ನಾಯಿ ಮಾಂಸಕ್ಕೆ ಭಾರತದಲ್ಲೂ ಇದೆ ಬೇಡಿಕೆ, ಯಾವ ರಾಜ್ಯದಲ್ಲಿ ಹೆಚ್ಚು ಸೇವನೆ ಮಾಡ್ತಾರೆ ಗೊತ್ತಾ?

Published : Sep 09, 2026, 07:29 PM IST
dog meat

ಸಾರಾಂಶ

ಭಾರತದಲ್ಲಿ ಮಾಂಸಹಾರಿಗಳ ಸಂಖ್ಯೆ ಸಾಕಷ್ಟಿದೆ. ಜನರು ಕೋಳಿ, ಹಂದಿ, ಮೀನು ಅಂತ ನಾನಾ ಪ್ರಾಣಿಗಳ ಮಾಂಸ ಸೇವನೆ ಮಾಡ್ತಾರೆ. ಆದ್ರೆ ನಾಯಿ ಮಾಂಸ ಸೇವನೆ ಮಾಡುವ ಜಾಗವೂ ಭಾರತದಲ್ಲಿದೆ. ಯಸ್, ಭಾರತದ ಯಾವ ಭಾಗದಲ್ಲಿ ನಾಯಿ ಮಾಂಸಕ್ಕೆ ಹೆಚ್ಚು ಡಿಮ್ಯಾಂಡ್ ಇದೆ ಎಂಬ ಮಾಹಿತಿ ಇಲ್ಲಿದೆ.

ಬೌ ಬೌ ಬಿರ್ಯಾನಿ ಎನ್ನುವ ಹೆಸರು ಕೇಳ್ತಿದ್ರೆ ಜಗ್ಗೇಶ್ ಅವರ ಸಿನಿಮಾ ನೆನಪಿಗೆ ಬರುತ್ತೆ. ನಾಯಿ ಮಾಂಸದ ಬಿರಿಯಾನಿ ತಿಂದು ನಾಯಿಯಂತೆ ಜಗ್ಗೇಶ್ ಬೊಗಳ್ತಿದ್ರೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ರು. ಇದು ಬರೀ ಸಿನಿಮಾದಲ್ಲಿ ಮಾತ್ರವಲ್ಲ ರಿಯಲ್ ಆಗಿ ಭಾರತದಲ್ಲೂ ನಾಯಿ ಮಾಂಸ ತಿನ್ನುವ ಪ್ರದೇಶಗಳಿವೆ.

ಎಲ್ಲಿ ನಾಯಿ ಮಾಂಸ ಸೇವನೆ ಮಾಡ್ತಾರೆ?

ಭಾರತದ ಸುಂದರ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸ ಸೇವನೆ ಮಾಡಲಾಗುತ್ತದೆ. ಇಲ್ಲಿ ನಾಯಿ ಮಾಂಸವನ್ನು ಸಾಂಪ್ರದಾಯಿಕ ಆಹಾರವಾಗಿ ಸೇವನೆ ಮಾಡ್ತಾ ಬರಲಾಗಿದೆ. ಇದಲ್ದೆ ಮಣಿಪುರ, ಅರುಣಾಚಲಪ್ರದೇಶ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲ ಪ್ರದೇಶಗಳಲ್ಲೂ ನಾಯಿ ಮಾಂಸ ತಿನ್ನುವ ಜನಾಂಗವಿದೆ. ನಾಗಾಲ್ಯಾಂಡ್ ಮತ್ತು ಅಸ್ಸಾಂನ ಗಡಿಯಲ್ಲಿರುವ ದಿಮಾಪುರ್ ಪ್ರದೇಶವು ನಾಯಿ ಮಾಂಸಕ್ಕೆ ಅತಿ ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಲಾಗಿದೆ. 2020ರಲ್ಲಿ ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿತ್ತು. ಪ್ರಕರಣ ಕೋರ್ಟ್ ನಲ್ಲಿದೆ. ಕೆಲ ತಿಂಗಳ ಹಿಂದೆ ಗೌಹಾಟಿ ಹೈಕೋರ್ಟ್ ನಲ್ಲಿ ಇಬ್ಬರು ನ್ಯಾಯಾಧೀಶರು ವಿಭಜಿತ ತೀರ್ಪು ನೀಡಿದ್ದರೆ.

ನಾಯಿ ಮಾಂಸ ಸೇವಿಸುವ ದೇಶಗಳು

ಭಾರತ ಮಾತ್ರವಲ್ಲ ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ನಾಯಿ ಮಾಂಸವನ್ನು ಸೇವನೆ ಮಾಡಲಾಗುತ್ತದೆ. ಚೀನಾದಲ್ಲಿ, ನಾಯಿ ಮಾಂಸವನ್ನು ಐತಿಹಾಸಿಕವಾಗಿ ಪ್ರಾದೇಶಿಕ ಪಾಕಪದ್ಧತಿಯ ಭಾಗವಾಗಿದೆ. ಅಂಕಿಅಂಶಗಳ ಪ್ರಕಾರ, ಚೀನಾದಲ್ಲಿ ಪ್ರತಿ ವರ್ಷ ಸುಮಾರು 20 ಮಿಲಿಯನ್ ನಾಯಿಗಳನ್ನು ಸೇವಿಸಲಾಗುತ್ತದೆ. ದೇಶದಲ್ಲಿ ನಾಯಿ ಮಾಂಸ ಉತ್ಸವ ಕೂಡ ನಡೆಯುತ್ತದೆ. ವಿಯೆಟ್ನಾಂನ ಕೆಲವು ಪ್ರದೇಶಗಳಲ್ಲಿ ನಾಯಿ ಮಾಂಸ ಸೇವಿಸುವ ಜನರಿದ್ದಾರೆ. ಇದು ಶಕ್ತಿ ಅಥವಾ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಜನ ನಂಬಿದ್ದಾರೆ.

ದಕ್ಷಿಣ ಕೊರಿಯಾ ಕೂಡ ನಾಯಿ ಮಾಂಸ ಸೇವಿಸುವ ದೇಶಗಳಲ್ಲಿ ಒಂದು. ಕೊರಿಯಾ, ಇಂಡೋನೇಷ್ಯಾದ ಕೆಲ ಸಮುದಾಯಗಳಲ್ಲಿ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ನಾಯಿ ಮಾಂಸವನ್ನು ಸೇರಿಸಲಾಗಿದೆ. ಇದಲ್ಲದೆ, ನೈಜೀರಿಯಾ ಮತ್ತು ಘಾನಾ ಸೇರಿದಂತೆ ಆಫ್ರಿಕಾದ ಕೆಲವು ಭಾಗಗಳಲ್ಲಿ ನಾಯಿ ಮಾಂಸವನ್ನು ಸೇವಿಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಕಾಂಬೋಡಿಯಾ, ಲಾವೋಸ್, ಫಿಲಿಪೈನ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್ನ ಕೆಲವು ಭಾಗಗಳಲ್ಲಿ ಇದರ ಸೇವನೆಯು ಸೀಮಿತ ಪ್ರಮಾಣದಲ್ಲಿ ವರದಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡೆವಿಲ್ಸ್ ಕಿಚನ್ Vs ಸಿನಿಮಾ ನಂಟು: ಪ್ರಕೃತಿಯ ರಹಸ್ಯದೊಳಗಿನ ಸಾಹಸದ ಲೋಕ 'ಗುಣ ಗುಹೆ'
Tirumala Free Bus: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್, ಬೆಟ್ಟದ ಮೇಲೆ ಇನ್ಮುಂದೆ ಉಚಿತ ಪ್ರಯಾಣ!