ಸಾಕ್ಷಿ ಸಹಿತ ಸಿಕ್ಕಿಬಿದ್ದ ತಾಂಡವ್! ಈಗ್ಲೂ ನಿನಗೆ ಗೊತ್ತಾಗಿಲ್ಲ ಎಂದ್ರೆ... ಭಾಗ್ಯ ವಿರುದ್ಧ ಫ್ಯಾನ್ಸ್​ ಅಸಮಾಧಾನ

Published : Jul 13, 2024, 05:49 PM ISTUpdated : Jul 13, 2024, 05:54 PM IST
ಸಾಕ್ಷಿ ಸಹಿತ ಸಿಕ್ಕಿಬಿದ್ದ ತಾಂಡವ್! ಈಗ್ಲೂ ನಿನಗೆ ಗೊತ್ತಾಗಿಲ್ಲ ಎಂದ್ರೆ... ಭಾಗ್ಯ ವಿರುದ್ಧ ಫ್ಯಾನ್ಸ್​ ಅಸಮಾಧಾನ

ಸಾರಾಂಶ

ಸಾಕ್ಷಿ ಸಹಿತ ಸಿಕ್ಕಿಬಿದ್ದಿದ್ದಾನೆ ತಾಂಡವ್! ಇಷ್ಟಾದರೂ ಗಂಡನ ಬಗ್ಗೆ ಗೊತ್ತಾಗಲಿಲ್ಲ ಎಂದರೆ... ಎನ್ನುತ್ತಲೇ  ಭಾಗ್ಯಳ ವಿರುದ್ಧ ಸೀರಿಯಲ್​  ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.  

ತಾಂಡವ್​ ಮತ್ತು ಶ್ರೇಷ್ಠಾ ಮದುವೆಯವರೆಗೂ ಬಂದಿದ್ದಾರೆ. ನಿಶ್ಚಿತಾರ್ಥವೂ ಆಗಿದೆ, ಪ್ರೀ ವೆಡ್ಡಿಂಗ್​ ಶೂಟ್​ ಕೂಡ ಆಗಿದೆ. ಅದೇ ಇನ್ನೊಂದೆಡೆ ಪದೇ ಪದೇ ಭಾಗ್ಯಳಿಗೆ ಡಿವೋರ್ಸ್​ ಕೊಡು ಎಂದು ಪೀಡಿಸುತ್ತಿದ್ದಾನೆ ತಾಂಡವ್​. ಭಾಗ್ಯ ತನಗೆ ವಿಚ್ಛೇದನ ಕೊಡಲಿ ಎನ್ನುವ ಕಾರಣಕ್ಕೆ ಇಲ್ಲಸಲ್ಲದ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾನೆ. ಆಕೆಗೆ ಕೋಪ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಆಕೆಯನ್ನು ಪ್ರವೋಕ್​  ಮಾಡುತ್ತಿದ್ದಾರೆ. ಆದರೆ ಭಾಗ್ಯ ವಿಚ್ಛೇದನಕ್ಕೆ ಸುತರಾಂ ಒಪ್ಪುತ್ತಿಲ್ಲ.ತನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಾವು ಡಿವೋರ್ಸ್​ ಕೊಡುವುದೇ ಇಲ್ಲ ಎಂದು ಕಡ್ಡಿ ತುಂಡು ಮಾಡಿ ಹೇಳಿದ್ದಾಳೆ. ಕುಸುಮಾ ಕೂಡ ಭಾಗ್ಯಳಿಗೆ ಸಪೋರ್ಟ್​ ಮಾಡುತ್ತಿದ್ದಾಳೆ. 

ಇಷ್ಟಾದರೂ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಾಂಡವ್​ಗೆ ಇನ್ನೊಂದು ಸಂಬಂಧ ಇದೆ ಎನ್ನುವುದು ಗೊತ್ತಾಗುತ್ತಲೇ ಇಲ್ಲ.ಆತನ ಬಿಹೇವಿಯರ್​ನಲ್ಲಿ ಎಷ್ಟೊಂದು ಬದಲಾವಣೆ ಆಗಿದ್ದರೂ ಅದು ಯಾಕೆ ಎಂದು ನೋಡುವ ಗೋಜಿಗೂ ಹೋಗುತ್ತಿಲ್ಲ.  ಶ್ರೇಷ್ಠಾ ಒಳ್ಳೆಯವಳಲ್ಲ ಎನ್ನುವುದು ಭಾಗ್ಯಳಿಗೆ ತಿಳಿದಿದ್ದರೂ, ತನ್ನ ಗಂಡನನ್ನೇ ಆಕೆ ಬುಟ್ಟಿಗೆ  ಹಾಕಿಕೊಂಡಿರುವ ವಿಷಯ ತಿಳಿಯುತ್ತಿಲ್ಲ. ಶ್ರೇಷ್ಠಾಳ ಮದುವೆ ಎನ್ನುವುದು ಗೊತ್ತು. ಆದರೆ ಅದು ತಾಂಡವ್​ ಜೊತೆ ಎಂದು ಇದುವರೆಗೆ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಿಳಿದಿಲ್ಲ. ಪೂಜಾಗೆ ತಿಳಿದಿದ್ದರೂ ಅದನ್ನು ಹೇಗೆ ಹೇಳುವುದು ಎಂದು ಗೊತ್ತಾಗುತ್ತಿಲ್ಲ. ಪೂಜಾ, ಸುಂದರಿ ಮತ್ತು ಹಿತಾ ಸೇರಿ ಸದ್ಯ ಏನೋ ಪ್ಲ್ಯಾನ್​ ಮಾಡುತ್ತಿದ್ದಾರೆ. ಅದೀಗ ವರ್ಕ್​ಔಟ್​ ಆಗಿದೆ.

69ನೇ ಫಿಲಂ ಫೇರ್ ಅವಾರ್ಡ್​ ಬಿಡುಗಡೆ: ಹಲವು ಪ್ರಶಸ್ತಿ ಬಾಚಿಕೊಂಡ ಕಾಂತಾರ- ಫುಲ್​ ಡಿಟೇಲ್ಸ್​ ಇಲ್ಲಿದೆ...

ಶ್ರೇಷ್ಠಾಳ ಜೊತೆಗಿನ ಮದುವೆಗೆ ತಾಂಡವ್​ ಹಾಲ್​ ಬುಕ್​  ಮಾಡಲು ಎರಡು ಲಕ್ಷ ರೂಪಾಯಿ ಮುಂಗಡ ಹಣ ನೀಡಿದ್ದಾನೆ. ಇದರ ದಾಖಲೆ ಭಾಗ್ಯಳ ಕೈ ಸೇರಿದೆ. ಶ್ರೇಷ್ಠಾಳ ಮದುವೆಗೆ  ನೀವ್ಯಾಕೆ ಹಣ ಕೊಟ್ಟಿದ್ದು ಎಂದು ಭಾಗ್ಯ ಕೇಳಿದ್ದಾಳೆ. ತಾನು ಕೊಡಲಿಲ್ಲ ಎಂದು ಧಿಮಾಕು ಮಾಡಿದ್ದಾನೆ ತಾಂಡವ್. ಆಗ ದಾಖಲೆ ಸಹಿತ ತೋರಿಸಿ ತಾಂಡವ್​ಗೆ ಶಾಕ್​ ಕೊಟ್ಟಿದ್ದಾಳೆ ಭಾಗ್ಯ. ಇಷ್ಟಾದರೂ ಭಾಗ್ಯಳಿಗಾಗಲೀ, ಕುಸುಮಳಿಗಾಗಲೀ ತಾಂಡವ್​ ಬಗ್ಗೆ ಸಂದೇಹ ಬರಲಿಲ್ಲ ಎಂದರೆ ಇಂಥ ಪೆದ್ದು ಹೆಂಗಸರು ಇದ್ದರೂ ಪ್ರಯೋಜನ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ತನ್ನ ಗಂಡನ ಬಗ್ಗೆ ಇಷ್ಟೆಲ್ಲಾ ಸಾಕ್ಷಿ ಇದ್ದರೂ ಅವನ ಗುಣ ಗೊತ್ತಾಗಲಿಲ್ಲ ಎಂದರೆ ನಿನಗೆ ಏನು ಹೇಳುವುದು ಎಂದು ಭಾಗ್ಯಳ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. 

ಅಷ್ಟಕ್ಕೂ, ಈ ಸೀರಿಯಲ್​ ಕುರಿತು ಹೇಳುವುದಾದರೆ, ಎಲ್ಲಾ ಅಡೆತಡೆಗಳನ್ನು ಮೀರಿ ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾಳೆ. ಇಂಗ್ಲಿಷ್​ ಬರದಿದ್ದರೂ ಅಡುಗೆ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ನಿನ್ನಿಂದ ಐದು ಪೈಸೆಯೂ ದುಡಿಯಲು ಸಾಧ್ಯವಿಲ್ಲ ಎಂದು ಹಂಗಿಸುತ್ತಿದ್ದ ಗಂಡ ತಾಂಡವ್​ಗೆ ತಿರುಗೇಟು ನೀಡುವ ರೀತಿಯಲ್ಲಿ, ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವಳನ್ನು ಅಭಿನಂದಿಸಲು ಶ್ರೀನಾಥ್​ ಅವರ ಎಂಟ್ರಿಯಾಗಿದೆ. ಇಂದು ಸೀರಿಯಲ್​ಗಳು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಅದು ಮನೆಮನೆಯ ಕಥೆಗಳಾಗಿವೆ. ಇದರಿಂದ ಸ್ಫೂರ್ತಿ ಪಡೆಯುವ ಅದೆಷ್ಟೋ ಜನರು ಇದ್ದಾರೆ. ಅದಕ್ಕೆ ಉದಾಹರಣೆಯಾಗಿ ಭಾಗ್ಯಳನ್ನು ನೋಡಿ ಕೆಲವು ಮಹಿಳೆಯರು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಇದೀಗ ಮಹಿಳೆ ಮನಸ್ಸು ಮಾಡಿದರೆ ಏನು ಮಾಡಲು ಸಾಧ್ಯ ಎನ್ನುವ ಭಾಗ್ಯ ಹಲವು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾಳೆ. ಈಗೇನಿದ್ದರೂ ಗಂಡನ ಬಂಡವಾಳ ಬಯಲಾಗಬೇಕಷ್ಟೇ. 

ಮಹಾನಟಿ ಕಿರೀಟ ರಿವೀಲ್! ಕೊಠಡಿಯೊಳಕ್ಕೆ ಇಣುಕಿದ ಐವರು ಬೆಡಗಿಯರ ರಿಯಾಕ್ಷನ್​ ಹೀಗಿದೆ ನೋಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sri Raghavendra Mahathme: ರಾಯರ ಪತ್ನಿ ಸರಸ್ವತಿಯಾಗಿ ನಟಿಸುತ್ತಿರುವ ಸುಂದರಿ ಇವರೇ
Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು