ಮಹಾನಟಿ ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮಹಾಸಂಗಮ ರಿಯಾಲಿಟಿ ಷೋನ ಪ್ರೊಮೋ ಬಿಡುಗಡೆ ಮಾಡಲಾಗಿದ್ದು, ತದ್ರೂಪಿ ಕಲಾವಿದನ್ನು ನೋಡಿ ಅಸಲಿಯವರ ರಿಯಾಕ್ಷನ್ ಹೇಗಿತ್ತು ನೋಡಿ.
ಜೀ ಕನ್ನಡ ವಾಹಿನಿಯಲ್ಲಿ ನಡೆಯುತ್ತಿರುವ ಮಹಾನಟಿ ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮಹಾಸಂಗಮ ಇದೀಗ ನಡೆಯುತ್ತಿದ್ದು, ಇದರಲ್ಲಿ ಅಸಲಿ ನಾಯಕ-ನಾಯಕಿಯರ ನಕಲಿ ರೂಪಿಗಳು ಬಂದು ಇಡೀ ಷೋ ಕಳೆ ಹೆಚ್ಚಿಸಿದ್ದಾರೆ. ಮಹಾನಟಿಯ ತೀರ್ಪುಗಾರರಾಗಿರುವ ಜಡ್ಜಸ್‌ಗಳ ಎದುರಿಗೆ ಅವರ ಪ್ರತಿರೂಪವನ್ನೇ ಕರೆತರಲಾಗಿದ್ದು, ಅಸಲಿ ನಾಯಕ-ನಾಯಕಿಯರೂ ಸುಸ್ತಾಗಿ ಹೋಗಿದ್ದಾರೆ. ಮಹಾನಟಿ & ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ 'ಮಹಾಸಂಗಮ' ಹೆಸರಿನಲ್ಲಿ ಇದರ ಪ್ರೊಮೋ ಬಿಡುಗಡೆ ಮಾಡಲಾಗಿದೆ.
ಈ ರಿಯಾಲಿಟಿ ಷೋನಲ್ಲಿ ಚಿತ್ರನಟರಾದ ರಮೇಶ್ ಅರವಿಂದ್, ಪ್ರೇಮಾ ಮತ್ತು ನಿಶ್ವಿಕಾ ನಾಯ್ಡು ಹಾಗೂ ಖ್ಯಾತ ನಿರ್ದೇಶಕರಾಗಿರುವ ತರುಣ್ ಸುಧೀರ್ ಅವರು ತೀರ್ಪುಗಾರರಾಗಿದ್ದಾರೆ. ಇದೀಗ ಈ ನಾಲ್ವರ ತದ್ರೂಪಿ ಕಲಾವಿದರನ್ನು ವೇದಿಕೆ ಮೇಲೆ ಕರೆತಂದು ಅವರಂತೆಯೇ ಡೈಲಾಗ್ ಹೇಳಿಸಲಾಗಿದೆ. ಮಾತ್ರವಲ್ಲದೇ ಎಲ್ಲ ನಕಲಿ ಕಲಾವಿದರು ಸೇಮ್ ಟು ಸೇಮ್ ಅಸಲಿ ಕಲಾವಿದರಂತೆಯೇ ಆ್ಯಕ್ಟಿಂಗ್ ಮಾಡಿದ್ದನ್ನು ನೋಡಿ ಪ್ರೇಕ್ಷಕರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಇದೇ ವೇಳೆ ಆ್ಯಂಕರ್ ಅನುಶ್ರೀ ಅವರನ್ನೂ ಅನುಸರಿಸಲಾಗಿದೆ. ಒಟ್ಟಿನಲ್ಲಿ ಈ ವೇದಿಕೆ ಪ್ರೇಕ್ಷಕರಿಗೆ ಕಚಗುಳಿ ನೀಡುವುದಂತೂ ನಿಜ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಹಲವಾರು ನೆಟ್ಟಿಗರು ಇದೀಗ ಕಾಮಿಡಿ ಕಿಲಾಡಿಗಳಿಗೆ ಜೀವ ಬಂತು ಎಂದು ಮೆಸೇಜ್ ಮಾಡುತ್ತಿದ್ದಾರೆ. ತದ್ರೂಪಿ ಕಲಾವಿದರಿಗೆ ಹ್ಯಾಟ್ಸ್ ಆಫ್ ಹೇಳುತ್ತಿದ್ದಾರೆ.
ಅಮ್ಮನಾದ ಮೇಲೆ ಹೇಗಿದೆ ಲೈಫ್? 2 ತಿಂಗಳ ಮಗು ಬಿಟ್ಟು ರಿಯಾಲಿಟಿ ಷೋಗೆ ಬಂದ ಅದಿತಿ ಹೇಳಿದ್ದೇನು?
ಇನ್ನು ಜೀ ಕನ್ನಡದ ಮಹಾನಟಿ ರಿಯಾಲಿಟಿ ಷೋ ಕುರಿತು ಹೇಳುವುದಾದರೆ, ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿರುವ ಮಹಾನಟಿ ಇದೀಗ, Heroine Introduction Roundಗೆ ಬಂದು ನಿಂತಿದೆ.
ಕಾಮಿಡಿ ಕಿಲಾಡಿಗಳು ಕುರಿತು ಹೇಳುವುದಾದರೆ, ಜೀ ಕನ್ನಡ ವಾಹಿನಿಯಲ್ಲಿ ಇದಾಗಲೇ ಕಾಮಿಡಿ ಕಿಲಾಡಿಗಳು ಸಾಕಷ್ಟು ಹೆಸರು ಮಾಡಿವೆ. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆಷ್ಟೋ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವನದ ಕಚಗುಳಿ ಇಡುವ ಉದ್ದೇಶದಿಂದ ಆರಂಭವಾದ ಮಹಾ ವೇದಿಕೆಯೇ ಕಾಮಿಡಿ ಕಿಲಾಡಿಗಳು. ಈ ಷೋ ನೋಡಿ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ ಹಲವರು. ಇದೀಗ ಹೊಸ ಪ್ರೀಮಿಯರ್ ಲೀಗ್ ಶುರುವಾಗ್ತಿದೆ. ಇದರಲ್ಲಿ ನಗೋ ಹಾಗೆ ಇಲ್ವಂತೆ. ನಕ್ಕರೆ ಲಾಸು, ನಗಿಸೋರಿಗೆ ಕೈತುಂಬಾ ಕಾಸು ಎನ್ನುತ್ತಲೇ ನವರಸ ನಾಯಕ ಜಗ್ಗೇಶ್ ವೀಕ್ಷಕರಿಗೆ ಕುತೂಹಲ ಕೆರಳಿಸಿದ್ದರು. "ಸೈಡಿಗಿಡ್ರಿ ನಿಮ್ ಟೆನ್ಶನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು" ಎಂಬ ಸ್ಲೋಗನ್ ಇದಕ್ಕೆ ಕೊಡಲಾಗಿದ್ದು, ವಾರಾಂತ್ಯದಲ್ಲಿ ಸಾಕಷ್ಟು ಕಾಮಿಡಿ ಕಿಲಾಡಿಗಳು ಜನರನ್ನು ನಕ್ಕು ನಗಿಸುತ್ತಿದ್ದಾರೆ.
ಡಿವೋರ್ಸ್ ಬಳಿಕವೂ ನಿವೇದಿತಾ-ಚಂದನ್ ಒಟ್ಟಿಗೇ ಇದ್ದಾರಾ? ಇನ್ಸ್ಟಾಗ್ರಾಮ್ ನೋಡಿ ಗುಸುಗುಸು ಶುರು!