Flight Rules : ಗಗನಸಖಿಯರ ಆಕರ್ಷಕ ಬ್ಯಾಗ್ ಒಳಹೊಕ್ಕಿ ನೋಡಿದಾಗ…

By Suvarna News  |  First Published Jan 6, 2023, 3:20 PM IST

ಮತ್ತೆ ಮತ್ತೆ ನೋಡ್ಬೇಕೆಂಬ ಸೌಂದರ್ಯ ಈ ಗಗನಸಖಿಯರದ್ದು. ಅವರ ನಗೆ ಎಲ್ಲವನ್ನು ಮರೆಸುವ ಶಕ್ತಿ ಹೊಂದಿರುತ್ತದೆ. ಪ್ರತಿ ದಿನ ಆಕಾಶದಲ್ಲಿ ಹಾರಾಡುವ ಅವರು ಪುಟ್ಟ ಬ್ಯಾಗ್ ಹಿಡಿದಿರುತ್ತಾರೆ. ಅದ್ರಲ್ಲಿ ಏನಿದೆ ಗೊತ್ತಾ?
 


ಗಗನಸಖಿ.. ಸಾಮಾನ್ಯವಾಗಿ ಎಲ್ಲರ ಗಮನ ಸೆಳೆಯುವಾಕೆ. ಪರಿಪೂರ್ಣ ಮೇಕಪ್, ಇಳಿಬಿಟ್ಟ ಕೂದಲು ಮತ್ತು ಸದಾ ಮುಖದಲ್ಲೊಂದು ನಗು ಆಕರ್ಷಕವಾಗಿರುತ್ತದೆ. ಗಗನಸಖಿಯರ ಜೀವನ ಕೂಡ ವರ್ಣರಂಜಿತವಾಗಿರುತ್ತದೆ. ಆಕಾಶದಲ್ಲಿ ಹಾರಾಟ, ಅನೇಕ ದೇಶ, ಅನೇಕ ಜನರನ್ನು ಭೇಟಿಯಾಗುವ ಅವಕಾಶ ಅವರಿಗೆ ಸಿಗುತ್ತದೆ. ಗಗನಸಖಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಜನರು ಆಕೆ ಕೈನಲ್ಲಿರುವ ಬ್ಯಾಗ್ ಗಮನಿಸಿರ್ತಾರೆ. ಆದ್ರೆ ಈ ಬ್ಯಾಗ್ ನಲ್ಲಿ ಏನೆಲ್ಲ ವಸ್ತು ಇರ್ಬಹುದು ಅಂತಾ ಯೋಚಿಸಿರೋರು ಕಡಿಮೆ. ನಾವಿಂದು ಗಗನಸಖಿ ಕೈನಲ್ಲಿರುವ ಪುಟ್ಟ ಬ್ಯಾಗ್ ನಲ್ಲಿ ಏನೆಲ್ಲ ವಸ್ತು ಇರುತ್ತೆ ಎಂಬುದನ್ನು ನಿಮಗೆ ಹೇಳ್ತೆವೆ.

ಗಗನಸಖಿ (Airhostess) ಬ್ಯಾಗ್ ನಲ್ಲಿದೆ ಈ ಎಲ್ಲ ವಸ್ತು : 

Tap to resize

Latest Videos

SEP ಕೈಪಿಡಿ : ಪ್ರತಿ ಗಗನಸಖಿ ಬ್ಯಾಗ್‌ (Bag) ನಲ್ಲಿ ಇರಬೇಕಾದ ಒಂದು ಪ್ರಮುಖ ವಸ್ತುವೆಂದ್ರೆ SEP ಕೈಪಿಡಿ. ಅಂದ್ರೆ ಸುರಕ್ಷತೆ ಮತ್ತು ತುರ್ತು ಕಾರ್ಯವಿಧಾನಗಳ ಕೈಪಿಡಿ. ಈ ಪುಸ್ತಕ (book) ದಲ್ಲಿ ಎಲ್ಲಾ ರೀತಿಯ ಸುರಕ್ಷತಾ ಸೂಚನೆ ಇರುತ್ತದೆ. ಅಪಘಾತವನ್ನು ಎದುರಿಸಲು ಮಾರ್ಗ ಯಾವುದು ಎಂಬ ವಿವರ ಅದ್ರಲ್ಲಿರುತ್ತದೆ. ಅನೇಕ ವಿಮಾನಯಾನ ಸಂಸ್ಥೆಗಳು ಆನ್‌ಲೈನ್‌ ನಲ್ಲಿ ಈ ಮಾಹಿತಿ ನೀಡುತ್ತವೆ. ಇದಕ್ಕೆ ಪುಸ್ತಕ ಮಾತ್ರವಲ್ಲ ಐಪ್ಯಾಡ್‌ಗಳನ್ನು ಕೂಡ ಬಳಸಲಾಗ್ತುದೆ. ಆನ್ಲೈನ್ ನಲ್ಲಿ ಲಭ್ಯವಿದ್ರೂ ಗಗನಸಖಿಯರು ಈ ಪುಸ್ತಕವನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿರುತ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಗಗನ ಸಖಿಯರು ಈ ಕೈಪಿಡಿಯಲ್ಲಿರುವ ವಿಷ್ಯವನ್ನು ಫಾಲೋ ಮಾಡ್ತಾರೆ.

Flight Journey: ವಿಮಾನದಲ್ಲಿ ದೌರ್ಜನ್ಯವಾದರೆ ಫೈಟ್ ಮಾಡೋದು ಹೇಗೆ? 

ಪಾಸ್ಪೋರ್ಟ್ (Passport) : ಅಂತರಾಷ್ಟ್ರೀಯ ವಿಮಾನದಲ್ಲಿ ಕೆಲಸ ಮಾಡುವ ಗಗನಸಖಿಯರ ಬ್ಯಾಗ್‌ನಲ್ಲಿ ಯಾವಾಗಲೂ ಪಾಸ್‌ಪೋರ್ಟ್ ಇಟ್ಟುಕೊಳ್ಳುವ ಅಗತ್ಯವಿದೆ. ಅವರ ಬಳಿ ಪಾಸ್‌ಪೋರ್ಟ್ ಇಲ್ಲವೆಂದ್ರೆ ಅವರು ವಿಮಾನ ಹತ್ತಲು ಸಾಧ್ಯವಾಗುವುದಿಲ್ಲ. ಗಗನಸಖಿಯರಿಗೆ ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್ ಬೇಕಾಗುವುದಿಲ್ಲ. ಹಾಗೆಯೇ ಅವರು ಎಲ್ಲ ವಿಮಾನ ನಿಲ್ದಾಣದಲ್ಲಿ ಪಾಸ್‌ಪೋರ್ಟ್‌ಗಳನ್ನು ಮತ್ತೆ ಮತ್ತೆ ತೋರಿಸಬೇಕಾಗಿಲ್ಲ. ಆದ್ರೆ ಪಾರ್ಸ್ಪೋರ್ಟ್ ಹೊಂದಿರಬೇಕಾಗುತ್ತದೆ.

ಫ್ಲಾಟ್ ಶೂ (Flat Shoes) : ಗಗನಸಖಿಯರನ್ನು ನಾವು ಯಾವಾಗ್ಲೂ ಹೈ ಹೀಲ್ಡ್ಸ್ ನಲ್ಲಿ ನೋಡಿರ್ತೇವೆ. ನಮ್ಮಂದೆ ಅವರು ಕೂಡ ಮನುಷ್ಯರೆ. ತುಂಬಾ ಸಮಯ ಹೀಲ್ಡ್ಸ್ ಹಾಕಿಕೊಂಡ್ರೆ ಕಾಲು ನೋವು ಬರುತ್ತದೆ. ಗಗನಸಖಿಯರು ತುಂಬಾ ಸಮಯ ನಿಂತಿರಬೇಕಾಗುತ್ತದೆ. ಹಾಗಾಗಿ ಅವರು ಫ್ಲಾಟ್ ಶೂವನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿರುತ್ತಾರೆ. ಅಗತ್ಯವೆನಿಸಿದಾಗ ಅದನ್ನು ಬಳಸ್ತಾರೆ.

ಆರಾಮದಾಯಕ ಉಡುಪು (Comfortable Wear) : ಗಗನ ಸಖಿಯರು ಸದಾ ಬಿಗಿಯಾದ ಉಡುಪಿನಲ್ಲಿರಲು ಸಾಧ್ಯವಿಲ್ಲ. ಗಗನ ಸಖಿಯರಿಗೆ ವಿಮಾನದಲ್ಲಿ ಪ್ರತ್ಯೇಕ ಕೋಣೆಯಿರುತ್ತದೆ. ಅವರು ದೀರ್ಘ ಹಾರಾಟದ ಸಮಯದಲ್ಲಿ  ಅಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಆ ಸಂದರ್ಭದಲ್ಲಿ ಆರಾಮದಾಯ ಉಡುಪು ಧರಿಸುತ್ತಾರೆ. ಕತಾರ್ ಏರ್‌ವೇಸ್, ಸಿಂಗಾಪುರ್ ಏರ್‌ವೇಸ್ ಮತ್ತು ಇತರ ಹಲವು ಏರ್‌ಲೈನ್‌ಗಳು ಗಗನ ಸಖಿಯರಿಗೆ ಧರಿಸಲು ತಮ್ಮದೇ ಆದ ಕಸ್ಟಮೈಸ್ ಮಾಡಿದ ರಾತ್ರಿ ಉಡುಪುಗಳನ್ನು ನೀಡುತ್ತವೆ.

Business Classನಲ್ಲಿ ಪ್ರಯಾಣಿಸೋರಿಗೆ ಏನೆಲ್ಲಾ ಸೌಲಭ್ಯ ಸಿಗುತ್ತೆ ಐಡಿಯಾ ಇದ್ಯಾ?

ಎಮರ್ಜೆನ್ಸಿ ಕಿಟ್ (Emergency Kit) : ಗಗನ ಸಖಿಯರು ಎಮರ್ಜೆನ್ಸಿ ಕಿಟ್ ಹೊಂದಿರುತ್ತಾರೆ. ಇದ್ರಲ್ಲಿ ಸ್ನೀಕರ್ಸ್, ಸೂಜಿ,ದಾರ, ಅಗತ್ಯ ಔಷಧಿಗಳು, ಮಿನಿ ಟಾಯ್ಲೆಟ್ ಕಿಟ್, ಪ್ರಥಮ ಚಿಕಿತ್ಸಾ ವಸ್ತುಗಳು, ಪೆನ್ ಮತ್ತು ನೋಟ್ಬುಕ್ , ಚಾಕೊಲೇಟ್ ಸೇರಿದಂತೆ ಅಗತ್ಯವಾದ ವಸ್ತುಗಳಿರುತ್ತವೆ. ಯಾರಿಗಾದರೂ ವಿಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾದ್ರೆ ಗಗನ ಸಖಿಯರು ಅವರ ಸಹಾಯಕ್ಕೆ ಸದಾ ಸಿದ್ಧರಿರ್ತಾರೆ. ತುರ್ತು ಕಿಟ್ ನಲ್ಲಿರುವ ವಸ್ತುಗಳನ್ನು ಪ್ರಯಾಣಿಕರಿಗೆ ನೀಡಿ ನೆರವಾಗ್ತಾರೆ. 

ಮೇಕಪ್ ಕಿಟ್ ಹಾಗೂ ಬಟ್ಟೆ (Make-Up Kit and Cloths) : ಇಷ್ಟೇ ಅಲ್ಲ ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಎನ್ನುವ ಕಾರಣಕ್ಕೆ ಒಂದರೆಡು ಜೊತೆ ಬಟ್ಟೆಯನ್ನು ಅವರು ಬ್ಯಾಗ್ ನಲ್ಲಿ ಇಟ್ಟುಕೊಂಡಿರುತ್ತಾರೆ. ಹಾಗೆಯೇ ಗಗನ ಸಖಿಯರಿಗೆ ಸೌಂದರ್ಯ ಮುಖ್ಯ. ಆಗಾಗ ಮೇಕಪ್ ಮಾಡಲು ಮೇಕಪ್ ಕಿಟ್ ಅವರ ಬಳಿ ಇರುತ್ತದೆ. 

click me!