ಚಂದ್ರನ ‘ಡಾರ್ಕ್ ಸೈಡ್’ನತ್ತ ಚೀನೀ ಯಾನ!

By Web Desk  |  First Published Dec 30, 2018, 4:26 PM IST

ಹೊಸ ಇತಿಹಾಸ ಬರೆಯಲಿದೆ ಚೀನಾದ ಚ್ಯಾಂಗ್ ಇ-4 ನೌಕೆ| ಚಂದ್ರನ ಹಿಮ್ಮುಖ ಭಾಗದಲ್ಲಿ ಲ್ಯಾಂಡ್ ಆಗಲಿದೆ ಚ್ಯಾಂಗ್ ಇ-4| ಇದುವರೆಗೂ ಯಾರೂ ನೋಡಿರದ ಚಂದ್ರನ ‘ಡಾರ್ಕ್ ಸೈಡ್’


ಬಿಜಿಂಗ್(ಡಿ.30): ಈ ತಿಂಗಳ ಆರಂಭದಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಿದ ಚೀನಾದ ಚ್ಯಾಂಗ್ ಇ-4 ನೌಕೆ ಮಾನವ ಇತಿಹಾಸದಲ್ಲಿ ಹೊಸದೊಂದು ಸಾಧನೆ ಮಾಡಲು ಸಜ್ಜಾಗಿದೆ.

ಚೀನಾದ ಚ್ಯಾಂಗ್ ಇ-4 ಇದುವರೆಗೂ ಯಾರೂ ನೋಡಿರದ ಚಂದ್ರನ ಪಾರ್ಶ್ವ ನೆಲದಲ್ಲಿ ಇಳಿಯಲಿದೆ. ಚಂದ್ರನ ಸಮಕಾಲಿಕ ಪರಿಭ್ರಮಣೆ ಫಲವಾಗಿ ಅದರ ಒಂದೇ ಮುಖ ಭೂಮಿಗೆ ಕಾಣುತ್ತದೆ. ಹೀಗಾಗಿ ಚಂದ್ರನ ಹಿಮ್ಮುಖವನ್ನು ಇದುವರೆಗೂ ನೊಡಲು ಸಾಧ್ಯವಾಗಿಲ್ಲ.

Tap to resize

Latest Videos

1959ರಲ್ಲಿ ಅಂದಿನ ಸೋವಿಯತ್ ರಷ್ಯಾದ ಲೂನಾ-3 ನೌಕೆ ಚಂದ್ರನ ಹಿಮ್ಮುಖವನ್ನು ಚಿತ್ರೀಕರಿಸಿತ್ತು. ಅದನ್ನು ಬಿಟ್ಟರೆ ಈ ಭಾಗದ ಕುರಿತು ಮಾನವನ ಜ್ಞಾನ ತೀರ ಕಡಿಮೆ.

ಈ ಹಿನ್ನೆಲೆಯಲ್ಲಿ ಚೀನಾದ ಚ್ಯಾಂಗ್ ಇ-4 ನೌಕೆ ಚಂದ್ರನ ಹಿಮ್ಮುಖ ಭಾಗದಲ್ಲಿ ಇಳಿಯಲಿರುವುದು ಹೊಸ ದಾಖಲೆ ಎಂದೇ ಹೇಳಬೇಕಾಗುತ್ತದೆ.

click me!