ಬಿಗ್ ಬಾಸ್ ಶೋನಲ್ಲಿ ₹50 ಲಕ್ಷ ಗೆದ್ದರೂ ಸ್ಪಂದನಾ ಮದುವೆಗೆ ಗಿಫ್ಟ್ ತರದ ಗಿಲ್ಲಿ ನಟ; ಜೋರು ಮಾಡಿದ ಕಳ್‌ಪುಟ್ಟಿ!

Published : Nov 29, 2026, 10:49 AM IST
Gilli Nata Spandana Somanna

ಸಾರಾಂಶ

ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರ ಮದುವೆ ರಿಸೆಪ್ಷನ್‌ನಲ್ಲಿ ಸೀಸನ್ 12ರ ವಿಜೇತ ಗಿಲ್ಲಿ ನಟ ಅವರಿಗೆ ತಮಾಷೆಯಾಗಿ ಕಾಲೆಳೆದ ಕ್ಷಣ ವೈರಲ್ ಆಗಿದೆ. ಇಬ್ಬರ ನಡುವಿನ ಸ್ನೇಹಮಯ ಮಾತುಕತೆ ಅಭಿಮಾನಿಗಳ ಗಮನ ಸೆಳೆದಿದ್ದು, ಗಿಲ್ಲಿ ನಟ ಅವರ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಸ್ಪಂದನಾ ಸೋಮಣ್ಣ ಅವರ ಮದುವೆ (Actress Spandana Somanna) ಸಂಭ್ರಮದಲ್ಲಿ ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ (Gilli Nata) ಅವರಿಗೆ ಸ್ಪಂದನಾ ಆತ್ಮೀಯವಾಗಿ ಕಾಲೆಳೆದ ಕ್ಷಣ ಗಮನ ಸೆಳೆದಿದೆ. ಏಳು ವರ್ಷಗಳ ಪ್ರೀತಿಯ ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಲವ್ ಕಂ ಅರೇಂಜ್ ಮ್ಯಾರೇಜ್ ಆಗುತ್ತಿರುವ ಸ್ಪಂದನಾ-ವರುಣ್ ಅವರ ರಿಸೆಪ್ಷನ್‌ಗೆ ಆಗಮಿಸಿದ ಗಿಲ್ಲಿ ಅವರಿಗೆ, 'ಗಿಫ್ಟ್ ಎಲ್ಲಿದೆ?' ಎಂದು ತಮಾಷೆಯಾಗಿ ಜೋರು ಮಾಡಿದ ಘಟನೆ ವೈರಲ್ ಆಗುತ್ತಿದೆ.

ರಿಸೆಪ್ಷನ್‌ನಲ್ಲಿ ಕೈ ಹಿಡಿದು ಗಿಲ್ಲಿ ಅವರನ್ನು ತಮಾಷೆ ಮಾಡಿದ ಸ್ಪಂದನಾ ಪ್ರಶ್ನೆಗೆ, ಗಿಲ್ಲಿ ಕೂಡ ಅಷ್ಟೇ ಆತ್ಮೀಯವಾಗಿ "ಅಲ್ಲಿಟ್ಟಿದ್ದೀನಿ ಕೊಡ್ತೀನಿ ಇರು" ಎಂದು ಉತ್ತರಿಸಿ ನಗೆ ಬೀರಿದ್ದಾರೆ. ಇಬ್ಬರ ನಡುವಿನ ಈ ಸ್ನೇಹಮಯ ಮಾತುಕತೆ ಮತ್ತು ನಗು ಸಮಾರಂಭದಲ್ಲಿ ಹಾಜರಿದ್ದವರ ಗಮನ ಸೆಳೆದಿದ್ದು, ಜೊತೆಗೆ ಗಿಲ್ಲಿ ನಟ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದೂ ಚರ್ಚೆಗೆ ಗ್ರಾಸವಾಗಿದೆ. ಸಹ ಸ್ಪರ್ಧಿಗಳ ಶುಭ ಸಮಾರಂಭಗಳಲ್ಲಿ ತಪ್ಪದೇ ಕಾಣಿಸಿಕೊಳ್ಳುವ ಗಿಲ್ಲಿ ನಟ ಮತ್ತು ಸ್ಪಂದನಾ ಸೋಮಣ್ಣ ಅವರ ಸ್ನೇಹಮಯ ಕ್ಷಣದ ವಿಡಿಯೋ ಮತ್ತು ಫೋಟೋಗಳು ಅಭಿಮಾನಿಗಳ ನಡುವೆ ಹರಿದಾಡುತ್ತಿವೆ.

ವರ್ಷವಾದರೂ ಮುಗಿಯುತ್ತಿಲ್ಲ ಗಿಲ್ಲಿ ಜಪ

ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿನಟ ಟ್ರೋಫಿ ಗೆದ್ದು ಒಂದು ವರ್ಷವಾದರೂ ಜನರ ಮನಸ್ಸಿನಿಂದ ದೂರವಾಗುತ್ತಿಲ್ಲ. ಇನ್ನೇನು ಬಿಗ್ ಬಾಸ್ ಸೀಸನ್ 13 ಮುಕ್ತಾಯದ ಹಂತಕ್ಕೆ ಬಂದಿದ್ದರೂ, ಕಳೆದ ಬಾರಿಯ ವಿಜೇತ ಗಿಲ್ಲಿ ಆಟವನ್ನೇ ಎಲ್ಲರೂ ನೆನಪು ಮಾಡಿಕೊಳ್ಳುತ್ತಾರೆ. ಅವರು ಬಿಗ್ ಬಾಸ್ ರಿಯಾಲಿಟಿ ಶೋ ವೀಕ್ಷಕರಿಗೆ ನೀಡುತ್ತಿದ್ದ ಮನರಂಜನೆಗೆ ಎಲ್ಲರೂ ಫಿದಾ ಆಗಿದ್ದರು. ಇಡೀ ಬಿಗ್ ಬಾಸ್ ಮನೆಯ ಎಲ್ಲ ಕ್ಯಾಮರಾಗಳಿಗೂ ಅವರು ಭರ್ಜರಿಯಾಗಿ ವಿಡಿಯೋ ಫೂಟೇಜ್ ನೀಡುತ್ತಿದ್ದರು.

ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿದ್ದಾಗ ಕಾವ್ಯಾಳ ಜೊತೆಗೆ ಸ್ನೇಹ, ಪ್ರೀತಿಯ ಮಾತುಕತೆ ಹಾಗೂ ಮದುವೆಯಾಗೋಣ ಎಂಬ ತಮಾಷೆಯ ಮಾತುಗಳು ಜನರಿಗೆ ಇಷ್ಟವಾಗುತ್ತಿದ್ದವು. ಆಗಾಗ ಕಾವ್ಯಾಳನ್ನು ರೇಗಿಸುವುದು, ಅವರ ಅಪ್ಪ-ಅಮ್ಮನ ಮುಂದೆಯೇ ಹೆಣ್ಣು ಕೇಳುವುದು ಹೀಗೆಲ್ಲಾ ಮಾತನಾಡುತ್ತಿದ್ದರು. ಇದು ಒಂದು ಕ್ಯಾಮೆರಾಗೆ ವಿಷ್ಯುವಲ್ಸ್ ನೀಡಿದರೆ, ಮತ್ತೊಂದೆಡೆ ಮ್ಯೂಟೆಂಟ್ ರಘು ಅವರೊಂದಿಗೆ ಟಾಮ್ ಅಂಡ್ ಜೆರ್ರಿ ಕಿತ್ತಾಟ ಭರಪೂರ ಮನರಂಜನೆ ನೀಡುತ್ತಿತ್ತು. ರಘು ಅವರನ್ನು ಆಗಾಗ ರೇಗಿಸುವುದು, ಅವರ ಮೇಲೆ ಬಿದ್ದು ಹೊರಳಾಡುವುದು, ಎಷ್ಟೇ ದೂರ ತಳ್ಳಿದರೂ ರಘು ಅವರಿಗೆ ಅಂಟಿಕೊಂಡು ಕೂರುವುದು, ಟಾಸ್ಕ್ ವಿಚಾರದಲ್ಲಿ ರಘು ಜೊತೆಗೆ ಸಾಥ್ ನೀಡುವುದು ಕೂಡ ನೋಡುಗರಿಗೆ ಇಷ್ಟವಾಗುತ್ತಿತ್ತು.

ವಿರೋಧಿ ಬಣಕ್ಕೆ ಟಾಂಗ್

ಇನ್ನು ಗಿಲ್ಲಿನಟ ಯಾರೇ ತಮ್ಮ ವಿರುದ್ಧ ಮಸಲತ್ತು ಮಾಡಿದ್ದರೂ ಅವರಿಗೆ ತಮಾಷೆಯಾಗಿಯೇ ಬುದ್ಧಿ ಕಲಿಸುತ್ತಿದ್ದನು. ಇತ್ತ ಹೊಡೆಯಲೂ ಆಗದೇ, ಸಹಿಸಿಕೊಳ್ಳಲೂ ಆಗದೇ ಯಾಕಾದರೂ ಜೇನು ಗೂಡಿಗೆ ಕೈ ಹಾಕೋ ಕೆಲಸ ಮಾಡಿದ್ದೇವೆ ಎಂಬಂತೆ ಪಾಠ ಕಲಿಸುತ್ತಿದ್ದನು. ಅಶ್ವಿನಿ ಗೌಡ, ಜಾಹ್ನವಿ ಅವರಿಗೆ ದೊಡ್ಡವ್ವ-ಚಿಕ್ಕವ್ವ ಎಂದು ಹಾಡು ಬರೆದು ತಮಾಷೆ ಮಾಡಿದ್ದನು. ಅಶ್ವಿನಿ ಗೌಡ ತನ್ನನ್ನು ಮನೆಯ ಮಹಾರಾಣಿ, ಎಲ್ಲರೂ ನನ್ನ ಸೇವಕರು ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದ ಅಹಂಕಾರವನ್ನು ಹತ್ತಿಟ್ಟಿದ್ದೇ ಗಿಲ್ಲಿನಟ ಎಂದು ಕೆಲವು ವೀಕ್ಷಕರು ಹೇಳುತ್ತಿದ್ದರು. ಆದರೂ, ಅಶ್ವಿನಿ ಅವರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲದೇ ಆಟಕ್ಕೆ ಮತ್ತು ತಮಾಷೆಯೊಂದಿಗೇ ಇರುತ್ತಿದ್ದನು. ಬಿಗ್ ಬಾಸ್ ಮನೆಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮನರಂಜನೆ ನೀಡುತ್ತಿದ್ದ ಗಿಲ್ಲಿ ಹಿಂದೆಂದೂ ಕಾಣದಷ್ಟು ಓಟುಗಳನ್ನು ಪಡೆದು ದಾಖಲೆಯನ್ನು ಸೃಷ್ಟಿಸಿ ಟ್ರೋಫಿ ಗೆಲ್ಲುತ್ತಾನೆ

ಗಿಲ್ಲಿ ಎಲ್ಲಿಗೇ ಹೋದರೂ ಕ್ರೇಜ್

ಬಿಗ್ ಬಾಸ್ ಸೀಸನ್ 12 ಮುಕ್ತಾಯಗೊಂಡು ಒಂದು ವರ್ಷ ಕಳೆಯುತ್ತಾ ಬಂದಿದೆ. ಅದರೂ ಗಿಲ್ಲಿನಟ ಅವರ ಮೇಲಿರುವ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಯಾವುದೇ ಈವೆಂಟ್‌ಗಳಿಗೆ ಹೋದರೂ ಅವರ ಸುತ್ತಲೂ ನೊಣ ಮುತ್ತಿಕೊಂಡಂತೆ ಜನರು ಮುತ್ತಿಕೊಳ್ಳುತ್ತಾರೆ. ಫೋಟೋ, ಸೆಲ್ಫಿಗಾಗಿ ಹಿಂಬಾಲಿಸುತ್ತಾರೆ. ತಮ್ಮ ಸೀಸನ್‌ನ ಬಹುತೇಕ ಸ್ಪರ್ಧಿಗಳ ಜೊತೆಗೆ ಆತ್ಮೀಯತೆ ಹೊಂದಿರುವ ಗಿಲ್ಲಿನಟ ಅವರ ಯಾವುದೇ ಕಾರ್ಯಕ್ರಮಗಳಿಗೂ ತಪ್ಪದೇ ಹಾಜರಾಗುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅದಲು-ಬದಲು ಪವರ್ ಬಳಸಿ ಗಗನ್‌ಗೆ ಚೆಕ್‌ಮೇಟ್ ಇಟ್ಟ ಯಶಸ್! ಇದೆನಾ ಕರ್ಮ ರಿಟರ್ನ್ಸ್?
ಮತ್ತೋರ್ವ ಜನಪ್ರಿಯ ನಟನ ದಾಂಪತ್ಯ ಜೀವನ ಅಂತ್ಯ! ಒಟ್ಟಿಗೇ ಇದ್ದರೂ ಮಾತುಕತೆ ಇಲ್ಲದೇ ಡಿವೋರ್ಸ್​