Navratri 2023: ನವರಾತ್ರಿಯ ವೈಭವ ನೋಡ್ಬೇಕಾ? ದೇಶದ ಈ ಸ್ಥಳಗಳಿಗೆ ಭೇಟಿ ನೀಡೋದು ಬೆಸ್ಟ್

By Suvarna News  |  First Published Oct 4, 2023, 5:35 PM IST

ನವಶಕ್ತಿ ರೂಪಿಣಿಯಾದ ದುರ್ಗಾದೇವಿಯನ್ನು ಸ್ತುತಿಸುವ, ಆರಾಧಿಸುವ, ಪೂಜಿಸುವ ನವರಾತ್ರಿಯ ಸಂಭ್ರಮ ಎದುರಿಗಿದೆ. ಈ ಸಮಯದಲ್ಲಿ ಪ್ರವಾಸ ಮಾಡಲು ಇಚ್ಛಿಸುವವರು ನೀವಾಗಿದ್ದರೆ ದೇಶದ ಈ ಸ್ಥಳಗಳಿಗೆ ಖಂಡಿತವಾಗಿ ಭೇಟಿ ನೀಡಿ. ಹೊಸ ಅನುಭವ ನಿಮ್ಮದಾಗುತ್ತದೆ.
 


ನವಶಕ್ತಿಯ ವಿವಿಧ ಸ್ವರೂಪಗಳನ್ನು ಪೂಜಿಸುವ, ಆರಾಧಿಸುವ ಒಂಭತ್ತು ದಿನಗಳ ಸಂಭ್ರಮದ ಹಬ್ಬಗಳ ಸಾಲು ಮತ್ತೆ ಬಂದಿದೆ. ದುರ್ಗಾದೇವಿ, ಚಾಮುಂಡಿ, ಮಾರಿಕಾಂಬೆ, ಅಮ್ಮನವರು ಎಂಬ ಹತ್ತಾರು ವಿವಿಧ ನಾಮಗಳಿಂದ ಸ್ತುತಿಸುವ ಸಮಯ ನವರಾತ್ರಿ. ಪಾರ್ವತಿ ದೇವಿ ದುರ್ಗೆಯ ರೂಪವನ್ನು ತಾಳಿ ಮಹಿಷಾಸುರನ ವಧೆ ಮಾಡಿದಳು ಎನ್ನುವುದು ಪೌರಾಣಿಕ ಹಿನ್ನೆಲೆ. ದೇವಿ ಶಕ್ತಿಯ 9 ಸ್ವರೂಪಗಳನ್ನು ಪೂಜಿಸಿದ ಬಳಿಕ ಹತ್ತನೆಯ ದಿನ ಕೆಟ್ಟ ಶಕ್ತಿಯ ವಿರುದ್ಧ ಒಳ್ಳೆಯದರ ವಿಜಯವನ್ನು ಸೂಚಿಸುವ ವಿಜಯದಶಮಿ ಆಚರಿಸಲಾಗುತ್ತದೆ. ಇದು ಜನರಲ್ಲಿ ಭಕ್ತಿ, ಸಂಭ್ರಮ, ನವೋಲ್ಲಾಸಗಳನ್ನು ತುಂಬುವ ಸಮಯ. ಹಬ್ಬಗಳನ್ನು ಧಾರ್ಮಿಕವಾಗಿ ಆಚರಣೆ ಮಾಡುವವರಿಗೊಂದು ರೀತಿಯ ಸಂಭ್ರಮವಾದರೆ, ಧಾರ್ಮಿಕವಾಗಿ ಆಚರಣೆ ಮಾಡದವರಿಗೂ ಇದು ಪ್ರವಾಸಕ್ಕೆ ಅತ್ಯುತ್ತಮ ಸಮಯ. ಏಕೆಂದರೆ, ನವರಾತ್ರಿಯ ಸಂಭ್ರಮವನ್ನು ದೇಶದೆಲ್ಲೆಡೆ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ವಿವಿಧ ಸಂಸ್ಕೃತಿಗಳ ತವರೂರು ಭಾರತ. ವಿವಿಧ ರಾಜ್ಯಗಳಲ್ಲಿ ವಿಭಿನ್ನ ಸಂಪ್ರದಾಯಗಳೊಂದಿಗೆ ಆಚರಿಸುವುದು ನವರಾತ್ರಿಯ ವಿಶೇಷ. ದೇಶದ ಎಲ್ಲ ಕಡೆಗಳಲ್ಲೂ ನವರಾತ್ರಿಯ ಆಚರಣೆ ಕಂಡುಬಂದರೂ ಕೆಲವು ರಾಜ್ಯಗಳಲ್ಲಿ ವಿಶೇಷ ಮೆರುಗು ಇದೆ. ಕೇರಳದಲ್ಲಿ ಮಾತೆ ಸರಸ್ವತಿಯ ರೂಪದಲ್ಲಿ ಸರಳವಾಗಿ ಪುಸ್ತಕಗಳನ್ನಿಟ್ಟು ಪೂಜೆ ಮಾಡಲಾದರೆ, ಕೆಲವು ರಾಜ್ಯಗಳಲ್ಲಿ ಅದ್ದೂರಿ ಆಚರಣೆ ಕಂಡುಬರುತ್ತದೆ. 

•    ಪಶ್ಚಿಮ ಬಂಗಾಳ (West Bengal)
ನವರಾತ್ರಿ (Navratri) ಎಂದೊಡನೆ ಪಶ್ಚಿಮ ಬಂಗಾಳದ ನವರಾತ್ರಿ ಪೆಂಡಾಲ್ (Pendal) ಗಳಲ್ಲಿ ಇರಿಸುವ ದುರ್ಗಾದೇವಿಯ (Durga Devi) ಮುಖ, ದೇವಿಯ ಶಕ್ತಿಯನ್ನು ಪ್ರತಿರೂಪಿಸುವಂತಹ ವಿಗ್ರಹಗಳು, ಮಹಿಷಾಸುರನನ್ನು ಸಂಹಾರ ಮಾಡುತ್ತಿರುವ ದುರ್ಗಾದೇವಿಯ ಪ್ರತಿಮೆಗಳು ಸ್ಮರಣೆಗೆ ಬರಲೇಬೇಕು. ದುರ್ಗಾ ಪೂಜೆಗೆಂದು ಬೃಹತ್ ಪೆಂಡಾಲುಗಳನ್ನು ಹಾಕಲಾಗುತ್ತದೆ. ಬೆಳಕಿನ ವಿನ್ಯಾಸ, ಸಂಗೀತದಿಂದ ಆವರಿಸಿರುವ ವಾತಾವರಣವನ್ನು ಅನುಭವಿಸುವುದು ಅದ್ಭುತ. ದುರ್ಗಾ ಆರತಿ ಇಲ್ಲಿನ ವಿಶೇಷ. ಅಸ್ಸಾಂ, ಬಿಹಾರ, ಒಡಿಶಾಗಳಲ್ಲೂ ಇದೇ ರೀತಿಯ ಸಂಪ್ರದಾಯವಿದೆ.

Tap to resize

Latest Videos

Navratri 2023: ನವರಾತ್ರಿ ದಿನಾಂಕ, ಕಲಶ ಸ್ಥಾಪನಾ ಮುಹೂರ್ತ ಇಲ್ಲಿದೆ..

•    ಕರ್ನಾಟಕ (Karnataka)
ನವರಾತ್ರಿ ಎಂದರೆ ನಮ್ಮ ರಾಜ್ಯದ ನಾಡಹಬ್ಬ ದಸರಾಕ್ಕೆ ದೇಶದಲ್ಲೇ ವಿಶೇಷ ಸ್ಥಾನ. ಏಕೆಂದರೆ, 17ನೇ ಶತಮಾನದ ಆದಿಭಾಗದಲ್ಲಿದ್ದ  ಕಾಲದ ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ನಮ್ಮಲ್ಲೊಂದೇ. ಬೊಂಬೆಗಳ ಹಬ್ಬ ಎಂದೂ ಖ್ಯಾತಿ ಪಡೆದಿದೆ. ಮೈಸೂರು (Mysore) ಇದರ ಕೇಂದ್ರ ಸ್ಥಾನ. ಚಾಮುಂಡಿ ಬೆಟ್ಟದ ವಿಶೇಷ ಪೂಜೆ, ಅರಮನೆಯ ಅಲಂಕಾರ ಎಲ್ಲವೂ ಮೈನವಿರೇಳಿಸುವಂಥದ್ದು. ಅಷ್ಟೇ ಅಲ್ಲ, ಇಡೀ ರಾಜ್ಯ ಸಂಭ್ರಮದಲ್ಲಿ ಮಿಂದೇಳುತ್ತದೆ. ಹಲವಾರು ಪ್ರಖ್ಯಾತ ದೇವಿ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ. ಮನೆಮನೆಗಳಲ್ಲೂ ಪೂಜೆ ನಡೆಯುತ್ತದೆ, ಬಾಗಿನ ನೀಡುವ ಸಂಪ್ರದಾಯವಿದೆ. ಹೀಗಾಗಿ, ದೇಶ, ವಿದೇಶದ ಯಾತ್ರಿಕರು (Travellars) ಈ ಸಮಯದಲ್ಲಿ ರಾಜ್ಯಕ್ಕೆ ಭೇಟಿ ನೀಡುವುದು ಸಾಮಾನ್ಯ.

•    ಗುಜರಾತ್ (Gujarat)
ನವರಾತ್ರಿಯ ಸಂಭ್ರಮಕ್ಕೆ ಗುಜರಾತ್ ಮತ್ತೊಂದು ಹೆಸರು. ದೇವಿ ಶಕ್ತಿಯನ್ನು ಆರಾಧಿಸುವ ಈ ಸಮಯದಲ್ಲಿ ಗರ್ಬಾ ನೃತ್ಯ (Garba Dance) ಇಲ್ಲಿನ ಪ್ರಮುಖ ಆಕರ್ಷಣೆ. ಮಾತೆ ಶಕ್ತಿ, ಮಾತೆ ದುರ್ಗಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಸಾಂಪ್ರದಾಯಿಕವಾಗಿ ಗರ್ಬಾ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ಎಲ್ಲಿ ಹೋದರೂ ಬಣ್ಣಬಣ್ಣದ ದಾಂಡಿಯಾಗಳು, ರಂಗುರಂಗಿನ (Colourful) ದಿರಿಸುಗಳು ಗೋಚರಿಸುತ್ತವೆ. ದೇವಾಲಯಗಳನ್ನು ಅದ್ದೂರಿಯಾಗಿ ಅಲಂಕರಿಸುವುದು ಇಲ್ಲಿನ ಸಂಪ್ರದಾಯ. ಅಹಮದಾಬಾದ್, ಬರೋಡಾ, ಗಾಂಧಿನಗರ ಮುಂತಾದ ಸ್ಥಳಗಳು ಭೇಟಿಗೆ ಶ್ರೇಯಸ್ಕರ. 

•    ಮಹಾರಾಷ್ಟ್ರ (Maharastra)
ಮಹಾರಾಷ್ಟ್ರದಲ್ಲಿ ಸಾಮೂಹಿಕ ಆಚರಣೆಗಿಂತ ಖಾಸಗಿ ಆಚರಣೆ ಖ್ಯಾತಿ ಪಡೆದುಕೊಂಡಿದೆ. ಘಟಸ್ಥಾಪನೆ ಮಾಡುವ ಮೂಲಕ, ನೀರನ್ನು (Water) ತುಂಬಿ, ಕುಂಭದ ಸುತ್ತ ಧಾನ್ಯಗಳನ್ನು ಬೆಳೆಸಲಾಗುತ್ತದೆ. 9 ದಿನಗಳ ಕಾಲ ನಡೆಯುವ ಆಚರಣೆಯಲ್ಲಿ ಹಣ್ಣು, ಹೂವು, ಪತ್ರೆಗಳನ್ನು ಅರ್ಪಿಸಲಾಗುತ್ತದೆ. ಕಾಳಿ ಪೂಜೆಯನ್ನೂ ಕೆಲವೆಡೆ ಆಚರಿಸಲಾಗುತ್ತದೆ. 

Navratri 2023: ದುರ್ಗಾ ದೇವಿಗೆ ಈ ಹೂವುಗಳನ್ನು ಅರ್ಪಿಸಿದರೆ ಆಶೀರ್ವಾದ ಜೊತೆ ಅದೃಷ್ಟ ಬರುತ್ತದೆ

•    ತಮಿಳುನಾಡು (Tamilnadu)
ದುರ್ಗಾ, ಲಕ್ಷ್ಮೀ, ಸರಸ್ವತಿಯ ಮೂರು ಸ್ವರೂಪಗಳಲ್ಲಿ ಪೂಜಿಸಲಾಗುತ್ತದೆ. ಪ್ರತಿ ದೇವಿ ಶಕ್ತಿಗೂ ಮೂರು ದಿನಗಳ ಪೂಜೆ ಮೀಸಲು. ಬೊಂಬೆಗಳನ್ನು (Dolls) ಇಟ್ಟು ಸಂಭ್ರಮಿಸುವುದು ಇಲ್ಲೂ ಕಂಡುಬರುತ್ತದೆ. ದುರ್ಗಾ  ಕೋಲು ಎನ್ನುವ ವಿಶಿಷ್ಟ ಆಚರಣೆ ಇದೆ. 

•    ರಾಜಸ್ಥಾನ (Rajasthan)
ಸಾವಿರಾರು ಜನ ಒಂದೆಡೆ ಸೇರಿ ದುಷ್ಟ ರಾವಣನ ಪ್ರತಿಕೃತಿಯನ್ನು ಸುಡುವುದು ರಾಜಸ್ಥಾನದ ವಿಶೇಷ. 70-72 ಅಡಿ ಎತ್ತರದ ಪ್ರತಿಮೆಯನ್ನು ಸುಡಲಾಗುತ್ತದೆ. 

click me!