ಟಿಪ್ಪು ಜಯಂತಿ ಮಾಡಿದ್ದೇ ದೊಡ್ಡ ತಪ್ಪು: ಸಿಎಂ ಇಬ್ರಾಹಿಂ ಹೀಗೆ ಹೇಳಿದ್ಯಾಕೆ?

Published : Nov 16, 2022, 02:06 PM IST
ಟಿಪ್ಪು ಜಯಂತಿ ಮಾಡಿದ್ದೇ ದೊಡ್ಡ ತಪ್ಪು: ಸಿಎಂ ಇಬ್ರಾಹಿಂ ಹೀಗೆ ಹೇಳಿದ್ಯಾಕೆ?

ಸಾರಾಂಶ

ಮುಸ್ಲಿಂ ಧರ್ಮದಲ್ಲಿ ಮೂರ್ತಿ ಪೂಜೆ, ಜಯಂತಿ, ಆಚರಣೆಗಳು, ಮೆರವಣಿಗೆಗೆ ಅವಕಾಶ ಇಲ್ಲದಿದ್ದರೂ ಟಿಪ್ಪು ಜಯಂತಿ ಮಾಡಿದ್ದು ದೊಡ್ಡ ತಪ್ಪಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರು (ನ.16) : ಮುಸ್ಲಿಂ ಸಮುದಾಯದಲ್ಲಿ ಯಾವುದೇ ವ್ಯಕ್ತಿಗಳ ಜಯಂತಿ ಅಥವಾ ಮೆರವಣಿಗೆಗೆ ಅವಕಾಶವೇ ಇಲ್ಲ. ಇದೇ ಕಾರಣಕ್ಕಾಗಿ ನಾನು ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮಾಡುವುದು ಬೇಡವೆಂದು ಹೇಳಿದ್ದೆನು. ಆದರೆ, ಮತಗಳನ್ನು ಓಲೈಸುವ ಕಾರಣಕ್ಕಾಗಿಯೇ ಟಿಪ್ಪು ಜಯಂತಿ ಮಾಡಿದ್ದಾರೆ. ಒಟ್ಟಾರೆಯಾಗಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮಾಡಿದ್ದೇ ದೊಡ್ಡ ತಪ್ಪು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ನಮ್ಮ ದೇಶ ಬಹುತ್ವ ಧರ್ಮ ಮತ್ತು ಜಾತಿಯುಳ್ಳದ್ದಾಗಿದೆ. ಮುಖ್ಯವಾಗಿ ಮುಸ್ಲಿಂ ಸಮುದಾಯ (Muslim Community)ದಲ್ಲಿ ವ್ಯಕ್ತಿ ಪೂಜೆ, ಜಯಂತಿ, ಮೆರವಣಿಗೆಗೆ ಅವಕಾಶ ಇಲ್ಲ. ಹೀಗಾಗಿ ನಾನು ಟಿಪ್ಪು ಜಯಂತಿಯನ್ನು ಬೇಡವೆಂದರೂ, ಮತಗಳ ಪಡೆಯುವ ದೃಷ್ಟಿಕೋನದಿಂದ ಜಯಂತಿ ಆಚರಣೆ ಜಾರಿಗೆ ತಂದರು. ಇದು ದೊಡ್ಡ ತಪ್ಪಾಗಿದೆ. ಈಗ ಪುನಃ ಟಿಪ್ಪು ಪ್ರತಿಮೆ (Tippu Statue) ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪವನ್ನು ಮಾಡಲಾಗಿದೆ. ಇದನ್ನು ನಮ್ಮ ಧರ್ಮ (Religion) ಒಪ್ಪುವುದಿಲ್ಲ. ಮುಸ್ಲಿಂ ಸಮುದಾಯದಲ್ಲಿ ಎಲ್ಲಿಯೂ ಈ ರೀತಿ ಬದಲಾವಣೆಗೆ ಅವಕಾಶವೇ ಇಲ್ಲ ಎಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ ಹೇಳಿದರು.

ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಕೆಲಸ: ಸಿ.ಎಂ.ಇಬ್ರಾಹಿಂ

ಅಜ್ಞಾನದ ಕಡೆಗೆ ಪ್ರತಾಪಸಿಂಹ ನಡಿಗೆ: ಮೈಸೂರು ಸಾಂಸ್ಕೃತಿಕ ‌ನಗರಿ‌, ವಿದ್ಯಾನಗರಿ ಆಗಿದೆ. ಆದರೆ, ಈ ನಗರದ ಜನತೆಯನ್ನು ಸಂಸದ ಪ್ರತಾಪ ಸಿಂಹ (Pratap Simha) ಅಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾನೆ. 'ಟಿಪ್ಪು ನಿಜ ಕನಸುಗಳು' (Tippu Nija Kanasugalu) ಪುಸ್ತಕದಲ್ಲಿ ಟಿಪ್ಪುನಿನ ಬಗ್ಗೆ ತೀವ್ರ ಕೆಟ್ಟದಾಗಿ ತೋರಿಸಲಾಗಿದೆ. ಇದನ್ನು ತಡೆಯಲು ನಾನು ವೈಯಕ್ತಿಕವಾಗಿ ನ್ಯಾಯಾಲಯದ (Court)ಮೊರೆ ಹೋಗುತ್ತೇನೆ. ಟಿಪ್ಪು ಸುಲ್ತಾನ್‌ ಅಧಿಕಾರದಲ್ಲಿದ್ದ ವೇಳೆ ನಂಜನಗೂಡು ನಂಜುಡೇಶ್ವರನಿಗೆ (Nanjundeswara)ಕೊಟ್ಟ ಪಂಚ ವಜ್ರ (Daimond)ವನ್ನು ಈಗಿನ ಪ್ರತಾಪಸಿಂಹ ವಾಪಸ್‌ ಕೊಡಿಸುತ್ತಾನಾ? ಪ್ರಧಾನಿ ನರೇಂದ್ರ ಮೋದಿ ನಿಂತು ಭಾಷಣ ಮಾಡುವ ಕೆಂಪು ಕೋಟೆ (Red Fourt)ಯನ್ನು ಮುಸ್ಲಿಮರು ಕಟ್ಟಿಸಿದ್ದಾರೆ. ಇದನ್ನು ಪ್ರತಾಪ ಸಿಂಹ ಒಡೆಸಿಬಿಡುತ್ತಾನಾ? ಬಿಜೆಪಿ (BJP)ಯವರು ಮುಸ್ಲಿಮರು ಮತ್ತು ಗೌಡರಿಗೆ (Gowda's) ಜಗಳ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಟಿಪ್ಪುವಿನ ಪ್ರತಿಮೆ ಏಕೆ ಬೇಕು?: ಸಾಹಿತಿ ಎಸ್‌.ಎಲ್‌.ಭೈರಪ್ಪ

ಟಿಪ್ಪು ಪ್ರತಿಮೆ ನಿರ್ಮಾಣ ಬೇಡ: ನಮ್ಮಲ್ಲಿ ಪ್ರತಿಮೆ ನಿರ್ಮಾಣಕ್ಕೂ ಅವಕಾಶ ಇಲ್ಲ. ಪೂಜೆ ಮಾಡುವುದು, ಕುಂಕುಮ (Kumkum) ಹಚ್ಚುವುದು ನಮ್ಮ ಸಂಪ್ರದಾಯವಲ್ಲ. ಹೀಗಾಗಿ, ಟಿಪ್ಪು ಪ್ರತಿಮೆ ಮಾಡುವ ಪ್ರಶ್ನೆಯೇ ಇಲ್ಲ. ಈಗ ಪ್ರತಿಮೆ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿರುವ ತನ್ವೀರ್ ಸೇಠ್‌ಗೆ (Tanveer Sait)ಏನೂ ಗೊತ್ತಿಲ್ಲ. ನಾವು ಬದಲಾಗಬೇಕು ಎಂದು ಮೂಲ ಧರ್ಮವನ್ನು ಬದಲಾಯಿಸಲು (Change) ಆಗಲ್ಲ. ಮುಂಬರುವ ಚುನಾವಣೆಗಾಗಿ (Election)ಹಾಗೂ ನಮ್ಮ ವೈಯಕ್ತಿಕ ಗೆಲುವಿಗಾಗಿ ಧರ್ಮ ಬದಲಾವಣೆ ಮಾಡೋಕೆ ಆಗುತ್ತದೆಯೇ?. ಇಂತಹ ಪ್ರಯತ್ನವನ್ನು ಬಿಟ್ಟು ಅಭಿವೃದ್ಧಿ ಅಜೆಂಡಾ ಮುಂದಿಟ್ಟುಕೊಂಡು ಚುನಾವಣೆ ಮಾಡಬೇಕು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ