ಪಾಕಿಸ್ತಾನದ ಎದೆ ನಡುಗಿಸಿದ್ದ ಭಾರತೀಯ ಯುದ್ಧ ಟ್ಯಾಂಕರ್‌ ಶಿವಮೊಗ್ಗದಲ್ಲಿ ಸ್ಥಾಪನೆ

Published : Aug 12, 2023, 04:24 PM ISTUpdated : Aug 13, 2023, 12:44 PM IST
ಪಾಕಿಸ್ತಾನದ ಎದೆ ನಡುಗಿಸಿದ್ದ ಭಾರತೀಯ ಯುದ್ಧ ಟ್ಯಾಂಕರ್‌ ಶಿವಮೊಗ್ಗದಲ್ಲಿ ಸ್ಥಾಪನೆ

ಸಾರಾಂಶ

ಇಂಡಿಯಾ- ಪಾಕಿಸ್ತಾನ ಯುದ್ಧಕ್ಕೆ ಬಳಕೆ ಮಾಡಲಾದ ಭಾರತೀಯ ಸೇನೆಯ ಯುದ್ಧ ಟ್ಯಾಂಕರ್‌ ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರಕ್ಕೆ ಆಗಮಿಸಿದೆ.

ಶಿವಮೊಗ್ಗ (ಆ.12): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದೇ ತಡ, ಶಿವಮೊಗ್ಗ ನಗರದ ಅಭಿವೃದ್ಧಿ ಚಿತ್ರಣವೇ ಬದಲಾಗುತ್ತಿದೆ. ಎಷ್ಟೋ ಜನರು ಭಾರತೀಯ ಸೇನೆ ಬಳಸುವ ಶಸ್ತ್ರಾಸ್ತ್ರಗಳನ್ನೇ ನೋಡಿರುವುದಿಲ್ಲ. ಆದರೆ, ಈಗ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಬಳಸಲಾದ ಟ್ಯಾಂಕರ್‌ ಅನ್ನು ಶಿವಮೊಗ್ಗಕ್ಕೆ ತರಲಾಗಿದ್ದು, ಅದ್ಧೂರಿಯಾಗಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮುಂದಿನ ದಿನಗಳಲ್ಲಿ ಯುದ್ಧ ವಿಮಾನವೂ ಕೂಡ ಆಗಮಿಸಲಿದೆ.

ಭಾರತ ಮತ್ತು ಪಾಕಿಸ್ತಾನ ಯುದ್ಧದ (India Pakistan War) ಸಂದರ್ಭದಲ್ಲಿ ಬಾಂಗ್ಲಾ ವಿಮೋಚನಾ ಯುದ್ಧಕ್ಕೆ (Bangla Liberation War) ಬಳಕೆಯಾಗಿದ್ದ ಯುದ್ದ ಟ್ಯಾಂಕರ್  ಅನ್ನು ಈಗ ಶಿವಮೊಗ್ಗ ನಗರಕ್ಕೆ ತರಲಾಗಿದೆ. ಇನ್ನೆರಡು ತಿಂಗಳಲ್ಲಿ ಯುದ್ಧ ವಿಮಾನವೇ ಶಿವಮೊಗ್ಗ ನಗರಕ್ಕೆ (Shivamogga City) ಆಗಮಿಸಲಿದೆ. ಇನ್ನು ಯುದ್ಧ ಟ್ಯಾಂಕರ್‌ ಅನ್ನು ಶಾಸಕ ಚನ್ನ ಬಸಪ್ಪ, ಮೇಯರ್ ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾಜಿ ಸೈನಿಕ ಸಂಘದ ಸುಬೇದಾರ್ ಮೇಜರ್ ಉದಯ್ ರಿಂದ ಪುಷ್ಪ ಹೂಗುಚ್ಚ ಸುರಿಸಿ ಸ್ವಾಗತ ಮಾಡಿದರು.

ಶಿವಮೊಗ್ಗ ವಿಮಾನಕ್ಕೆ ಭರ್ಜರಿ ಡಿಮ್ಯಾಂಡ್‌, ಇಂಡಿಗೋ ಟಿಕೆಟ್‌ ದೋಸೆಯಂತೆ ಬಿಕರಿ, ದರ 4 ಪಟ್ಟು ಏರಿಕೆ!

ಪುಣೆಯಿಂದ ಲಾರಿಯಲ್ಲಿ ಬಂದ ಟ್ಯಾಂಕರ್‌: ಇಷ್ಟು ದಿನ ಪೂನಾದಲ್ಲಿ ಸೇನೆಯ ಬಳಿಯಿದ್ದ ಯುದ್ಧ ಟ್ಯಾಂಕರ್‌ ಅನ್ನು ಲಾರಿಯಲ್ಲಿ ತರಿಸಲಾಗಿದೆ. ಅಲ್ಲಿಂದ ಲಾರಿಯಲ್ಲಿ ಬಂದ ಟ್ಯಾಂಕರ್‌ ಅನ್ನು ಅಲಂಕಾರ ಮಾಡಿ ನಗರದೊಳಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು. ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ (Shivamogga Sangolli rayanna Circle) ವಾದ್ಯಗಳೊಂದಿಗೆ ಪುಷ್ಪ ಸುರಿಮಳೆ ಮಾಡಲಾಯಿತು. ಈ ವೇಳೆ ಭಾರತೀಯ ಸೇನೆಯಿಂದ ಪಡೆದ ಟ್ಯಾಂಕರ್ ಅನ್ನ ಮಾಜಿ ಸೈನಿಕರ ಸಂಘದಿಂದ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಯಿತು. ಟ್ಯಾಂಕರ್ ನೋಡಲು ಜನರ ಜಮಾವಣೆ ಆಗಿತ್ತು. ಈ ವೇಳೆ ಭಾರತ್ ಮಾತಾಕಿ ಜೈ ಘೋಷಣೆ ಮುಗಿಲು ಮುಟ್ಟಿತ್ತು. 

ಮುಂದಿನ ಎರಡು ತಿಂಗಳಲ್ಲಿ ಯುದ್ಧ ವಿಮಾನ ಆಗಮನ:  ಈ ಕುರಿತು ಮಾತನಾಡಿದ ಶಾಸಕ ಚೆನ್ನಬಸಪ್ಪ, ಬಾಂಗ್ಲಾ ವಿಮೋಚನ ಹೋರಾಟದ ವೇಳೆ ಬಳಕೆಯ ಯುದ್ಧ ಟ್ಯಾಂಕರ್ ಇಂದು ಶಿವಮೊಗ್ಗಕ್ಕೆ ಬಂದಿದೆ. ಇನ್ನೆರಡು ತಿಂಗಳಲ್ಲಿ ಯುದ್ಧ ವಿಮಾನವೂ ಶಿವಮೊಗ್ಗಕ್ಕೆ ಆಗಮಿಸಲಿದೆ. ಇವರೆಡೂ ಶಿವಮೊಗ್ಗಕ್ಕೆ ತರಲು ಸಂಸದ ರಾಘವೇಂದ್ರರ (Shivamogga MP BY Raghavendra) ಶ್ರಮ ಅಪಾರವಾದದ್ದಾಗಿದೆ. 2021 ಮತ್ತು 22 ನೇ ಸಾಲಿನನಲ್ಲಿ ಪಾಲಿಕೆ 25 ಲಕ್ಷ ರೂ. ತೆಗೆದಿಡಲಾಗಿತ್ತು. ವಿಮಾನ ಬರುವ ವೇಳೆ ಟ್ಯಾಂಕರ್ ನ್ನ ಐಬಿ ವೃತ್ತ ಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ಕೆಳಜಾತಿಯ ಕುರುಬರು ಲಾಯರ್‌ ಓದಬಾರ್ದು ಎಂದಿದ್ರು, ಪಟ್ಟಭದ್ರ ಹಿತಶತ್ರುಗಳು ಎಲ್ಲ ಕಾಲದಲ್ಲೂ ಇದ್ದಾರೆ: ಸಿಎಂ ಸಿದ್ದರಾಮಯ್ಯ

ಎಂಆರ್‌ಎಸ್‌ ವೃತ್ತದಲ್ಲಿ ಯುದ್ಧ ಟ್ಯಾಂಕರ್‌ ಸ್ಥಾಪನೆ: ಈಗ ಶಿವಮೊಗ್ಗಕ್ಕೆ ಆಗಮಿಸಿದ ಯುದ್ಧ ಟ್ಯಾಂಕರ್‌ ಅನ್ನು ಸದ್ಯಕ್ಕೆ ಎಂಆರ್‌ಎಸ್ ವೃತ್ತದ ಬಳಿ ಸ್ಥಾಪಿಸಲಾಗುವುದು. ಎಂಆರ್ ಎಸ್ ವೃತ್ತದ ಪಕ್ಕದಲ್ಲಿರುವ ಮೆಸ್ಕಾಂ ಮೈದಾನದಲ್ಲಿ  26 ಚಕ್ರದ ಲಾರಿಯಲ್ಲಿ ಹೊತ್ತು ತಂದ ಟ್ಯಾಂಕರ್ ನ್ನ ಇರಿಸಲಾಗಿದೆ. ಇನ್ನು ಯುದ್ಧ ಟ್ಯಾಂಕರ್ ಗೆ ಪೇಂಟಿಂಗ್ ಮಾಡಬೇಕಿದ್ದು ನಂತರ ಎಂಆರ್ ಎಸ್ ವೃತ್ತದಲ್ಲಿ ಇರಿಸಲಾಗುವುದು ಎಂದು ಮಾಹಿತಿ ನೀಡಿದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!
ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!