ಅತ್ಯುತ್ತಮ ತನಿಖೆಗಾಗಿ ಕೇಂದ್ರ ಗೃಹ ಸಚಿವಾಲಯ ನೀಡಲಾಗುವ ಗೃಹಮಂತ್ರಿಗಳ ಪದಕವನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ದೇಶದ 140 ಮಂದಿ ಪೊಲೀಸರಿಗೆ ಈ ಬಾರಿಯ ಪದಕ ನೀಡಲಾಗಿದೆ.
ನವದೆಹಲಿ (ಆ.12): ಅತ್ಯುತ್ತಮ ತನಿಖೆಗಾಗಿ ನೀಡಲಾಗುವ 2023ರ ಸಾಲಿನ ಗೃಹಮಂತ್ರಿಗಳ ಪದಕವನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟ ಮಾಡಿದೆ. ದೇಶದ 140 ಪೊಲೀಸರು ಹಾಗೂ ಸಿಬಿಐ, ಎನ್‌ಐಎ ಅಧಿಕಾರಿಗಳಿಗೆ ಈ ಬಾರಿಯ ಪದಕಗಳನ್ನು ಘೋಷಣೆ ಮಾಡಲಾಗಿದ್ದು ರಾಜ್ಯ ಐವರು ಪೊಲೀಸರು ಈ ಬಾರಿಯ ಪದಕ ಪಡೆಯಲಿದ್ದಾರೆ. ಕೇಂದ್ರ ತನಿಖಾ ದಳ ಅಂದರೆ ಸಿಬಿಐನಲ್ಲಿ ಗರಿಷ್ಠ ಅಧಿಕಾರಿಗಳು ಪದಕ ಪಡೆದಿದ್ದಾರೆ. 15 ಸಿಬಿಐ ಅಧಿಕಾರಿಗಳು ಪದಕ ಪಡೆದಿದ್ದರೆ, ಭಯೋತ್ಪಾದನಾ ಕೇಸ್‌ಗಳ ವಿಚಾರಣೆ ನಡೆಸುವ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಅಂದರೆ ಎನ್‌ಐಎನ 12 ಅಧಿಕಾರಿಗಳು ಪದಕ ಪಡೆಯಲಿದ್ದಾರೆ. ಉತ್ತರ ಪ್ರದೇಶದಿಂದ 10, ಕೇರಳ ಹಾಗೂ ರಾಜಸ್ಥಾನದಿಂದ ತಲಾ 9, ತಮಿಳುನಾಡು ರಾಜ್ಯದಿಂದ 8, ಮಧ್ಯಪ್ರದೇಶದಿಂದ 7, ಗುಜರಾತ್‌ನಿಂದ 6 ಹಾಗೂ ಕರ್ನಾಟಕದಿಂದ ಏಳು ಪೊಲೀಸ್ ಅಧಿಕಾರಿಗಳು ಪದಕ ಪಡೆದುಕೊಳ್ಳಲಿದ್ದಾರೆ. ಅದರೊಂದಿಗೆ ದೇಶದ ವಿವಿಧ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೂ ಪದಕ ಸಿಕ್ಕಿದೆ. 22 ಮಹಿಳಾ ಪೊಲೀಸ್ ಅಧಿಕಾರಿಗಳಿಗೂ ಪದಕ ಘೋಷನೆಯಾಗಿದೆ.
ಅತ್ಯುತ್ತಮವಾಗಿ ತನಿಖೆ ನಡೆಸಿದ ಪೊಲೀಸರಿಗೆ ನೀಡಲಾಗುವ ಪದಕ ಪುರಸ್ಕೃತರ ಪಟ್ಟಿಯಲ್ಲಿ ಕರ್ನಾಟಕದ ಡಿವೈಎಸ್‌ಪಿ ಹಾಗೂ 2013ರ ಚಿಕ್ಕೋಡಿ ಡಬಲ್ ಮರ್ಡರ್ ಕೇಸ್‌ಅನ್ನು ಯಶಸ್ವುಯಾಗಿ ಬೇಧಿಸಿದ್ದ ಶಂಕರ್ ಎಂ ರಾಗಿ, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿಬಿ ಶಿವಸ್ವಾಮಿ, ಇನ್ಸ್‌ಪೆಕ್ಟರ್‌ಗಳಾದ ರಾಮಪ್ಪ ಬಿ, ರುದ್ರಗೌಡ ಆರ್ ಪಾಟೀಲ್ ಹಾಗೂ ಪಿ.ಸುರೇಶ್ ಈ ಬಾರಿಯ ಪದಕ ಸಂಪಾದನೆ ಮಾಡಿದ್ದಾರೆ. ಅಪರಾಧದ ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ ಈ ಪದಕವನ್ನು 2018 ರಲ್ಲಿ ಸ್ಥಾಪಿಸಲಾಗಿದೆ. ಇದನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಘೋಷಿಸಲಾಗುತ್ತದೆ.
ಚಿಕ್ಕೋಡಿ ಡಬಲ್ ಮರ್ಡರ್ ಕೇಸ್‌ನ ಚಾಣಾಕ್ಷ ತಲೆ: 2013 ರಲ್ಲಿ ಚಿಕ್ಕೋಡಿಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸ್ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಶಂಕರ್ ರಾಗಿ ಅವರು ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದರು. ಸದ್ಯ ಗದಗ ಡಿವೈಎಸ್ ಪಿಯಾಗಿರುವ ಶಂಕರ್ ರಾಗಿ 2013 ರಲ್ಲಿ ಚಿಕ್ಕೋಡಿ ಠಾಣೆಯ ಸಿಪಿಐ ಆಗಿದ್ದರು. ತಾಲೂಕಿನ ಮಮದಾಪುರ ಕೆಕೆ ಗ್ರಾಮದ ಸಂಗೀತಾ ಆಕಳೆ, ಬಸವರಾಜ್ ಬುರ್ಜಿ ಅವರ ಜೋಡಿ ಕೊಲೆಯಾಗಿತ್ತು.. ಇದರ ತನಿಖೆ ಕೈಗೆತ್ತಿಕೊಂಡಿದ್ದ ಶಂಕರ್ ರಾಗಿ ಪ್ರಕರಣವನ್ನು ಬೇಧಿಸಿದ್ದರು. ಅನೈತಿಕ ಸಂಬಂಧದ ಶಂಕೆಯಿಂದ ಬಾಬು ಆಕಳೆ ಎಂಬಾತ ಪತ್ನಿ ಸಂಗೀತಾ ಹಾಗೂ ಬಸವರಾಜ್ ಅನ್ನೋರನ್ನ ಕೊಚ್ಚಿ ಕೊಲೆ ಮಾಡಿದ್ದ. ಬಳಿಕ ಇಬ್ಬರ ದೇಹವನ್ನು ಜಾಲಿ ಮುಳ್ಳಿನ ಗಿಡಕ್ಕೆ ಕಟ್ಟಿ ಇರಿಸಲಾಗಿತ್ತು.
Kolkata Shocker: ತಾಯಿಯನ್ನೇ ಎರಡು ಬಾರಿ ಅತ್ಯಾಚಾರ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!
ಪ್ರಕರಣ ಬೆಳಗಾವಿಯಾದ್ಯಂತ ಸಂಚಲನ ಮೂಡಿಸಿತ್ತು.. ಪ್ರಕರಣ ಸಂಬಂಧ ಬಾಬು ಆಕಳೆ ನಾಗಪ್ಪ ಆಕಳೆ, ಮುತ್ತಪ್ಪ ಆಕಳೆ ಅವರನ್ನ ಬಂಧಿಸಿದ್ದ ಶಂಕರ್ ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಜೋಡಿ ಕೊಲೆ ಪ್ರಕರಣದ ವಿಚಾರಣೆ ನಡೆಸಿ ಮೂವರು ಆರೋಪಿಗಳಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2022 ರಲ್ಲಿ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Murdoli Forest: ನಡುರಾತ್ರಿ ಕಾರ್‌ಗೆ ಡಿಕ್ಕಿಯಾದ ಹುಲಿ, ತೆವಳಿಕೊಂಡು ಹೋಗಿ ಪ್ರಾಣಬಿಟ್ಟಿತು!