ಕ್ಷುದ್ರಗ್ರಹ ಬೆನ್ನು ನೆಲ: ಅದೊಂದು ಕಲ್ಲು ಪರ್ವತದ ಜಾಲ!

By Web DeskFirst Published Jul 14, 2019, 2:00 PM IST
Highlights

ಬೆನ್ನು ಕ್ಷುದ್ರಗ್ರಹದ ಅತ್ಯಂತ ಸಮೀಪ ತಲುಪಿದ OSRIS-Rex ನೌಕೆ| ಬೆನ್ನು ಅಧ್ಯಯನದಲ್ಲಿ ನಿರತವಾದ ನಾಸಾದ OSRIS-Rex ನೌಕೆ|  ಬೆನ್ನುವಿನ ಮೇಲ್ಮೈಯಿಂದ ಕೇವಲ 3.4 ಕಿ.ಮೀ ದೂರ| 4.8 ಮೀಟರ್ ಎತ್ತರದ ಸುತ್ತಳತೆಯ ಬೃಹತ್ ಕಲ್ಲುಗಳ ರಾಶಿ| 

ವಾಷಿಂಗ್ಟನ್(ಜು.14): ಭೂಮಿಯತ್ತ ಮುನ್ನುಗ್ಗಿ ಬರುತ್ತಿರುವ ಕ್ಷುದ್ರಗ್ರಹ ಬೆನ್ನುವಿನ ಬೆನ್ನತ್ತಿರುವ ನಾಸಾ, OSRIS-Rex ನೌಕೆಯ ಮೂಲಕ ಕ್ಷುದ್ರಗ್ರಹದ ಅಧ್ಯಯನದಲ್ಲಿ ನಿರತವಾಗಿದೆ.

ಬೆನ್ನುವಿನ ಮೇಲ್ಮೈಯಿಂದ ಕೇವಲ 3.4 ಕಿ.ಮೀ ಮೇಲಿರುವ OSRIS-Rex ನೌಕೆ, ಕ್ಷುದ್ರಗ್ರಹವೊಂದರ ಅತ್ಯಂತ ಸಮೀಪಕ್ಕೆ ಹೋದ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೆ ಈಗಾಗಲೇ ಪಾತ್ರವಾಗಿದೆ.

ಇದೀಗ OSRIS-Rex ನೌಕೆ ಬೆನ್ನು ಮೇಲ್ಮೈನ ಅತ್ಯಂತ ಸಮೀಪದ ಫೋಟೋ ಕ್ಲಿಕ್ಕಿಸಿದ್ದು, ಸುಮಾರು 4.8 ಮೀಟರ್ ಎತ್ತರದ ಸುತ್ತಳತೆಯ ಬೃಹತ್ ಕಲ್ಲುಗಳ ರಾಶಿ ಕಂಡುಬಂದಿವೆ.

ಭೂಮಿಯ ಮೇಲಿರುವಂತೆ ಕಲ್ಲುಗಳ ಸಣ್ಣ ಪರ್ವತವೊಂದು ಬೆನ್ನು ಮೇಲ್ಮೈಯಲ್ಲಿದ್ದು, ಕಲ್ಲುಗಳು ಭಾರೀ ಗಾತ್ರದಿಂದ ಕೂಡಿಲ್ಲ ಎಂದು ನಾಸಾ ತಿಳಿಸಿದೆ.

ಮುಂದಿನ ಜುಲೈ 2020ರಲ್ಲಿ OSRIS-Rex ನೌಕೆ ಬೆನ್ನು ಅಂಗಳಕ್ಕೆ ಇಳಿಯಲಿದ್ದು, ಕ್ಷುದ್ರಗ್ರಹದ ನೆಲದಿಂದ ಮಾದರಿಯನ್ನು ಸಂಗ್ರಹಿಸಲಿದೆ.

ಕೇವಲ 500 ಮೀಟರ್ ಸುತ್ತಳತೆ ಹೊಂದಿರುವ ಬೆನ್ನು ಕ್ಷುದ್ರಗ್ರಹ ಭೂಮಿಯ ಪಥದಲ್ಲಿ ಮುನ್ನುಗ್ಗಿ ಬರುತ್ತಿದ್ದು, ಒಂದು ವೇಳೆ ಅದು ಭೂಮಿಗೆ ಅಪ್ಪಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ವಿಜ್ಞಾನಿಗಳು.

click me!