
ಮೈಸೂರು: ವಿವಾಹಿತನೋರ್ವನ ಕಿರುಕುಳ ತಾಳಲಾರದೇ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ತಾಲೂಕಿನ ಗಣಗರ ಹುಂಡಿಯಲ್ಲಿ ನಡೆದಿದೆ. ಮದುವೆಯಾಗಿ ಮಗು ಇದ್ದ ಕಿರಾತಕನೋರ್ವ ನಾಲ್ಕು ವರ್ಷಗಳಿಂದಲೂ ಯುವತಿಯೋರ್ವಳನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಪ್ರೀತ್ಸೆ ಪ್ರೀತ್ರೆ ಅಂತ ಪೀಡಿಸುವುದರ ಜೊತೆಗೆ ಆಕೆಗೆ ಇತೀಚೆಗೆ ನಿಗದಿಯಾಗಿದ್ದ ಮದುವೆಯನ್ನೂ ಮುರಿದಿದ್ದ. ಪ್ರೀತ್ಸು ಇಲ್ಲವೇ ಜೊತೆಯಲ್ಲಿ ಸಾಯಿ ಎಂದವನು ಯುವತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಈಗ ನಾಪತ್ತೆಯಾಗಿದ್ದಾನೆ.
ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡ ಯುವತಿ, ಮೈಸೂರು ತಾಲೂಕಿನ ಗಣಗರ ಹುಂಡಿಯಲ್ಲಿ ಈ ಘಟನೆ ನಡೆದಿದೆ. ಇತ್ತ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆಟೋ ಓಡುಸ್ತಿದ್ರೂ ಆಫೀಸರ್ ಮಗಳಂಗೆ ಸಾಕಿದ್ದೋ ಸರ್... ಅವ ಅನ್ಯಾಯ ಮಾಡಿಬಿಟ್ಟ ಎಂದು ಮಗಳನ್ನು ನೆನೆದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಅಂದ ಹಾಗೆ ಮೈಸೂರು ತಾಲೂಕಿನ ಗಣಗರ ಹುಂಡಿ ಗ್ರಾಮದ ವೇಣುಗೋಪಾಲ್ ಶೋಭಾ ದಂಪತಿ ಮಗಳಾದ 21 ವರ್ಷದ ಹರ್ಷಿತಾ ಅಲಿಯಾಸ್ ರಾಣಿ ಕಾಳಿನ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇದೇ ಗ್ರಾಮದಲ್ಲಿ ಪ್ಲಂಬರಿಂಗ್ ನಡೆಸುತ್ತಿದ್ದ 26 ವರ್ಷದ ಶಿವು ಎಂಬಾತ ಹರ್ಷಿತಾಗೆ ಪ್ರೀತಿಸು ಎಂದು ಪೀಡಿಸುತ್ತಾ ಹಿಂದೆ ಬಿದ್ದಿದ್ದ,
ನಾಲ್ಕು ವರ್ಷ ಪ್ರೀತಿಸಿ ಮೋಸ ಮಾಡಿದ ಯುವತಿ: ಮನನೊಂದು ಪ್ರಿಯಕರ ಸಾವಿಗೆ ಶರಣು
ಮೂಲತಃ ಕನಕಪುರದ (Kanakapura) ಶಿವು ಹಲವು ವರ್ಷಗಳಿಂದ ಗಣಗರಹುಂಡಿಯಲ್ಲೇ(Ganagara Hundi) ವಾಸವಿದ್ದ. ಕಾಲೇಜು ಓದಲು ಮೈಸೂರಿಗೆ (Mysore) ಹೋಗುತ್ತಿದ್ದ ಹರ್ಷಿತಾಳನ್ನು (Harshita) ನಾಲ್ಕು ವರ್ಷಗಳ ಹಿಂದೆಯೇ ಪುಸಲಾಯಿಸಿ ಪ್ರೀತಿಗೆ ಬೀಳಿಸಿದ್ದ. ಈ ವಿಚಾರ ಹರ್ಷಿತಾ ಮನೆಯವರಿಗೆ ಗೊತ್ತಾಗಿ, ಶಿವುಗೆ ಚೆನ್ನಾಗಿ ಥಳಿಸಿ ಬುದ್ದಿ ಹೇಳಿದ್ದರು. ಆಗ ಸುಮ್ಮನ್ನಿದ್ದವನು ಮತ್ತೆ ಪ್ರೀತಿಗಾಗಿ ಯುವತಿಯ ಬೆನ್ನು ಬಿದ್ದಿದ್ದ. ಕೊನೆಗೆ ಹರ್ಷಿತಾ ಮನೆಯವರು ತಮ್ಮ ಮಗಳಿಗೆ ಬೇರೆ ಹುಡುಗನ ಜೊತೆ ಮದುವೆ ಕೂಡ ಗೊತ್ತು ಮಾಡಿದ್ದರು. ಆದರೆ ಆ ಮದುವೆಯನ್ನೂ ಮುರಿಯುವಂತೆ ಮಾಡಿದ್ದ ಆರೋಪಿ ಶಿವು, ಇಬ್ಬರೂ ಒಟ್ಟಿಗೆ ಸಾಯೋಣ ಅಂತ ಹೇಳಿ ಆಕೆಯ ತಲೆ ಕೆಡಿಸಿದ್ದಾನೆ ಎನ್ನುವುದು ಹರ್ಷಿತಾ ತಂದೆ ಆರೋಪ. ಈಗಾಗಿ ಜುಲೈ 1 ರಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ಬಂದ ಹರ್ಷಿತಾ ವಿಷದ ಮಾತ್ರೆ ಸೇವಿಸಿ ಆಸ್ವಸ್ಥಳಾಗಿದ್ದಳು. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಬಾಗಲಕೋಟೆ: ಬಡತನದಿಂದ ಬೇಸತ್ತ ತಾಯಿ: ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಸಾವಿಗೆ ಶರಣು
ಇತ್ತ ಮಗಳ ಸಾವಿನಿಂದ ಪೋಷಕರ ಗೋಳು ಮುಗಿಲು ಮುಟ್ಟಿದೆ. ಮೊಬೈಲ್ ನಲ್ಲಿ ಮಗಳ ಪೋಟೋಗಳನ್ನು ನೋಡುತ್ತಾ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ನನ್ನ ಗಂಡ ಆಟೋ ಓಡಿಸುತ್ತಿದ್ದರು ನಮ್ಮ ಮಗಳನ್ನು ಆಫೀಸರ್ ಮಗಳಂತೆ ಸಾಕಿದ್ದೆವು ಎಂದು ತಾಯಿ ಗೋಳಾಡಿದ್ದಾರೆ. ಒಟ್ಟಾರೆ ಪ್ರೀತಿ ಪ್ರೇಮದ ಪಾಶಕ್ಕೆ ಮಗಳ ಜೀವ ಬಲಿಯಾಗಿದ್ದು, ಆರೋಪಿ ವಿರುದ್ಧ ಇಲವಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಸದ್ಯ ಶಿವು ತಲೆ ಮರೆಸಿಕೊಂಡಿದ್ದು, ಕಠಿಣ ಶಿಕ್ಷೆಗೆ ರಾಣಿ ಪೋಷಕರು ಒತ್ತಾಯಿಸಿದ್ದಾರೆ.
ಕ್ಯಾಮೆರಾಮನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ