ರಿಯಲ್‌ ಲೈಫಲ್ಲೂ ಒಂದಾಗೋ ಸಿಗ್ನಲ್ ಕೊಟ್ಟ ಸೀರಿಯಲ್ ಕಪಲ್‌ ದಿಲ್-ಖುಷ್!

Published : Jul 17, 2024, 01:21 PM IST
ರಿಯಲ್‌ ಲೈಫಲ್ಲೂ ಒಂದಾಗೋ ಸಿಗ್ನಲ್ ಕೊಟ್ಟ ಸೀರಿಯಲ್ ಕಪಲ್‌ ದಿಲ್-ಖುಷ್!

ಸಾರಾಂಶ

ಸೀರಿಯಲ್‌ನಲ್ಲಿ ವೀಕ್ಷಕರ ಮನಗೆದ್ದಿರುವ ಕ್ಯೂಟ್ ಕಪಲ್‌ ರಿಯಲ್‌ ಲೈಫಲ್ಲೂ ಒಂದಾಗೋ ಸೂಚನೆ ಕೊಡ್ತಿದ್ದಾರೆ. ಆ ಕಪಲ್ ಯಾರು? ಆ ಸೀರಿಯಲ್ ಯಾವ್ದು?  

ಪ್ರೇಮದ ಸಮೀಕರಣ ಸುಲಭ ಅಲ್ವೇ ಅಲ್ಲ. ಲವ್ ಒಂದು ಕಣ್ಣೋಟದಲ್ಲಿ ಆಗಬಹುದು, ಒಂದು ಭೇಟಿಯಲ್ಲಿ ಆಗಬಹುದು, ಒಂದು ಜರ್ನಿಯಲ್ಲಿ ಆಗಬಹುದು, ಅಥವಾ ಇವೆಲ್ಲಕ್ಕಿಂತ ಡಿಫರೆಂಟಾಗಿ ಬೇರೆ ಥರನೂ ಆಗಬಹುದು. ಹುಡುಗ ಹುಡುಗಿ ಲಾಂಗ್ ಟೈಮ್‌ ಜೊತೆಗೆ ಒಂದಲ್ಲ ಒಂದು ಕಾರಣಕ್ಕೆ ಜೊತೆಯಾಗಿರಬೇಕಾದ ಸಂದರ್ಭ ಬಂದಾಗ ಪರಿಚಯ, ಸ್ನೇಹ ಒನ್ ಫೈನ್‌ ಡೇ ಪ್ರೀತಿಯಾಗಿ ರೂಪಾಂತರವಾಗಬಹುದು. ನೀವೇನೇ ಹೇಳಿ ಕಲಾವಿದರು ನವರಸಗಳನ್ನು ಸ್ಕ್ರೀನ್ ಮೇಲೆ ಅಭಿವ್ಯಕ್ತಿಸುವವರು. ಆ ಬಣ್ಣದ ಲೋಕ ಮಾಯದ ಲೋಕವೂ ಹೌದು. ಹೀಗಿರುವಾಗ ಬಣ್ಣದ ಲೋಕದಲ್ಲಿ ದಿಢೀರ್  ಲವ್‌ ಆಗೋದು, ಮದುವೆ ಆಗೋದು ಎಲ್ಲಾ ಕಾಮನ್. ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಒಟ್ಟೊಟ್ಟಿಗೆ ನಟಿಸಿದವರು ಸ್ನೇಹಿತರಾಗಿ ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿ ಮದುವೆವರೆಗೂ ಹೋಗಿರುವ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿದೆ. ಒಂದು ಸಿನಿಮಾ ಅಂದ್ರೆ ನಾಲ್ಕೈದು ತಿಂಗಳು ಧಾರಾವಾಹಿ ಅಂದ್ರೆ ವರ್ಷಗಳ ಕಾಲ ನಟ-ನಟಿಯರು ಒಟ್ಟೊಟ್ಟಿಗೆ ನಟಿಸಬೇಕಾಗುತ್ತದೆ. ಜೊತೆ ಜೊತೆಯಾಗಿ ಸಾಕಷ್ಟು ಕಾಲ ಕಳೆಯಬೇಕಾಗುತ್ತದೆ. ಹೀಗೆ ಒಟ್ಟಿಗೆ ಕಾಲ ಕಳೆದಷ್ಟು ಕೆಮೆಸ್ಟ್ರಿ ವರ್ಕ್‌ ಆಗುತ್ತದೆ ಎನ್ನುವ ಮಾತು ಇದೆ. 

 

ಕೆಲ ಸಿನಿಮಾ ನಟ, ನಟಿಯರ ಆನ್‌ಸ್ಕ್ರೀನ್‌, ಆಫ್ ಸ್ಕ್ರೀನ್ ಕೆಮೆಸ್ಟ್ರಿ ನೋಡಿದರೆ ಪದೇ ಪದೆ ನೋಡಬೇಕೆನಿಸುತ್ತದೆ. ಹೀಗೆ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮನಗೆದ್ದ ಜೋಡಿಗಳು ನಿಜಜೀವನದಲ್ಲಿ ಕೂಡ ಜೊತೆಯಾಗಲಿ ಎಂದು ಬಯಸುವ ಅಭಿಮಾನಿಗಳು ಇದ್ದಾರೆ. ಕೆಲವರ ನಟನೆ, ಒಡನಾಟ ನೋಡುತ್ತಿದ್ದರೆ ನಿಜವಾಗಿಯೂ ಇಬ್ಬರ ನಡುವೆ ಲವ್ವಾಗಿದೆ, ಮುಂದೆ ಇಬ್ಬರೂ ಒಟ್ಟಾಗಿ ಬಿಡುತ್ತಾರೆ ಎನ್ನುವ ಊಹಾಪೋಹ ಶುರುವಾಗುತ್ತದೆ. ಕನ್ನಡ ಕಿರುತೆರೆಯ 'ನೀನಾದೆನಾ' ಧಾರಾವಾಹಿ ಜೋಡಿ ವಿಕ್ರಂ-ವೇದಾ ನೋಡಿದಾಗಲೂ ಹೀಗೆ ಅನಿಸುತ್ತದೆ. ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗೋ ಈ ಜೋಡಿ ಕಂಡ್ರೆ ಈ ಸೀರಿಯಲ್‌ ಫ್ಯಾನ್‌ಗಳಿಗೆ ಬಹಳ ಇಷ್ಟ. ಸೀರಿಯಲ್‌ನಲ್ಲಿ ಈ ಜೋಡಿಗೆ ಮದುವೆ ಆಗಿದೆ. ರಿಯಲ್‌ನಲ್ಲೂ ಮದುವೆ ಆಗುತ್ತಾ ಅನ್ನೋದು ಸದ್ಯದ ಕುತೂಹಲ..

ಈ ಜೋಡಿಯ ಮತ್ತೊಂದು ಸ್ಪೆಷಾಲಿಟಿ ಅಂದರೆ ಇದರಲ್ಲಿ ವಿಕ್ರಂ ಪಾತ್ರ ಮಾಡೋ ದಿಲೀಪ್ ಆರಡಿ ಕಟೌಟ್‌. ಆತನ ಜೋಡಿಯಾದ ವೇದಾ ಅಂದರೆ ಖುಷಿ ಐದಡಿನೂ ಇದ್ದಂಗಿಲ್ಲ. ಆದರೆ ಈ ಲಂಬೂ, ಕುಳ್ಳಿ ಜೋಡಿ ವೀಕ್ಷಕರಿಗೆ ಕಚಗುಳಿ ಇಡೋವಷ್ಟು ಕ್ಯೂಟ್ ಆಗಿರೋದಂತೂ ಸುಳ್ಳಲ್ಲ. 

ಹೊಸದೊಂದು ವಿಡಿಯೋದಲ್ಲಿ ನಾನು ಸ್ಟುಪ್ಪಿಡ್‌ ಎಂದು ಒಪ್ಪಿಕೊಂಡ ನಿವೇದಿತಾ ಗೌಡ!

ಇದೀಗ ಬಂದ ಸುದ್ದಿಯ ಪ್ರಕಾರ ಈ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಪದೇ ಪದೆ ಕೇಳಿಬರುತ್ತದೆ. ಕೆಲ ದಿನಗಳ ಹಿಂದೆ ತೆಲುಗು ಕಾರ್ಯಕ್ರಮಕ್ಕೆ ದಿಲೀಪ್ ಅವರ ವಿಶೇಷ ಸ್ನೇಹಿತೆ ಎಂದು ಸಪ್ರೈಸ್‌ ಆಗಿ ಖುಷಿ ಅವರನ್ನು ಆಹ್ವಾನಿಸಲಾಗಿತ್ತು. ಇಬ್ಬರ ಪ್ರೀತಿಗೆ ಬಿದ್ದಿದ್ದಾರೆ ಎನ್ನುವ ಚರ್ಚೆಗೆ ಇದು ಮತ್ತಷ್ಟು ಇಂಬು ನೀಡಿದಂತಾಗಿತ್ತು. ಅಭಿಮಾನಿಗಳು ಕೂಡ ಇಬ್ಬರ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಪೇಜ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಇಬ್ಬರ ತುಂಟಾಟ ಫೋಟೊ, ವೀಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇಬ್ಬರ ಹೆಸರು ಸೇರಿಸಿ ದಿಲ್‌ಖುಷ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ಇದೇ ಹ್ಯಾಷ್‌ಟ್ಯಾಗ್‌ನಲ್ಲಿ ಇಬ್ಬರು ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ನೀವಿಬ್ಬರು ನಿಜಜೀವನದಲ್ಲಿ ಒಂದಾದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಇದೀಗ ಸ್ವತಃ ದಿಲೀಪ್ ಶೆಟ್ಟಿ ಈ ಚರ್ಚೆ ಬಗ್ಗೆ ಮಾತನಾಡಿದ್ದಾರೆ. ಯಾಕೆ ರಿಯಲ್‌ ಲೈಫ್‌ನಲ್ಲೂ ಜೋಡಿ ಆಗಬಾರದು? ಎನ್ನುವ ಪ್ರಶ್ನೆಗೆ "ಅದೆಲ್ಲಾ ವಿಧಿ. ಡೆಸ್ಟಿನಿಯಲ್ಲಿ ಏನು ಬರೆದಿರುತ್ತಾರೆ? ಅದೇ ಆಗುವುದು. ನಾವು ಅದಕ್ಕೆ ಉತ್ತರಿಸಲು ಆಗುವುದಿಲ್ಲ. ನೋಡೋಣ, ಡೆಸ್ಟಿನಿ ಏನು ಹೇಳುತ್ತದೆ" ಎಂದು ಹೇಳಿ ದಿಲೀಪ್‌ ನಕ್ಕಿದ್ದಾರೆ. ಆ ನಗೆಯೇ ಸದ್ಯ ಈ ಜೋಡಿ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟಿದೆ.

ಪತ್ನಿ ಅಪರ್ಣಾ ಜೊತೆ ಕಳೆದ ಆಪ್ತ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡ ನಾಗರಾಜ್ ವಸ್ತಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ನಟ ನನ್ನ ಪಾಲಿಗೆ ಹಾವು- ಕಿಚ್ಚ ಸುದೀಪ್‌ ಮುಂದೆಯೇ ತಿರುಗಿ ಬಿದ್ದ ಕಾವ್ಯ ಶೈವ
Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ