ಜೀ ಕುಟುಂಬ ಅವಾರ್ಡ್ ಫಂಕ್ಷನ್ನಲ್ಲಿ ಸಿಹಿಯನ್ನು ಅಪ್ಪಿ ಮುದ್ದಾಡಿ ಭಾವುಕರಾಗಿದ್ದಾರೆ ನಟ ರವಿಚಂದ್ರನ್. ಅವರು ಹೇಳಿದ್ದೇನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್ ಟಿಆರ್ಪಿಯಲ್ಲಿ ಉತ್ತಮ ರೇಟಿಂಗ್ ಪಡೆದುಕೊಳ್ಳುವುದಕ್ಕೆ ಬಹುಮುಖ್ಯ ಕಾರಣ, ಪುಟಾಣಿ ಸಿಹಿಯ ನಟನೆ ಎಂದರೂ ಸುಳ್ಳಲ್ಲ. ಐದು ವರ್ಷದ ಪುಟಾಣಿ, ತನ್ನ ಪಾತ್ರವನ್ನು ಅರಗಿಸಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ನಿಜ ಜೀವನದಲ್ಲಿಯಾದರೆ ನೋವು, ಖುಷಿ, ನಲಿವು, ದುಃಖ, ಅಳು ಎಲ್ಲವೂ ನ್ಯಾಚುರಲ್ ಆಗಿ ಬಂದುಬಿಡುತ್ತದೆ. ಆದರೆ ಶೂಟಿಂಗ್ ಸಮಯದಲ್ಲಿ ನಟನೆ ಮಾಡುವುದು ಎಂದರೆ ಅದಕ್ಕೆ ಬಹಳ ಟ್ಯಾಲೆಂಟ್ ಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲ ಭಾವನೆಗಳನ್ನೂ ತೋರಿಸುವುದು ಎಂದರೆ ಬಹುಶಃ ಇದು ಹಿಂದಿನ ಜನ್ಮದ ಟ್ಯಾಲೆಂಟೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಎಲ್ಲರನ್ನೂ ಆವರಿಸಿಕೊಂಡಿದ್ದಾಳೆ ಸಿಹಿ ಅರ್ಥಾತ್ ರಿತು ಸಿಂಗ್. ಸೀತಾರಾಮ ಸೀರಿಯಲ್ನಲ್ಲಿ ಹಲವಾರು ಬಾರಿ ಈಕೆ ಮಾಡುವ ಅಭಿನಯಕ್ಕೆ ವೀಕ್ಷಕರೇ ಕಣ್ಣೀರಾಗುತ್ತಾರೆ. ಇದು ಸೀರಿಯಲ್ ಎಂದು ತಿಳಿದರೂ ನಿನ್ನ ಪಾತ್ರ ನೋಡಿ ಕಣ್ಣೀರು ತಡೆದುಕೊಳ್ಳಲು ಆಗಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಮೆಂಟ್ ಹಾಕುತ್ತಲೇ ಇರುತ್ತಾರೆ. ಅಷ್ಟು ನೈಜ ಅಭಿನಯ ಈಕೆಯದ್ದು.
ಅಂದಹಾಗೆ, ಸಿಹಿಯ ನಿಜವಾದ ಹೆಸರು ರೀತು ಸಿಂಗ್. ಈಕೆ ನೇಪಾಳದವಳು. ನೇಪಾಳ ಮೂಲದ ರಿತು, ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್ ಇಷ್ಟು ದಿನ ಇದ್ದ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್ನಲ್ಲಿ ಈಕೆಗೆ ಅಪ್ಪ ಇರಲಿಲ್ಲಲ್ಲ. ಸೀತಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್ ಲೈಫ್ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್ ಲೈಫ್ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. ಬೆಂಗಳೂರಿಗೆ ಬಂದ ಸಮಯದಲ್ಲಿ ಉಳಿಯಲು ಜಾಗವೇ ಇರಲಿಲ್ಲ, ಬೀದಿ ಪಾಲಾಗಿದ್ದೆವು ಎಂದು ರಿತು ಅಮ್ಮ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು.
undefined
ಸೀರಿಯಲ್ನಲ್ಲಿ ಜೀವ ಕಳಕೊಂಡು ಪಾತ್ರ ಮುಗಿಸಿದ ಪುಟ್ಟಕ್ಕನ ಮಗಳು ಸ್ನೇಹಾ ಸೀಕ್ರೇಟ್ ಹೇಳೇಬಿಟ್ರು!
ಇದೀಗ ಜೀ ಕನ್ನಡದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿರುವ ನಟ ರವಿಚಂದ್ರನ್ ಅವರು, ರಿತುಳನ್ನು ನೋಡಿ ಭಾವುಕರಾಗಿದ್ದಾರೆ. ಪುಟಾಣಿ ರಿತು ರವಿಚಂದ್ರನ್ ಸರ್ ಎಂದು ಹೋಗಿ ಅವರ ಸೊಂಟ ಏರಿದ್ದಾಳೆ. ಪುಟಾಣಿಯನ್ನು ಅಪ್ಪಿ ಮುದ್ದಾಡಿದ ರವಿಚಂದ್ರನ್ ಅವರು, ಇವಳನ್ನು ನೋಡಿದಾಗಲೆಲ್ಲಾ ಅಪ್ಪ-ಅಮ್ಮನ ನೆನಪಾಗುತ್ತದೆ. ನನ್ನ ಅಪ್ಪ-ಅಮ್ಮನನ್ನು ಜೀವಂತವಾಗಿ ತರುತ್ತಾಳೆ ಇವಳು ಎಂದು ಭಾವುಕರಾಗಿದ್ದಾರೆ.
ಇದಕ್ಕೂ ಮುನ್ನ ಯುಕೆಜಿ ಓದುತ್ತಿರುವ ಸಂದರ್ಭದಲ್ಲಿ ಡ್ರಾಮಾ ಜ್ಯೂನಿಯರ್ಸ್ನಲ್ಲಿ ಪಾಲ್ಗೊಂಡಿದ್ದಳು. ನೇಪಾಳದ ಈ ಬಾಲೆ ಕನ್ನಡ ಕಲಿತು ಮಾಡಿದ್ದನ್ನು ಕಂಡು ರವಿಚಂದ್ರನ್ ಅವರೂ ನಿಬ್ಬೆರಗಾಗಿದ್ದರು. ನೇಪಾಳದ ಹಳ್ಳಿಯಾದರೂ ಅಪ್ಪಟ ಕನ್ನಡದ ಮೈಸೂರು ಪರಿಸರದಲ್ಲಿ ಕನ್ನಡ ಕಲಿತು ರವಿಚಂದ್ರನ್ ಡೈಲಾಗ್ ಹೇಳೋ ಮಟ್ಟಿಗೆ ಈ ಪುಟಾಣಿ ಪ್ರತಿಭೆ ಮೆರೆದಿದ್ದಾಳೆ ಎಂದು ರವಿಚಂದ್ರನ್ ಶ್ಲಾಘಿಸಿದ್ದರು. ನನಗೆ ರವಿಚಂದ್ರನ್ ಸರ್ ಡೈಲಾಗ್ ಅಂದ್ರೆ ತುಂಬಾ ಇಷ್ಟ. ಅದನ್ನು ಬಿಟ್ಟರೆ ಸಮೋಸಾ ತಿನ್ನೋದು ಇಷ್ಟ ಎಂದು ಎಲ್ಲರನ್ನೂ ಮಂತ್ರಮುಗ್ಧವಾಗಿಸಿದ್ದಳು. ಈಗಲೂ ರವಿಚಂದ್ರನ್ ಅವರು ರಿತು ಸಿಂಗ್ಳನ್ನು ಅಷ್ಟೇ ಕೊಂಡಾಡಿ ಮುದ್ದಾಡಿದ್ದಾರೆ.
ಸಾಮಾನ್ಯ ಜನರಿಗೂ ಎಂಟ್ರಿ ಕೊಟ್ಟ ಬಿಗ್ಬಾಸ್! ಮಾನಸರನ್ನು ನೋಡಿ ಬಂದವರು ಹೀಗೆಲ್ಲಾ ಹೇಳೋದಾ?