ಮಹಾನಟಿ ರಿಯಾಲಿಟಿ ಷೋ ಗ್ರ್ಯಾಂಡ್ ಫಿನಾಲೆ ಸಂದರ್ಭದಲ್ಲಿ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಟಿ ನಿಶ್ವಿಕಾ ನಾಯ್ಡು ಅವರ ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿದೆ. ಏನಿದೆ ಇದರಲ್ಲಿ?
ಮಹಾನಟಿ ಷೋ ಇನ್ನೇನು ಮುಕ್ತಾಯ ಕಾಣಲಿದೆ. ಮಹಾನಟಿ ಯಾರಾಗಲಿದ್ದಾರೆ ಎನ್ನುವ ಕ್ಷಣ ಹತ್ತಿರವಾಗಿದೆ. ಕಳೆದ ಮೂರು ತಿಂಗಳುಗಳಿಂದ ಪ್ರೇಕ್ಷಕರು ಕಾಯುತ್ತಿದ್ದ ಕಾತರಕ್ಕೆ ತೆರೆ ಬೀಳಲಿದೆ. ಇದರ ನಡುವೆಯೇ ಈ ಷೋಗೆ ಸಂಬಂಧಿಸಿದಂತೆ ಕೆಲವು ವಿಶೇಷ ವಿಡಿಯೋಗಳನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಒಂದು ತೀರ್ಪುಗಾರರಲ್ಲಿ ಒಬ್ಬರಾಗಿರುವ ನಿಶ್ವಿಕಾ ನಾಯ್ಡು ಅವರ ವಿಡಿಯೋ. ಈ ಷೋಗೆ ರಮೇಶ್ ಅರವಿಂದ, ಪ್ರೇಮಾ, ನಿಶ್ವಿಕಾ ಹಾಗೂ ನಿರ್ದೇಶಕ ತರುಣ್ ಸಾಗರ್ ತೀರ್ಪುಗಾರರಾಗಿ ಆಗಮಿಸುತ್ತಿದ್ದಾರೆ. ಇವರಲ್ಲಿ ನಿಶ್ವಿಕಾ ಇಡೀ ಷೋನಲ್ಲಿ ಯಾವೆಲ್ಲಾ ರೀತಿಯ ಪೋಸ್ ಕೊಟ್ಟಿದ್ದರು ಎನ್ನುವ ವಿಶೇಷ ವಿಡಿಯೋ ರಿಲೀಸ್ ಮಾಡಲಾಗಿದೆ. ನಟಿಯ ಮುಖದಲ್ಲಿ ಮೂಡಿರುವ ಹಲವಾರು ಭಂಗಿಗಳನ್ನು ಸೆರೆ ಹಿಡಿದು ಅದರ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಅಷ್ಟಕ್ಕೂ, ಸ್ಯಾಂಡಲ್‌ವುಡ್ ಬೆಡಗಿ ನಿಶ್ವಿಕಾ ನಾಯ್ಡು ಈಗ ಟಾಲಿವುಡ್ಗೆ ಹಾರುತ್ತಿದ್ದಾರೆ. ಟಾಲಿವುಡ್ನಲ್ಲಿಯೂ ತಮಗೆ ಯಶಸ್ಸು ಸಿಗಲಿ ಎಂದು ಇದಾಗಲೇ ಮನೆಯಲ್ಲಿ ಮಾಂಸ, ಮದ್ಯವನ್ನೆಲ್ಲ ಇಟ್ಟು ಜ್ಯೂತಿಷಿ ವೇಣು ಸ್ವಾಮಿ ಅವರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ಮನೆಯಲ್ಲಿ ಪೂಜೆ ಮಾಡಿರುವ ರೀತಿಯಲ್ಲಿಯೇ ನಿಶ್ವಿಕಾ ಕೂಡ ಪೂಜೆ ಮಾಡಿಸಿದ್ದಾರೆ. ಪೂಜೆಯ ಬಳಿಕ ರಶ್ಮಿಕಾ ನ್ಯಾಷನಲ್ ಕ್ರಷ್ ಆಗಿದ್ದಾರೆ ಎನ್ನುವ ನಂಬಿಕೆ ಸಿನಿ ಇಂಡಸ್ಟ್ರಿಯಲ್ಲಿ ಇದೆ. ಅಷ್ಟಕ್ಕೂ ನಿಶ್ವಿಕಾ ಸಿಕ್ಕಾಪಟ್ಟೆ ಫಿಟ್‌ನೆಸ್ ಫ್ರೀಕ್. ಇತ್ತೀಚೆಗೆ ತನ್ನ ಆಬ್ಸ್ ಮೂಲಕವೂ ಗಮನ ಸೆಳೆದಿದ್ದರು. ಕೆಲ ದಿನಗಳ ಹಿಂದೆ ಸೀರೆಯನ್ನುಟ್ಟು ಮದುಮಗಳಂತೆ ಕಂಗೊಳಿಸಿದ ನಟಿ, ಅದರ ವಿಡಿಯೋ ಶೇರ್ ಮಾಡಿಕೊಂಡು ಇದಕ್ಕೊಂದು ಚೆಂದದ ಶೀರ್ಷಿಕೆ ಕೊಡಿ ಎಂದಿದ್ದರು.
69ನೇ ಫಿಲಂ ಫೇರ್ ಅವಾರ್ಡ್ ಬಿಡುಗಡೆ: ಹಲವು ಪ್ರಶಸ್ತಿ ಬಾಚಿಕೊಂಡ ಕಾಂತಾರ- ಫುಲ್ ಡಿಟೇಲ್ಸ್ ಇಲ್ಲಿದೆ...
ಅಷ್ಟಕ್ಕೂ ನಿಶ್ವಿಕಾ ಶೂಟಿಂಗ್‌ನಲ್ಲಿ ಬಿಟ್ಟರೆ ಜಿಮ್‌ನಲ್ಲಿ ಅತೀ ಹೆಚ್ಚು ಸಮಯ ಕಳೆಯುತ್ತಾರೆ. ಈಚೆಗಷ್ಟೇ ನಾಯಿ ಕಳೆದುಕೊಂಡು ಸುದ್ದಿಯಾಗಿದ್ದರು. ಇದಕ್ಕೆ ಕಾರಣ, ತಮ್ಮ ನೆಚ್ಚಿನ ನಾಯಿ ಮರಣಹೊಂದಿದ್ದರಿಂದ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಖಿನ್ನತೆಯಲ್ಲಿ ಇರುವುದಾಗಿ ಹೇಳಿದ್ದರು. ಇದರ ಜೊತೆಗೇನೇ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿಯೂ ನಿಶ್ವಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಫೋಟೋ ಶೇರ್ ಮಾಡಿಕೊಂಡು ನೀವೇ ಶೀರ್ಷಿಕೆ ಕೊಡಿ ಎಂದಿದ್ದಾರೆ.
ಅಂದ ಹಾಗೆ ಕನ್ನಡ ಚಿತ್ರರಂಗದ ಈ ಪ್ರಮುಖ ನಟಿ 1996ರ ಮೇ 19ರಂದು ಬೆಂಗಳೂರಿನಲ್ಲಿ ಜನಿಸಿದರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿರುವ ಇವರು, ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. 2018ರಲ್ಲಿ ತೆರೆಕಂಡ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ್ದ 'ಅಮ್ಮ ಐ ಲವ್ ಯೂ' ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು. ಅವರು ಇದಕ್ಕೂ ಮುನ್ನ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಇವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಎರಡನೇ ಚಿತ್ರ 'ಅಮ್ಮಾ ಐ ಲವ್ ಯು' ಚಿತ್ರ ಬಿಡುಗಡೆಯಾಯಿತು. ನಂತರ ಪಡ್ಡೆಹುಲಿ, ಜೆಂಟಲ್‌ಮೆನ್, ಕಾಳಿದಾಸ ಕನ್ನಡ ಮೇಷ್ಟ್ರು, ಸಖತ್, ರಾಮಾರ್ಜುನ, ಗಾಳಿಪಟ 2, ದಿಲ್ ಪಸಂದ್, ಗುರು ಶಿಷ್ಯರು ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟನೆಯ ' ಕರಟಕ ದಮನಕ' ಸಿನಿಮಾ ಮೂಲಕ ಗಮನ ಸೆಳೆದಿದ್ದರು.
ಮದ್ಯ, ಮಾಂಸವಿಟ್ಟು ಪೂಜೆ ಮಾಡಿದ ಬಳಿ ಗೆಟಪ್ಪೇ ಚೇಂಜು: ನನಗೊಂದು ಚೆಂದದ ಶೀರ್ಷಿಕೆ ಕೊಡಿ ಎಂದ ನಿಶ್ವಿಕಾ