Rashmi Kulkarani: ಮೈ ಆಟೋಗ್ರಾಫ್‌ನಲ್ಲಿ ಸುದೀಪ್‌ಗೆ 'ವೈಫ್‌' ಆಗಿದ್ದ ನಟಿಯ ಬದುಕಿನಲ್ಲಿ ಇದೆಂಥಾ ವಿಧಿಯಾಟ!

Published : Feb 21, 2025, 01:08 PM ISTUpdated : Feb 21, 2025, 01:16 PM IST
Rashmi Kulkarani: ಮೈ ಆಟೋಗ್ರಾಫ್‌ನಲ್ಲಿ ಸುದೀಪ್‌ಗೆ 'ವೈಫ್‌' ಆಗಿದ್ದ ನಟಿಯ ಬದುಕಿನಲ್ಲಿ ಇದೆಂಥಾ ವಿಧಿಯಾಟ!

ಸಾರಾಂಶ

ಬಾಲನಟಿಯಾಗಿ ಮಿಂಚಿ, ಮೈ ಆಟೋಗ್ರಾಫ್‌ನಲ್ಲಿ ನಟಿಸಿದ್ದ ರಶ್ಮಿ ಕುಲಕರ್ಣಿ ಅವರ ವೈಯಕ್ತಿಕ ಜೀವನದಲ್ಲಿ ಸಂಭವಿಸಿದ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. 2015ರಲ್ಲಿ ವಿವಾಹವಾದ ಬಳಿಕ ಗಂಡನನ್ನು ಕಳೆದುಕೊಂಡ ನೋವಿನ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರು (ಫೆ.21): ಕನ್ನಡ ಸಿನಿಮಾಗಳಲ್ಲಿ ಸಾಕಷ್ಟು ಮಂದಿ ಬಾಲನಟಿಯರು ಬಂದು ಹೀರೋಯಿನ್‌ಗಳಾಗಿ ಮಿಂಚಿದ್ದಾರೆ. ಇನ್ನೂ ಕೆಲವರುಬಾಲನಟಿಯಾಗಿ ಮಿಂಚಿದ್ದರೂ, ಮದುವೆಯಾದ ಬಳಿಕ ಸುಖಸಂಸಾರ ನೋಡಿಕೊಂಡು ಸುಮ್ಮನಿದ್ದಾರೆ. ಆದರೆ, ಕನ್ನಡದಲ್ಲಿ ಚೋರ ಚಿತ್ತ ಚೋರ, ಶಬ್ದವೇದಿ, ಬಾಲಶಿವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಟಿ ಬಳಿಕ ಇದ್ದಕ್ಕಿಂತ ಸಡನ್‌ ಆಗಿ ತೆರೆ ಮರೆಗೆ ಸರಿದುಹೋಗಿದ್ದರು. ಈ ನಟಿ ರಶ್ಮಿ ಕುಲಕರ್ಣಿ. ಬಹುಶಃ ಹೆಸರಿನಲ್ಲಿ ಹೇಳಿದರೆ ಅವರು ಗೊತ್ತಾಗದೇ ಇರಬಹುದು. ಕಿಚ್ಚ ಸುದೀಪ್‌ ಅವರ ವೃತ್ತಿಜೀವನದ ಮೆಗಾಹಿಟ್‌ ಸಿನಿಮಾಗಳಲ್ಲಿ ಒಂದಾದ ಮೈ ಆಟೋಗ್ರಾಫ್‌ನಲ್ಲಿ ಸುದೀಪ್‌ಗೆ ಕಟ್ಟಕಡೆಯದಾಗಿ ಜೋಡಿಯಾಗುವ ಅಂದರೆ ಸುದೀಪ್‌ ವಿವಾಹವಾಗುವ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು ರಶ್ಮಿ ಕುಲಕರ್ಣಿ. ಅದಾದ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.

2015ರಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಸಂದೀಪ್‌ ಕಲ್ಬುರ್ಗಿಯನ್ನು ವಿವಾಹವಾಗಿದ್ದ ನಟಿ ತಮ್ಮ ಬದುಕಿನಲ್ಲಿ ಆದ ವಿಧಿಯಾಟವನ್ನು ಇತ್ತೀಚೆಗೆ ನ್ಯೂಸೋ ನ್ಯೂಸು ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಪತ್ರಕರ್ತ ಹರೀಶ್‌ ನಾಗರಾಜ್‌ ಅವರೊಂದಿಗೆ ಹಂಚಿಕೊಂಡಿದ್ದಾರೆ. ಅವರು ಈ ಬಗ್ಗೆ ತಿಳಿಸುವವರೆಗೂ ಅವರ ಜೀವನದಲ್ಲಿ ಇಂಥದ್ದೊಂದು ಘೋರ ಘಟನೆಯಾಗಿತ್ತು ಅನ್ನೋದೇ ಬಹುತೇಕ ಯಾರಿಗೂ ಗೊತ್ತಿರಲಿಲ್ಲ.

ಮದುವೆಯಾದ ಬಳಿಕ ಹೆಣ್ಣು ಹಾಗೂ ಗಂಡು ಮಗುವಿಗೆ ಜನ್ಮ ನೀಡಿದ್ದ ಅವರ ಸಂಸಾರದ ಆರಂಭಿಕ ದಿನಗಳು ಬಹುತೇಕ ಬಾಣಂತನದಲ್ಲಿಯೇ ಮುಗಿದು ಹೋಗಿತ್ತು. ಪ್ರೀತಿಯ ಗಂಡ, ಮುದ್ದಾದ ಸಂಸಾರಕ್ಕೆ ಈ ವರ್ಷದ ಆರಂಭದಲ್ಲಿಯೇ ಬರಸಿಡಿಲು ಎರಗಿತ್ತು.

'ಎಲ್ಲರಂತೆ ನಾವು ಕೂಡ 2025ರ ಹೊಸ ವರ್ಷವನ್ನು ತುಂಬಾ ಚೆನ್ನಾಗಿ ಸೆಲೆಬ್ರೇಟ್‌ ಮಾಡಿದ್ದೆವು. ಕುಣಿದು ಕುಪ್ಪಳಿಸಿ ಎಲ್ಲವೂ ಜೋಶ್‌ನಲ್ಲಿ ಸಂಭ್ರಮಿಸಿದೆವು. ಹೊಸ ವರ್ಷ ಬಂದು ನಾಲ್ಕು ದಿನಗಳಾಗುತ್ತಿದ್ದಂತೆ ನನ್ನ ಗಂಡ ಇಲ್ಲ. ಏನೂ ಕಾರಣವೇ ಇಲ್ಲ. ಅವರಿಗೆ ಯಾವುದೇ ಆರೋಗ್ಯ ಸಮಸ್ಯ ಇದ್ದಿರಲಿಲ್ಲ. ಜನವರಿ 5 ಭಾನುವಾರ. ಬೆಳಗ್ಗೆ ಎದ್ದು ತಿಂಡಿ ತಿಂದು ರಿಲಾಕ್ಸ್‌ ಆಗಿ ಮಲಗಿದ್ದೆವು. ಇದ್ದಲ್ಲಿಯೇ ಅವರ ಜೀವ ಹೋಗಿತ್ತು. ಬಹುಶಃ ಹೃದಯಾಘಾತವಾಗಿತ್ತು ಅಂತಾ ಕಾಣುತ್ತೆ' ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಐಟಿಯಲ್ಲಿ ಕೆಲಸ ಮಾಡುವವರಿಗೆ ಸರಿಯಾಗಿ ನಿದ್ದೆ ಇರೋದಿಲ್ಲ. ಅವರಲ್ಲಿ ಅರೋಗ್ಯದ ಯಾವ ಸಮಸ್ಯೆ ಕೂಡ ಇದ್ದಿರಲಿಲ್ಲ. ಆದರೆ, ರಾತ್ರಿಯೆಲ್ಲಾ ಕೆಲಸ ಮಾಡುತ್ತಿದ್ದರು. ತಡರಾತ್ರಿಯವರೆಗೂ ಕೆಲಸ ಮಾಡಿ, ಬೆಳಗ್ಗೆ ಎಷ್ಟೋ ಹೊತ್ತಿಗೆ ಮಲಗುತ್ತಿದ್ದರು. ಅಂದಾಜು 2-3 ವರ್ಷದಿಂದ ಅವರು ಇದೇ ರೀತಿ ಮಾಡುತ್ತಿದ್ದರು. ಬಹುಶಃ ಇದೇ ಅವರಿಗೆ ಸಮಸ್ಯೆ ನೀಡಿತು ಅಂತಾ ಕಾಣುತ್ತದೆ' ಎಂದು ಹೇಳಿದ್ದಾರೆ.

ಅವರಿಲ್ಲದೇ ಇರಬಹುದು. ಆದರೆ, ಅವರ ನೆನಪುಗಳು ನನ್ನ ಜೊತೆಗಿದೆ. ಈಗ ನನ್ನ ಅಪ್ಪ-ಅಮ್ಮ ನನಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ನನ್ನ ಮಕ್ಕಳು ನನ್ನ ಕಣ್ಣ ಮುಂದೆ ಇದ್ದಾರೆ. ಎಲ್ಲನೂ ನೋಡಿ ನಾನು ಪಾಸಿಟಿವಿಯನ್ನು ತರಿಸಿಕೊಳ್ಳುತ್ತಿದ್ದೇನೆ. ಜೀವನ ಮುಂದೆ ಸಾಗಬೇಕಲ್ಲ ಎನ್ನುವುದನ್ನು ನಿಧಾನಕ್ಕೆ ಅರ್ಥಮಾಡಿಕೊಂಡಿದ್ದೇನೆ. ಈಗ ನಾನು ಏನೇ ಅತ್ತರೂ ಗೋಳಾಡಿದರೂ ಏನೇ ಮಾಡಿದರು ಆ ಮನುಷ್ಯ ಮತ್ತೆ ಬರಲ್ಲ' ಎಂದು ಕಣ್ಣಿರಿಟ್ಟಿದ್ದಾರೆ.

ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!

ಇದೇ ವೇಳೆ ಗಂಡನ ಜೊತೆಗಿದ್ದ ದಿನಗಳನ್ನು ನೆನೆದ ರಶ್ಮಿ ಕುಲಕರ್ಣಿ, 'ನನ್ನ ಸಿನಿಮಾಗಳನ್ನು ನೋಡಿ ಅವರು ಖುಷಿ ಪಡುತ್ತಿದ್ದರು. ಒಮ್ಮೊಮ್ಮೆ ನಾನು ಮಾಡಿದ ಪಾತ್ರಗಳನ್ನು ನೋಡಿ ನಗುತ್ತಿದ್ದರು.  ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದರು. ತುಂಬಾ ಕಾಳಜಿ ಮಾಡುತ್ತಿದ್ದರು. ಮತ್ತೆ ನಾನು ತೆರೆ ಮೇಲೆ ಬರಬೇಕು ಎನ್ನುವುದು ಅವರಿಗಿತ್ತು. ಆದರೆ ಮಕ್ಕಳು ಸಂಸಾರ ಅಂತಾ ತಡವಾಯ್ತು' ಎಂದು ಹೇಳಿದ್ದಾರೆ.

'ನಿಮ್ಮ ಮಗುನ ಯಾವಾಗ ಹೀಗೆ ಆಟ ಆಡಿಸೋದು..' ಆಂಕರ್‌ ಅನುಶ್ರೀಗೆ ಕೇಳಿದ ಫ್ಯಾನ್ಸ್‌!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!