ನೈಜೇರಿಯಾದಲ್ಲಿ ಡಾ.ಬ್ರೋ ಅರ್ಥಾತ್ ಗಗನ್‌ಗೆ ಕೈಕಟ್ಟಿ ಹಾಕಿ ಬಾಕ್ಸಿಂಗ್ ಫೀಲ್ಡ್‌ಗೆ ಬಿಡಲಾಗಿತ್ತು. ಇದರ ವಿಡಿಯೋ ಶೇರ್ ಮಾಡಿದ್ದಾರೆ.
ದೇಶ-ವಿದೇಶಗಳನ್ನು ಸುತ್ತುತ್ತಲೇ ಮನೆ ಮಾತಾಗಿರೋ ಡಾ.ಬ್ರೋ ಈಗ ನೈಜೇರಿಯಾಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಹಿಂದಿನ ವಿಡಿಯೋಗಳಲ್ಲಿ, ಅಲ್ಲಿರುವ ವಿಚಿತ್ರ ಜನರ ಪರಿಚಯ ಮಾಡಿಸಿದ್ದರು. ಇದೀಗ ಇನ್ನೊಂದು ವಿಡಿಯೋ ಶೇರ್ ಮಾಡಿರುವ ಅವರು, ಇದರಲ್ಲಿ ತಮ್ಮ ಕೈಕಟ್ಟಿಹಾಕಿ ಬಾಕ್ಸಿಂಗ್‌ಗೆ ಇಳಿಸಿರುವುದನ್ನು ತೋರಿಸಿದ್ದಾರೆ. ಕುಸ್ತಿಗೆ ಇಳಿಸುವ ಮುನ್ನ ಬಾಕ್ಸಿಂಗ್ ಗ್ಲೌಸ್ ಹಾಕುವುದು ಸಾಮಾನ್ಯ. ಆದರೆ ಇಲ್ಲಿ ಕೈಗೆ ದಾರದಿಂದ ಕಟ್ಟಿ ಬಿಡಲಾಗುತ್ತದೆ. ನಂತರ ಬಾಕ್ಸಿಂಗ್ ಮಾಡಲು ಬಿಟ್ಟಿದ್ದಾರೆ. ಇಲ್ಲಿಯೂ ಎಂದಿನಂತೆ ತಮ್ಮ ಹಾಸ್ಯದಿಂದ ಎಲ್ಲರನ್ನೂ ನಗಿಸಿದ್ದಾರೆ ಡಾ.ಬ್ರೋ. ಅಲ್ಲಿ ಬಾಕ್ಸಿಂಗ್ ಪಟುವನ್ನು ಸೋಲಿಸಿ ಇವರೇ ಗೆದ್ದಿದ್ದಾರೆ. ಇದರ ಜೊತೆಗೆ, ನೈಜೇರಿಯಾದ ಕುತೂಹಲದ ಆಹಾರ ಪದ್ಧತಿಯನ್ನು ತೋರಿಸಲಾಗಿದೆ. ಮಾತ್ರವಲ್ಲದೇ ಇಂಡಿಗೋ ಕಲರ್ ಮಾಡುವುದು ಹೇಗೆ? ಅದರ ಗಿಡವನ್ನು ಹೇಗೆ ಬೆಳೆಯುತ್ತಾರೆ ಎನ್ನುವುದನ್ನೂ ತೋರಿಸಿದ್ದಾರೆ. ಇಲ್ಲಿಯ ಮೈ ಝುಂ ಎನ್ನುವ ವಿಚಿತ್ರ ಆಚರಣೆಯ ಬಗ್ಗೆಯೂ ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಚರಂಡಿ ಮೇಲೆಯೇ ಜನರು ಹೇಗೆ ಬದುಕಿತ್ತಿದ್ದಾರೆ ಎನ್ನುವುದನ್ನು ಇನ್ನೊಂದು ವಿಡಿಯೋದಲ್ಲಿ ಗಗನ್ ತೋರಿಸಿಕೊಟ್ಟಿದ್ದರು. ಅದರಲ್ಲಿಯೂ ವಿಶೇಷವಾಗಿ ನೈಜೇರಿಯಾ ಮಕ್ಕಳಿಗೆ ಕನ್ನಡ ಕಲಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ರಾಷ್ಟ್ರಭಾಷೆ ಕನ್ನಡ ಎಂದು ಹೇಳುವ ಮೂಲಕ ಕನ್ನಡಿಗರ ಮನ ಗೆದ್ದವರು ಡಾ.ಬ್ರೋ ಅರ್ಥಾತ್ ಗಗನ್. ಅ,ಆ,ಇ, ಈ ಎಂದು ಮಕ್ಕಳ ಬಾಯಲ್ಲಿ ಸ್ಪಷ್ಟವಾಗಿ ಹೇಳಿಸಿ ಅಬ್ಬಬ್ಬಾ ಹೀಗೂ ಸಾಧ್ಯನಾ ಎಂದು ತೋರಿಸಿಕೊಟ್ಟಿದ್ದಾರೆ. ಇದೀಗ ಮತ್ತಷ್ಟು ಕುತೂಹಲದೊಂದಿಗೆ ನೈಜೇರಿಯಾದ ಆದಿವಾಸಿಗಳ ಪರಿಚಯ ಮಾಡಿಸಿದ್ದಾರೆ ಇವರು. ನೈಜೇರಿಯಾದ ಜಾದೂಗಾರರೊಬ್ಬನ್ನು ಭೇಟಿಯಾಗಿರುವ ವಿಡಿಯೋ ಅನ್ನೂ ಅವರು ಶೇರ್ ಮಾಡಿದ್ದರು. ಇದರಲ್ಲಿ ಈ ಜಾದೂಗಾರ ಚಾಕುವಿನಿಂದ ಡಾ.ಬ್ರೋಗೆ ಇರಿದಿದ್ದ, ಬ್ಲೇಡ್ನಿಂದ ಕೊಯ್ದಿದ್ದ. ಆದರೆ ಅದು ಜಾದೂ ಚಾಕು ಆಗಿದ್ದರಿಂದ ಡಾ.ಬ್ರೋಗೆ ಏನೂ ಆಗಲಿಲ್ಲ. ಇದನ್ನು ತಮಾಷೆಯಾಗಿಯೇ ಹಂಚಿಕೊಂಡಿದ್ದರು ಗಗನ್. ಆದರೆ ಕುತೂಹಲದ ವಿಷಯ ಎಂದರೆ, ಅದೇ ಚಾಕು ಮತ್ತು ಬ್ಲೇಡ್ನಿಂದ ಬೇರೆ ಕಡೆ ಕತ್ತರಿಸಿದಾಗ ಅದು ಕತ್ತರಿಸಿ ಹೋಗಿದೆ. ಇಂಥ ಭಯಾನಕ ಹಾಗೂ ಹಾಸ್ಯಮಯ ಸನ್ನಿವೇಶವನ್ನು ವಿಡಿಯೋದಲ್ಲಿ ತೋರಿಸಿದ್ದರು.
ನೈಜೇರಿಯಾದಲ್ಲಿ ಡಾ.ಬ್ರೋಗೆ ಚಾಕು ಇರಿದ್ರು, ಬ್ಲೇಡ್ನಿಂದ ಬೆರಳು ಕತ್ತರಿಸಿದ್ರು! ವಿಡಿಯೋ ನೋಡಿ ಫ್ಯಾನ್ಸ್ ಶಾಕ್
ಕತ್ತೆ ಕಿರುಬ ಸೇರಿದಂತೆ ಭಯಾನಕ ಕಾಡು ಪ್ರಾಣಿಗಳ ಹಾಗೂ ವಿಷ ಸರ್ಪಗಳ ಜೊತೆ ನೈಜೇರಿಯಾದ ಮಕ್ಕಳೂ ಸೇರಿದಂತೆ ದೊಡ್ಡವರು ಹೇಗೆ ಪರಿಚಿತರಾಗಿದ್ದಾರೆ. ಕಾಡು ಪ್ರಾಣಿಗಳನ್ನು ಇಲ್ಲಿಯ ಜನರು ಹೇಗೆ ಪ್ರೀತಿಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಕತ್ತೆ ಕಿರುಬದ ಬಾಯಲ್ಲಿ ಸಲೀಸಾಗಿ ಜನರು ಕೈ ಹಾಕುತ್ತಾರೆ. ಆದರೆ ಅಪ್ಪಿ ತಪ್ಪಿ ಆ ಸಮಯದಲ್ಲಿ ಕತ್ತೆ ಕಿರುಬ ಬಾಯಿ ಮುಚ್ಚಿದರೆ ಅಂದರೆ ಅದರ ಒಂದೇ ಒಂದು ಹಲ್ಲು ಕೈಗೆ ತಾಗಿದರೂ ಮೈ ಪೂರ್ತಿ ಕೊಳೆತು ಹೋಗುತ್ತದೆ. ಇದರ ಹೊರತಾಗಿಯೂ ಅಲ್ಲಿಯ ಜನರು ಹೇಗೆ ಪ್ರಾಣಿಗಳ ಜೊತೆ ಪ್ರೀತಿಯಿಂದ ಇದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಆದರೆ ಇಲ್ಲಿ, ಹಳಿಗಳ ಮೇಲೆ ಪ್ರತಿನಿತ್ಯ ಸಂತೆ ನಡೆಯುತ್ತೆ. ದೂರದಿಂದ ಟ್ರೈನ್ ಬರುವ ಶಬ್ದ ಆಗುತ್ತಲೇ ಸೆಕೆಂಡ್ ಒಳಗೆಯೇ ಸಂತೆ ಗಾಯಬ್ ಆಗುತ್ತೆ. ಮಾರುವವರು, ಕೊಳ್ಳುವವರು ಎಲ್ಲರೂ ಎಸ್ಕೇಪ್ ಆಗುತ್ತಾರೆ. ಅಲ್ಲಿ ಏನೂ ಇಲ್ಲವೇನೋ ಎನ್ನುವಂತೆ ಕಾಣಿಸುತ್ತದೆ. ರೈಲು ಅತ್ತ ಹೋದ ಮೇಲೆ ಮತ್ತೆ ರಪರಪ ಎಂದು ಎಲ್ಲರೂ ಮುತ್ತಿಗೆ ಹಾಕುತ್ತಾರೆ. ಪುನಃ ರೈಲು ಬಂದರೆ ಹೋಗುತ್ತಾರೆ. ಈ ರೈಲಿನ ಮುಂಭಾಗ ಸೇರಿದಂತೆ ಎಲ್ಲೆಂದರಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವುದು ನೋಡಿದರೆ, ಅಬ್ಬಬ್ಬಾ ಹೀಗೂ ಒಂದು ದೇಶ ಇರುತ್ತಾ ಎಂದು ಹುಬ್ಬೇರಿಸುವುದು ಗ್ಯಾರೆಂಟಿ. ಇವೆಲ್ಲಾ ಕುತೂಹಲದ ವಿಷಯವನ್ನು ಡಾ.ಬ್ರೋ ಹೇಳಿದ್ದರು.
ಹಳಿಗಳ ಮೇಲೆ ದಿನವೂ ಸಂತೆ- ರೈಲು ಬರ್ತಿದ್ದಂಗೇ ಎಲ್ಲರೂ ಗಾಯಬ್- ಮತ್ತೆ ವಾಪಸ್! ಡಾ.ಬ್ರೋ ರೋಚಕ ವಿಡಿಯೋ