ಹೇಗಿದೆ ದೀಪಿಕಾ ದಾಸ್ ಹೊಸ‌ ಗ್ಲಾಮರಸ್ ಲುಕ್… ಕ್ಲಿಯೋಪಾತ್ರ ಎಂದ ಫ್ಯಾನ್ಸ್

Published : Feb 21, 2025, 11:39 AM ISTUpdated : Feb 21, 2025, 11:51 AM IST
ಹೇಗಿದೆ ದೀಪಿಕಾ ದಾಸ್ ಹೊಸ‌ ಗ್ಲಾಮರಸ್ ಲುಕ್… ಕ್ಲಿಯೋಪಾತ್ರ ಎಂದ ಫ್ಯಾನ್ಸ್

ಸಾರಾಂಶ

ದೀಪಿಕಾ ದಾಸ್ ಕನ್ನಡ ಕಿರುತೆರೆಯಲ್ಲಿ 'ನಾಗಿಣಿ' ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿದರು.  ಸದ್ಯಕ್ಕೆ, ದೀಪಿಕಾ ದಾಸ್ ತಮ್ಮ ಗ್ಲಾಮರಸ್ ಫೋಟೋಶೂಟ್‌ನಿಂದ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು ದೀಪಿಕಾ ದಾಸ್ (Deepika Das). ಕಿರುತೆರೆಯಲ್ಲಿ ನಾಗಿಣಿಯಾಗಿ ಬುಸಿಗುಟ್ಟಿ ಕನ್ನಡಿಗರ ಫೇವರಿಟ್ ನಾಗ ರಾಣಿಯಾಗಿದ್ದ ದೀಪಿಕಾ ದಾಸ್, ಆ ಸೀರಿಯಲ್ ಬಳಿಕ ಬೇರೆ ಯಾವುದೇ ಸೀರಿಯಲ್ ಗಳಲ್ಲೂ ನಟಿಸದಿದ್ದರೂ ಸಹ ಇಂದಿಗೂ ಜನ ಅವರನ್ನು ನಾಗಿಣಿಯಾಗಿಯೇ ಇಷ್ಟಪಡುತ್ತಿದ್ದಾರೆ. ಯಾಕಂದ್ರೆ ಇದು ದೀಪಿಕಾ ದಾಸ್ ರನ್ನು ನಟನೆಗೆ ಪರಿಚಯಿಸಿದ ಸೀರಿಯಲ್. ಇದಾದ ಮೇಲೆ ದೀಪಿಕಾ ದಾಸ್ ಗೆ ಹೆಸರು ತಂದು ಕೊಟ್ಟಿದ್ದು ಬಿಗ್ ಬಾಸ್ ಸೀಸನ್ 7. 

ದೀಪಕ್ ನಾನು Hi bye ಸ್ನೇಹಿತರಾಗಿದ್ವಿ ಅಷ್ಟೇ; ಕೊನೆಗೂ ಪತಿ ಬಗ್ಗೆ ರಿವೀಲ್ ಮಾಡಿದ ದೀಪಿಕಾ ದಾಸ್

ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ : 
ಬಿಗ್ ಬಾಸ್ ಕನ್ನಡ ಸೀಸನ್ 7 (Bigg Boss Kannada Season 7) ರಲ್ಲಿ ತಮ್ಮ ಮಾತು, ಆಟ, ಸ್ಟೈಲ್, ಎಂಥಹುದೇ ಸಂದರ್ಭ ಬಂದರೂ ಸಹ ಸ್ಟ್ರಾಂಗ್ ಆಗಿ ನಿಂತು ಆಡುವ ಅವರ ಪರಿ, ಬೋಲ್ಡ್ ನೆಸ್ ಗೆ ಕನ್ನಡಿಗರು ಫಿದಾ ಆಗಿದ್ದರು. ನಾಗಿಣಿಯ ಅಮೃತಾ ಆಗಿ ಜನರಿಗೆ ಪರಿಚಯವಿದ್ದ ನಟಿಯನ್ನು ದೀಪಿಕಾ ದಾಸ್ ಆಗಿ ಬಿಗ್ ಬಾಸ್ ಮನೆಯಲ್ಲಿ ನೋಡಿ ಜನ ಇಷ್ಟ ಪಟ್ಟಿದ್ದರು. ಬಿಗ್ ಬಾಸ್ ಮನೆಯ ಬಾಸ್ ಲೇಡಿಯಾಗಿ  ದೀಪಿಕಾ ದಾಸ್ ಸಖತ್ ಸೌಂಡ್ ಮಾಡಿದ್ದರು. ಅದಾದ ನಂತರ ಸಿನಿಮಾ, ಸೀರಿಯಲ್ ಗಳಿಂದ ದೂರವೇ ಉಳಿದಿದ್ದ ದೀಪಿಕಾ ದಾಸ್ ಸದ್ಯ ಹೊಸ ಸಿನಿಮಾದೊಂದಿಗೆ ನಿಮ್ಮ ಮುಂದೆ ಬಂದಿದ್ದಾರೆ. 

8 ರಾಜ್ಯಗಳನ್ನು ಕಾರಲ್ಲಿಯೇ ಸುತ್ತಿದ ದೀಪಿಕಾ ದಾಸ್‌: ಪಾರು ಪಾರ್ವತಿ ಬಗ್ಗೆ ಏನ್ ಹೇಳಿದ್ರು?

ಪಾರು ಪಾರ್ವತಿ
ಸದಾ ವಿದೇಶ ಸುತ್ತೋ ಬೆಡಗಿ ದೀಪಿಕಾ ದಾಸ್, ತಮಗೆ ಹೇಳಿ ಮಾಡಿಸಿದ ಸಿನಿಮಾ ಪಾರು ಪಾರ್ವತಿಯಲ್ಲಿ (Paru Parvati) ನಟಿಸಿದ್ದರು. ಇದು ಟ್ರಾವೆಲ್ ಕುರಿತಾದ ಸಿನಿಮಾವಾಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಸಿನಿಮಾ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ದೀಪಿಕಾ ದಾಸ್ ನಟನೆಯನ್ನು ಸಹ ಜನ ಮೆಚ್ಚಿಕೊಂಡಿದ್ದಾರೆ. ಜನವರಿ 31ರಂದು ‘ಪಾರು ಪಾರ್ವತಿ’ ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾಕ್ಕೆ ಫ್ಯಾಮಿಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ದೀಪಿಕಾ ದಾಸ್ ಕೂಡ ಖುಷಿಯಾಗಿದ್ದಾರೆ. ಟ್ರಲರ್ ಮೂಲಕವೇ ಸದ್ದು ಮಾಡಿದ್ದ ಈ ಸಿನಿಮಾದಲ್ಲಿ ದೀಪಿಕಾ ದಾಸ್ ಟ್ರಾವೆಲ್ ಇನ್​ಫ್ಲೂಯೆನ್ಸರ್ (Travel influencer)ಆಗಿ ನಟಿಸಿದ್ದಾರೆ. 

Paru Parvati Film Review: ಭಾವನೆಗಳ ರಸ್ತೆಯಲ್ಲಿ ಕೌತುಕದ ಪಯಣ: ಒಂಟಿತನದಲ್ಲಿ ಪಾರು!

ಗ್ಲಾಮರಸ್ ಫೋಟೊ ಶೂಟ್
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ದೀಪಿಕಾ ದಾಸ್, ಹೊಸ ಫೊಟೊ ಶೂಟ್ ಮೂಲಕ ಅಭಿಮಾನಿಗಳು ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ. ಹೆಚ್ಚಾಗಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ದೀಪಿಕಾ ದಾಸ್, ಈ ಬಾರಿ ಕಪ್ಪು ಬಣ್ಣದ ಗೌನ್ ಧರಿಸಿ, ಮತ್ತಷ್ಟು ಬೋಲ್ಡ್, ಗ್ಲಾಮರಸ್ (glamorous photoshoot)  ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ದಾಸ್ ಲುಕ್ ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ನಟಿ ಭೂಮಿ ಶೆಟ್ಟಿ ಡಿವೈನ್ ಎಂದಿದ್ದಾರೆ, ಇನ್ನು ಜನರು ಬ್ಯೂಟಿ, ಕ್ಲಿಯೋಪಾತ್ರ, ಬೆಂಕಿ, ಬ್ಲ್ಯಾಕ್ ನಲ್ಲಿ ತುಂಬನಎ ಚೆನ್ನಾಗಿ ಕಾಣಿಸ್ತಿದ್ದೀರಿ ಎಂದು ಹೊಗಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?