ಹಳ್ಳಿ ಪವರ್ ಮುಗೀತು, ಈಗ ಕಾಡಲ್ಲಿ ಅಕುಲ್ ಬಾಲಾಜಿ ಅಬ್ಬರ! ಜೀ ಕನ್ನಡದ ಹೊಸ ಶೋ ‘ಜಂಗಲ್ ಪವರ್’ ಯಾವಾಗ ಶುರು?

Published : Nov 28, 2026, 12:40 PM IST
Jungle Power

ಸಾರಾಂಶ

Jungle Power: ಅಕುಲ್ ಬಾಲಾಜಿ ಸಾರಥ್ಯದಲ್ಲಿ ನಡೆಯುತ್ತಿದ್ದ ‘ಹಳ್ಳಿ ಪವರ್ ರೀಲೋಡೆಡ್’ ಇದೀಗ ಕೊನೆಯಾಗಿದ್ದು, ಇನ್ನು ಶೀಘ್ರದಲ್ಲಿ ‘ಜಂಗಲ್ ಪವರ್’ ಶುರುವಾಗಲಿದೆ. ನಮ್ಮ ಪೂರ್ವಜರು ಬದುಕ್ಕಿದ್ದ ಬದುಕೇ ನಮ್ಮ ಆಟ ಎನ್ನುತ್ತಾ, ಆಟ ಆಡಿಸೋಕೆ ಬಂದಿದ್ದಾರೆ, ನೀವು ರೇಡಿನಾ?

ಶೀಘ್ರದಲ್ಲೇ ‘ಜಂಗಲ್ ಪವರ್’ ಆರಂಭ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್ ರೀ-ಲೋಡೆಡ್’ ಇತ್ತೀಚೆಗಷ್ಟೇ ಮುಗಿದಿದೆ. .ಇದೀಗ ಹಳ್ಳಿ ಪವರ್‌ ಶೋವನ್ನೇ ಮೀರಿಸುವ ಮತ್ತೊಂದು ರಿಯಾಲಿಟಿ ಶೋ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಲಿದೆ. ಇದು ಅಂತಿಂಥ ಆಟ ಅಲ್ಲ. ಹಳ್ಳಿಯಲ್ಲೂ, ಪೇಟೆಯಲ್ಲೂ ಇದು ನಡೆಯೋದಿಲ್ಲ. ಹಾಗಿದ್ರೆ ನಡೆಯೋದು ಎಲ್ಲಿ ಗೊತ್ತಾ ಕಾಡಿನಲ್ಲಿ. ಜೀ ಕನ್ನಡದಲ್ಲಿ ಹಾಗೂ ಜೀ-5 ಅಲ್ಲಿ ಶುರುವಾಗಲಿರೋ ಈ ಭರ್ಜರಿ ರಿಯಾಲಿಟಿ ಶೋ ಶೀಘ್ರದಲ್ಲಿ ಶುರುವಾಗಲಿದೆ. ಈಗಾಗಲೇ ಆಡಿಶನ್ ಕೂಡ ನಡೆದಿದೆ, ನಡೆಯುತ್ತಿದೆ ಎನ್ನಲಾಗಿದೆ. ಇದೀಗ ಭರ್ಜರಿ ಪ್ರೊಮೋ ರಿಲೀಸ್ ಆಗಿ ಸದ್ದು ಮಾಡುತ್ತಿದೆ.

ಏನಿದು ಜಂಗಲ್ ಪವರ್? ಪ್ರೊಮೋದಲ್ಲಿ ಏನಿದೆ?

ಅಕುಲ್ ಬಾಲಾಜಿಗೆ ಕಾಫಿ ತಂದು ಕೊಡುವ ರೋಬೋ ಬೇರೆ ಏನಾದ್ರೂ ಬೇಕಾ ಎಂದು ಕೇಳಿದೆ. ಅದಕ್ಕೆ ಅಕುಲ್ ನನಗೆ ಬೇರೆ ಏನೋ ಬೇಕು ಎಂದಿದ್ದಾರೆ. ಅದರ ಜೊತೆಗೆ ಹೇಗೆ ನಮ್ಮ ಜೀವನ ಬದಲಾಗಿದೆ ಅನ್ನೋದನ್ನು ವಿಡಿಯೋದಲ್ಲಿ ತೋರಿಸಲಾಗಿದೆ, ಮೆದುಳು ಸಾಕಾಗಿಲ್ಲ, ಯಂತ್ರ ಬೇಕಾಯಿತು. ಭೂಮಿ ಸಾಕಾಗಲಿಲ್ಲ ಚಂದ್ರ ಬೇಕಾಯಿತು, ಕಾಲು ಸಾಕಾಗಲಿಲ್ಲ, ಚಕ್ರ ಬೇಕಾಯ್ತು, ಊರು ಸಾಲದೆ ಸಾಮ್ರಾಜ್ಯ ಬೇಕಾಯಿತು, ಈ ಆಸೆ ನಿರಾಸೆ ಶುರುವಾಗಿದ್ದು, ಇಲ್ಲಿಂದ ಎನ್ನುವಂತೆ ನಮ್ಮ ಪೂರ್ವಜರು ಇದ್ದ ಕಾಡನ್ನು ತೋರಿಸಲಾಗಿದೆ. ಭೇಟೆ ಕೊಟ್ಟಿದ್ದು ಊಟ, ಕಲಿಸಿದ್ದು ತಂತ್ರ, ಆಟ ಬದಲಾಗಲಿಲ್ಲ, ಆದರೆ ಬದಲಾಗಿದ್ದು, ಆಟಗಾರರು ಮಾತ್ರ ಎನ್ನುತ್ತಿದೆ ಪ್ರೊಮೊ. ಕೊನೆಗೆ ಅಕುಲ್ ಬಾಲಾಜಿ ನಮ್ಮ ಪೂರ್ವಜರು ಬದುಕಿದ್ದ ಬದುಕೇ ನಮ್ಮ ಆಟ, ಈ ಆಟ ಆಡೋಕೆ ನೀವು ರೆಡಿನಾ ಎಂದು ಕೇಳಿದ್ದಾರೆ. ಬದುಕಿನ ನಿಯಮಗಳನ್ನೇ ಬದಲಾಯಿಸುವ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಜಂಗಲ್ ಪವರ್’, ಶೀಘ್ರದಲ್ಲಿ ಆರಂಭ ಎಂದು ತಿಳಿಸಲಾಗಿದೆ.

ಈಗಾಗಲೇ ಬೆಂಗಳೂರಿನಲ್ಲಿ ಆಡಿಶನ್ ನಡೆದಿದ್ದು, ಸ್ಟ್ರಾಂಗ್ ಕಂಟೆಸ್ಟಂಟ್ ಗಳು ಇದಕ್ಕೆ ಬೇಕಾಗಿದ್ದಾರೆ. ನಿಮ್ಮಲ್ಲಿ ನೆಕ್ಸ್ಟ್ ಲೆವೆಲ್ ಚಾಲೆಂಜ್ ಎದುರಿಸೋ ತಾಕತ್ತಿದ್ಯಾ? ಕಾಡಿನ ರಾಜನಾಗೋ ಛಲವಿದ್ಯಾ? ಹಾಗಾದ್ರೆ ಆಡಿಷನ್‌ನಲ್ಲಿ ಭಾಗವಹಿಸಿ ಎಂದು ತಿಂಗಳ ಹಿಂದೆ ಜಾಹೀರಾತು ನೀಡಲಾಗಿತ್ತು. ಇದೀಗ ಯಾರೆಲ್ಲಾ ಆಯ್ಕೆಯಾಗಿದ್ದಾರೆ. ಯಾವಾಗ ಶುರು ಎಲ್ಲವನ್ನೂ ಕಾದು ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa ಜಯಂತ್​ ಹುಟ್ಟಿದ್ದು- ರೀಲ್​ ಪತ್ನಿ ಚಿನ್ನುಮರಿ ರಿಯಲ್ಲಾಗಿ ಮದ್ವೆಯಾಗಿದ್ದು ಇವತ್ತೇ! ರೋಚಕ ಸ್ಟೋರಿ
ಮದುವೆ ಸಿದ್ಧತೆ ನಡುವೆಯೇ ಗೋವಾ ಬೀಚ್​ನಲ್ಲಿ ಶಿಶಿರ್​ ಜೊತೆ ಭರ್ಜರಿ ಸ್ಟೆಪ್​ ಹಾಕಿದ ಐಶ್ವರ್ಯ ಸಿಂಧೋಗಿ