಳನ್ನು ಜೊತೆಯಾಗಿ ರೂಪಿಸುವ ಮತ್ತೊಂದು ಹೊಸ ವರ್ಷಕ್ಕೆ ಸ್ವಾಗತ. ನನ್ನ ಪೂಕಿಗೆ ಹುಟ್ಟುಹಬ್ಬದ ಶುಭಾಶಯಗಳು! ಎಂದು ಬರೆದುಕೊಂಡಿದ್ದಾರೆ.
ಈ ಪೂಕಿ ಅನ್ನೋದು GenZಗಳು ಬಳಸುವ ಪದ, ಇದರ ಅರ್ಥ, ಎಂಬುದು ಪ್ರೇಮಿ, ಆಪ್ತ ಸ್ನೇಹಿತ, ಮಗು ಅಥವಾ ಮುದ್ದು ಪ್ರಾಣಿಗಳಿಗೆ ಪ್ರೀತಿ ಮತ್ತು ಮುದ್ದಿನಿಂದ ಕರೆಯಲು ಬಳಸುವ ಒಂದು ಸಿಹಿ ಹಾಗೂ ತಂಟೆಯ ತಮಾಷೆಯ ಪದ'.
2025ರ ಜೂನ್ 6 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ವೈಷ್ಣವಿ ಗೌಡ, ಮದುವೆಗೂ ಮುನ್ನ ಒಳ್ಳೆಯ ಗಂಡ ಸಿಗಲಿ ಎನ್ನುವ ಕಾರಣಕ್ಕೆ ಸಾಕಷ್ಟು ವ್ರತಗಳನ್ನೂ ಮಾಡಿದ್ದರು. ಎಲ್ಲರಿಗೂ ತಿಳಿದಿರುವಂತೆ ವೈಷ್ಣವಿ ಗೌಡ ಅವರಿಗೆ ಇದಕ್ಕೂ ಮುನ್ನ ಒಬ್ಬ ಹುಡುಗ ಫಿಕ್ಸ್ ಆಗಿದ್ದ. ಆದರೆ, ಸರಳ ಎಂಗೇಜ್‌ಮೆಂಟ್ ಆದ ಫೋಟೋ ಹೊರಬರುತ್ತಿದ್ದಂತೆ ಮದುವೆ ಮುರಿದುಬಿದ್ದಿತ್ತು.
ಅದಾದ ಕೆಲ ವರ್ಷಗಳ ಬಳಿಕ ಅವರ ಜೀವನಕ್ಕೆ ಬಂದಿದ್ದು ಅನುಕೂಲ್ ಇಶ್ರಾ. ಭಾಷೆ-ಗಡಿ ಮೀರಿದ ಅಪರೂಪದ ಅರೇಂಜ್ಡ್ ಮ್ಯಾರೇಜ್ ಇದಾಗಿತ್ತು. ಒಳ್ಳೆಯ ಗಂಡ ಸಿಗಲಿ ಎಂದು ವ್ರತ ಆರಂಭಿಸಿದ ಒಂದೇ ವಾರಕ್ಕೆ ಈ ಸಂಬಂಧ ಬಂದಿತ್ತು ಎಂದು ವೈಷ್ಣವಿ ಗೌಡ ಹೇಳಿಕೊಂಡಿದ್ದಾರೆ.
ಹಿಂದಿನ ಮದುವೆ ಮುರಿದುಬಿದ್ದ ಬಳಿಕ ಮದುವೆಯೇ ಬೇಡ ಎಂದು ವೈಷ್ಣವಿ ನಿರ್ಧಾರ ಮಾಡಿದ್ದರು. ಮಗಳ ಈ ನಿರ್ಧಾರದ ನಡುವೆಯೂ ಕುಟುಂಬದವರು ಮದುವೆಗಾಗಿ ಸೂಕ್ತ ಸಂಬಂಧ ಹುಡುಕುವ ಪ್ರಯತ್ನವನ್ನು ಮುಂದುವರಿಸಿದ್ದರು. ಈ ಸಮಯದಲ್ಲಿ ದೈವಕೃಪೆಯತ್ತ ಮುಖ ಮಾಡಿದ ವೈಷ್ಣವಿ, ‘ಶ್ರೀ ಸುಬ್ರಮಣ್ಯ ಸ್ವಾಮಿ ವ್ರತ’ ಮಾಡಲು ಸಂಕಲ್ಪ ಮಾಡಿದರು. ಪ್ರತಿ ಮಂಗಳವಾರದಂತೆ ಸತತ 9 ವಾರಗಳ ಕಾಲ ಶ್ರೀ ಸುಬ್ರಮಣ್ಯ ಸ್ವಾಮಿಗೆ ಬೆಲ್ಲದ ಆರತಿ ಬೆಳಗುವ ಪವಿತ್ರ ವ್ರತವನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ಆರಂಭಿಸಿದರು.
ವೈಷ್ಣವಿ ಅವರು ಭಕ್ತಿಯಿಂದ ವ್ರತ ಪ್ರಾರಂಭಿಸಿದ ಒಂದೇ ವಾರದಲ್ಲಿ ಅವರಿಗೆ ನಿಜವಾದ ಅಚ್ಚರಿ ಕಾದಿತ್ತು. ಅನುಕೂಲ್ ಮಿಶ್ರಾ ಅವರ ಮದುವೆಯ ಪ್ರೊಫೈಲ್ ವೈಷ್ಣವಿ ಅವರ ಕುಟುಂಬದ ಕೈಸೇರಿತು. ಹುಡುಗನ ವಿಚಾರ, ಹಿನ್ನೆಲೆ ಪ್ರತಿಯೊಂದೂ ಕುಟುಂಬಸ್ಥರಿಗೆ ಇಷ್ಟವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, 'ಮದುವೆಯಷ್ಟೇ ಬೇಡ' ಎಂದು ಪಟ್ಟು ಹಿಡಿದಿದ್ದ ವೈಷ್ಣವಿ ಅವರಿಗೂ ಅನುಕೂಲ್ ಅವರ ಪ್ರಪೋಸಲ್ ಮೊದಲ ನೋಟದಲ್ಲೇ ಮನಸ್ಸಿಗೆ ತೀವ್ರವಾಗಿ ಇಷ್ಟವಾಯಿತು. ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಇಬ್ಬರ ಮದುವೆ ನೆರವೇರಿತ್ತು ಎಂದು ಸ್ವತಃ ವೈಷ್ಣವಿ ಗೌಡ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.