ಪ್ರಜ್ಞಾನ್‌ಅನ್ನು ಹೊತ್ತಿಕೊಂಡ ಹೋದ ವಿಕ್ರಮ್ ನಮ್ಮ ವಿಜ್ಞಾನಿಗಳಿಂದ ಸಂಪರ್ಕ ಕಡಿದುಕೊಂಡಿದೆ. ಆದರೆ ಇದು ವೈಫಲ್ಯವಲ್ಲ. ಅದಾಗ್ಯೂ, ನಾವು ನಮ್ಮ ಈ ಮಿಷನ್ನಲ್ಲಿ ಯಶಸ್ವಿಯಾಗಿದ್ದೇವೆ. ಅದು ಹೇಗೆ? ಇಲ್ಲಿದೆ ವಿವರ....
ಬೆಂಗಳೂರು (ಸೆ.07): ಸಾವಿರಾರು ಮಂದಿಯ ಬೆವರು, ಹಲವಾರು ವರ್ಷಗಳ ಶ್ರಮ, ಸತತ ಪ್ರಯತ್ನ, 978 ಕೋಟಿ ಹಣ,1.36 ಬಿಲಿಯನ್ ಭಾರತೀಯರ ನಿರೀಕ್ಷೆ-ಪ್ರಾರ್ಥನೆಯ ಫಲ ಚಂದ್ರಯಾನ 2. ಚಂದ್ರಲೋಕದಲ್ಲಿ ಭಾರತೀಯ ರಾಯಭಾರಿಯನ್ನು ಇಳಿಸುವ ಮಿಷನ್‌ಗೆ ಕೊನೆಕ್ಷಣದಲ್ಲಿ ಹಿನ್ನಡೆಯಾಗಿದೆ.
ಚಂದ್ರನ ಅಂಗಳದ ಮೇಲೆ ಪ್ರಜ್ಞಾನ್ ರೋವರ್‌ಅನ್ನು ಹೊತ್ತೊಯ್ದ ವಿಕ್ರಮ್ ಲ್ಯಾಂಡರ್ ಸುಮಾರು 2.1 ಕಿ.ಮಿ. ದೂರದಲ್ಲಿ ನಮ್ಮ ವಿಜ್ಞಾನಿಗಳಿಂದ ಸಂಪರ್ಕ ಕಡಿದುಕೊಂಡಿದೆ. ಆದರೆ ನಾವು ನಿರಾಶರಾಗಬೇಕಾಗಿಲ್ಲ! ಹೌದು, ಇದು ಇಡೀ ಯೋಜನೆಯ ಸಣ್ಣ ಭಾಗ ಮಾತ್ರ!
undefined
ಹೌದು, ISRO ಅಧಿಕಾರಿಗಳ ಪ್ರಕಾರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಯೋಜನೆಯ ಶೇ.5 ಭಾಗ ಮಾತ್ರ, ಚಂದ್ರಯಾನ-2 ಆರ್ಬಿಟರ್ ಯೋಜನೆಯು ಉಳಿದ 95 ಶೇ. ಭಾಗವಾಗಿದೆ. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ.
ಇದನ್ನೂ ಓದಿ: 'ಚಂದ್ರಯಾನ 2ರ ಹೃದಯ ಬಡಿತ ಪ್ರತಿ ಭಾರತೀಯನಿಗೂ ಕೇಳಿಸ್ತಿದೆ'
ಒಂದು ವರ್ಷದ ಈ ಮಿಷನ್‌ನಲ್ಲಿ ಆರ್ಬಿಟರ್ ಚಂದ್ರನ ಸುತ್ತ ಸುತ್ತುತಿರುತ್ತದೆ. ಅಲ್ಲಿ ತೆಗೆದ ಚಿತ್ರಗಳನ್ನು ನಮಗೆ ಕಳುಹಿಸುತ್ತದೆ. ಅಷ್ಟೇ ಅಲ್ಲ, ನಮ್ಮ ಸಂಪರ್ಕದಿಂದ ತಪ್ಪಿಸಿಕೊಂಡಿರುವ ವಿಕ್ರಮ ಎಲ್ಲಾದರೂ ಸಿಕ್ಕರೆ, ಆತನ ಫೋಟೋ ತೆಗೆದು, ಆತನ ಸ್ಥಿತಿಗತಿ ನಮಗೆ ತಿಳಿಸಲಿದೆ, ಎಂದು ವಿಜ್ಞಾನಿಗಳು IANS ಸುದ್ದಿಸಂಸ್ಥೆಗೆ ಮಾಹಿತಿ ಕೊಟ್ಟಿದ್ದಾರೆ.
2379 Kg ಭಾರವಿರುವ ಆರ್ಬಿಟರ್, 1471 Kg ತೂಗುವ ವಿಕ್ರಮ್ ಮತ್ತು 27 Kg ಭಾರವಿರುವ ಪ್ರಜ್ಞಾನ್- ಚಂದ್ರಯಾನ-2 ಬಾಹ್ಯಾಕಾಶ ನೌಕೆಯ ಪ್ರಮುಖ 3 ಭಾಗಗಳು.
ಳೆದ ಜು.22ರಂದು ಆ ಮೂವರನ್ನು GSLV Mk III ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಹೊತ್ತುಕೊಂಡು ಹೊರಟ್ಟಿತ್ತು. ಸೆ.02ರಂದು ಯೋಜನೆಯಂತೆ ವಿಕ್ರಮ್ ಆರ್ಬಿಟರ್‌ನಿಂದ ಬೇರೆಯಾಯ್ತು. ಸೆ.07ರ ಮುಂಜಾನೆ ಪ್ರಜ್ಞಾನ್ ರೋವರನ್ನು ಚಂದ್ರನ ಮೇಲೆ ಇಳಿಸಬೇಕಿತ್ತು. ಆದರೆ ಅದು ಸಂಪರ್ಕ ಕಡಿದುಕೊಂಡಿದೆ ಅಷ್ಟೇ. ಮುಂದೆ ಸಂಪರ್ಕಕ್ಕೆ ಬಂದರೂ ಬರಬಹುದು. ಅಚ್ಚರಿಯಿಲ್ಲ...ನಾವು ಪ್ರಾರ್ಥಿಸೋಣ
ಚಂದ್ರಯಾನ-2ರ ಆರಂಭ...ಹಾರಾಟ...ಪಯಣ...ಸಮಗ್ರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ