ಕೊನೆಗೂ ಸಿಹಿಯ ರಹಸ್ಯ ದೇಸಾಯಿ ಕುಟುಂಬಕ್ಕೆ ಗೊತ್ತಾಗೋಯ್ತು! ಮುಂದೇನು?

By Suchethana D  |  First Published Jul 17, 2024, 11:55 AM IST

ಇಲ್ಲಿಯವರೆಗೆ ದೇಸಾಯಿ ಕುಟುಂಬಕ್ಕೆ ಅರಿವು ಇಲ್ಲದೇ ಇದ್ದ ಸಿಹಿಯ ರಹಸ್ಯವೊಂದು ಗೊತ್ತಾಗಿ ಹೋಗಿದೆ. ಏನದು?
 


ಸೀತಾ ಗಂಡನ ಮನೆ ಸೇರಿದ್ದಾಳೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗಂಡ, ತನ್ನ ಮಗಳನ್ನು ಹೆತ್ತ ಮಗುವಿಗಿಂತಲೂ ಹೆಚ್ಚಾಗಿ ಪ್ರೀತಿಸಿ ಅಪ್ಪನ ಸ್ಥಾನದಲ್ಲಿ ಇರಿಸಿರುವ  ರಾಮ್​, ಚಿಕ್ಕಿ ಭಾರ್ಗವಿ ಒಬ್ಬಳನ್ನು ಬಿಟ್ಟರೆ ಮನೆಯವರೆಲ್ಲರ ಅದಮ್ಯ ಪ್ರೀತಿ... ಇನ್ನೇನು ಬೇಕು ಸೀತಾಳ ಜೀವನಕ್ಕೆ? ಎಲ್ಲವೂ ಸಿಕ್ಕಿದೆ. ಅಷ್ಟಕ್ಕೂ ಸೀತಾ ಮತ್ತು ರಾಮರ ಮದುವೆ ಎಲ್ಲಾ ಅಡೆತಡೆಗಳನ್ನೂ ಮೀರಿ  ಸುಸೂತ್ರವಾಗಿ  ನಡೆದಿದೆ. ಕೊನೆಯವರೆಗೂ ಇದ್ದ ಆತಂಕ ಮರೆಯಾಗಿದೆ. ಸೀತಾಳ ಜೊತೆ ಸಿಹಿಯನ್ನೂ ಮನೆ ತುಂಬಿಸಿಕೊಂಡಾಗಿದೆ.  ಸಿಹಿಯನ್ನು ಎಲ್ಲರೂ ಮನೆತುಂಬಿಸಿಕೊಂಡಿರುವ ಪರಿಯೇ ಖುಷಿ ಕೊಡುವಂಥದ್ದು. ಸಿಹಿಗೂ ಪುಟ್ಟ ಸೇರು ಇಟ್ಟು ಎಲ್ಲರೂ ಪ್ರೀತಿಯಿಂದ ಮನೆ ತುಂಬಿಸಿಕೊಂಡಿದ್ದಾರೆ. ಇದಕ್ಕೆ ಭಾರ್ಗವಿ ಅಡ್ಡಗಾಲು ಹಾಕಲು ನೋಡಿದ್ದಾಳೆ. ಇದು ಸರಿಯಲ್ಲ ಎಂದಿದ್ದಾಳೆ. ಆಗ ದೇಸಾಯಿ ತಾತಾ, ಸೇರು ಒದ್ದು ಬರುವ ಹಿಂದಿರುವ ಶಾಸ್ತ್ರ ಹೇಳಿದ್ದಾರೆ. ಈ ಸೇರಿನಲ್ಲಿ ಇರುವ ಅಕ್ಕಿ ಬೀರಿದಂತೆ ಮನೆಗೆ ಬರುವಾಕೆ ಸಂತೋಷವನ್ನು ತರಲಿ ಎನ್ನುವುದೇ ಆಗಿದೆ. ಅದೇ ಸಂತೋಷ ಈಗ ಸೀತಾ ಜೊತೆ ಸಿಹಿಯ ರೂಪದಲ್ಲಿಯೂ ಬರುತ್ತಿದೆ ಎಂದಿದ್ದಾನೆ.

ಹೀಗಿರುವ ಸಂದರ್ಭದಲ್ಲಿ ಸಿಹಿಯ ಗುಟ್ಟೊಂದು ಮನೆಯವರಿಗೆ ತಿಳಿದು ಬಿಟ್ಟಿದೆ. ಹಾಗಂತ ಅದು ಸಿಹಿಯ ಹುಟ್ಟಿನ ಗುಟ್ಟಲ್ಲ. ಈ ಗುಟ್ಟನ್ನು ಇನ್ನೂ ಗುಟ್ಟಾಗಿಯೇ ಇಡಲಾಗಿದೆ. ಮುಂದೆ ಈ ಗುಟ್ಟೇ ಅದೇನೋ ಆವಾಂತರ ಸೃಷ್ಟಿಸಬಹುದು ಎನ್ನುವುದಕ್ಕೆ ಮೂಲ ಎಂಬಂತೆ ಇದುವರೆಗೆ ಸಿಹಿಯ ಹುಟ್ಟಿನ ರಹಸ್ಯ ಇದುವರೆಗೆ ಸೀತಾ ಬಾಯಿ ಬಿಡಲಿಲ್ಲ. ಇಡೀ ಸೀರಿಯಲ್​ನಲ್ಲಿ ಇರುವುದು ಈಗ ಇದೊಂದೇ ರಹಸ್ಯ. ಇಲ್ಲಿಯವರೆಗೆ ಸೀತಾ ಮತ್ತು ರಾಮರ ಮದುವೆಯೇ ಸೀರಿಯಲ್​ ಬಂಡವಾಳ ಎಂದುಕೊಳ್ಳಲಾಗಿತ್ತು. ಆದರೆ ಅದು ಮುಗಿದು ಹೋಗಿದೆ.  ಈಗ ಏನಿದ್ದರೂ ಸಿಹಿಯ ಹುಟ್ಟಿನ ರಹಸ್ಯವೊಂದೇ ಬಾಕಿ ಇರುವುದು. 

Tap to resize

Latest Videos

ಎಲ್ಲೋ ಜೋಗಪ್ಪ... ಎಂದ 'ಮಹಾನಟಿ' ವಿಜೇತೆ ಪ್ರಿಯಾಂಕಾ! ದರ್ಶನ್​ ಬೆಸ್ಟ್​ ಫ್ರೆಂಡ್​ ಮಗಳ ರೋಚಕ ಪಯಣ ಇಲ್ಲಿದೆ...

ಆದರೆ ಇದೀಗ ಇನ್ನೊಂದು ರಹಸ್ಯ ಬಯಲಾಗಿದೆ. ಅದುವೇ ಸಿಹಿಯ ಶುಗರ್​ ರಹಸ್ಯ. ಹುಟ್ಟಿನಿಂದಲೂ ಮಧುಮೇಹದಿಂದ ಬಳಲುತ್ತಿದ್ದಾಳೆ ಸಿಹಿ. ಇದಕ್ಕಾಗಿ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಾಳೆ. ಇದೀಗ ಸೀರಿಯಲ್​ನಲ್ಲಿ ಸಿಹಿಗೆ ಹುಟ್ಟುಹಬ್ಬದ ಸಂಭ್ರಮ. ಕೇಕ್​ ಎಂದರೆ ಅವಳಿಗೆ ಇಷ್ಟನಾ ಎಂದು ಕೇಳಲಾಗುತ್ತದೆ. ಅದಕ್ಕೆ ಸಿಹಿ, ನನಗೆ ಇಷ್ಟನೇ, ಆದರೆ ವರ್ಷಕ್ಕೆ ಒಮ್ಮೆ ಮಾತ್ರ ತಿನ್ನುವೆ ಎಂದಿದ್ದಾಳೆ. ಅದ್ಯಾಕೆ ಎಂದು ಮನೆಯವರು ಕೇಳಿದಾಗ ತನಗೆ ಮಧುಮೇಹ ಇರುವ ವಿಷಯವನ್ನು ಅವರು ಹೇಳಿದ್ದಾಳೆ. ಇದನ್ನು ಕೇಳಿ ಎಲ್ಲರಿಗೂ ಶಾಕ್​ ಆಗಿದೆ.

ಆದರೆ ಭಾರ್ಗವಿ ಮಾತ್ರ ಮುಂದೇನೋ ಸಂಚು ಮಾಡುವುದನ್ನು ಕಾಯುವಂತೆ ಕಾಣುತ್ತಿದೆ. ಸೀತಾಮತ್ತು ರಾಮ್​ರನ್ನು ದೂರ ಮಾಡುವ ಆಕೆಯ ಶತಪ್ರಯತ್ನ ಫೇಲ್​  ಆಗಿದೆ. ಇದಾದ ಬಳಿಕ ಸಿಹಿಯನ್ನು ಮುಂದಿಟ್ಟುಕೊಂಡು ತಾಯಿ-ಮಗಳನ್ನು ದೂರ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಳು. ಅದು ಕೂಡ ಸಕ್ಸಸ್​ ಆಗಲಿಲ್ಲ. ರಾಮ್​ನಂಥ ಅಪ್ಪನನ್ನು ಪಡೆದಿರುವಾಗ ಸಿಹಿಯನ್ನು ಅಮ್ಮನಿಂದ ದೂರ ಮಾಡಲು ಸಾಧ್ಯವೇ ಆಗಲಿಲ್ಲ. ಆದ್ದರಿಂದ ಈಗ ಸಿಹಿಗೆ ಮಧುಮೇಹ ಇರುವ ವಿಷಯವನ್ನೇ ಮುಂದಿಟ್ಟುಕೊಂಡು ಇನ್ಯಾವ ರೀತಿಯಲ್ಲಿ ಆಟ ಆಡುತ್ತಾಳೆ ಎನ್ನುವುದನ್ನು ನೊಡಬೇಕಿದೆ. 

ಆರ್ಯವರ್ಧನ್​ ಗುರೂಜಿ, ಪ್ರಥಮ್​... ಅಬ್ಬಾ ಇಷ್ಟು ಮಂದಿ ಡಾನ್ಸ್​ ಮಾಡ್ತಾರಾ? ಸ್ಪರ್ಧಿಗಳ ನೋಡಿ ಜಡ್ಜಸ್ ಸುಸ್ತು!

click me!