Boys v/s Girls ಶೋನಿಂದ ಮರೆಯಾಗಿದ್ದ Bigg Boss ಹನುಮಂತ ಮತ್ತೊಂದು ಭಾರೀ ಟ್ವಿಸ್ಟ್‌ ಕೊಟ್ರು! ಏನದು?

Published : Feb 21, 2025, 11:53 AM ISTUpdated : Feb 21, 2025, 12:01 PM IST
Boys v/s Girls ಶೋನಿಂದ ಮರೆಯಾಗಿದ್ದ Bigg Boss ಹನುಮಂತ ಮತ್ತೊಂದು ಭಾರೀ ಟ್ವಿಸ್ಟ್‌ ಕೊಟ್ರು! ಏನದು?

ಸಾರಾಂಶ

ಬಾಯ್ಸ್‌ v/s ಗರ್ಲ್ಸ್‌ ಶೋಕ್ಕೆ ಹನುಮಂತ ಗುಡ್‌ಬೈ ಹೇಳಿದ್ದಾರೆ ಎನ್ನಲಾಗಿತ್ತು. ಎಲ್ಲ ಊಹಾಪೋಹಗಳಿಗೂ ಹನುಮಂತ ಅವರೇ ತೆರೆ ಎಳೆದಿದ್ದಾರೆ.  

ಬಾಯ್ಸ್‌ v/s ಗರ್ಲ್ಸ್‌ ಶೋನಲ್ಲಿ ಹನುಮಂತ ಲಮಾಣಿ ಇಲ್ಲ, ಈ ಶೋ ಬಿಟ್ಟಿರಬಹುದು ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಹನುಮಂತ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

ʼಬಾಯ್ಸ್‌ v/s ಗರ್ಲ್ಸ್ʼ‌ ಶೋ 
ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹನುಮಂತ ಲಮಾಣಿ ಅವರೇ ಈ ಶೋ ಎಪಿಸೋಡ್‌ ಪ್ರೋಮೋ ಹಂಚಿಕೊಂಡಿದ್ದಾರೆ. ʼಮಜಾ ಟಾಕೀಸ್ʼ‌ ಹಾಗೂ ʼಬಾಯ್ಸ್‌ v/s ಗರ್ಲ್ಸ್ʼ‌ ಶೋ ಮಹಾಮಿಲನದಲ್ಲಿ ಹನುಮಂತ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಸಹಸ್ಪರ್ಧಿಗಳೇ ಈ ಪ್ರೋಮೋ ನೋಡಿ ಖುಷಿಪಟ್ಟಿದ್ದಾರೆ.

ಥಿಯೇಟರ್‌ನಲ್ಲಿ 'ಛಾವಾ' ಧೂಳೆಬ್ಬಿಸ್ತಿರೋ ಬೆನ್ನಲ್ಲೇ ಛತ್ರಪತಿ ಶಿವಾಜಿ ಮಹಾರಾಜನಾಗಿ ರಿಷಬ್ ಶೆಟ್ಟಿ ಫಸ್ಟ್ ಲುಕ್‌ ಔಟ್!

ಮತ್ತೆ ಶೋಗೆ ಕಂಬ್ಯಾಕ್
ಹನುಮಂತ ಲಮಾಣಿ ಅವರು ಮತ್ತೆ ಈ ಶೋಗೆ ಬಂದಿರೋದು ಅನೇಕರಿಗೆ ಖುಷಿ ಕೊಟ್ಟಿದೆ. ಈಗ ಈ ಶೋಗೆ ಕಳೆ ಬಂತು ಎಂದು ಹೇಳುತ್ತಿದ್ದಾರೆ. ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ವಿಜೇತ ಹನುಮಂತ ಅವರು ʼಬಾಯ್ಸ್‌ v/s ಗರ್ಲ್ಸ್‌ ಶೋʼನಲ್ಲಿ ಭಾಗಿಯಾಗುವ ಅವಕಾಶ ಪಡೆದರು. ಒಂದೆರಡು ಎಪಿಸೋಡ್‌ ಬಳಿಕ ಈ ಶೋನಲ್ಲಿ ಅವರು ಕಾಣಿಸಲೇ ಇಲ್ಲ. ಈಗ ಮತ್ತೆ ಈ ಶೋಗೆ ಕಂಬ್ಯಾಕ್ ಮಾಡಿದ್ದಾರೆ.

ಊಹಾಪೋಹಕ್ಕೆ ತೆರೆ ಎಳೆದ ಹನುಮಂತ
ಬಹುಶಃ ಹನುಮಂತ ಅವರು ಈ ರಿಯಾಲಿಟಿ ಶೋಗೆ ಗುಡ್‌ಬೈ ಹೇಳಿರಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಈ ಶೋನಲ್ಲಿ ಭಾಗಿ ಆಗಿರಲಿಲ್ಲ. ಈ ಬಗ್ಗೆ ವಾಹಿನಿಯಾಗಲೀ, ಹನುಮಂತ ಅವರಾಗಲೀ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಈ ಶೋನಲ್ಲಿ ಭಾಗಿಯಾದ ಪ್ರೋಮೋ ಹಂಚಿಕೊಂಡು, ಎಲ್ಲ ಊಹಾಪೋಗಳಿಗೂ ಅವರು ತೆರೆ ಎಳೆದಿದ್ದಾರೆ.

ರಜತ್‌ ಒಳ್ಳೆಯ ಮನುಷ್ಯ, ನಾವು ಅಣ್ಣ ತಂಗಿ ರೀತಿ ಜಗಳವಾಡುತ್ತೀವಿ: ಚೈತ್ರಾ ಕುಂದಾಪುರ

ಶೋ ಸ್ಪರ್ಧಿಗಳು
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ʼಬಾಯ್ಸ್‌ vls ಗರ್ಲ್ಸ್‌ ಶೋʼ ಪ್ರಸಾರ ಆಗುತ್ತಿದೆ. ಹುಡುಗರು, ಹುಡುಗಿಯರು ಎಂದು ಎರಡು ತಂಡಗಳಾಗಿ ವಿಭಜನೆ ಆಗಿದೆ. ಅನುಪಮಾ ಗೌಡ ಅವರು ಈ ಶೋ ನಿರೂಪಕಿ. ವಿಠ್ಠಲ್‌ ಕಾಮತ್‌, ಮಂಜು ಪಾವಗಡ, ರಜತ್‌, ಪ್ರಶಾಂತ್‌, ಧನರಾಜ್‌ ಆಚಾರ್‌, ಸ್ನೇಹಿತ್‌ ಗೌಡ ಮುಂತಾದವರು ಹುಡುಗರ ಪಡೆಯಲ್ಲಿದ್ದಾರೆ. ಇನ್ನು ಪ್ರಿಯಾ ಸವಡಿ, ಸ್ಫೂರ್ತಿ ಗೌಡ, ಐಶ್ವರ್ಯಾ ಸಾಲೀಮಠ, ಶೋಭಾ ಶೆಟ್ಟಿ, ಐಶ್ವರ್ಯಾ ಶಿಂಧೋಗಿ, ಚಂದನಾ ಗೌಡ, ಸ್ಪಂದನಾ ಸೋಮಣ್ಣ ಅವರು ಹುಡುಗಿಯರ ಟೀಂನಲ್ಲಿದ್ದಾರೆ. ವಿನಯ್‌ ಗೌಡ, ಶುಭಾ ಪೂಂಜಾ ಅವರು ತಂಡದ ನಾಯಕರು.

ಅಂದಹಾಗೆ ಹನುಮಂತ ಅವರು ʼಸರಿಗಮಪʼ ರನ್ನರ್‌ ಅಪ್‌ ಕೂಡ ಹೌದು, ʼಭರ್ಜರಿ ಬ್ಯಾಚುಲರ್ಸ್‌ʼ ಶೋನಲ್ಲಿಯೂ ಅವರು ಭಾಗಿ ಆಗಿದ್ದರು. ಈಗ ಅವರು ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋನಲ್ಲಿ ಭಾಗಿ ಆಗುತ್ತಾರೆ. ಅಷ್ಟೇ ಅಲ್ಲದೆ ಆದಷ್ಟು ಬೇಗ ಮದುವೆ ಆಗುವ ಆಸೆಯನ್ನು ಹೊಂದಿದ್ದಾರಂತೆ. ʼಬಿಗ್‌ ಬಾಸ್ ಕನ್ನಡ 11ʼ‌ ಶೋನಿಂದ ಗೆದ್ದ ಹಣದಲ್ಲಿ ಮನೆ ಕಟ್ಟುವೆ ಎಂದು ಅವರು ಹೇಳಿದ್ದರು. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!