ಜನರಲ್ಲಿ ಭಯ ಹುಟ್ಟಿಸಿದ್ದ ಕಾಡಾನೆಗೆ ಟ್ರೈನಿಂಗ್ ಸಕ್ಸಸ್; ಅಭಿಮನ್ಯುವಾಗಿ ಕ್ರಾಲ್ ನಿಂದ ಬಿಡುಗಡೆ!

By Ravi Janekal  |  First Published Jul 4, 2023, 11:13 AM IST

ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ ಭಾಗದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಕಾಡಾನೆ ಶಿವಮೊಗ್ಗದ ಸಕ್ರೆ ಬೈಲು ಆನೆ ಬಿಡಾರದಲ್ಲಿ ಟ್ರೈನಿಂಗ್ ಕೊಟ್ಟ ಬಳಿಕ ಕೀಟಲೆ, ದಾಂಧಲೆಗಳೆಲ್ಲ ಬಿಟ್ಟು ಒಳ್ಲೆಯವನೆನಸಿ ಅಭಿಮನ್ಯುವಾಗಿ  ಹೊರಬಂದಿದ್ದಾನೆ.


ಶಿವಮೊಗ್ಗ (ಜು.4) : ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ ಭಾಗದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಕಾಡಾನೆ ಶಿವಮೊಗ್ಗದ ಸಕ್ರೆ ಬೈಲು ಆನೆ ಬಿಡಾರದಲ್ಲಿ ಟ್ರೈನಿಂಗ್ ಕೊಟ್ಟ ಬಳಿಕ ಕೀಟಲೆ, ದಾಂಧಲೆಗಳೆಲ್ಲ ಬಿಟ್ಟು ಒಳ್ಲೆಯವನೆನಸಿ ಅಭಿಮನ್ಯುವಾಗಿ  ಹೊರಬಂದಿದ್ದಾನೆ.

ಮಾ. 11ರಂದು ಬಂಧಿಯಾಗಿ ಮೊದಲ ಬಾರಿಗೆ ಕಾಲ್ ವಾಸದಿಂದ ಹೊರಬಂದಿರುವ ಅಭಿಮನ್ಯು.  ಬಿಡುಗಡೆ ಮಾಡುವ ಮುನ್ನ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಪೂಜೆ ಸಲ್ಲಿಸಿದರು. ಕಾಡಾನೆಗೆ ಕಾಲ್‌ನಲ್ಲಿದ್ದ ಸಂದರ್ಭದಲ್ಲಿ ಅಭಿಮನ್ಯು ಎಂದು ನಾಮಕರಣನ ಮಾಡಲಾಗಿದೆ. ಅಭಿಮನ್ಯು ಈಗ ಮೊದಲಿನಂತಿಲ್ಲ ಟ್ರೈನಿಂಗ್ ಬಳಿಕ ವರ್ತನೆಯಲ್ಲಿ ಈಗ ಬಹಳಷ್ಟು ಬದಲಾವಣೆಯಾಗಿದೆ. ಸತತವಾಗಿ ಕ್ರಾಲ್‌ನಲ್ಲಿದ್ದ ಕಾರಣ ಅಭಿಮನ್ಯು ತೂಕ ಸ್ವಲ್ಪ ಕಡಿಮೆಯಾಗಿದೆ. ಆದರೆ ಇನ್ನು ಕೆಲ ದಿನಗಳಲ್ಲೇ ಆನೆ ತನ್ನ ಮೊದಲಿನ ತೂಕವನ್ನು ಪಡೆದುಕೊಳ್ಳಲಿದೆ. 

Latest Videos

undefined

 

Chamarajanagar: ಕೃಷಿ ಜಮೀನಿಗೆ ಕಾಡಾನೆ ದಾಳಿ: ಕಂಗಾಲಾದ ರೈತರು

ಸೆರೆಸಿಕ್ಕ ಬಳಿಕ ಸಕ್ರೆಬೈಲಿಗೆ ಬಂದಿದ್ದ ಆನೆಯ ಪಳಗಿಸುವ ಜವಾಬ್ದಾರಿ ಹೊತ್ತ ಜಮೇದಾ‌ ಪಾಶಾ, ಮಂಜು ಮತ್ತಿತರರ ತಂಡ ಅದರಲ್ಲಿ ಯಶಸ್ವಿಯಾಗಿದ್ದಾರೆ.  ಕ್ರಾಲ್‌ನಲ್ಲಿ ಕಠಿಣ ಜೀವನ ನಡೆಸಿದ್ದ ಒಂಟಿ ಸಲಗದ ಹಠ ಈಗ ಕಡಿಮೆಯಾಗಿದೆ. ರೋಷ, ಆವೇಶ ತಗ್ಗಿದೆ.  ಆದರೂ ಇದನ್ನು ಬಿಡಾರಕ್ಕೆ ಕೊಂಡೊಯ್ಯುವಂತಿಲ್ಲ. ಇನ್ನೂ ಅದರ ಸ್ವಭಾವ ಸಂಪೂರ್ಣ ಬದಲಾಗಿದೆ ಎಂಬುದು ಖಚಿತವಾಗಿಲ್ಲ. ಹೀಗಾಗಿ ಕೆಲ ದಿನಗಳ ಕಾಲ ಅಭಿಮನ್ಯು ಕಾಲಿಗೆ ಸರಪಳಿ ನಿಶ್ಚಿತ. ಇನ್ನೂ ಕೆಲವು ದಿನ ಅಭಿಮನ್ಯುವನ್ನು ಕ್ರಾಲ್ ನಲ್ಲಿ ಹೊರಗೆ ಸರಪಳಿ ಮೂಲಕ ಬಂಧಿಯಾಗಿ ಇರಿಸಲಾಗುವುದು.  ಬಿಡಾರದೊಳಕ್ಕೆ ಸದ್ಯಕ್ಕೆ ಅಭಿಮನ್ಯುವಿಗೆ ಪ್ರವೇಶ ನೀಡುವುದಿಲ್ಲ ಎಂದು ಡಿಸಿಎಫ್ ಪ್ರಸನ್ನಕೃಷ್ಣ ಪಟಗಾ‌ರ್ ಮಾಹಿತಿ ನೀಡಿದ್ದಾರೆ.

ದಾವಣಗೆರೆಯಲ್ಲಿ ಕಾಡಾನೆ ದಾಳಿಗೆ 16 ವರ್ಷದ ಬಾಲಕಿ ಬಲಿ: ಗ್ರಾಮಕ್ಕೆ ನುಗ್ಗಿದ ಆನೆಗಳು

ಚನ್ನಗಿರಿಯಲ್ಲಿ ಯುವತಿ ಸಾವಿಗೆ ಕಾರಣವಾಗಿತ್ತು. ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್ ಮೇಲೆ ದಾಳಿ ನಡೆಸಿತ್ತು. ಅಂತಿಮವಾಗಿ ಸೆರೆ ಸಿಕ್ಕಿದ್ದ ಆನೆಯನ್ನು ಸಕ್ರೆಬೈಲು ತರಲಾಗಿತ್ತು. ಆನೆ ಬಿಡಾರದಿಂದ ಸ್ವಲ್ಪ ದೂರದಲ್ಲಿರುವ ಕಾಲ್‌ಗೆ ಸ್ಥಳಾಂತರ ಮಾಡಲಾಗಿತ್ತು.  ಇದೀಗ ತರಬೇತಿ ಬಳಿಕ ವರ್ತನೆಯಲ್ಲಿ ಸಾಕಷ್ಟು ಬದಲಾಗಿ ಅಭಿಮನ್ಯುವಾಗಿ ಹೊರಬಂದಿರುವ ಕಾಡಾನೆ.

click me!