ಲಕ್ಷ್ಮೀ ನಿವಾಸದ ವಿಲನ್​ ಕಾವೇರಿ ಡಾನ್ಸ್​ ನೋಡಿರುವಿರಾ? ಸೈಂಟಿಸ್ಟ್​ ಆದಾಕೆ ನಟಿಯಾದ ರಿಯಲ್​ ಸ್ಟೋರಿ ಇಲ್ಲಿದೆ...

Published : Sep 13, 2024, 04:58 PM IST
ಲಕ್ಷ್ಮೀ ನಿವಾಸದ ವಿಲನ್​ ಕಾವೇರಿ ಡಾನ್ಸ್​ ನೋಡಿರುವಿರಾ? ಸೈಂಟಿಸ್ಟ್​ ಆದಾಕೆ ನಟಿಯಾದ ರಿಯಲ್​ ಸ್ಟೋರಿ ಇಲ್ಲಿದೆ...

ಸಾರಾಂಶ

ಆತ್ಮದ ಕಾಟದಲ್ಲಿ ತೊಳಲಾಡುತ್ತಿರುವ ಲಕ್ಷ್ಮೀ ನಿವಾಸದ ಕಾವೇರಿ ರಿಯಲ್​ ಲೈಫ್​ ಸ್ಟೋರಿ ಗೊತ್ತಾ? ವಿಜ್ಞಾನಿ ಆಗಿದ್ದಾಕೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸ್ಟೋರಿ ಇಲ್ಲಿದೆ ನೋಡಿ...  

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀಬಾರಮ್ಮ ಇದೀಗ ಹಲವು ಸೀರಿಯಲ್​ಗಳನ್ನು ಹಿಮ್ಮೆಟ್ಟಿ ಮುನ್ನುಗ್ಗುತ್ತದೆ. ಇದೀಗ ಕಾವೇರಿ ಮತ್ತು ಲಕ್ಷ್ಮೀ ನಡುವೆ ಪ್ರೇತಾತ್ಮದ ಸೀನ್​ ಬಂದಾಗಿನಿಂದಲೂ ಇದನ್ನು ನೋಡಲು ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕಾವೇರಿಯಂಥ ವಿಲನ್ ಅತ್ತೆಯನ್ನು ಮಟ್ಟಹಾಕಲು ಇದೊಂದೇ ಸರಿಯಾದ ಮಾರ್ಗ ಎನ್ನುತ್ತಿದ್ದಾರೆ.  ಸೊಸೆಯನ್ನು ಮಟ್ಟ ಹಾಕಲು ಹೋಗಿ   ಕಾವೇರಿಯೇ ಸಿಕ್ಕಿ ಬೀಳುತ್ತಿದ್ದಾಳೆ. ಪುತ್ರ ಮೋಹ ಯಾವ ರೀತಿ ಮಾಡಿಸುತ್ತದೆ ಎನ್ನುವುದಕ್ಕೆ ಕಾವೇರಿ ಸಾಕ್ಷಿಯಾಗಿದ್ದಾಳೆ. ಈಗ ಆತ್ಮದ ಕಾಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾಳೆ. ಹೆಜ್ಜೆ ಹೆಜ್ಜೆಗೂ ಈಕೆಗೆ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಳ್ಳುವ ಸ್ಥಿತಿ ಬಂದಿದೆ. ಅದು  ಸೀರಿಯಲ್​ ಆಯ್ತು.

ಆದರೆ ರಿಯಲ್​ ಲೈಫ್​ನಲ್ಲಿ ಕಾವೇರಿ ಹೇಗಿದ್ದಾರೆ? ಇವರ ಹಿನ್ನೆಲೆ ಏನು? ಇವರ ಭರ್ಜರಿ ಸ್ಟೆಪ್​ ನೋಡಿರುವಿರಾ? ಇಲ್ಲ ಎಂತಾದ್ರೆ ಅವರ ಫುಲ್​ ಡಿಟೇಲ್ಸ್​ ಇಲ್ಲಿದೆ ನೋಡಿ... ಕಾವೇರಿ ಪಾತ್ರಧಾರಿಯ ನಿಜವಾದ ಹೆಸರು ಸುಷ್ಮಾ ನಾಣಯ್ಯ. ರಿಯಲ್​ ಲೈಫ್​ನಲ್ಲಿ ಪುಟ್ಟ ಮಗಳಿದ್ದರೂ ಲಕ್ಷ್ಮೀ ಬಾರಮ್ಮಾದಲ್ಲಿ ಇವರದ್ದು ವಯಸ್ಸು ಮೀರಿದ ಪಾತ್ರ. ಈ ಪಾತ್ರ ಚೆನ್ನಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಈಕೆ. ಅಂದಹಾಗೆ ಸುಷ್ಮಾ ಅವರು ಕೊಡಗಿನ ಬೆಡಗಿ. ಬೆಳೆದದ್ದು ಮೈಸೂರಿನಲ್ಲಿ. ರಂಗಭೂಮಿ ಕಲಾವಿದೆಯಾಗಿಯಾಗಿರುವ ಇವರು ಈವರೆಗೂ  ಸುಮಾರು 12ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಂಗೀತ, ನೃತ್ಯ, ರಂಗಭೂಮಿ, ಮೇಕಪ್ ಬಗ್ಗೆ ಸುಷ್ಮಾ ಅವರು ಹೆಚ್ಚು ಆಸಕ್ತಿಯನ್ನು ಹೊಂದಿದ್ದರಂತೆ. ಹೀಗಾಗಿ ರಂಗಭೂಮಿಗೆ ಆಗಮಿಸಿದ ಸುಷ್ಮಾ ಅವರು ಮೊದಲು ಕಾವ್ಯಾ ಕಸ್ತೂರಿ ಧಾರಾವಾಹಿಯಲ್ಲಿ ನಟಿಸಿದ್ದರು. ಕುತೂಹಲದ ವಿಷಯ ಎಂದರೆ, ಮೈಕ್ರೋ ಬಯಾಲಜಿಯಲ್ಲಿ ಇವರು ಎಂಎಸ್​ಸಿ ಡಿಗ್ರಿ ಪಡೆದದ್ದು, ಕೆಲ ಕಾಲ ವಿಜ್ಞಾನಿ ಆಗಿಯೂ ಕೆಲಸ ನಿರ್ವಹಿಸಿದ್ದಾರೆ.  ಆದರೆ, ಸುಷ್ಮಾ ಅವರ ಮನಸ್ಸು ಸದಾ ನಟನೆಯತ್ತ ಸೆಳೆಯುತ್ತಿದ್ದ ಕಾರಣ ಕೆಲಸ ಬಿಟ್ಟು ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

ದುಡ್ಡು ಆಮೇಲೆ ಕೊಡು ಎಂದು ಕಾರು ಕೊಟ್ಟ- ಆಮೇಲೆ ನೋಡಿದ್ರೆ ಅವನ ಆಸೆ... ತನಿಷಾ ಶಾಕಿಂಗ್​ ವಿಷ್ಯ ರಿವೀಲ್​

ಇದೀಗ ನಟಿ ಲಕ್ಷ್ಮೀ ಬಾರಮ್ಮಾ ಟೀಮ್​ ಜೊತೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಈ ಟೀಮ್​ನಲ್ಲಿ ಹೈಲೈಟ್​ ಆಗಿರುವುದು ಇವರೇ ಎನ್ನುವುದು ವಿಡಿಯೋ ನೋಡಿದರೆ ತಿಳಿಯುತ್ತದೆ. ಕಮೆಂಟ್​ಗಳಲ್ಲಿಯೂ ರೆಡ್​ ಸಾರಿವಾಲಿ ಎಂದೇ ಇವರ ಟ್ಯಾಲೆಂಟ್​ ಅನ್ನು ಕಮೆಂಟಿಗರು ಗುರುತಿಸುತ್ತಾರೆ. ಸೀರಿಯಲ್​ ನೋಡದೇ ಇರುವವರಿಗೆ ಸುಷ್ಮಾ ಯಾರು ಎಂದು ತಿಳಿದಿಲ್ಲ. ಇದೇ ಕಾರಣಕ್ಕೆ ಕೆಂಪು ಸೀರೆ ಉಟ್ಟವರ ಡಾನ್ಸ್​ ಸೂಪರ್​ ಎಂದು ಹೇಳುತ್ತಿದ್ದಾರೆ. ಅಂದಹಾಗೆ ಲಕ್ಷ್ಮೀ ಬಾರಮ್ಮಕ್ಕೂ ಮೊದಲು ಸುಷ್ಮಾ ಅವರು,  ಅಶ್ವಿನಿ ನಕ್ಷತ್ರ, ಭಾಗ್ಯವತಿ, ರಥಸಪ್ತಮಿ, ಮಹಾಭಾರತ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೆ ಐದಾರು ವರ್ಷ ಬ್ರೇಕ್​ ತೆಗೆದುಕೊಂಡು ಮತ್ತೆ ಗಯ್ಯಾಳಿಯಾಗಿ ಮರಳಿದ್ದಾರೆ. 
 
ಅಂದಹಾಗೆ ಸುಷ್ಮಾ ಅವರು, ಹೈಸ್ಕೂಲ್​ ಸ್ನೇಹಿತನನ್ನೇ ಮದುವೆಯಾಗಿದ್ದಾರೆ. ನಟನೆಗೆ  ಪತಿ ಹಾಗೂ ಮನೆಯವರು ಬಹಳ ಪ್ರೋತ್ಸಾಹವಿದ್ದು, ಸದ್ಯ ಸುಷ್ಮಾ  ಹೆಣ್ಣು ಮಗುವಿನ ಅಮ್ಮ ಆಗಿದ್ದಾರೆ. ಇವರ ಲವ್​ ಸ್ಟೋರಿ ಕೂಡ ಇಂಟರೆಸ್ಟಿಂಗ್​ ಆಗಿದೆ.  ಸುಷ್ಮಾ ಅವರಿಗಿಂತ ಪತಿ ಪ್ರತೀಕ್​ ಒಂದು ವರ್ಷ ದೊಡ್ಡವರು. ಹೈಸ್ಕೂಲ್​ನಲ್ಲಿಯೇ ಮೊಳಗಿತ್ತು ಪ್ರೀತಿ.  2013ರಲ್ಲಿ ಮದುವೆಯಾಗಿದೆ. ಈಗ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಮನೆ ಮಾತಾಗಿದ್ದಾರೆ. ರಿಯಲ್​ ಲೈಫ್​ನಲ್ಲಿ ತಾವು ತುಂಬಾ ಸೈಲೆಂಟ್​ ಎಂದು ಹೇಳಿಕೊಂಡಿದ್ದಾರೆ. ಆದರೆ ಸೀರಿಯಲ್​ನಲ್ಲಿ ಮಾತ್ರ ಇಂಥ ಅತ್ತೆ ಮಾತ್ರ ಯಾರಿಗೂ ಬೇಡಪ್ಪಾ ಎನ್ನುವ ಕ್ಯಾರೆಕ್ಟರ್​. ಕೀರ್ತಿ-ಲಕ್ಷ್ಮಿಯ ಪ್ರೇತಾತ್ಮದ ಆಟದ ನಡುವೆ ಕಾವೇರಿಗೆ ಮುಂದೆ ಏನಾಗುತ್ತದೆ ಎನ್ನುವ ಕುತೂಹಲ ವೀಕ್ಷಕರದ್ದು. ಈಗ ಅನುಬಂಧ ಅವಾರ್ಡ್​ಗೂ ನಟಿ ರೆಡಿಯಾಗಿದ್ದು, ಅದರ ಪ್ರೊಮೋ ಬಿಡುಗಡೆಯಾಗಿದೆ. 

ಮನಸಿಗೆ ವಯಸ್ಸಿನ ಹಂಗೇಕೆ? ಬೆಳಗಾವಿಯ ವೃದ್ಧಾಶ್ರಮದ ಮಹಿಳೆಯರ ಕ್ಯೂಟ್​ ಸ್ಟೆಪ್: ಮನಸೋತ ನಟ ವಿಕ್ಕಿ ಕೌಶಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?