ಅಳುತ್ತಲೇ ಅತ್ತೆಗೆ ಹೈ ವೋಲ್ಟೇಜ್​ ಶಾಕ್​ ಕೊಟ್ಟುಬಿಟ್ಟಳಲ್ಲಾ ಭೂಮಿ ಮಿಸ್ಸು! ಶಕುಂತಲಾ ತಲೆ ಗಿರ್​....

By Suchethana D  |  First Published Jun 28, 2024, 3:44 PM IST

ಗೌತಮ್​ ಬೈದಿದ್ದರಿಂದ ಅಳುತ್ತಿದ್ದ ಭೂಮಿಕಾಳನ್ನು ನೋಡಿ ಖುಷಿ ಪಟ್ಟಿದ್ದ ಶಕುಂತಲಾಗೆ ಮಾತಿನ ಛಡಿಯೇಟು ಕೊಟ್ಟು ತಲೆ ತಿರುಗುವಂತೆ ಮಾಡಿದ್ದಾಳೆ ಭೂಮಿಕಾ. ಆಗಿದ್ದೇನು?
 


ಆಗರ್ಭ ಶ್ರೀಮಂತರ ಮನೆಯಲ್ಲಿ ಕೋಟಿಯೂ ಕಸಕ್ಕೆ ಸಮ. ಅದೇ ಮಧ್ಯಮ ವರ್ಗದ ಕುಟುಂಬದವರಲ್ಲಿ ನೂರು ರೂಪಾಯಿನೂ ಕೋಟಿಗೆ ಸಮ. ಇದೀಗ ಆಗರ್ಭ ಮನೆಯ ಸೊಸೆಯಾಗಿರುವ ಭೂಮಿಕಾಗೆ ಆ ಮನೆಯನ್ನು ಬ್ಯಾಲೆನ್ಸ್​ ಮಾಡುವುದು ಕಷ್ಟವೇ. ಶ್ರೀಮಂತಿಕೆಯಲ್ಲಿ ಬೆಳೆದ ಹೆಣ್ಣುಮಕ್ಕಳು ಮಧ್ಯಮ ವರ್ಗದ ಮನೆಗೆ ಮದುವೆಯಾಗಿ ಹೋದರೆ ಪಡುವ ಕಷ್ಟ ಒಂದೆಡೆಯಾದರೆ, ಸ್ವಾಭಿಮಾನದ ಮಧ್ಯಮ ವರ್ಗದ ಹೆಣ್ಣು ಶ್ರೀಮಂತರ ಮನೆಗೆ ಸೊಸೆಯಾಗಿ ಹೋದರೂ ಅದೇ ರೀತಿ ಆಗುತ್ತದೆ. ಇದಕ್ಕೆ ಉದಾಹರಣೆ ಅಮೃತಧಾರೆ. ಮಿಡ್ಲ್​ಕ್ಲಾಸ್​ ಭೂಮಿಕಾ ಆಗರ್ಭ ಶ್ರೀಮಂತನ ಮನೆಯ ಸೊಸೆಯಾಗಿದ್ದೂ ಅಲ್ಲದೇ ಮನೆಯ ಯಜಮಾನಿ ಪಟ್ಟ ಬೇರೆ ಸಿಕ್ಕಿಬಿಟ್ಟಿದೆ. ಆ ಮನೆಯವರ ಖರ್ಚಿಗೆ ಕಡಿವಾಣ ಹಾಕುವ ಪಣ ತೊಟ್ಟಿದ್ದಾಳೆ ಭೂಮಿಕಾ. ಆದರೆ ವಿಲನ್​ಗಳೇ ಮನೆಯಲ್ಲಿ ತುಂಬಿದ್ದರೂ ಎಲ್ಲರನ್ನೂ ಒಳ್ಳೆಯವರು ಎಂದು ಬಗೆಯುತ್ತಿರುವ ಪತಿಗೆ ತಿಳಿಯದಂತೆ ಮನೆಯವರಿಗೆಲ್ಲಾ ಬುದ್ಧಿ ಕಲಿಸುವುದು ಅಷ್ಟು ಸುಲಭದ ಮಾತಲ್ಲ.

ಇದೀಗ ದುಡ್ಡು ಕೊಟ್ಟಿಲ್ಲ ಎಂದು ಗೌತಮ್​ ತಂಗಿ ಗೌತಮ್​ಗೆ ಕಂಪ್ಲೇಟ್​ ಮಾಡಿದ್ದಕ್ಕೆ ಗೌತಮ್​ ಭೂಮಿಕಾ ಮೇಲೆ ರೇಗಿದ್ದಾನೆ. ಅದೂ ಐದು ಕೋಟಿ ರೂಪಾಯಿ! ಇಷ್ಟು ಹಣ ಯಾಕೆ ಎಂದು ಭೂಮಿಕಾ ಕೇಳಿದ್ದಕ್ಕೆ ಒಂದಕ್ಕೆರಡು ಮಾಡಿ ಗೌತಮ್​ ತಲೆ ತುಂಬಿದ್ದಾಳೆ ತಂಗಿ. ತಂಗಿಗೆ ನೋವಾಗಿದ್ದನ್ನು ನೋಡಿ ಭೂಮಿಕಾ ಮೇಲೆ ಗೌತಮ್​ ರೇಗಿದ್ದನ್ನು ಕಂಡು ಅತ್ತೆ ಮತ್ತು ನಾದಿನಿಗೆ ಖುಷಿಯೋ ಖುಷಿ. ಅದೇ ಇನ್ನೊಂದೆಡೆ ಭೂಮಿಕಾ ಒಬ್ಬಳೇ ಕುಳಿತು ಕಣ್ಣೀರು ಹಾಕಿದ್ದಾಳೆ. ಅದನ್ನು ತೆರೆಮರೆಯಲ್ಲಿ ನೋಡುತ್ತಿದ್ದ ಅತ್ತೆ ಮತ್ತು ನಾದಿನಿ ಖುಷಿ ಪಟ್ಟಿದ್ದಾರೆ. ಇದು ನಮ್​ ಭೂಮಿ ಮಿಸ್​ಗೆ ತಿಳಿಯದೇ ಇರುತ್ತಾ? ಅತ್ತೆ ಮತ್ತು ನಾದಿನಿ ಎದುರು ಕಣ್ಣೀರು ಹಾಕಿದಂತೆ ಮಾಡಿದ ಭೂಮಿಕಾ, ನನಗೆ ಎಲ್ಲವೂ ಗೊತ್ತು ನಿಮ್ಮ ಕಳ್ಳಾಟ, ಅದನ್ನು ಹೇಗೆ ಕಂಟ್ರೋಲ್​  ಮಾಡುವುದೂ ಗೊತ್ತು ಎನ್ನುತ್ತಲೇ ಇಬ್ಬರಿಗೂ ಛಡಿ ಏಟು ಕೊಟ್ಟಿದ್ದಾಳೆ. ಅತ್ತೆ-ನಾದಿನಿಯರ ಮುಖ ಇಂಗು ತಿಂದ ಮಂಗನಂತಾಗಿದೆ. ಅಭಿಮಾನಿಗಳಿಗಂತೂ ಹಬ್ಬವೋ ಹಬ್ಬ.  

Latest Videos

undefined

ಮದುಮಗಳಂತೆ ಕಂಗೊಳಿಸಿದ ಅಮೃತಧಾರೆ ಭೂಮಿಕಾ: ಡುಮ್ಮಾ ಸರ್​ ಬಿದ್ದೋಗೋದು ಗ್ಯಾರೆಂಟಿ ಎಂದ ಫ್ಯಾನ್ಸ್

ಅಷ್ಟಕ್ಕೂ, ಅಮೃತಧಾರೆ ಸೀರಿಯಲ್​ ಅಂತೂ ದಿನದಿಂದ ದಿನಕ್ಕೆ ಕುತೂಹಲ ಪಡೆದುಕೊಳ್ಳುತ್ತಲೇ ಇದೆ. ಬಹುತೇಕ ಎಲ್ಲಾ ಸೀರಿಯಲ್​ಗಳಿಗಿಂತಲೂ ಸ್ವಲ್ಪ ಭಿನ್ನ ಎನಿಸಿರುವ ಸೀರಿಯಲ್​ ಅಮೃತಧಾರೆ. ಅಮೃತಧಾರೆ ಈ ಹೆಸರು ಕೇಳಿದರೆ ಸೀರಿಯಲ್​ ವೀಕ್ಷಕರಿಗೆ ಅದೇನೋ ಒಂಥರಾ ರೋಮಾಂಚನ ಆಗುವುದು ಇದೆ. ಕಾರಣ, ಮಧ್ಯ ವಯಸ್ಕರಾಗಿರುವ ಇಬ್ಬರ ನಡುವಿನ ಅಪರೂಪದ ಪ್ರೇಮ ಕಥೆ ಇದು. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ ಹಲವು ಸೀರಿಯಲ್​ಗಳಿಗಿಂತಲೂ ಭಿನ್ನವಾಗಿರುವ ಕಾರಣ, ಇದನ್ನು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಸೀರಿಯಲ್​ ಆಗಿದೆ. ಸದ್ಯ ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿರುವ ಸೀರಿಯಲ್​ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಅಗ್ರಸ್ಥಾನ ಪಡೆದಿದೆ. 

ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಅಳುಮುಂಜಿ ಮಹಿಳೆಯರು, ವಿಲನ್​ಗಳೇ ಭರ್ಜರಿ ಗೆಲುವು ಸಾಧಿಸುತ್ತಿರುವುದನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಅಮೃತಧಾರೆ ನಿಜಕ್ಕೂ ಅಮೃತವನ್ನೇ ಉಣಬಡಿಸುತ್ತಿದೆ. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್​ಗಳಂತೆ ಇಲ್ಲಿ ಲೇಡಿ ವಿಲನ್​ ಇದ್ದರೂ ಸದಾ ಇಲ್ಲಿ ವಿಲನ್​ ಸೋಲುತ್ತಿದ್ದಾಳೆ. ವಿಲನ್​ ಆಗಿರೋ ಶಕುಂತಲಾ ದೇವಿ ಇನ್ನೇನು ಕೆಟ್ಟದ್ದು ಮಾಡುತ್ತಾಳೋ ಎನ್ನುವಷ್ಟರಲ್ಲಿಯೇ ನಾಯಕಿ ಭೂಮಿಕಾ ಅವಳ ಎಲ್ಲಾ ಪ್ಲ್ಯಾನ್​ಗಳನ್ನು ಠುಸ್ ಮಾಡುವ ಕಾರಣ, ವೀಕ್ಷಕರಿಗೆ ಈ ಸೀರಿಯಲ್​ ವಿಭಿನ್ನವಾಗಿ ಕಾಣಿಸುತ್ತಿದೆ. ಅದರ ಜೊತೆ ಮಧ್ಯ ವಯಸ್ಸಿನಲ್ಲಿ ಮದುವೆಯಾದ ಜೋಡಿಯ ನವೀರಾದ ಪ್ರೇಮ ಕಥೆಯೂ ಇಷ್ಟವಾಗುತ್ತಿದೆ. 

ನಾಗಲೋಕದಲ್ಲಿ ಆ್ಯಂಕರ್​ ಅನುಶ್ರೀ: ಮಲಗಿದಾಗ ಮೆಲ್ಲಗೆ ಬಂದ ನಾಗರಾಜ... ಮದುವೆಗೆ ಹಾತೊರೆಯುತ್ತಿದ್ದಾನಂತೆ!

click me!