Goodbye 2018: ವಾಟ್ಸಪ್ ಅಪ್ಗ್ರೇಡ್ ಮಾಡಿಲ್ವಾ? ಈ ಸ್ಟೋರಿ ಓದಿದ ಬಳಿಕ ಮಾಡೇ ಮಾಡ್ತೀರಾ!

By Web DeskFirst Published Dec 31, 2018, 5:39 PM IST
Highlights

ಕೆಲವರು ವಾಟ್ಸಪ್ ಒಮ್ಮೆ ಇನ್ಸ್ಟಾಲ್ ಮಾಡಿದ ಬಳಿಕ ಅದನ್ನು ಮತ್ತೆ ಮತ್ತೆ ಅಪ್ಗ್ರೇಡ್ ಮಾಡುವವರು ಕಡಿಮೆ. ಅನಿವಾರ್ಯ ಎದುರಾಗುವವರೆಗೂ ಯಾವುದೇ ಹೊಸ ಆವೃತ್ತಿಯನ್ನು ಅಪ್ಗ್ರೇಡ್ ಮಾಡಲ್ಲ. ಆದರೆ ಕಳೆದ ವರ್ಷದಲ್ಲಿ ವಾಟ್ಸಪ್, ಬಳಕೆದಾರರಿಗೆ ಪ್ರಯೋಜನಕಾರಿಯಾಗಿರುವ ಹಲವಾರು ಫೀಚರ್‌ಗಳನ್ನು ನೀಡಿದೆ. ಇಲ್ಲಿದೆ ಒಂದು ನೋಟ...

ವಿಶ್ವಾದ್ಯಂತ ಸಣ್ಣ ಉದ್ಯಮಗಳಿಗೆ ನೆರವಾಗಲು ಬಹುನಿರೀಕ್ಷಿತ  WhatsApp ಬಿಸಿನೆಸ್ ಆ್ಯಪ್ ಅನ್ನು ವಾಟ್ಸಪ್ ಬಿಡುಗಡೆ  ಮಾಡಿದೆ. ವೈಯಕ್ತಿಕ ಹಾಗೂ ವ್ಯವಹಾರ ಸಂಬಂಧಿ ಸಂದೇಶಗಳನ್ನು ಪ್ರತ್ಯೇಕಿಸುವ ಉದ್ದೇಶದಿಂದ ಬಿಸಿನೆಸ್ ಆ್ಯಪ್‌ಗೆ ಜನ್ಮ ನೀಡಲಾಗಿದೆ. ಸಣ್ಣ ಉದ್ದಿಮೆದಾರರು ತಮ್ಮ ಗ್ರಾಹಕರು  ಹಾಗೂ ವ್ಯವಹಾರ ಪಾಲುದಾರರನ್ನು ಈ ಆ್ಯಪ್ ಮೂಲಕ ತಲುಪಬಹುದು. 

ಅಮೆರಿಕಾದಲ್ಲಿ ಒಬ್ಬ, ಇಂಗ್ಲೆಂಡ್'ನಲ್ಲಿ ಮತ್ತೊಬ್ಬ, ರಷ್ಯಾದಲ್ಲಿ   ಇನ್ನೊಬ್ಬನೊಂದಿಗೆ ನೀವು ಒಟ್ಟಿಗೆ ಕುಳಿತು ವಿಡಿಯೋ ಕಾಲ್ ಮೂಲಕ ಮಾತನಾಡುವ ದೊಡ್ಡ ಅವಕಾಶದ ಬಾಗಿನ್ನು WhatsApp ತೆರೆದಿದೆ. ಒಬ್ಬರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಲು ಸಾಧ್ಯವಾಗಿದ್ದ ತಂತ್ರಜ್ಞಾನ ಈಗ ಒಟ್ಟಿಗೆ ನಾಲ್ಕು ಜನರು ಕುಳಿತು ಸಂಭಾಷಣೆ ನಡೆಸುವ ಗ್ರೂಪ್ ಕಾಲ್ ಸೌಲಭ್ಯಕ್ಕೆ ವಿಸ್ತರಣೆಯಾಗಿದೆ.

ಜನಪ್ರಿಯ ಸಾಮಾಜಿಕ ಮಾಧ್ಯಮ WhatsApp ಹೊಸದೊಂದು ಆಪ್ಷನ್ ಪರಿಚಯಿಸಿದ್ದು ತಮಗೆ ಬೇಕಾದವರಿಗೆ ಹಣವನ್ನು ಕಳಿಸಬಹುದು. ಇದಕ್ಕಾಗಿ ನೀವು ಮಾಡಬೇಕಿದ್ದು ಇಷ್ಟೆ.

WhatsAppನಲ್ಲಿ ಯಾವುದೇ ಇಮೇಜ್‌ಗಳು ಬಂದರೂ ಅವು ಗ್ಯಾಲರಿಯಲ್ಲಿ ಹೋಗಿ ಸೇವ್ ಆಗಿ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿದ್ದ ಕಾಲಕ್ಕೆ ಬ್ರೇಕ್ ಬಿದ್ದಿದೆ.

ವಿಶ್ವದ ಪ್ರಭಾವಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ WhatsApp ತನ್ನ ಬಳಕೆದಾರರು ಅದರಲ್ಲೂ ವಿಶೇಷವಾಗಿ ಗ್ರೂಪ್‌ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರವೊಂದನ್ನು ದಯಪಾಲಿಸಿದೆ. ಅದೇನೆಂದರೆ, ಒಂದು ಗ್ರೂಪ್‌ನಲ್ಲಿರುವ ಸದಸ್ಯರಿಗೆ ಆ ನಿರ್ದಿಷ್ಟಗ್ರೂಪ್‌ಗೆ ಸಂದೇಶ ಕಳುಹಿಸುವ ಹಕ್ಕನ್ನು ನೀಡಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಕೊಟ್ಟಿದೆ.

WhatsApp ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಅದರಂತೆ ವಿವಿಧ ಸುರಕ್ಷತಾ ಫೀಚರ್‌ಗಳನ್ನು WhatsApp ಹಂತ ಹಂತವಾಗಿ ಪರಿಚಯಿಸುತ್ತಿದೆ. ನಿಮಗೆ ಬರುವ ಸಂದೇಶದ ಮೂಲವನ್ನು ಆ ಸಂದೇಶದಲ್ಲೇ ತಿಳಿಸುತ್ತದೆ. ಅಂದರೆ ನಿಮಗೆ ಬಂದ ಸಂದೇಶ ನಿರ್ದಿಷ್ಟ ವ್ಯಕ್ತಿಯೇ ಕಳುಹಿಸಿದ್ದೋ ಅಥವಾ ಬೇರೊಬ್ಬರು ಕಳುಹಿಸಿದ ಸಂದೇಶ ಫಾರ್ವರ್ಡ್ ಮಾಡಿದ್ದೋ ಎಂಬುದನ್ನು ಕಂಡುಹಿಡಿಯಬಹುದು.

ನೀವಿನ್ನು ಕುಳಿತುಕೊಂಡು ಒಂದೇ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಸಂದೇಶಗಳನ್ನು ಕಳಿಸುವುದು ಸಾಧ್ಯವಿಲ್ಲ. ಭಾರತದಲ್ಲಿ ಸುಳ್ಳು ಸುದ್ದಿಗಳು ಹರಡುವಿಕೆಯನ್ನು ತಡೆಯುವ ಸಲುವಾಗಿ WhatsApp ಸಂದೇಶಗಳಿಗೆ ಲಿಮಿಟ್ ಹೇರಲು ನಿರ್ಧರಿಸಿದೆ. 

ಕಳೆದ ಕೆಲ ತಿಂಗಳುಗಳ ಹಿಂದೆ ಮೆಸೇಜ್ ಕಳುಹಿಸಿದ ಬಳಿಕ ಅದನ್ನು ಡಿಲೀಟ್ ಮಾಡುವ ಸೌಲಭ್ಯವನ್ನು WhatsApp ಕಲ್ಪಿಸಿತ್ತು. ಆದರೆ ಇದೀಗ ಆ ಸೌಲಭ್ಯದಲ್ಲೂ WhatsApp ಸಣ್ಣದಾದ, ಆದರೆ ಮಹತ್ವದ ಬದಲಾವಣೆಯನ್ನು ತಂದಿದೆ. ‘ಡಿಲೀಟ್ ಫಾರ್ ಎವ್ರಿಒನ್’ ಸೌಲಭ್ಯವನ್ನು ಮೊದಲ ಬಾರಿಗೆ ಪರಿಚಯಿಸಿದಾಗ, ಬಳಕೆದಾರರಿಗೆ  ಡಿಲೀಟ್ ಮಾಡಲು 1 ನಿಮಿಷಕ್ಕಿಂತಲೂ ಕಡಿಮೆ ಕಾಲಾವಕಾಶವಿತ್ತು. ಬಳಿಕ ಕಾಲಮಿತಿಯನ್ನು 1 ಘಂಟೆ 8 ನಿಮಿಷ 16 ಸೆಕೆಂಡ್‌ಗಳಿಗೆ ಏರಿಸಲಾಗಿತ್ತು.  ಇದೀಗ  ಹೊಸ ಆವೃತ್ತಿಯಲ್ಲಿ ಈ ಕಾಲಮಿತಿಯನ್ನು ಏರಿಸಲಾಗುತ್ತಿದೆ.

ದೀಪಾವಳಿ ಶುಭಾಶಯ ಕೋರಲು ಹೊಸ ಸ್ಟಿಕರ್‌ವೊಂದನ್ನು ಪರಿಚಯಿಸಲಾಗಿದ್ದು, ಇಮೋಜಿ, ಇಮೇಜ್ ಅಥವಾ ವಿಡಿಯೋ ತರಹ ಇದನ್ನೂ ಕಳುಹಿಸಬಹುದು.ಈ ಫಿಚರ್ ಅನುಕೂಲವೇನೆಂದರೆ, ಇದು ಇಮೇಜ್ ಅಥವಾ ವಿಡಿಯೋ ಫೈಲ್ ನಂತೆ ಹೆಚ್ಚು ಮೆಮೊರಿ ತೆಗೆದುಕೊಳ್ಳಲ್ಲ. ಆ ಮೂಲಕ ನಿಮ್ಮ  ಗ್ಯಾಲರಿಯ ಹೆಚ್ಚು ಸ್ಪೇಸ್  ಉಳಿಯಲಿದೆ.

ಗ್ರೂಪ್ ವೀಡಿಯೋ ಮತ್ತು ವಾಯ್ಸ್ ಕಾಲಿಂಗ್, ಸ್ಟಿಕರ್ಸ್,  ಪಾವತಿ ಸೇವೆ ಮುಂತಾದ ಹೊಸ ಫೀಚರ್ ಬಳಿಕ WhatsAppನಿಂದ ಇನ್ನೊಂದು ಹೊಸ ಸೌಲಭ್ಯ ಪ್ರೈವೇಟ್ ರಿಪ್ಲೈ. ಏನಿದು ಪ್ರೈವೇಟ್ ರಿಪ್ಲೈ, ಹೇಗಿದನ್ನು ಬಳಸಿಕೊಳ್ಳಬೇಕು? ಇಲ್ಲಿದೆ ಡೀಟೆಲ್ಸ್.. 
 
ಬಳಕೆದಾರರಿಗೆ ಇನ್ನೊಂದು ಹೊಸ ಫೀಚರ್ ನೀಡಲು WhatsApp ಇದೀಗ ಮುಂದಾಗಿದೆ. ‘ಫಾರ್ವರ್ಡ್ ಪ್ರಿವೀವ್’  ಎಂಬ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.

ಮೆಸೇಜ್‌ಗಳನ್ನು, ಇಮೇಜ್‌ಗಳನ್ನು ನೋಟಿಫಿಕೇಶನ್ ಪ್ಯಾನೆಲ್‌ನಿಂದಲೇ ಪ್ರಿವೀವ್ ಮಾಡಲು ಅವಕಾಶ ಮಾಡಿಕೊಟ್ಟಿರುವ WhatsApp ಇದೀಗ ವಿಡಿಯೋ ಪ್ರಿವೀವ್ ಸೌಲಭ್ಯವನ್ನು ನೀಡುತ್ತಿದೆ.

WhatsAppನಿಂದ ಬಳಕೆದಾರರಿಗೆ ಹೊಸ ಫೀಚರ್‌! WhatsApp ಬಿಟ್ಟು ಬೇರೆಲ್ಲೂ ಹೋಗೋದು, ಮತ್ತೆ ವಾಪಸು ಬರೋದು ಕಿರಿಕಿರಿ ಇನ್ನಿಲ್ಲ; ಏನದು ಅಂತಹ ಹೊಸ ಫೀಚರ್? ಇಲ್ಲಿದೆ Picture in Picture ಫೀಚರ್ ಡೀಟೆಲ್ಸ್...

click me!