ಅರಿಶಿನ ಸಂಭ್ರಮದಲ್ಲಿ ಸ್ಪಂದನಾ ಸೋಮಣ್ಣ, ಭಾವಿ ಪತಿಗೆ ಮುತ್ತಿಟ್ಟು ಪ್ರಫೋಸ್ ಮಾಡಿದ ನಟಿ

Published : Nov 27, 2026, 06:47 PM IST
Spandana Somanna

ಸಾರಾಂಶ

ಬಿಗ್ ಬಾಸ್ ಮಾಜಿ ಸ್ಪರ್ಧಿ, ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ಮದುವೆ ಶಾಸ್ತ್ರಗಳು ಶುರುವಾಗಿವೆ. ಈಗಾಗಲೇ ಅರಿಶಿನ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮ ನೆರವೇರಿದ್ದು, ನಟಿ ಅರಿಶಿನ ಶಾಸ್ತ್ರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಮದುವೆ ಸಂಭ್ರಮದಲ್ಲಿದ್ದಾರೆ. ದೀರ್ಘಕಾಲದ ಗೆಳೆಯ ವರುಣ್ ಮುನಿರಾಜು ಜೊತೆ ಸ್ಪಂದನಾ ಸೋಮಣ್ಣ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಈಗಾಗಲೇ ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ.

ಅರಿಶಿನ ಶಾಸ್ತ್ರದಲ್ಲಿ ಸ್ಪಂದನಾ – ವರುಣ್

ನಟಿ ಸ್ಪಂದನಾ ಸೋಮಣ್ಣ ಮನೆಯಲ್ಲಿ ಮದುವೆಯ ಎಲ್ಲ ಶಾಸ್ತ್ರಗಳು ಶುರುವಾಗಿವೆ. ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಅದ್ರ ವಿಡಿಯೋವನ್ನು ಸ್ಪಂದನಾ ಸೋಮಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ಪಂದನಾ ಹಾಗೂ ವರುಣ್, ಕುಟುಂಬದ ಜೊತೆ ಈ ಶಾಸ್ತ್ರವನ್ನು ಎಂಜಾಯ್ ಮಾಡಿದ್ದಾರೆ. ಬರೀ ಅರಿಶಿನ ಶಾಸ್ತ್ರವಲ್ಲದೆ ಸಣ್ಣಪುಟ್ಟ ಗೇಮ್ ಕೂಡ ನಡೆದಿದೆ. ಅಲ್ದೆ ಸ್ಪಂದನಾ ಹಾಗೂ ವರುಣ್ ಮತ್ತೊಮ್ಮೆ ಪ್ರಪೋಸ್ ಮಾಡಿಕೊಂಡಿರೋದನ್ನು ವಿಡಿಯೋದಲ್ಲಿ ನೋಡ್ಬಹುದು.

ಸಂಗೀತ ಕಾರ್ಯಕ್ರಮ

ನವೆಂಬರ್‌ 26 ರಂದು ರೆಸಾರ್ಟ್‌ ಒಂದರಲ್ಲಿ ಮದುವೆಗೆ ಸಂಬಂಧಿಸಿದ ಕೆಲ ಕಾರ್ಯಕ್ರಮ ನೆರವೇರಿದೆ. ಸಂಗೀತ ಕಾರ್ಯಕ್ರಮದಲ್ಲಿ ಸ್ಪಂದನಾ ಸೋಮಣ್ಣ, ವರುಣ್‌ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾವುಕರಾಗಿದ್ದರು. ಇದ್ರ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದಕ್ಕೂ ಮುನ್ನ ಹೂ ಮುಡಿಸುವ ಶಾಸ್ತ್ರ ಹಾಗೂ ಬ್ರೈಡ್ ಟು ಬಿ ಪಾರ್ಟಿಯನ್ನು ಆಚರಿಸಿಕೊಂಡಿದ್ದರು ಸ್ಪಂದನಾ.

ಸ್ಪಂದನಾ – ವರುಣ್ ಲವ್ ಸ್ಟೋರಿ

ಸ್ಪಂದನಾ ಹಾಗೂ ವರುಣ್ ಆರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕಾಲೇಜಿನಲ್ಲಿಯೇ ಪರಿಚಯವಾಗಿದ್ದ ಸ್ಪಂದನಾ ಹಾಗೂ ವರುಣ್ ಸ್ನೇಹ ನಂತ್ರ ಪ್ರೀತಿಗೆ ತಿರುಗಿತ್ತು. ವಿದೇಶದಲ್ಲಿರುವ ವರುಣ್, ಸ್ಪಂದನಾ ವೃತ್ತಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸ್ಪಂದನಾ ಈ ಹಿಂದೆ ಲಾಂಗ್ ಡಿಸ್ಟೆನ್ಸ್ ಪ್ರೀತಿಯಲ್ಲಿ ಏನೆಲ್ಲ ಕಷ್ಟಗಳನ್ನು ಎದುರಿಸ್ಬೇಕು ಎಂಬ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ವಿರಹ ವೇದನೆಯನ್ನು ಎಲ್ಲರ ಮುಂದಿಟ್ಟಿದ್ದರು. ಇದೇ ವರ್ಷ ಅಕ್ಟೋಬರ್ ನಲ್ಲಿ ಸ್ಪಂದನಾ ತಮ್ಮ ಪ್ರೀತಿ ವಿಷ್ಯವನ್ನು ಎಲ್ಲರ ಮುಂದಿಟ್ಟಿದ್ದರು. ಪ್ಯಾರಿಸ್ ಐಪೆಲ್ ಟವರ್ ಮುಂದೆ ನಡೆದ ಪ್ರಫೋಸಲ್ ಫೋಟೋಗಳನ್ನು ಹಂಚಿಕೊಂಡು ಫ್ಯಾನ್ಸ್ ಗೆ ಖುಷಿ ಸುದ್ದಿ ನೀಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನಾ ಹಾಗೂ ವರುಣ್ ಬಗ್ಗೆಯೂ ಸಾಕಷ್ಟು ನೆಗೆಟಿವ್ ಕಮೆಂಟ್ ಗಳು ಬಂದಿದ್ವು. ಸ್ಪಂದನಾ ಹಣ ನೋಡಿ ಮದುವೆ ಆಗ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಸ್ಪಂದನಾ ಹಾಗೂ ವರುಣ್ ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಸದ್ಯ ಮದುವೆ ಖುಷಿಯಲ್ಲಿರುವ ಜೋಡಿ, ಕಾರ್ಯಕ್ರಮಗಳನ್ನು ಎಂಜಾಯ್ ಮಾಡ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಗಿಯಿತು 'ರಾಣಿ' ಸೀರಿಯಲ್ ಪಯಣ: ಕಾವೇರಿಯಾಗಿ ಕೊನೆಯ ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಐಶ್ವರ್ಯ!
ಬೆಳಗಾವಿ ಗೆಳೆಯ Bigg Boss ಗೆದ್ದು ಬರಲೆಂದು ಮೊಣಕಾಲಲ್ಲಿ 3,500 ತಿರುಪತಿ ಮೆಟ್ಟಿಲು ಹತ್ತಿದ ನಟಿ ಪ್ರಿಯಾಂಕಾ ಜೈನ್​