ಮನೆಯಿಂದ ಹೊರ ಬರಲು ತಾಯಿನೇ ಕಾರಣ, 8 ವರ್ಷದ ನಂತರ ಸಿಕ್ಕ ಅಪ್ಪ: ನಿರಂಜನ್ ದೇಶಪಾಂಡೆ

Published : Mar 07, 2024, 11:01 AM IST
ಮನೆಯಿಂದ ಹೊರ ಬರಲು ತಾಯಿನೇ ಕಾರಣ, 8 ವರ್ಷದ ನಂತರ ಸಿಕ್ಕ ಅಪ್ಪ: ನಿರಂಜನ್ ದೇಶಪಾಂಡೆ

ಸಾರಾಂಶ

ಚಿಕ್ಕ ವಯಸ್ಸಿಗೆ ಮನೆ ಬಿಟ್ಟು ಬಂದು ಮಾಡಿದ್ದು ಒಂದೆರಡು ಕೆಲಸ ಅಲ್ಲ. ನಿರಂಜನ್ ಬದುಕಿನ ಈ ಕಥೆ ಯಾರಿಗೂ ಗೊತ್ತಿಲ್ಲ....  

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ 18ನೆ ವಯಸ್ಸಿಗೆ ಮನೆ ಬಿಟ್ಟು ಬರುತ್ತಾರೆ. ಇದಕ್ಕೆ ಕಾರಣ ನನ್ನ ತಾಯಿನೇ ಎಂದು ಈಗಲೂ ಹೇಳುತ್ತಾರೆ. ಈ ವಿಚಾರದ ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರವಿದು...

'18ನೇ ವಯಸ್ಸಿಗೆ ಮನೆಯಿಂದ ಹೊರ ಬಂದಿದ್ದು ಮತ್ತೆ ವಾಪಸ್ ಹೋಗಿದ್ದು 30 ವರ್ಷ ಆದ್ಮೇಲೆ. ಸುಮಾರು 12 ವರ್ಷಗಳ ಕಾಲ ಹಾಯ್ ಬಾಯ್ ಎಂದು ಮಾತನಾಡುತ್ತಿದ್ದೆ. ಸಂಬಂಧ ಬಿಟ್ಟಿಲ್ಲ ಆದರೆ ಮನೆಯಿಂದ ಹೊರ ಬರಲು ಅಮ್ಮನೇ ಕಾರಣ. ಸಣ್ಣ ಪುಟ್ಟ ವಿಚಾರಕ್ಕೆ ನಮ್ಮಿಬ್ಬರ ನಡುವೆ ಜಗಳ ಬಂತು..ಆಗ ನನಗೆ ಮೀಸೆ ಚಿಗುರುತ್ತಿತ್ತು. ನೋಡೋ ಮೀಸೆ ಬಂದೋರೆಲ್ಲ ಗಂಡಸರಲ್ಲ ನಿನ್ನ ಕಾಲಿನ ಮೇಲೆ ನೀನು ನಿಂತ್ಕೋ ಅಂದ್ರು. ನನ್ನ ತಾಯಿ ಕೂಡ ಇಂಡಿಪೆಂಡೆಂಟ್‌ ಮಹಿಳೆ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ಅವರು ಕೂಡ ಬೇರೆ ಆಗಿದ್ದರು. ನಾನು ನಿಮ್ಮನ್ನು ಸಾಕುತ್ತಿರುವುದು ದುಡಿಯುತ್ತಿರುವುದು..ಸಮಾಜದಲ್ಲಿ ಒಬ್ಬ ಗಂಡಸು ಮಾಡಬೇಕಾಗಿರುವ ಕೆಲಸವನ್ನು ನಾನು ಮಾಡುತ್ತಿರುವೆ ಹೀಗಾಗಿ ಮೀಸೆ ಬಂದ ತಕ್ಷಣ ಗಂಡ್ಸು ಅಂತ ಹೇಳಬೇಡ. ಇದ್ದು ಬದುಕಿ ತೋರಿಸು ಅಂದ್ರು' ಎಂದು ನಿರಂಜನ್ ಖಾಸಗಿ ಯುಟ್ಯೂಬ್ ಸಂದರ್ಸನದಲ್ಲಿ ಮಾತನಾಡಿದ್ದಾರೆ.

ಹೆಂಡ್ತಿ ಅಪ್ಪ ಕತ್ತಿಗೆ ಮಚ್ಚು ಹಿಡಿದು, ತಿರುಪತಿಗೆ ಕರಕೊಂಡು ಹೋಗಿದ್ರು; ನಿರಂಜನ್ ದೇಶಪಾಂಡೆ

'ಆಗ ವಯಸ್ಸು ಇತ್ತು ಇದ್ದು ಏನಾದರೂ ಮಾಡಬೇಕು ಎಂದು ಹೊರ ಬಂದೆ ಅಲ್ಲಿಂದ ಸೈಕಲ್ ಹೊಡೆದೆ ಸ್ವಿಮ್ಮಿಂಗ್ ಮಾಡಿದೆ ....ಮಾಡಿದರ ಕೆಲಸ ಇಲ್ಲ ಅಷ್ಟು ಕಷ್ಟ ಆಗಿತ್ತು. ದಿನಕ್ಕೆ 200 ರೂಪಾಯಿ ಸಿಕ್ಕರೆ ಸಾಕು ಎಂದು ಕೆಲಸ ಮಾಡಿದ್ದೀನಿ. ಬೈಕ್‌ ಪೆಟ್ರೋಲ್ ವೇಸ್ಟ್‌ ಆಗುತ್ತದೆ ಎಂದು ಬಸವನಗುಡಿಯಿಂದ ವಸಂತ್‌ ನಗರಕ್ಕೆ ನಡೆದುಕೊಂಡು ಹೋಗಿರುವೆ. ಎಲ್ಲಾದಕ್ಕೂ ಕ್ರೆಡಿಟ್ ಕೊಡುವುದು ನನ್ನ ತಾಯಿಗೆ ಏಕೆಂದರೆ ಅಂದು ಅವರು ಹಾಗೆ ಹೇಳಿರಲಿಲ್ಲ ಅಂದಿದ್ದರೆ ಖಂಡಿತಾ ಇಷ್ಟು ಧೈರ್ಯವಾಗಿ ಇಂಡಿಪೆಂಟ್ ಆಗಿ ಸಮಾಜವನ್ನು ಎದುರಿಸಲು ಆಗುತ್ತಿರಲಿಲ್ಲ. ತಾಯಿಯೇ ನನ್ನ ಮೊದಲು ಮಧ್ಯದ ಕಡೆಯ ಹಾಗೂ ಮುಂದಿನ ದೇವರು. ಈಗಲೂ ನನ್ನ ತಾಯಿ ನನ್ನ ಜೊತೆ ಹಾಗೆ ಇದ್ದರೆ ಚೆನ್ನಾಗಿ ಮಾತನಾಡಿಸುತ್ತಾರೆ ಆದರೆ ಈಗಲೂ ಅದೇ ಗಾಂಭೀರ್ಯ ಇದೆ. ನಮ್ಮಿಬ್ಬರ ನಡುವೆ Ego ಕ್ಲಾಶ್‌ಗಳು ಇದೆ. ಸಣ್ಣ ಪುಟ್ಟ ವಿಚಾರಕ್ಕೆ ನನ್ನ ಅಮ್ಮ ಹೊಡೆಯುತ್ತಿದ್ದರು. ಮಕ್ಕಳ ಜೊತೆ ಫ್ರೆಂಡ್ಸ್‌  ಇರಬೇಕು ಅನ್ನೋದು ನನ್ನ ಆಲೋಚನೆ ಆದರೆ ಅವರು ಮಾತ್ರ ಹಾಗಲ್ಲ ಟಿವಿಯಲ್ಲಿ ನೀನು ಬರ ಬಹುದು ಆದರೆ ನನ್ನ ಮುಂದೆ ನೀನು ಏನೂ ಇಲ್ಲ ಎನ್ನುತ್ತಿದ್ದರು' ಎಂದು ನಿಂರಜನ್ ಹೇಳಿದ್ದಾರೆ.

ಪತ್ನಿ ಮೇಲೆ ಕೈ ಮಾಡಿದ ನಿರಂಜನ್ ದೇಶಪಾಂಡೆ; ನೋವು ತಡೆಯಲಾರದೆ ಒದ್ದಾಡಿದ ಯಶು!

'ನನ್ನ ತಾಯಿಗೆ 60 ವರ್ಷ ಆದರೂ ಯಾವುದೋ ಪರೀಕ್ಷೆ ಕಟ್ಟಿ ಬರೆಯುತ್ತಿದ್ದಾರೆ. ಈಗ ಆಸ್ಟ್ರಾಲಜಿ ಕೋರ್ಸ್‌ ಮಾಡುತ್ತಿದ್ದಾರೆ....ಟ್ಯಾಲೆಂಟ್ ಅನ್ನೋದು ನಮ್ಮ ರಕ್ತದಲ್ಲಿ ಇದ್ದಾರೆ. ನಾನು ನಾಲ್ಕನೇ ಕ್ಲಾಸ್‌ನಲ್ಲಿ ಇದ್ದಾಗ ತಂದೆ ತಾಯಿ ಬೇರೆ ಆಗಿದ್ದು...ಕಳೆದ 8 ವರ್ಷಗಳ ಹಿಂದೆ ತಂದೆ ಸಿಕ್ಕರು. ಎಲ್ಲೂ ಇದ್ದಾರೆ ಎಂದು ತಿಳಿಯಿತ್ತು ಆಗ ನಾನೇ ಹುಡುಕಿಕೊಂಡು ಹೋಗಿ ಮಾತನಾಡಿಸಿಕೊಂಡು ಬಂದೆ. ಒಂದು ದಿನ ನಮ್ಮ ಅಪ್ಪ ನಂಗೆ ಕರೆ ಮಾಡಿದ್ದಾರೆ...ಸಿಲಿಂಡರ್‌ ನನ್ನ ತಂದೆ ಹೆಸರಿನಲ್ಲಿ ಇದೆ ಆಗ ಓನರ್ ಬಂದು ಸಹಿ ಮಾಡಬೇಕು ಮನೆ ಕಾಲಿ ಮಾಡುವಾಗ ನನ್ನ ತಾಯಿಗೆ ಹೇಳಿದ್ದಾರೆ. ಅಲ್ಲಿ ಅವರಿಗೆ ನನ್ನ ನಂಬರ್ ಸಿಕ್ಕಿದೆ. ಒಂದು ದಿನ ನನಗೆ ಕರೆ ಮಾಡಿ ನಾನು  ಎ ಡಬಲ್ ಪಿ ಎ ಅಂತಾರೆ. ಇದೇನಪ್ಪ ಎಲ್ಲಾ ರೀತಿ ಹುದ್ದೆ ಹೇಳಿದ್ದೀನಿ ಇದು ಯಾವುದು ಅಂತಾನೇ ನನಗೆ ಅರ್ಥವಾಗುವುದಿಲ್ಲ .....ಅಪ್ಪ ಅಂತ ಹೇಳಿದ್ರು ನಾನು ನಿಮ್ಮ ತಾತ ಅಂತ ಹೇಳಿದೆ. ಆಮೇಲೆ ಮಾತನಾಡಿದ ಮೇಲೆ ಸಿನಿಮಾ ರೀತಿಯಲ್ಲಿ ಏನ್ ಏನೋ ಫೀಲ್ ಆಯ್ತು. ವಿಳಾಸ ಕೊಟ್ಟಿದ ಮೇಳೆ ರಾತ್ರೋರಾತ್ರಿ ಹೋಗಿ ಮಾತನಾಡಿಸಿಕೊಂಡು ಬಂದೆ. ನನ್ನ ಜೀವನ ಮಜಾ ಇದೆ' ಎಂದಿದ್ದಾರೆ ನಿರಂಜನ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Kannada : ಗಿಲ್ಲಿ ಬಿಟ್ಟು ಮತ್ತೆಲ್ಲರೂ ಅಣ್ಣಂದಿರು, ಪ್ರೀತಿ ಸುಳುವು ನೀಡ್ತಿದೆ ರಕ್ಷಿತಾ ಹೇಳಿಕೆ
Brahmagantu: ಪರಸ್ತ್ರೀ ಜೊತೆ ಚಿರು ರೊಮಾನ್ಸ್​: ನರಸಿಂಹ ಕೆಂಡಾಮಂಡಲ- ಸತ್ಯ ಬ್ಲಾಸ್ಟ್​ ಆಗೋ ಸಮಯವಿದು!