'ಕನ್ನಡತಿ'ಯಲ್ಲಿ ದೊಡ್ಡ ಬದಲಾವಣೆ; ಆದಿ ಪಾತ್ರದ ನಟ ರಕ್ಷಿತ್ ಧಾರಾವಾಹಿಯಿಂದ ಔಟ್

By Shruiti G Krishna  |  First Published Jun 25, 2022, 2:54 PM IST

ಕನ್ನಡತಿ ಧಾರಾವಾಹಿಯ ಹೆಚ್ಚು ಆಕರ್ಷಣೀಯ ಪಾತ್ರಗಳಲ್ಲಿ ಆದಿ ಪಾತ್ರ ಕೂಡ ಒಂದು. ಆದಿ ಪಾತ್ರದಲ್ಲಿ ನಟ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಕ್ಷಿತ್ ಧಾರಾವಾಹಿಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. 
 


ಕಲರ್ಸ್ ಕನ್ನಡ(Colors Kannada)ದ ಜನಪ್ರಿಯ ಧಾರಾವಾಹಿ 'ಕನ್ನಡತಿ'(Kannadathi) ಯಲ್ಲಿ ನಾಯಕ ನಾಯಕಿ ಮದುವೆ ಸಂಭ್ರಮ ಜೋರಾಗಿದೆ. ಕಳೆದ ಕೆಲವುದಿನಗಳಿಂದ ಭುವಿ ಮತ್ತು ಹರ್ಷ ಮದುವೆ ನಡೆಯುತ್ತಿದೆ. ಮದುವೆ ಸಂಭ್ರಮದಲ್ಲೂ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಪಡೆದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಕೆಲವರು ಇನ್ನು ಎಷ್ಟು ದಿನಗಳು ಮದುವೆ ಸಂಭ್ರಮ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ಧಾರಾವಾಹಿಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಕನ್ನಡತಿಯಲ್ಲಿ ಹೆಚ್ಚು ಆಕರ್ಷಣೆ ಪಾತ್ರಗಳಲ್ಲಿ ಆದಿ ಪಾತ್ರ ಕೂಡ ಒಂದು. ಆದಿ ಪಾತ್ರದಲ್ಲಿ ನಟ ರಕ್ಷಿತ್ (Aadi fame Actor Rakshith) ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಕ್ಷಿತ್ ಧಾರಾವಾಹಿಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. 

ಸಾಮಾನ್ಯವಾಗಿ ಸೀರಿಯಲ್‌ನಿಂದ ಕಲಾವಿದರು ಹೊರನಡೆಯೋದು, ಹೊಸ ಕಲಾವಿದರು ಎಂಟ್ರಿ ಕೊಡುವುದು ಕಾಮನ್(Common). ನಟ ನಟಿಯರು ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆಗೋದು, ಕಾಂಟ್ರಾಕ್ಟ್(Contract) ಮುಗಿಯೋದು, ಸೀರಿಯಲ್ ಟೀಮ್ ಜೊತೆಗೆ ಮನಸ್ತಾಪ ಆಗೋದು. ಹೀಗೆ ಕಾರಣಗಳು ಏನೇನೋ ಇರುತ್ತವೆ. ಈಗಾಗಲೇ ಕನ್ನಡತಿ ಸೀರಿಯಲ್‌ನಲ್ಲೇ ಈ ಥರ ಬದಲಾವಣೆಗಳಾಗಿವೆ. ಈ ಸೀರಿಯಲ್‌ನ ಮುಖ್ಯ ಪಾತ್ರಧಾರಿ, ವಿಲನ್ ಪಾತ್ರದಲ್ಲಿ ವೀಕ್ಷಕರನ್ನು ರೊಚ್ಚಿಗೆಬ್ಬಿಸುತ್ತಿದ್ದ ಸಾನಿಯಾ ಬದಲಾಗಿದ್ದರು. ಅದ್ಭುತವಾಗಿ ಈ ಪಾತ್ರ ನಟಿಸುತ್ತಿದ್ದ ರಮೋಲ ಇದ್ದಕ್ಕಿದಂತೆ ಸೀರಿಯಲ್ ಟೀಮ್‌ಗೆ ಗುಡ್‌ ಬೈ(Good bye) ಹೇಳಿದ್ದರು. ಬಳಿಕ ನಾಯಕ ಹರ್ಷನ ಅಣ್ಣ ಡಾ.ದೇವ್ ಪಾತ್ರಧಾರಿ ವಿಜಯ್ ಕೃಷ್ಣ ಕೂಡ ಧಾರಾವಾಹಿಯಿಂದ ಹೊರನಡೆದಿದ್ದರು.  ಬಳಿಕ ಆ ಪಾತ್ರಕ್ಕೆ ಹೊಸ ನಟ ಹೇಮಂತ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನಟ ರಕ್ಷಿತ್ ಕನ್ನಡತಿಯಿಂದ ಔಟ್ ಆಗಿದ್ದಾರೆ.

Tap to resize

Latest Videos

ಆದಿ ಪಾತ್ರದ ಮೂಲಕ ರಕ್ಷಿತ್ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಸಾನಿಯಾ ಪತಿ ಪಾತ್ರ ಆದಿ. ಇತ್ತೀಚಿಗಷ್ಟೆ ಸಾನಿಯಾ ಪಾತ್ರ ಬದಲಾಗಿತ್ತು. ಇದೀಗ  ಆದಿಯ ಪಾತ್ರ ಸಹ ಬದಲಾಗಿದೆ. ಆದಿ ಪಾತ್ರದಾರಿ ರಕ್ಷಿತ್ ಹೊರ ಹೋದ ಬಳಿಕ ಈ ಜಾಗಕ್ಕೆ ಯಾವ ನಟ ಎಂಟ್ರಿ ಕೊಡುತ್ತಾರೆ ಎನ್ನುವುದು ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ ಪ್ರೇಕ್ಷಕರ ಹೃದಯ ಗೆದ್ದಿದ್ದ ರಕ್ಷಿತ್ ದಿಢೀರ್ ಧಾರಾವಾಹಿಯಿಂದ ಹೊರ ಹೋಗುತ್ತಿವ ಕಾರಣವೇನು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಮೂಲಗಳ ಪ್ರಕಾರ ರಕ್ಷಿತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಧಾರಾವಾಹಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಕ್ಷಿತ್ ಅಥವಾ ಧಾರಾವಾಹಿ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

Kannadathi: ಮದುಮಗಳಂತೆ ರೆಡಿಯಾದ ವರೂ, ಹರ್ಷನ ಹೆಂಡ್ತಿ ನಾನೇ ಅಂತಿದ್ದಾಳಲ್ಲಪ್ಪಾ!

ಸದ್ಯ ಧಾರಾವಾಹಿಯಲ್ಲಿ ಹರ್ಷ ಮತ್ತು ಭುವಿ ಮದುವೆ ನಡೆಯುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ. ಇಬ್ಬರ ಮದುವೆ ನಡೆಯಲು ವರೂಧಿನಿ ಬಿಡುತ್ತಾಳಾ ಎನ್ನುವುದೇ ಅನುಮಾನ ಮೂಡಿಸಿದೆ. ಮದುವೆ ಪಂಟಪದಲ್ಲಿದ್ದ ಹರ್ಷ ಮತ್ತು ಭುವಿ ನೋಡಿ ವರೂಧಿನಿ ಸಿಟ್ಟಿಗೆದ್ದು ಕೈ ಕೊಯ್ದು ಕೊಂಡಿದ್ದಾಳೆ. ಇಬ್ಬರ ಮದುವೆ ನಿಲ್ಲಿಸಲ ಹೋಗಿ ತನ್ನ ಜೀವಕ್ಕೆ ತಾನೆ ಅಪಾಯ ತಂದುಕೊಂಡಿದ್ದಾರೆ. ವರೂಧಿನಿಯ ಅವಾಂತರ ನೋಡಿ ಮಂಟಪದಲ್ಲಿದ್ದ ಹರ್ಷ ಮತ್ತು ಭುವಿ ಇಬ್ಬರು ಓಡೋಡಿ ಬರುತ್ತಾರೆ. ತಕ್ಷಣ ವರೂಧಿನಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.   

Kannadathi: ಡಾ.ದೇವ್ ಪಾತ್ರಧಾರಿ ವಿಜಯ ಕೃಷ್ಣ ಸೀರಿಯಲ್‌ನಿಂದ ಔಟ್! ಹೇಮಂತ್ ಎಂಟ್ರಿ..

ಸದ್ಯ ಆಸ್ಪತ್ರೆ ಬೆಡ್ ಮೇಲಿರುವ ವರೂಧಿನಿ ಹೀರೋ ಹರ್ಷನ ಕೈ ಹಿಡಿದು ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾಳೆ. ಹೀರೋನ ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಕಣ್ಣೀರಿಡುತ್ತಿದ್ದಾಳೆ. ತನ್ನನ್ನೆ ಮದುವೆಯಾರು ಎಂದು ಹರ್ಷನ ಬಳಿ ಗೋಗರೆಯುತ್ತಿದ್ದಾಳೆ. ವರೂಧಿನಿ ಬದಲಾಗಿದ್ದಾಳೆ ಎಂದು ನಂಬಿದ್ದ ಹರ್ಷನಿಗೆ ವರೂಧಿನಿಯ ಈ ಮಾತುಗಳು ಆಘಾತ ತಂದಿದೆ. ಅಲ್ಲದೆ ಮದುುವೆ ಮಂಟಪದಿಂದ ಓಡೋಡಿ ಬಂದ ಹರ್ಷನಿಗೆ ವರೂಧಿನಿ ಧನ್ಯವಾದ ಕೂಡ ಹೇಳಿದ್ದಾರೆ. ಇತ್ತ ರತ್ನಮಾಲ ಮುಹೂರ್ತಕ್ಕೆ ಸರಿಯಾಗಿ ಮದುವೆ ನಡೆಯಲೇ ಬೇಕು, ಈ ಮುಹೂರ್ತ ಮಿಸ್ ಆಗಬಾರದು ಎಂದು ಹೇಳಿದ್ದಾರೆ. ಹರ್ಷ ವರೂಧಿನಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಭುವಿ ಕುತ್ತಿಗೆಗೆ ತಾಳಿ ಕಟ್ಟುತ್ತಾನಾ? ವರೂಧಿನಿ ಇಲ್ಲದೆ ಭುವಿ ಹಸೆಮಣೆಏರುತ್ತಾಳಾ ಎಂದು ಪ್ರೇಕ್ಷಕರು ಕಾಯುವ ಜೊತೆಗೆ ಹರ್ಷ-ಭುವಿ ಮದುವೆ ಯಾವಾಗಾ ನಡೆಯುತ್ತೆ, ಇನ್ನು ಎಷ್ಟು ದಿನಗಳು ನಡೆಯುತ್ತೆ ಎಂದು ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.  
 

click me!