ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಿದರು.
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಆ.12): ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯನ್ನು ಪರಿಶೀಲಿಸಿದರು.
ವಿಶ್ವ ಸಂಸ್ಥೆಯ ಜಿನಿವಾದ ಮೆಂಟಲ್ ಹೆಲ್ತ್ ಏಮರ್ಜೇನ್ಸಿ ಘಟಕದ ಕ್ಲಿನಿಕಲ್ ಸೈಕಲಾಜಿಸ್ಟ ಡಾ. ಜೇಮ್ಸ್ ಅಂಡರಹಿಲ್, ಸೈಕಿಯಾಟ್ರಿಸ್ಟ ಡಾ. ಸುದಿಪ್ತೂ ಚಟರ್ಜಿ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಶುಕ್ರವಾರ ಭೇಟಿ ನೀಡಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕಾರ್ಯಚಟುವಟಿಕೆಗಳು ಹಾಗೂ ಟೆಲಿಮನಸ್ ಉಚಿತ ಸಹಾಯವಾಣಿಯ ಉಪಯುಕ್ತತೆಯ ಕುರಿತಾಗಿ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪಾಟೀಲ ಶಶಿ ಅವರು ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಮನೋಚೈತನ್ಯ ಕಾರ್ಯಕ್ರಮದಲ್ಲಿ ಉಚಿತ ಚಿಕಿತ್ಸೆ ಶಿಬಿರವನ್ನು ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸುತ್ತಿದ್ದು ಔಷಧಿಗಳನ್ನೂ ಕೊಡಲಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗಕ್ಕೆ ಬಂತು ಪಾಕಿಸ್ತಾನ ಎದೆ ನಡುಗಿಸಿದ್ದ ಭಾರತೀಯ ಸೇನೆ ಟ್ಯಾಂಕರ್ : 32 ಸಾವಿರ ಕೆ.ಜಿ. ತೂಕದ ಬಲಭೀಮ
ಟೆಲಿಮನಸ್ ಸಹಾಯವಾಣಿಗೆ ಕರೆ ಮಾಡಿದ ಡಬ್ಲ್ಯೂಎಚ್‌ಒ ಸಿಬ್ಬಂದಿ: ಟೆಲಿಮನಸ್ ಸೇವೆಯ ಸೌಲಭ್ಯವನ್ನು ಹಾಗೂ ಸಹಾಯವಾಣಿಯನ್ನು 1800-89-14416 ಈ ಟೋಲ್ ಪ್ರೀನಂಬರನ್ನು ಸಮುದಾಯದಲ್ಲಿ ಜಾಗ್ರತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ಎಸ್. ಬಿಕಳಸೂರಮಠ ಅವರು ಈ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆಂದು ಮಾಹಿತಿ ನೀಡಿದರು.
ವಿಮೆ ತಿರಸ್ಕರಿಸಿದ ರಿಲೈನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗೆ 5 ಲಕ್ಷ ದಂಡ ವಿಧಿಸಿದ ಗ್ರಾಹಕರ ಆಯೋಗ!
ಮನೋವೈಧ್ಯೆ ಡಾ. ವೈಶಾಲಿ.ಎನ್.ಹೆಗಡೆ ಅವರು ಮಾನಸಿಕ ಆರೋಗ್ಯ ಚಟುವಟಿಕೆಗಳ ಕುರಿತಾಗಿ ವರದಿಯನ್ನು ನೀಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಚಟುವಟಿಕೆಗಳ ಬಗ್ಗೆ, ಚಿಕಿತ್ಸೆ ಸೌಲಭ್ಯದ ಬಗ್ಗೆ ಹಾಗೂ ಕಾರ್ಯಕ್ರಮದ ಅನುಷ್ಠಾನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ತಂಡದವರೂಂದಿಗೆ ನಿಮ್ಹಾನ್ಸ ಡಾ. ಸುರೇಶ ಹಾಗೂ ಡಾ. ಮಂಜುನಾಥ ಮನೋವೈದ್ಯರು ಹಾಗೂ ಧಾರವಾಡ ಡಿಮ್ಹಾನ್ಸ್ಸ ಸಂಸ್ಥೆಯ ಡಾ. ಸುಧೀಂದ್ರ ಹುದ್ದಾರ ಮತ್ತು ಡಾ. ಶ್ರೀನಿವಾಸ ಮನೋವೈದ್ಯರು ಹಾಗೂ ಡಿ.ಎಮ್.ಎಚ್.ಪಿ ಎಲ್ಲಾ ಸಿಬ್ಬಂದಿಗಳು ಭಾಗಿಯಾಗಿದ್ದರು.