ಅವಳು ನನ್ನ ಹೋಮ್​ವರ್ಕ್​ ಮಾಡ್ತಿದ್ಲು... ಕಾಲೇಜ್​ನ ಕ್ರಷ್​ ಒಂದಾ, ಎರಡಾ... ಚಂದನ್​ ಶೆಟ್ಟಿ ಓಪನ್​ ಮಾತು

By Suchethana D  |  First Published Jul 17, 2024, 4:19 PM IST

ಕಾಲೇಜಿನ ಕ್ರಷ್​, ಟೀಚರ್​ಗೆ ಲೈನ್​ ಹೊಡಿತಾ ಇದ್ದದ್ದು, ಹುಡುಗಿ ಕೈಯಲ್ಲಿ ಹೋಮ್​ವರ್ಕ್​ ಮಾಡಿಸಿಕೊಳ್ತಿರೋದು... ಆ ದಿನಗಳನ್ನು ನೆನೆದು ನಟ ಚಂದನ್ ಶೆಟ್ಟಿ ಹೇಳಿದ್ದೇನು? 
 


ಗಾಯಕ, ನಟ ಚಂದನ್​ ಶೆಟ್ಟಿ ಕಳೆದೊಂದು ತಿಂಗಳಿನಿಂದ ತುಂಬಾ ಸದ್ದು ಮಾಡುತ್ತಿರುವುದಕ್ಕೆ ಕಾರಣ, ನಿವೇದಿತಾ ಗೌಡ ಮತ್ತು ಅವರ ವಿಚ್ಛೇದನ ಹಿನ್ನೆಲೆಯಲ್ಲಿ. ಯಾವುದೇ ಗಲಾಟೆ, ಗೊಂದಲಕ್ಕೆ ಆಸ್ಪದ ಕೊಡದೇ ಡಿವೋರ್ಸ್​ ಪಡೆದುಕೊಂಡಿರುವ ಈ ದಂಪತಿಯನ್ನು ಹಲವರು ಶ್ಲಾಘಿಸುತ್ತಿದ್ದರೂ, ಚಂದನ್​  ಶೆಟ್ಟಿ ಪರವೇ ಬಹುತೇಕ ಮಂದಿ ನಿಂತಿರುವುದೂ ಸಾಕ್ಷಿಯಾಗಿದೆ.  ಡಿವೋರ್ಸ್​ ಬಳಿಕವೂ ಮಾಜಿ ಪತ್ನಿಯ ಬಗ್ಗೆ ಅದೇ ಗೌರವ ಉಳಿಸಿಕೊಂಡು, ನಿವೇದಿತಾರನ್ನು ಬಹುವಚನದಿಂದಲೇ ಸಂಬೋಧಿಸುತ್ತಾ ಆಕೆಯ ಬಗ್ಗೆ ಕಾಳಜಿ ತೋರುವುದರಿಂದಲೂ ಚಂದನ್​  ಶೆಟ್ಟಿ ಅಭಿಮಾನಿಗಳಿಗೆ ಮತ್ತಷ್ಟು ಆಪ್ತರಾಗುತ್ತಿದ್ದಾರೆ. ಇದರ ನಡುವೆಯೇ, ಚಂದನ್​ ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಇದೇ 19ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ದುಬೈನಲ್ಲಿ ನಡೆದ ಚಿತ್ರದ ಪ್ರೀಮಿಯರ್ ಷೋಗೆ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿದೆ. ಇದಾಗಲೇ ಚಿತ್ರದ  ಟೀಸರ್, ಟ್ರೇಲರ್​ ಹಾಗೂ ಹಾಡುಗಳು ಸಿನಿ ಪ್ರಿಯರ ಗಮನ ಸೆಳೆದಿದೆ. ಅರುಣ್ ಅಮುಕ್ತ ರಚಿಸಿ-ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಚಂದನ್​ ಶೆಟ್ಟಿ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ತಮ್ಮ ಸಿನಿಮಾ ಭವಿಷ್ಯ ಇದರಲ್ಲಿ ಅಡಗಿದೆ. ಈ ಚಿತ್ರ ಯಶಸ್ವಿಯಾದರೆ, ನಾಯಕನ ದಾರಿ ಹಿಡಿಯುವೆ, ಇಲ್ಲದೇ ಹೋದರೆ ಹಾಡಿನಲ್ಲಿಯೇ ಮುಂದುವರೆಯುವೆ ಎಂದು ಇದಾಗಲೇ ಸಂದರ್ಶನಗಳಲ್ಲಿ ಚಂದನ್​ ಶೆಟ್ಟಿ ಹೇಳಿದ್ದಾರೆ. ಆದರೆ ದುಬೈನಲ್ಲಿ ಅನಿವಾಸಿ ಕನ್ನಡಿಗರು ಈ ಚಿತ್ರಕ್ಕೆ ತೋರಿರುವ ಪ್ರತಿಕ್ರಿಯೆಯಿಂದ ಚಿತ್ರ ಸಕ್ಸಸ್​  ಆಗುವ ಭರವಸೆಯಲ್ಲಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಅಮರ್, ಭಾವನಾ, ಮನಸ್ವಿ, ಸಿಂಚನಾ ಮತ್ತು ಮನೋಜ್ ಮುಂತಾದವರು ನಟಿಸಿದ್ದಾರೆ. 

Tap to resize

Latest Videos

ಡಿವೋರ್ಸ್​ ಬಳಿಕ ಕೋರ್ಟ್​ನಲ್ಲಿ ನಿವೇದಿತಾರ ಕೈಹಿಡಿದು ಬಂದದ್ದೇಕೆ? ಕಾರಣ ಕೊಟ್ಟ ಚಂದನ್​ ಶೆಟ್ಟಿ
 
ಈ ಚಿತ್ರದ ಕುರಿತು ಚಂದನ್​ ಶೆಟ್ಟಿಯವರು Kannada Filmistry ಯೂಟ್ಯೂಬ್​ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ತಮ್ಮ ಕಾಲೇಜಿನ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಕಾಲೇಜಿನ ಕ್ರಷ್​, ಕಾಲೇಜಿಗೆ ಬಂಕ್​ ಹಾಕುತ್ತಿದ್ದುದು, ಹುಡುಗಿಯ ಕೈಯಲ್ಲಿ ಹೋಮ್​ ವರ್ಕ್​ ಮಾಡಿಸುತ್ತಿದ್ದುದು ಎಲ್ಲವನ್ನೂ ಮನಸು ಬಿಚ್ಚಿ ಮಾತನಾಡಿದ್ದಾರೆ. ಟೀಚರ್ಸ್​ಗೆ ಲೈನ್​ ಹೊಡೆದದ್ದು ಎಲ್ಲಾ ಇಲ್ಲ, ಆದ್ರೆ ಚೆನ್ನಾಗಿರೋ ಟೀಚರ್ಸ್​ ಕ್ಲಾಸ್​  ಮಿಸ್ಸೇ ಮಾಡಿಕೊಳ್ತಿರಲಿಲ್ಲ. ಮುಂದಿನ ಸೀಟಲ್ಲೇ ಕುಳಿತುಕೊಂಡು ಎಷ್ಟೇ ಬೋರಾದ್ರೂ ಫುಲ್​ ಕ್ಲಾಸ್​ ಅಟೆಂಡ್​ ಆಗ್ತಿದ್ದೆ ಎಂದಿದ್ದಾರೆ. ಕಾಲೇಜಿನ ಟೈಂನ ಕ್ರಷ್​ ಬಗ್ಗೆ ಕೇಳಿದಾಗ ಚಂದನ್ ಶೆಟ್ಟಿಯವರು ಜೋರಾಗಿ ನಗುತ್ತಾ ಒಂದೋ ಎರಡೋ ಸಾರ್​... ಹೇಳೋಕೇ ಆಗಲ್ಲ. ಅಷ್ಟು ಮಂದಿ ಇದ್ರು ಎಂದಿದ್ದಾರೆ.

ಇನ್ನು ಕಾಲೇಜಿನಲ್ಲಿ ಕಾಪಿ ಹೊಡೆದಿರುವುದು, ಹುಡುಗಿಯರಿಗೆ ಪರೀಕ್ಷೆ ಟೈಂನಲ್ಲಿ ಏನಾದ್ರೂ ಹೇಳಿಕೊಟ್ಟಿದ್ದೀರಾ ಎನ್ನೋ ಪ್ರಶ್ನೆಗೆ ಹಾಗೆಲ್ಲಾ ಮಾಡಿಲ್ಲ.  ಆದ್ರೆ ಪಾಪ ಒಬ್ಬ ಹುಡುಗಿ ನನ್ನ ಹೋಮ್​ವರ್ಕ್​ ಎಲ್ಲಾ ಮಾಡೋಳು. ಒಬ್ಬರದ್ದು ಮಾಡೋದೇ ಕಷ್ಟ. ಅವಳು ನನ್ನ ಹೋಮ್​ವರ್ಕೂ ಮಾಡುತ್ತಿದ್ಲು... ನನ್ನ ಮೇಲೆ ಕ್ರಷ್​ ಇತ್ತೋ ಗೊತ್ತಿಲ್ಲ, ಒಟ್ನಲ್ಲಿ ನನ್ನ ಹೋಮ್​ವರ್ಕ್​ ಆಗ್ತಿತ್ತು ಎಂದು ನಕ್ಕಿದ್ದಾರೆ ಚಂದನ್​ ಶೆಟ್ಟಿ. ಕಾಲೇಜಿನಲ್ಲಿ ಫೇಲ್​ ಆಗಿದ್ದು ಇದೆಯೋ ಎಂದಾಗ, ಒಂದು ವಿಷಯದಲ್ಲಿ ಫೇಲಾಗಿದ್ದಕ್ಕೇ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇಲ್ಲಾ ಅಂದ್ರೆ ಎಲ್ಲೋ ಒಂದು ನೌಕರಿ ಮಾಡಿಕೊಂಡು ಇರ್ತಾ ಇದ್ದೆ ಎಂದಿದ್ದಾರೆ. ಇದೇ ವೇಳೆ ಮೊದಲಿನಿಂದಲೂ ನೀನು  ಗಾಯಕ ಆಗುತ್ತಿಯಾ ಎಂದು ಹಲವರು ಭವಿಷ್ಯ ನುಡಿದಿದ್ದನ್ನೂ ಸ್ಮರಿಸಿಕೊಂಡಿದ್ದಾರೆ. 
ಡಿವೋರ್ಸ್​ಗೆ ಕಾರಣ ಆ 3ನೇ ವ್ಯಕ್ತಿಯೇ... ಅವ್ರು... ತಿಂಗಳ ಬಳಿಕ ಮನದಾಳದ ಮಾತು ತೆರೆದಿಟ್ಟ ಚಂದನ್​ ಶೆಟ್ಟಿ

click me!