ಸುವರ್ಣ ಗೃಹಮಂತ್ರಿ ಸಾರಥಿಯಾಗಿ ಕಿರುತೆರೆಗೆ ನಟ ರವಿಶಂಕರ್ 'ಪಯಣ' ಪ್ರಾರಂಭ!

By Shriram Bhat  |  First Published Jul 18, 2024, 6:23 PM IST

ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು 'ಥ್ಯಾಂಕ್ ಯು' ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ..


ಮನರಂಜನಾ ವಾಹಿನಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನದ ಮನರಂಜನೆಯಾಗಿ ಆರಂಭವಾದ 'ಸುವರ್ಣ ಗೃಹಮಂತ್ರಿ' ಎಂಬ ಹೊಸ ಬಗೆಯ ರಿಯಾಲಿಟಿ ಶೋ ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇದೀಗ ಮತ್ತಷ್ಟು ಮೆರುಗು ನೀಡಲು ಇದೇ ಮೊದಲ ಬಾರಿಗೆ ಸುವರ್ಣ ವಾಹಿನಿಯ ಮೂಲಕ ಖ್ಯಾತ ನಟ ರವಿಶಂಕರ್ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. 'ಪಯಣ' ಖ್ಯಾತಿಯ ನಟ ರವಿಶಂಕರ್ ಇದೀಗ ಕಿರುತೆರೆ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಇನ್ಮುಂದೆ 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಟ ರವಿಶಂಕರ್  ಹೊರಲಿದ್ದಾರೆ. ವರ್ಷಗಳ ಬಳಿಕ ನಟ ರವಿ ಶಂಕರ್ ಅವರನ್ನು ಗೃಹಮಂತ್ರಿ ಪ್ರೋಮೋದಲ್ಲಿ ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತ ಪಡಿಸಿದ್ದು, 'ಸುವರ್ಣ ಗೃಹಮಂತ್ರಿ'ಯ ಸಂಚಿಕೆಯಲ್ಲಿ ರವಿಶಂಕರ್ ರವರ ನಿರೂಪಣೆಯನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.

Tap to resize

Latest Videos

ದರ್ಶನ್ ಬಗ್ಗೆ ಒಂದಿಷ್ಟು ಹೇಳಿದ ಅನು ಪ್ರಭಾಕರ್, ಇನ್ನೊಂದಿಷ್ಟು ಹೇಳಲ್ಲ ಅಂದಿದ್ಯಾಕೆ?

ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು 'ಥ್ಯಾಂಕ್ ಯು' ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೋನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದ ಶೈಲಿಯಾಗಿದೆ.

ಕೆಲವೊಂದನ್ನು ಲೈಫಲ್ಲಿ ಕಳ್ಕೊಂಡಾಗ ದೇವರು ಮತ್ತಿನ್ನೇನೋ ಕೊಡ್ತಾನೆ ಎಂದಿದ್ಯಾಕೆ ಚಂದನ್ ಶೆಟ್ಟಿ?

ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಇನ್ಮುಂದೆ ನಟ ರವಿಶಂಕರ್ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯನ್ನು ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ. ಈ ಶೋ ಇದೇ ಸೋಮವಾರದಿಂದ ಶನಿವಾರ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ.

click me!