ಪ್ರಧಾನಿ ನಮ್ಮೆಲ್ಲರ ಸ್ಪೂರ್ತಿಯ ಮೂಲ: ಇಸ್ರೋ ಅಧ್ಯಕ್ಷ!

By Web Desk  |  First Published Sep 7, 2019, 9:57 PM IST

ಚಂದ್ರಯಾನ-2 ಯೋಜನೆ ಹಿನ್ನಡೆ ಹಿನ್ನೆಲೆ|  ಲ್ಯಾಂಡರ್ ಸಂಪರ್ಕ ಕಡಿತದ ಕುರಿತು ಇಸ್ರೋ ಅಧ್ಯಕ್ಷ ಪ್ರತಿಕ್ರಿಯೆ| ‘14 ದಿನಗಳ ಕಾಲ ಲ್ಯಾಂಡರ್’ನೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ’| ಪ್ರಧಾನಿ ಮೋದಿ ನಮ್ಮೆಲ್ಲರ ಸ್ಫೂರ್ತಿಯ ಮೂಲ ಎಂದ ಕೆ. ಸಿವನ್|


ನವದೆಹಲಿ(ಸೆ.07): ಚಂದ್ರಯಾನ-2 ಲ್ಯಾಂಡರ್ ಸಂಪರ್ಕ ಕಡಿತದ ಕುರಿತು ಇಸ್ರೋ ಅಧ್ಯಕ್ಷ ಕೆ.ಸಿವನ್ ಪ್ರತಿಕ್ರಿಯಿಸಿದ್ದು, ಇನ್ನೂ 14 ದಿನಗಳ ಕಾಲ ಲ್ಯಾಂಡರ್’ನೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

Indian Space Research Organisation (ISRO) Chief, K Sivan: Right now the communication is lost, we will try to establish a link for the next 14 days. (Courtesy: DD) pic.twitter.com/36bXQRrKHI

— ANI (@ANI)

ಯೋಜನೆಯ ಕೊನೆಯ ಹಂತವನ್ನು ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ, ಆ ಹಂತದಲ್ಲಿ ಲ್ಯಾಂಡರ್ ಜೊತೆ ಸಂಪರ್ಕ ಕಡಿದು ಹೋಯಿತು. ನಂತರ ಮತ್ತೆ ಸಂಪರ್ಕ ಸಾಧಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸಿವನ್ ಹೇಳಿದ್ದಾರೆ. 

Indian Space Research Organisation (ISRO) Chief, K Sivan: The designated life term of the Orbiter was only one year. But because we have extra fuel right now available in the Orbiter, so the Orbiter life is estimated as seven and a half years. (Courtesy: DD) pic.twitter.com/zZoAtQrRn9

— ANI (@ANI)

Latest Videos

undefined

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬೆಂಬಲದ ಕುರಿತು ಮಾತನಾಡಿರುವ ಸಿವನ್, ಅವರು ನಮ್ಮೆಲ್ಲರ ಸ್ಫೂರ್ತಿಯ ಮೂಲ ಎಂದು ಶ್ಲಾಘಿಸಿದ್ದಾರೆ .

Indian Space Research Organisation (ISRO) Chief, K Sivan: In total, the mission is very close to 100% success. (Courtesy: DD) pic.twitter.com/CQULoiDcRO

— ANI (@ANI)

ಪ್ರಧಾನಿ ನಮ್ಮೆಲ್ಲರ ಸ್ಪೂರ್ತಿ ಹಾಗೂ ಬೆಂಬಲದ ಮೂಲ. ವಿಜ್ಞಾನವನ್ನು ಫಲಿತಾಂಶಗಳಿಗಾಗಿ ಅಷ್ಟೇ ನೋಡಬಾರದು, ನಿರಂತರ ಪ್ರಯೋಗ ಫಲಿತಾಂಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವಿಶೇಷ ಅಂಶವನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದನ್ನು ತಾವು ಗಮನಿಸಿದ್ದಾಗಿ ಸಿವನ್ ನುಡಿದಿದ್ದಾರೆ.

click me!