ಶ್ರೀರಸ್ತು ಶುಭಮಸ್ತುವಿಗೆ 700ರ ಸಂಭ್ರಮ: ಹುಟ್ಟುತ್ತಲೇ ಸೀರಿಯಲ್​ನಲ್ಲಿ ಮಿಂಚ್ತಿರೋ ಈ ಪುಟಾಣಿ ಯಾರ ಮಗು?

ಹುಟ್ಟುತ್ತಲೇ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಮಿಂಚುತ್ತಿರುವ ಆ ಪುಟ್ಟ ಕಂದಮ್ಮಾ ಯಾರ ಮಗು? 700ರ ಸಂಭ್ರಮದಲ್ಲಿರೋ ಸೀರಿಯಲ್​ನಲ್ಲಿ ಮಗುವಿನ ಜೊತೆಗೆ ಆಟದ ವಿಡಿಯೋ ವೈರಲ್​
 

Shreerastu Shubhamastu serial celebrating 700th episode. Fans curious about child  suc

ಶ್ರೀರಸ್ತು ಶುಭಮಸ್ತು ಸೀರಿಯಲ್‌ ಈಗ ಕುತೂಹಲದ ಘಟ್ಟ ತಲುಪಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ.  ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ.  ಅದೇ ಇನ್ನೊಂದೆಡೆ,  ಸಮರ್ಥ್​, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ. 

ಅದೇ ಇನ್ನೊಂದೆಡೆ,  ಅತ್ತೆಯ ಮಾತು ಕೇಳಿ ತಂಗಿ ಪೂರ್ಣಿ ಹಾಗೂ ಅತ್ತೆ ತುಳಸಿ ಕಂಡರೆ ಉರಿಬೀಳುತ್ತಿದ್ದ, ಇಬ್ಬರಿಗೂ ಹಾನಿ ಉಂಟು ಮಾಡಲು ಅತ್ತೆಯ ಜೊತೆ ಸ್ಕೆಚ್​ ಹಾಕುತ್ತಿದ್ದ ದೀಪಿಕಾ ಕೂಡ ಬದಲಾಗಿದ್ದಾಳೆ. ಇನ್ನೇನು ಇದೆ ಬಾಕಿ? ಎಲ್ಲವೂ ಬಹುತೇಕ ಮುಗಿದೇ ಹೋಗಿದೆ. ಈಗೇನಿದ್ದರೂ ಶಾರ್ವರಿಯ ಕುತಂತ್ರ ಸಾಕ್ಷಿ ಸಹಿತ ಬಯಲಾಗಿ ಆಕೆ ಜೈಲುಪಾಲು ಆಗಬೇಕಿರುವುದು ಮಾತ್ರ ಉಳಿದಿದೆ. ಇದಾಗಲೇ ಕಾರು ಅಪಘಾತ ಮಾಡಿರುವುದು ಶಾರ್ವರಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಾಗಿದೆ. ಆದರೂ ಸೀರಿಯಲ್​ ಸದ್ಯ ಮುಗಿಸುವಂತೆ ಕಾಣಿಸುತ್ತಿಲ್ಲ. ಇದರ ನಡುವೆಯೇ ಈಗ 700 ಎಪಿಸೋಡ್​ ಆಗಿದೆ. ಈಗ ಏನಿದ್ದರೂ ಈ ಮನೆಯಲ್ಲಿ ಮುದ್ದು ಕಂದನದ್ದೇ ಸದ್ದು.

Latest Videos

ಮಹಾಕುಂಭದ ಕಮಾಲ್​: ಸಿಹಿಗೆ ತೆರೆಯಿತು ಅದೃಷ್ಟದ ಬಾಗಿಲು- ಹನುಮಾನನಿಂದ ಸಿಕ್ಕೇ ಬಿಟ್ಟಿತು ವರದಾನ!

ಎಲ್ಲರಿಗೂ ಈ ಕಂದ ಬೇಕು. ಮಕ್ಕಳು ಎಂದರೆ ಹಾಗೇ ಅಲ್ವಾ? ಎಂಥ ಕಟುಕನ ಮನಸ್ಸನ್ನೂ ಅರೆ ಕ್ಷಣವಾದರೂ ಬದಲಾಯಿಸುವ ತಾಕತ್ತು ಪುಟಾಣಿ ಕಂದಮ್ಮಗಳಿಗೆ ಇರುತ್ತದೆ. ಆ ಮುಗ್ಧತೆ, ಚೆಲುವಿನ ನೋಟ ಎಂಥವರನ್ನೂ ಮರಳು ಮಾಡುವುದು ಇದೆ. ಅದೇ ರೀತಿ ತುಳಸಿಯ ಮಗಳಾಗಿ ಬಂದಿರುವ ಪುಟ್ಟ ಕಂದನ ನೋಟಕ್ಕೆ ಸೀರಿಯಲ್​ನಲ್ಲಿ ಮಾತ್ರವಲ್ಲದೇ ವೀಕ್ಷಕರೂ ಫಿದಾ ಆಗಿದ್ದಾರೆ. ಶೂಟಿಂಗ್​ ಸೆಟ್​ನಲ್ಲಿ ಒಂದು ಮಗುವನ್ನು ಸಮಾಧಾನ ಮಾಡುವುದು ಬಹಳ ಕಷ್ಟಕರವಾದದ್ದೇ. ಅಲ್ಲಿನ ಲೈಟು, ಗಲಾಟೆ, ಅಪರಿಚಿತ ಮುಖ ಎಲ್ಲವನ್ನೂ ನೋಡುವ ಮಗು ಸುಮ್ಮನೇ ಇರುವುದು ತುಂಬಾ ಕಷ್ಟ. ಆದರೆ ಅದನ್ನು ಸಮಾಧಾನಪಡಿಸಿ ಶೂಟಿಂಗ್​ ಮಾಡುವುದು ಸವಾಲಿನ ಕೆಲಸವೇ.

ಇದೀಗ ತುಳಸಿಯ ಮಗಳಾಗಿ ಬಂದಿರುವ ಮುದ್ದು ಕಂದನ ಮೇಲೆ ಎಲ್ಲರ ಕಣ್ಣುನೆಟ್ಟಿದೆ. ಇದರ ಜೊತೆಗಿನ ಆಟ-ತುಂಟಾದ ಕ್ಷಣಗಳನ್ನು ದೀಪಿಕಾ ಪಾತ್ರಧಾರಿ, ನಟಿ ದರ್ಶಿನಿ ಡೆಲ್ಟಾ ಶೇರ್​ ಮಾಡಿಕೊಂಡಿದ್ದಾರೆ. ಎಲ್ಲರೂ ಮಗುವನ್ನು ಹೇಗೆ ಆಡಿಸುತ್ತಾರೆ, ಆ ಮಗು ಶೂಟಿಂಗ್​ ಸೆಟ್​ನಲ್ಲಿ ಹೇಗೆ ಸೈಲಂಟ್​ ಆಗಿದೆ. ಎಲ್ಲರ ಬಳಿಯೂ ಎಷ್ಟೊಂದು ಸಲೀಸಾಗಿ ಹೊಂದಿಕೊಂಡಿದೆ ಎನ್ನುವುದನ್ನು ನೋಡಬಹುದಾಗಿದೆ. ಇದೀಗ ಈ ಮಗು ಯಾರು ಎಂಬ ಬಗ್ಗೆ ನೆಟ್ಟಿಗರು ತಡಕಾಡುತ್ತಿದ್ದಾರೆ. ಸಿಕ್ಕದ್ದೇ ಛಾನ್ಸ್ ಎಂದುಕೊಂಡೋ ಏನೋ, ಒಬ್ಬರು ಇದು ತಮ್ಮ ಪಕ್ಕದ ಮನೆಯ ಮಗು ಎಂದಿದ್ದಾರೆ. ಅದಕ್ಕೆ ಹಲವಾರು ಮಂದಿ ರಿಪ್ಲೈ ಮಾಡಿದ್ದು, ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆದರೆ ಅದಕ್ಕೆ ಯಾವುದಕ್ಕೂ ಅವರು ಉತ್ತರ ಕೊಟ್ಟಿಲ್ಲ. ಒಟ್ಟಿನಲ್ಲಿ ಹುಟ್ಟಿ ಕೆಲವೇ ದಿನಗಳಲ್ಲಿ ಮಗು ಸೀರಿಯಲ್​ನಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಅದು ತುಂಬಾ ಹಠ ಮಾಡದ ಕಾರಣ ಅಲ್ಲಿಯೇ ಇರುವ ಯಾರದ್ದೋ ಮಗುವಿರಬೇಕು ಎಂದೇ ನೆಟ್ಟಿಗರು ಊಹಿಸುತ್ತಿದ್ದಾರೆ. ಅಷ್ಟಕ್ಕೂ ಮಗು ಯಾರದ್ದೇ ಆಗಿದ್ದರೂ ಅದರ ಅಮ್ಮನನ್ನೂ ಶೂಟಿಂಗ್​ ಸೆಟ್​ಗೆ ಕರೆದುಕೊಂಡು ಬರಲೇಬೇಕು. ಅವರನ್ನು ಒಮ್ಮೆಯಾದರೂ ತೋರಿಸಿ ಎನ್ನುವುದು ಅಭಿಮಾನಿಗಳ ಕೋರಿಕೆ. 

'ಯಜಮಾನ' ಸೀರಿಯಲ್​ ಮೊದಲರಾತ್ರಿ ಶೂಟಿಂಗ್​ನಲ್ಲಿ ತೆರೆಮರೆಯಲ್ಲಿ ನಡೆದದ್ದೇನು? ವಿಡಿಯೋ ವೈರಲ್​

 

vuukle one pixel image
click me!