ಸೃಜನ್​ ಲೋಕೇಶ್​ @44: ಸ್ಟಾರ್​ ಕಿಡ್​ ಆದ್ರೂ ಕೈಹಿಡಿಯಲಿಲ್ಲ ಹಿರಿತೆರೆ- ಕಿರುತೆರೆಯ ಪಯಣವೇ ರೋಚಕ...

By Suchethana D  |  First Published Jun 28, 2024, 4:26 PM IST

ನಟ, ಆ್ಯಂಕರ್​ ಸೃಜನ್​ ಲೋಕೇಶ್​ ಅವರಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ. ಕಲರ್ಸ್ ಕನ್ನಡ ವಾಹಿನಿ ವಿಶೇಷ ವಿಡಿಯೋ ಶೇರ್​ ಮಾಡಿಕೊಂಡಿದೆ.
 



ಸ್ಟಾರ್​ಕಿಡ್​ ಆದರೆ ಸಿನಿಮಾದಲ್ಲಿ ಅವಕಾಶ ಗಳಿಸಬಹುದು ಎಂಬ ಮಾತಿದೆ. ಕೆಲವು ಮಕ್ಕಳಲ್ಲಿ ನಟನೆಯ ಟ್ಯಾಲೆಂಟ್​ ಇಲ್ಲದಿದ್ದರೂ ಅಪ್ಪ-ಅಮ್ಮನ ಹೆಸರಿನಲ್ಲಿಯೇ ಮಿಂಚುವುದನ್ನೂ ನೋಡಿದ್ದೇವೆ. ಆದರೆ ಎಲ್ಲ ಸಂದರ್ಭದಲ್ಲಿ ಇದು ಅನ್ವಯಿಸುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಟ್ಯಾಲೆಂಟ್​ ಇದ್ದರೂ ಅವಕಾಶ ವಂಚಿತರಾಗಿರುವವರೂ ಸಾಕಷ್ಟು ಮಂದಿ ಇದ್ದಾರೆ.; ಇದಕ್ಕೆ ಸಾಕ್ಷಿಯೇ ಸೃಜನ್​ ಲೋಕೇಶ್​. ಎಷ್ಟೇ ಟ್ಯಾಲೆಂಟ್​ ಇದ್ದರೂ, ಅಪ್ಪ ಲೋಕೇಶ್​ ಅಮ್ಮ ಗಿರಿಜಾ ಹಲವು ದಶಕಗಳವರೆಗೆ ಸ್ಯಾಂಡಲ್​ವುಡ್​ ಆಳಿದ್ದರೂ, ತಾತ ಅಬ್ಬಯ್ಯ ನಾಯ್ಡು ರಂಗಭೂಮಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ,  ಸಿನಿಮಾದಲ್ಲಿ ಗೆಲುವು ಎನ್ನುವುದು ಮರೀಚಿಕೆಯೇ ಆದದ್ದು ಸೃಜನ್​  ಲೋಕೇಶ್​ ಅವರಿಗೆ! ಹಿರಿತೆರೆಯಲ್ಲಿ ಸೋಲನ್ನುಂಟು, ಸೋಲನ್ನೇ ಮೆಟ್ಟಿಲಾಗಿಸಿಕೊಂಡು ಇಂದು ಕಿರುತೆರೆಯಲ್ಲಿ ಮಿಂಚುತ್ತಿರುವ ಸೃಜನ್​ ಅವರಿಗೆ ಇಂದು (ಜೂನ್​ 28) 44ನೇ ಹುಟ್ಟುಬ್ಬದ ಸಂಭ್ರಮ. 1980ರ ಜೂನ್​ 28ರಂದು ಜನಿಸಿರುವ ಸೃಜನ್​ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ವಿಶೇಷ ವಿಡಿಯೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. 

ಕಲರ್ಸ್​ ಕನ್ನಡ ವಾಹಿನಿಯ ರಾಜಾ ರಾಣಿ ರೀಲೋಡೆಡ್​ನಲ್ಲಿ ಸದ್ಯ ತೀರ್ಪುಗಾರರಾಗಿ ಬಿಜಿಯಾಗಿರುವ ಸೃಜನ್​ ಅವರ ತಂದೆ ತಾಯಿಯೊಂದಿಗಿನ ಬಾಂಧವ್ಯ. ಸೃಜನ್​ ಅವರ ಬಾಲ್ಯ ಇತ್ಯಾದಿಗಳನ್ನು ನೆನಪಿಸುವ ವಿಡಿಯೋ ಒಂದನ್ನು ವಾಹಿನಿ ಬಿಡುಗಡೆ ಮಾಡಿದೆ. ಇನ್ನು ಸೃಜನ್​ ಅವರ ಕುರಿತು ಹೇಳುವುದಾದರೆ,  ಬಾಲ ನಟನಾಗಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು ಇವರು.  1991ರಲ್ಲಿ ತೆರೆಕಂಡ ವೀರಪ್ಪನ ಸಿನಿಮಾದಲ್ಲಿ ನಟಿಸಿದರು.  ಆನಂತರ ಮೂರು ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದರು.   2002ರಲ್ಲಿ ನೀಲ ಮೇಘಶ್ಯಾಮ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದರು. ಆದರೆ ಅದು ಸಕ್ಸಸ್​ ಆಗಲೇ ಇಲ್ಲ. 

Latest Videos

undefined

ಆ್ಯಕ್ಟರ್ಸ್​ ಹಣೆಬರಹ ನೋಡಿ... ಬಚ್ಚಲು ಮನೆಯ ಪೊರಕೆಯಲ್ಲಿ ಹೂವು ಗುಡಿಸಿ ತಲೆ ಮೇಲೆ ಸುರೀತಾರೆ...

ಮೊದಲ ಚಿತ್ರವೇ ಫ್ಲಾಪ್​ ಆಗಿದ್ದರ ಬೆನ್ನಲ್ಲೇ ಇವರಿಗೆ ಅವಕಾಶಗಳೂ ಹುಡುಕಿ ಬರಲಿಲ್ಲ. ನಾಯಕನ ಪಟ್ಟ ಸಿಗಲೇ ಇಲ್ಲ. ಆ ಬಳಿಕ ನವಗ್ರಹ, ಚಿಂಗಾರಿ, ಎದೆಗಾರಿಕೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರೂ ನಾಯಕನ ಸ್ಥಾನ ಸಿಗಲಿಲ್ಲ, ಬದಲಿಗೆ ಚಿಕ್ಕಪುಟ್ಟ ರೋಲ್​ಗಳಲ್ಲಿಯೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ತಾತ ಅಬ್ಬಯ್ಯ ನಾಯ್ಡು, ತಂದೆ ಲೋಕೇಶ್, ತಾಯಿ ಗಿರಿಜಾ ಅವರ ದೊಡ್ಡ ಹೆಸರು ಜೊತೆಗಿದ್ದರೂ ಸೃಜನ್ ಅವರಿಗೆ ಗೆಲುವಿನ ಹಾದಿ ಸುಲಭವಾಗಿರಲಿಲ್ಲ.  ಚಿತ್ರರಂಗದಲ್ಲಿ ದೊಡ್ಡ ಹಿನ್ನೆಲೆ ಇದ್ದರೂ ಪ್ರಯೋಜನಕ್ಕೆ ಬರಲಿಲ್ಲ. ಬಳಿಕ ಕಿರುತೆರೆಗೆ ಕಾಲಿಟ್ಟರು ಸೃಜನ್​. ಕಿರುತೆರೆ ಇವರ ಕೈ ಹಿಡಿದೆ. ಇದೀಗ ದೊಡ್ಡ ಮಟ್ಟದ ಯಶಸ್ಸು ಇವರಿಗೆ ದಕ್ಕಿದೆ. ಕಿರುತೆರೆಯಲ್ಲಿ ಭರ್ಜರಿ ಯಶಸ್ಸು ಗಳಿಸುತ್ತಲೇ,  2019 ರಲ್ಲಿ ಮತ್ತೆ ತಮ್ಮ ನಿರ್ಮಾಪಕ ಕಂ ನಟನಾಗಿ ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮೂಲಕ ಸ್ಟ್ರಾಂಗ್ ಕಂಬ್ಯಾಕ್ ಮಾಡಿ ಅಲ್ಲಿಯೂ ಹೆಸರು ಮಾಡಿದರು. ಆದರೆ ಕಿರುತೆರೆಯಿಂದ ಇವರನ್ನು ಇಡೀ ಕರ್ನಾಟಕ ಗುರುತಿಸುತ್ತಿರುವುದು ವಿಶೇಷ.  

  15ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಸೃಜನ್​ ಅವರು  7ಕ್ಕೂ ಅಧಿಕ ಕನ್ನಡ ಹಾಗೂ  2 ತಮಿಳು ಸೀರಿಯಲ್​ಗಳಲ್ಲಿ  ನಟಿಸಿದ್ದಾರೆ.  'ಮಜಾ ವಿತ್ ಸೃಜ' ಮತ್ತು 'ಮಜಾ ಟಾಕೀಸ್' ಕಾರ್ಯಕ್ರಮಗಳು ಇವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟವು. ಇದೀಗ ರಾಜಾ ರಾಣಿ ರೀಲೋಡೆಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಇದಕ್ಕೂ ಮುನ್ನ  10ಕ್ಕೂ ಅಧಿಕ ಟಿವಿ ಶೋಗಳಲ್ಲಿ ಆ್ಯಂಕರಿಂಗ್​ ಮಾಡಿದ್ದಾರೆ.  2012-2013ರಲ್ಲಿ 'ಮಾಧ್ಯಮ ಅವಾರ್ಡ್' ಹಾಗೂ 2012ರಿಂದ ಇಲ್ಲಿಯವರೆಗೆ ಸತತವಾಗಿ ಎಲ್ಲಾ ವಾಹಿನಿಗಳಿಂದ 'ಬೆಸ್ಟ್ ಆಂಕರ್ ಅವಾರ್ಡ್' ಪಡೆದಿದ್ದಾರೆ. ಇವರು  ಬಿಗ್‌ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು. ಈ ಷೋನಲ್ಲಿ  ಆ್ಯಂಕರ್​ ಹಾಗೂ ನಟ ಅಕುಲ್ ಬಾಲಾಜಿ ವಿನ್ನರ್​ ಅಗಿದ್ದರೆ,  ಸೃಜನ್ ಮೊದಲ ರನ್ನರ್ ಅಪ್ ಆಗಿದ್ದರು. ಸೃಜನ್ ಲೋಕೇಶ್ ಅವರು, GST ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. 

ನಾಗಲೋಕದಲ್ಲಿ ಆ್ಯಂಕರ್​ ಅನುಶ್ರೀ: ಮಲಗಿದಾಗ ಮೆಲ್ಲಗೆ ಬಂದ ನಾಗರಾಜ... ಮದುವೆಗೆ ಹಾತೊರೆಯುತ್ತಿದ್ದಾನಂತೆ!

ಇನ್ನು ನಟನೆ, ಆ್ಯಂಕರಿಂಗ್​ ಮಾತ್ರವಲ್ಲದೇ, ಸೃಜನ್​ ಅವರು ಇನ್ನೂ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.  2013ರಲ್ಲಿ ಸೃಜನ್ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ 'ಲೋಕೇಶ್ ಪ್ರೊಡಕ್ಷನ್ಸ್' ಆರಂಭಿಸಿದರು. ಇದರ ಮೂಲಕ ಮಜಾ ಟಾಕೀಸ್ ಸೇರಿದಂತೆ ಹಲವು ಯಶಸ್ವಿ ಶೋಗಳನ್ನು ನಿರ್ಮಾಣ ಮಾಡಿದ್ದಾರೆ.  2010ರಲ್ಲಿ ಕಿರುತೆರೆ ನಟಿ ಗ್ರೀಷ್ಮಾ ಅವರನ್ನು ಮದುವೆಯಾದ ಸೃಜನ್‌ ಲೋಕೇಶ್ ಅವರಿಗೆ ಸುಕೃತ್ ಎಂಬ ಮಗನಿದ್ದಾನೆ. 

click me!