ಮಹಾನಟಿ ಕಿರೀಟ ರಿವೀಲ್! ಕೊಠಡಿಯೊಳಕ್ಕೆ ಇಣುಕಿದ ಐವರು ಬೆಡಗಿಯರ ರಿಯಾಕ್ಷನ್​ ಹೀಗಿದೆ ನೋಡಿ!

By Suchethana D  |  First Published Jul 13, 2024, 4:17 PM IST

ಮಹಾನಟಿ ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಕಿರೀಟ ರಿವೀಲ್​ ಮಾಡಲಾಗಿದೆ. ಹೇಗಿದೆ ಕಿರೀಟ?
 


ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿರುವ ಮಹಾನಟಿ ಇದೀಗ,  ಗ್ರ್ಯಾಂಡ್​ ಫಿನಾಲೆಗೆ ಬಂದು ತಲುಪಿದೆ. ಇದೀಗ ಮಹಾನಟಿ ಯಾರಾಗುತ್ತಾರೆ ಎನ್ನುವ ಕುತೂಹಲ ಇದೆ. 

ಅಂದಹಾಗೆ ಈ ಷೋ ಕಳೆದ 3 ತಿಂಗಳಿನಿಂದ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಿದೆ.  ಕಳೆದ ವಾರವಷ್ಟೇ ಸೆಮಿ ಫಿನಾಲೆ ಮುಗಿದಿದ್ದು, ಐವರು ಪ್ರತಿಭಾನ್ವಿತ ನಟಿಯರು ಫಿನಾಲೆ ಹಂತ ತಲುಪಿದ್ದಾರೆ.  ಚಿತ್ರದುರ್ಗದ ಗಗನ, ಮೈಸೂರಿನ ಪ್ರಿಯಾಂಕ, ಕಾರವಾರದ ಶ್ವೇತಾ ಭಟ್​, ಮೂಡಬಿದಿರೆಯ ಆರಾಧನಾ ಭಟ್ ​ ಹಾಗೂ ತರಿಕೆರೆಯ ಧನ್ಯಶ್ರೀ ಫಿನಾಲೆ ತಲುಪಿದ ಸ್ಪರ್ಧಿಗಳು. ಸದ್ಯ ಪ್ರೇಕ್ಷಕರು  ಪ್ರಿಯಾಂಕಾ ಅವರಿಗೆ ಹೆಚ್ಚಿನ ವೋಟ್​ ನೀಡಿದ್ದಾರೆ ಎನ್ನಲಾಗುತ್ತಿದೆ.  

Tap to resize

Latest Videos

ಅನಂತ್​ ಅಂಬಾನಿ ಮದ್ವೆಯಲ್ಲಿ ರೇಷ್ಮೆಯಲ್ಲಿ ಮಿಂಚಿದ ಶ್ವಾನ 'ಹ್ಯಾಪ್ಪಿ': ಯಾರಿದು ವಿಶೇಷ ಅತಿಥಿ?

ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಕರ್ನಾಟಕದ ಕ್ರಶ್ ಆಗಿರುವ ಪ್ರಿಯಾಂಕಾ ಅವರೇ ಮೊದಲ ಮಹಾನಟಿ ವಿನ್ನರ್ ಆಗಿ ಹೊರಹೊಮ್ಮುತ್ತಾರೆ ಎಂಬುದು 7 ಕೋಟಿ ಕನ್ನಡಿಗರ ಆಸೆಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಾರು ಆ ಸ್ಥಾನ ಪಡೆಯಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು. ಇದೀಗ ಮಹಾನಟಿ ಕಿರೀಟ ರಿವೀಲ್​  ಮಾಡಲಾಗಿದೆ. ಅದನ್ನು ಒಂದು ಕೊಠಡಿಯಲ್ಲಿ ಇರಿಸಲಾಗಿದೆ. ಅದನ್ನು ಈ ಐವರೂ ಸ್ಪರ್ಧಿಗಳು ನೋಡಿ ಮುಟ್ಟಿ ಖುಷಿ ಪಡುತ್ತಿದ್ದಾರೆ. ಈ ಕಿರೀಟ ಯಾರ ಪಾಲಾಗಲಿದೆ ಎನ್ನುವುದು ಈಗಿರುವ ಕುತೂಹಲ. 

ಅಷ್ಟಕ್ಕೂ ಒಬ್ಬರಿಗಿಂತ ಒಬ್ಬರು ನಟಿಯರು ಸ್ಯಾಂಡಲ್​ವುಡ್​ ತಾರೆಯರನ್ನೂ ಮೀರಿಸುವ ರೀತಿಯಲ್ಲಿ ಪರ್ಫಾಮೆನ್ಸ್​ ಕೊಡುತ್ತಿದ್ದಾರೆ. ಅಂತಿಮವಾಗಿ ಹತ್ತು ನಟಿಯರು ಇದಾಗಲೇ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ. ಪ್ರತಿಯೊಬ್ಬ ನಟಿಯರ ಪ್ರೊಮೋ ಬಿಡುಗಡೆಯಾದಾಗಲೂ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.  ಈಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಮಹಾನಟಿಯ ಕಿರೀಟ ರಿವೀಲ್​ ಮಾಡಲಾಗಿದೆ. 

'ವಿಶೇಷ' ತಮ್ಮನಿಗೆ 20ರ ಹರೆಯದಲ್ಲಿ ಉಪನಯನ ಮಾಡಿದ 'ಪಾರು': ಇವರದ್ದು ನೋವಿನ ಕಥೆ...
 

click me!